ಕನ್ನಡ ಸುದ್ದಿ  /  ಮನರಂಜನೆ  /  ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

ಸ್ಯಾಂಡಲ್‌ವುಡ್‌ ಕಂಡ ಖ್ಯಾತ ಪೋಷಕ ನಟರಲ್ಲಿ ಮೈಸೂರು ಲೋಕೇಶ್‌ ಸಹ ಒಬ್ಬರು. ಚಿತ್ರರಂಗದ ಉತ್ತುಂಗದಲ್ಲಿರುವಾಗಲೇ ವಿವಾಹೇತರ ಸಂಬಂಧ ಅವರ ಜೀವನವನ್ನೇ ಬಲಿ ಪಡೆಯಿತು. ಇದೀಗ ಅಪ್ಪನ ಅಂದಿನ ದುರಂತ ಸಾವಿನ ಬಗ್ಗೆ ಅವರ ಪುತ್ರ ಆದಿ ಲೋಕೇಶ್‌ ಮತ್ತೆ ಅಂದಿನ ಘಟನೆಯ ಅಸಲಿ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ
ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

Aadi Lokesh on Father Mysore Lokesh: ಸ್ಯಾಂಡಲ್‌ವುಡ್‌ನಲ್ಲಿ ಒಂದು ಕಾಲದಲ್ಲಿ ಪೋಷಕ ನಟರಾಗಿ ದೊಡ್ಡ ಹೆಸರು ಮಾಡಿ, ದುರಂತ ಸಾವಿಗೆ ತುತ್ತಾದರು. ಇಂದಿಗೂ ಅವರ ಸಾವಿನ ಬಗ್ಗೆ ಯಾರಿಗೂ ಅಷ್ಟಾಗಿ ಸ್ಪಷ್ಟತೆ ಇಲ್ಲ. ಅಂತೆ ಕಂತೆಗಳೇ ಸದ್ದು ಮಾಡಿವೆ. ಹೀಗಿರುವಾಗಲೇ ಇದೇ ಮೈಸೂರು ಲೋಕೇಶ್‌ ಬಗ್ಗೆ ಅವರ ಪುತ್ರ ಆದಿ ಲೋಕೇಶ್‌, ನಿಜಕ್ಕೂ ಅವರ ಸಾವಿಗೆ ಕಾರಣ ಏನು? ಸಾಯುವ ಕೊನೆ ಕ್ಷಣ ಹೇಗಿತ್ತು? ಅವರ ನಿಧನದ ಬಳಿಕ ಆದ ಬೆಳವಣಿಗೆಗಳೇನು? ಎಂಬುದನ್ನು ಎಳೆ ಎಳೆಯಾಗಿಯೇ ವಿವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಷ್ಟಕ್ಕೂ ನಟ ಡಿಂಗ್ರಿ ನಾಗರಾಜ್‌ ಅವ್ರ ಹೆಂಡತಿ ಸರ್ವಮಂಗಳ ಓರ್ವ ಖ್ಯಾತ ಡಬ್ಬಿಂಗ್ ಕಲಾವಿದೆ. ನಟಿ ಮಾಲಾಶ್ರೀ ಅವರಿಗೆ ಕಾಯಂ ಕಂಠದಾನ ಕಲಾವಿದೆಯಾಗಿದ್ದವರು. ಹೀಗಿರುವಾಗ, ಸಿನಿಮಾ ಬಳಿಕ ರಾತ್ರಿಹೊತ್ತು ಅಪ್ಪನ ಜತೆಗೆ ನಾಟಕಗಳಲ್ಲಿ ನಟಿಸುತ್ತಿದ್ದರು. ದಿನಕಳೆದಂತೆ ಮೈಸೂರು ಲೋಕೇಶ್‌ ಮತ್ತು ಸರ್ವಮಂಗಳ ನಡುವಿನ ಒಡನಾಟ ಪ್ರೀತಿಯಾಗಿ ತಿರುಗಿತು. ಅದಾಗಲೇ ಮೈಸೂರು ಲೋಕೇಶ್‌ ಅವರಿಗೆ ಮದುವೆಯಾಗಿ ಪವಿತ್ರಾ ಲೋಕೇಶ್‌ ಮತ್ತು ಆದಿ ಲೋಕೇಶ್‌ ಎಂಬಿಬ್ಬರು ಮಕ್ಕಳಿದ್ದರು.

ಆಗಿನ ಕಾಲದಲ್ಲಿಯೇ ಈ ಜೋಡಿಯ ಪ್ರೀತಿಯ ವಿಚಾರ ಎಲ್ಲ ಕಡೆ ಸುದ್ದಿಯಾಗಿತ್ತು. ಸಮಾಜಕ್ಕೆ ಹೆದರಿ ಇಬ್ಬರೂ ಓಡಿ ಹೋಗಿ ಸಾಯಬೇಕು ಎಂದು ನಿರ್ಧರಿಸಿ ಒಟ್ಟಿಗೆ ವಿಷ ತೆಗೆದುಕೊಳ್ಳುತ್ತಾರೆ. ದುರದೃಷ್ಟವಶಾತ್‌ ಆ ಘಟನೆಯಲ್ಲಿ ಮೈಸೂರು ಲೋಕೇಶ್‌ ಸಾವನ್ನಪ್ಪುತ್ತಾರೆ. ಸರ್ವಮಂಗಳ ಮಾತ್ರ ಬದುಕುಳಿಯುತ್ತಾರೆ. ಹಾಗಾದರೆ, ಇದು ಪ್ರೀ ಪ್ಲಾನಾ? ಈ ಬಗ್ಗೆ ಆರ್‌ಜೆ ರಾಜೇಶ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆವತ್ತು ನಡೆದ ಅಸಲಿ ವಿಚಾರವನ್ನು ಮೈಸೂರು ಲೋಕೇಶ್‌ ಪುತ್ರ ಆದಿ ಲೋಕೇಶ್‌ ಹೇಳಿಕೊಂಡಿದ್ದಾರೆ.

ಮೈಸೂರು ಲೋಕೇಶ್‌ ಪುತ್ರ ಆದಿ ಹೇಳುವುದೇನು?

"ಆವಾಗಿನ ಕಾಲದಲ್ಲಿ ಬೆಳಗಿನ ಸಮಯದಲ್ಲಿ ಸಿನಿಮಾ ಶೂಟಿಂಗ್‌ ಮಾಡ್ತಿದ್ರು. ರಾತ್ರಿಯೆಲ್ಲ ನಾಟಕ ಕಂಪನಿಗಳಲ್ಲಿ ಪಾರ್ಟ್‌ ಟೈಮ್‌ ರೀತಿ ಕೆಲಸ ಮಾಡ್ತಿದ್ರು. ಉಮೇಶ್‌ ಸರ್‌, ಧೀರೇಂದ್ರ ಗೋಪಾಲ್‌, ಸುಧೀರ್‌, ಅಪ್ಪ ಎಲ್ಲರೂ ನಾಟಕ ಮಾಡ್ತಿದ್ರು. ಡಿಂಗ್ರಿ ನಾಗರಾಜ್‌ ಅವರ ಪತ್ನಿ ಸರ್ವಮಂಗಳ ಸಹ ಇರುತ್ತಿದ್ದರು. ಅವರು ಡಬ್ಬಿಂಗ್‌ ಕಲಾವಿದೆಯೂ ಹೌಡು. ಮಾಲಾಶ್ರೀ ಅವರಿಗೆ ಹೇಳಿ ಮಾಡಿಸಿದಂಥ ಧ್ವನಿ ಸರ್ವಮಂಗಳ ಅವರದ್ದು. ಆಗ ಚಿತ್ರರಂಗದಿಂದ ನಾವೆಲ್ಲ ದೂರವೇ ಇದ್ವಿ. ಶೂಟಿಂಗ್‌ ಸೆಟ್‌ಗೂ ಅಪ್ಪ ನಮ್ಮನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ನಾನೂ ಸರ್ವಮಂಗಳ ಅವರನ್ನು ನೋಡಿದ್ದು ತುಂಬ ಕಡಿಮೆ. ಹೀಗಿರುವಾಗಲೇ ನಾಟಕದ ಸಮಯದಲ್ಲಿ ಇಬ್ಬರ ನಡುವೆ ಲವ್ವಾಯಿತು. ಆಗೆಲ್ಲ ಸಮಾಜದಲ್ಲಿ ಒಂದು ಚೌಕಟ್ಟಿತ್ತು. ಇವರ ವಿಚಾರ ಅಮ್ಮನಿಗೂ ಗೊತ್ತಾಯ್ತು. ಆ ಕಡೆಯ ಕುಟುಂಬಕ್ಕೂ ಗೊತ್ತಾಯ್ತು"

ಬದುಕಿದ್ದು ಏನು ಪ್ರಯೋಜನ ಎಂದು ಆತ್ಮಹತ್ಯೆ ನಿರ್ಧಾರ

“ಅಪ್ಪ ಹೀಗೆ ಇನ್ನೊಬ್ಬರ ಹಿಂದೆ ಬಿದ್ದಿದ್ದಾರೆ ಎಂಬ ವಿಚಾರ ಅಮ್ಮನಿಗೆ ಗೊತ್ತಾಗ್ತಿದ್ದಂತೆ, ಅಪ್ಪನ ಮೇಲೆ ಅಮ್ಮ ಕಣ್ಣಿಟ್ಟರು. ಎಲ್ಲೇ ಹೋದರೂ ಅವರ ಜತೆಗೆ ಅಮ್ಮನೂ ಹೋಗ್ತಿದ್ರು. ಹೀಗಿರುವಾಗ ಒಂದು ದಿನ, ನಿನ್ನ ಜೀವನ ನಿನಗೆ ನನ್ನ ಜೀವನ ನನಗೆ ಎಂದು ಸರ್ವಮಂಗಳ ಮುಂದೆ ಅಪ್ಪ ಹೇಳ್ತಾರೆ. ನಮ್ಮ ಈ ವಿಚಾರ ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇನ್ನು ತಪ್ಪಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಎರಡೂ ಮನೆಗಳಲ್ಲಿ ಜಗಳಗಳಾಗಿವೆ. ಹೀಗಿರುವಾಗ ನಾವಿಬ್ಬರೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅಪ್ಪ ಹೇಳ್ತಾರೆ. ಆಗ ನಾವು ಬದುಕಿದ್ದು ಏನೂ ಪ್ರಯೋಜನ ಇಲ್ಲ, ಸತ್ತೋಗಿ ಬಿಡೋಣ ಎಂಬ ಮಾತು ಬರುತ್ತೆ. ಆ ತೀರ್ಮಾನ ಅಪ್ಪನದಲ್ಲ. ಅಪ್ಪ ಆ ಥರದ ಯೋಚನೆ ಮಾಡುವವರಲ್ಲ. ಮಕ್ಕಳೆಂದರೆ ತುಂಬ ಪ್ರೀತಿ ಅವ್ರಿಗೆ. ಸರ್ವಮಂಗಳ ಈ ಸಾವಿನ ನಿರ್ಧಾರ ಅಪ್ಪನಿಗೆ ಹೇಳ್ತಾರೆ”

"ಹೀಗಿರುವಾಗಲೇ ಒತ್ತಾಯಪೂರ್ವಕವಾಗಿ ಇಬ್ಬರೂ ಸಾಯಲು ನಿರ್ಧಾರ ಮಾಡ್ತಾರೆ. ವಿಷ ತಂದು, ಆ ವಿಷವನ್ನು ಅಪ್ಪ ಕುಡೀತಾರೆ. ಆದರೆ, ಸರ್ವಮಂಗಳ ಕುಡಿಯಲ್ಲ, ತಮ್ಮ ಎದೆ ಮೇಲೆ ವಿಷವನ್ನು ಸುರಿವಿಕೊಳ್ತಾರೆ. ಅವರಿಗೆ ಏನೂ ಆಗಲ್ಲ. ಅಪ್ಪ ನೆಲಕ್ಕೆ ಬೀಳ್ತಾರೆ. ಆ ಮಹಿಳೆಯ ಕಾಲು ಹಿಡಿದುಕೊಂಡು, ದಯಮಾಡಿ ನನ್ನನ್ನು ಬದುಕಿಸು, ನನಗೆ ಮಗಳಿದ್ದಾಳೆ. ಆಕೆಯ ಮದುವೆ ಮಾಡಬೇಕು ಎಂದು ಬೇಡಿಕೊಳ್ತಾರೆ. ಅಷ್ಟೊತ್ತಿಗೆ ಒಂದೂವರೆ ದಿನದಿಂದ ಹೋಟೇಲ್‌ ಕೋಣೆಯ ಬಾಗಿಲು ತೆಗಿದಿಲ್ಲ ಅಂತ, ಅಲ್ಲಿದ್ದ ವೇಟರ್‌ ಕಿಟಕಿಯಿಂದ ಇಣುಕಿ ನೋಡ್ತಾರೆ. ಅಪ್ಪ ನೆಲಕ್ಕೆ ನರಳಿ ಬಿದ್ದದ್ದು ನೋಡಿ ಓನರ್‌ ಗಮನಕ್ಕೆ ತರ್ತಾರೆ. ಬಳಿಕ ಹೊಸಪೇಟೆ ಆಸ್ಪತ್ರೆಗೆ ದಾಖಲು ಮಾಡ್ತಾರೆ. ವಿಷ ಕುಡಿದಿದ್ದರಿಂದ ಒಳಭಾಗ ಸುಟ್ಟಿರುತ್ತದೆ. ಅದಕ್ಕೆ ಪೈಪ್‌ ಹಾಕಿ, ಆಕ್ಸಿಜನ್‌ ಸಪ್ಲೈ ಮಾಡಿರ್ತಾರೆ"

ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗಬಾರದು

"ಇಲ್ಲ ನೀವಿನ್ನು ಬೆಂಗಳೂರಿಗೆ ಕರೆದೊಯ್ಯಬೇಕು ಎಂಬ ಉತ್ತರ ಡಾಕ್ಟರ್‌ ಕಡೆಯಿಂದ ಬರುತ್ತೆ. ಆಗ ನಾನು ಮತ್ತೆ ಚಿಕ್ಕಮ್ಮ ಆಂಬುಲೆನ್ಸ್‌ನಲ್ಲಿ ಹ್ಯಾಂಡ್‌ಪಂಪ್‌ನಲ್ಲಿ ಆಕ್ಸಿಜನ್‌ ಪುಷ್‌ ಮಾಡ್ತಾ ಅಪ್ಪನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರ್ತೀವಿ. ಬಾಯಿವೊಳಗೆ ಪೈಪ್‌ ಹಾಕಿರುವ ವಿಚಾರ ವಿಕ್ಟೋರಿಯಾ ಆಸ್ಪತ್ರೆ ನರ್ಸ್‌ಗೆ ಗೊತ್ತಿರಲ್ಲ. ಅದನ್ನು ತೆಗೆಯುತ್ತಿದ್ದಂತೆ, ಒಳಗಿನ ಭಾಗ ಅಂಟಿಕೊಂಡುಬಿಡುತ್ತೆ. ಉಳಿಯುವ ಪ್ರಮಾಣ ಮತ್ತಷ್ಟು ಕಡಿಮೆ ಆಗುತ್ತೆ. ಅದಾಗಲೇ ಪೊಲೀಸ್‌ ಕೇಸ್‌ ಆದ ಈ ಘಟನೆ, ಸಿಬಿಐಗೆ ರವಾನೆಯಾಗುತ್ತೆ. ಬಂಗಾರಪ್ಪನವ್ರು ಆಗ ಸಿಎಂ ಆಗಿದ್ರು. ವಿಚಾರಣೆ ವೇಳೆ ಇದರ ಹಿಂದಿನ ಸತ್ಯ ಬಯಲಾಗುತ್ತದೆ. ಕಮಿಷನರ್‌ ರೇವಣಸಿದ್ದಯ್ಯ ಈ ಪ್ರಕರಣದ ಸತ್ಯಾಸತ್ಯತೆಯನ್ನು ಅಮ್ಮನಿಗೆ ಮಾತ್ರ ಕರೆದು ವಿಡಿಯೋ ರೆಕಾರ್ಡ್‌ ತೋರಿಸ್ತಾರೆ. ಅದರಲ್ಲಿ"ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ನಾನು ಆ ಕೆಲಸ ಮಾಡಿದೆ" ಎಂದು ಸರ್ವಮಂಗಳ ತಮ್ಮ ತಪ್ಪು ಒಪ್ಪಿಕೊಳ್ತಾರೆ. ಅವರಿಗೂ ಜೈಲು ಶಿಕ್ಷೆ ಆಗುತ್ತೆ. ಜಾಮೀನಿನ ಮೇಲೆ ಆಚೆ ಬರ್ತಾರೆ. ಮತ್ತೆ ಜೈಲು ಸೇರ್ತಾರೆ. ಕೊನೆಗೆ ಜಾಂಡೀಸ್ ಆಗಿ ಜೈಲಿನಲ್ಲಿಯೇ ತೀರಿಕೊಳ್ತಾರೆ. ಇದೆಲ್ಲವೂ ಇಂದಿಗೂ ಕಮಿಷನರ್‌ ಆಫೀಸ್‌ನಲ್ಲಿ ರೆಕಾರ್ಡ್‌ ಆಗಿ ಉಳಿದಿದೆ"

ಅಷ್ಟಕ್ಕೂ ಅಪ್ಪನಿಗೆ ವಿಷ ಕುಡಿಸಿದ್ದು ಅವರು ನಾರ್ಮಲ್‌ ಇದ್ದಾಗ ಅಲ್ಲ. ಅಪ್ಪನ ಜತೆಗೆ ಸರ್ವಮಂಗಳ ಸಹ ಒಟ್ಟಿಗೆ ಕುಳಿತು ಕುಡೀತಾರೆ. ಅಪ್ಪನ ತಲೆಗೆ ನಶೆ ಏರಿದೆ ಎಂದಾದ ಮೇಲೆ ಸಾವಿನ ಚರ್ಚೆ ನಡೆಯುತ್ತದೆ. ಆಗ ಪ್ಲಾನ್‌ ಮಾಡಿಯೇ ವಿಷ ಕೊಡ್ತಾರೆ. ಇದಕ್ಕೆ ಸಂಬಂಧಿಸಿದ ಪುರಾವೆಗಳಿವೆ. ಲೈವ್‌ ರೆಕಾರ್ಡ್‌ ಮಾಡಿದ ವಿಡಿಯೋ ಟೇಪ್‌ ಇದೆ" ಎಂದು ಅಂದಿನ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ ಆದಿ ಲೋಕೇಶ್‌.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024