ಸಿನಿಪ್ರಿಯರಿಗೆ ರಾಜ್ಯೋತ್ಸವ, ದೀಪಾವಳಿ ಗಿಫ್ಟ್; ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿ ಸ್ಟ್ರೀಮಿಂಗ್ ದಿನಾಂಕ ತಿಳಿಸಿದ ನಿರ್ದೇಶಕ ಚಂದ್ರಜಿತ್
ವಿಹಾನ್, ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆರಂಭಿಸಿದೆ. ಚಿತ್ರವನ್ನು ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ನಿರ್ಮಿಸಿದ್ದು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ.
ದೀಪಾವಳಿ ವಿಶೇಷ ಎನ್ನುವಂತೆ ಅನೇಕ ಹೊಸ ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ವೆಬ್ ಸೀರಿಸ್‌ಗಳು ನೇರವಾಗಿ ಒಟಿಯಲ್ಲೇ ರಿಲೀಸ್ ಆಗಿವೆ. ಕೆಲವೊಂದು ಸಿನಿಮಾಗಳು ಚಿತ್ರಮಂದಿರಕ್ಕೆ ಬಂದು ವರ್ಷಗಳ ನಂತರ ಒಟಿಟಿಗೆ ಬಂದರೆ ಈಗೆಲ್ಲಾ ರಿಲೀಸ್ ಆಗಿ ತಿಂಗಳ ನಂತರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಸೆಪ್ಟೆಂಬರ್‌ನಲ್ಲಿ ತೆರೆ ಕಂಡ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.
ಸೆಪ್ಟೆಂಬರ್ 5 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದ ಸಿನಿಮಾ
ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಚಿತ್ರದ ಡಿಜಿಟಲ್ ರೈಟ್ಸ್ ಪಡೆದುಕೊಂಡಿದೆ. ಈ ಸಿನಿಮಾ ಒಟಿಟಿಗೆ ಬರಲಿದೆ ಎಂದು ಕೆಲವು ದಿನಗಳ ಹಿಂದೆಯೇ ಅನೌನ್ಸ್ ಆಗಿತ್ತು. ಅದರೆ ಯಾವ ಪ್ಲಾಟ್ ಫಾರ್ಮ್ ಹಾಗೂ ಯಾವ ದಿನಾಂಕದಂದು ಸ್ಟ್ರೀಮ್ ಆಗಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಇದೀಗ ದಿನಾಂಕ, ಪ್ಲಾಟ್‌ಫಾರ್ಮ್ ಎರಡೂ ಕನ್ಫರ್ಮ್ ಆಗಿದೆ. ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಸೆಪ್ಟೆಂಬರ್ 5 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಇತ್ತೀಚೆಗೆ ಈ ಸಿನಿಮಾ 50 ದಿನಗಳನ್ನು ಪೂರೈಸಿತ್ತು. ಚಿತ್ರತಂಡ ಚಿಕ್ಕದೊಂದು ಪಾರ್ಟಿ ಮಾಡಿ ಈ ಖುಷಿಯನ್ನು ಹಂಚಿಕೊಂಡಿತ್ತು.
ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಅಪ್‌ಲೋಡ್ ಆಗಿದ್ದು ಸ್ಟ್ರೀಮಿಂಗ್‌ಗೆ ದಿನಾಂಕ ನಿಗದಿಯಾಗಲು ಕಾಯುತ್ತಿದ್ದಾಗಿ ಸುದ್ದಿ ಬಂದಿತ್ತು. ಕೊನೆಗೂ ಸಿನಿಮಾ ವೀಕ್ಷಕರಿಗೆ ಒಟಿಟಿಯಲ್ಲಿ ಲಭ್ಯವಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಇಬ್ಬನಿ ತಬ್ಬಿದ ಇಳೆಯಲಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸಿನಿಪ್ರಿಯರು ಸಿನಿಮಾ ನೋಡಲು ಕಾಯುತ್ತಿದ್ದಾರೆ.
ರಾಜ್ಯೋತ್ಸವ , ದೀಪಾವಳಿಗೆ ಮ್ಯಾಜಿಕ್ ಎಂದ ನಿರ್ದೇಶಕ ಚಂದ್ರಶೇಖರ್ ಬೆಳ್ಳಿಯಪ್ಪ
ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಬುಧವಾರ ಹಂಚಿಕೊಂಡಿದ್ದ ಫೋಸ್ಟ್‌ನಲ್ಲಿ ನವೆಂಬರ್ 1- ಕನ್ನಡ ರಾಜ್ಯೋತ್ಸವ, ದೀಪಾವಳಿ ಹಾಗೂ #ಮ್ಯಾಜಿಕ್ ಎಂದು ಬರೆದುಕೊಂಡಿದ್ದರು. ಇಂದು ಬೆಳಗ್ಗೆ (ನವೆಂಬರ್ 1) ಸಿನಿಮಾ ಈಗಲೇ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಿತ್ತು. ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಚಿತ್ರವನ್ನು ಪರಮ್ವಃ ಸ್ಟುಡಿಯೋಸ್ ಬ್ಯಾನರ್ ಅಡಿ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ನಿರ್ಮಿಸಿದ್ದು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. ಇದು 9 ವರ್ಷಗಳ ಹಿಂದಿನ ಪ್ರಾಜೆಕ್ಟ್. ಒಮ್ಮೆ ನಾನು ರಕ್ಷಿತ್ ಶೆಟ್ಟಿ ಅವರಿಗೆ ಬ್ಲಾಗ್‌ನಲ್ಲಿ ಮೆಸೇಜ್ ಮಾಡಿ ತಮ್ಮ ಕಥೆಯನ್ನು ಕಳಿಸಿದ್ದೆ. ಅದನ್ನು ಓದಿದ ರಕ್ಷಿತ್ ಶೆಟ್ಟಿ ಆಗಲೇ ಇಂಪ್ರೆಸ್ ಆಗಿದ್ದರು. ನಂತರ ಅವರನ್ನು ಭೇಟಿ ಮಾಡಿ ಈ ಸಿನಿಮಾ ಬಗ್ಗೆ ಚರ್ಚಿಸಿದ್ದೆ ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದರು.
ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಹಾಡುಗಳಿಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪಂಚತಂತ್ರ ಖ್ಯಾತಿಯ ವಿಹಾನ್ ಗೌಡ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಅಂಕಿತಾ ಅಮರ್ ಜೊತೆಯಾಗಿದ್ದಾರೆ. ಉಳಿದಂತೆ ಮಯೂರಿ ನಟರಾಜ್, ಗಿರಿಜಾ ಶೆಟ್ಟರ್, ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ, ವಿಕಿಪಿಡಿಯಾ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ದಿನವೇ ವಿಜಯ್ ದಳಪತಿ ಅಭಿನಯದ ಗೋಟ್ ಸಿನಿಮಾ ಕೂಡಾ ಬಿಡುಗಡೆ ಆಗಿತ್ತು. ಕನ್ನಡ ಸಿನಿಮಾಗಳಿಗೆ ನಮ್ಮ ರಾಜ್ಯದಲ್ಲೇ ಪರಭಾಷೆ ಸಿನಿಮಾಗಳಿಗಿಂತ ಕಡಿಮೆ ಥಿಯೇಟರ್ ದೊರೆಯುತ್ತಿದೆ. ನಮ್ಮ ಚಿತ್ರಕ್ಕೂ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ನಿರ್ದೇಶಕ ಬೆಳ್ಳಿಯಪ್ಪ ಬೇಸರ ವ್ಯಕ್ತಪಡಿಸಿದ್ದರು.
ಕನ್ನಡ ರಾಜ್ಯೋತ್ಸವ, ದೀಪಾವಳಿ ಸಾಲು ಸಾಲು ರಜೆಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ನೋಡಿ ಎಂಜಾಯ್ ಮಾಡಿ.