Horror OTT: ಒಟಿಟಿಯಲ್ಲಿ ಹೊಸ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆ; ಮಾಟಗಾತಿಯರ ಕಥೆಯಿದು, ಧೈರ್ಯವಾಗಿ ನೋಡಿ-ott web series agatha all along ott streaming in disney plus hotstar plot episode schedule where to watch pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Horror Ott: ಒಟಿಟಿಯಲ್ಲಿ ಹೊಸ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆ; ಮಾಟಗಾತಿಯರ ಕಥೆಯಿದು, ಧೈರ್ಯವಾಗಿ ನೋಡಿ

Horror OTT: ಒಟಿಟಿಯಲ್ಲಿ ಹೊಸ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆ; ಮಾಟಗಾತಿಯರ ಕಥೆಯಿದು, ಧೈರ್ಯವಾಗಿ ನೋಡಿ

Horror OTT: ಹಾರರ್‌ ವೆಬ್‌ಸರಣಿ ಇಷ್ಟ ಪಡುವವರಿಗೆ ಥ್ರಿಲ್‌ ಮೂಡಿಸುವಂತೆ ಹೊಸದೊಂದು ಭಯಾನಕ ಸೀರಿಸ್‌ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಅಗಾಥಾ ಆಲ್ ಅಲಾಂಗ್ ಎಂಬ ಸರಣಿ ನಿನ್ನೆ ಅಂದ್ರೆ ಸೆಪ್ಟೆಂಬರ್‌ 18ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಎಲ್ಲಾ ಮಾಟಗಾತಿಯರು ಒಂದೇ ಸ್ಥಳದಲ್ಲಿ ಸೇರಿದ್ದಾರೆ. ಭಯಾನಕ ಸೀರಿಸ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Horror OTT: ಒಟಿಟಿಯಲ್ಲಿ ಅಗಾಥಾ ಆಲ್ ಅಲಾಂಗ್  ಎಂಬ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆಯಾಗಿದೆ.
Horror OTT: ಒಟಿಟಿಯಲ್ಲಿ ಅಗಾಥಾ ಆಲ್ ಅಲಾಂಗ್ ಎಂಬ ಹಾರರ್‌ ಫ್ಯಾಂಟಸಿ ಥ್ರಿಲ್ಲರ್‌ ಬಿಡುಗಡೆಯಾಗಿದೆ.

Horror OTT: ಒಟಿಟಿಯಲ್ಲಿ ಹಾರರ್‌ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹಾರರ್‌ ಪ್ರೇಮಿಗಳು ಫ್ಯಾಂಟಸಿ ಹಾರರ್‌ ಥ್ರಿಲ್ಲರ್ ಪ್ರಕಾರದ ಚಲನಚಿತ್ರ ಮತ್ತು ವೆಬ್‌ ಸರಣಿ ನೋಡಲು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಮಾರ್ವೆಲ್ ಕಂಪನಿಯ ಬಗ್ಗೆ ಹೇಳಲು ಹೆಚ್ಚು ಇಲ್ಲ. ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ ಅಸಾಧಾರಣ ಅಭಿಮಾನಿಗಳನ್ನು ಹೊಂದಿದೆ. ಇದೀಗ ಮಾರ್ವೆಲ್‌ ಕಡೆಯಿಂದ Agatha All Along ಎಂಬ ಹಾರರ್‌ ಫ್ಯಾಂಟಸಿ ವೆಬ್‌ ಸರಣಿ ಬಿಡುಗಡೆಯಾಗಿದೆ. ಮನೆಯಲ್ಲಿಯೇ ಕುಳಿತು ಭಯಾನಕ ದೃಶ್ಯಗಳನ್ನು ನೋಡಲು ಬಯಸುವವರಿಗೆ ಇದು ಸೂಕ್ತವಾಗಬಹುದು. ಕತ್ತಲು ಒಬ್ಬರೇ ಇದ್ದಾಗ ನೋಡಿದರೆ ಖಂಡಿತಾ ಭಯವಾಗಬಹುದು.

ಎಂಸಿಯು (ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್) ಬಿಡುಗಡೆ ಮಾಡುವ ವೆಬ್‌ ಸರಣಿಗಳು, ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅಗಥಾ ಆಲ್‌ ಅಲಾಂಗ್‌ ಎಂಬ ವೆಬ್‌ ಸರಣಿ ಯಾವುದೇ ದೊಡ್ಡ ಮಟ್ಟದ ಪ್ರಚಾರ ಇಲ್ಲದೆ ಬಿಡುಗಡೆಯಾಗಿದೆ. ಇದನ್ನು ಮಾರ್ವೆಲ್‌ ಟೆಲಿವಿಷನ್‌ನಡಿ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಮಾರ್ವೆಲ್‌ ಕಂಟೆಂಟ್‌ಗಳು ಮಾರ್ವೆಲ್ ಸ್ಟುಡಿಯೋಸ್ ಮತ್ತು ಮಾರ್ವೆಲ್ ಎಂಟರ್‌ಟೈನ್‌ಮೆಂಟ್‌ ಮೂಲಕ ಬಿಡುಗಡೆಯಾಗುತ್ತಿದ್ದವು. ಇದು ಮಾರ್ವೆಲ್‌ ಟೆಲಿವಿಷನ್‌ನಡಿ ಆಗಮಿಸಿದೆ. ಅಗಾಥಾ ಆಲ್ ಅಲಾಂಗ್ ಒಂದು ಹಾರರ್ ಫ್ಯಾಂಟಸಿ ಥ್ರಿಲ್ಲರ್ ವೆಬ್‌ಸರಣಿ. ಮಾರ್ವೆಲ್‌ನ ಮೊದಲ ಭಯಾನಕ ವೆಬ್ ಸರಣಿಯೂ ಹೌದು.

ಇದು ಮಾಟಗಾತಿ ಅಗಾಥ ಕಥೆ

ಇಲ್ಲಿಯವರೆಗೆ ಲೈವ್ ಆಕ್ಷನ್, ಫ್ಯಾಂಟಸಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಮಾಡಿರುವ ಮಾರ್ವೆಲ್ ಇದೀಗ ಮಾಟಗಾತಿಯ ಕಥೆಯೊಂದಿಗೆ ಬಂದಿದೆ. ಇದು ಮಾರ್ವೆಲ್ ಸಿನಿಮಾಟಿಕ್ ಯೂನಿವರ್ಸ್‌ನಲ್ಲಿ 11 ನೇ ವೆಬ್ ಸರಣಿಯಾಗಿದೆ. ಕಥೆಯು ಅಗಾಥಾ ಎಂಬ ಮಾಟಗಾತಿಯ ಸುತ್ತ ಸುತ್ತುತ್ತದೆ. ವಂಡಾ ವಿಷನ್ ವೆಬ್ ಸರಣಿಯಲ್ಲಿ ಈಗಾಗಲೇ ಈ ಪಾತ್ರವನ್ನು ಸಾಕಷ್ಟು ಜನರು ನೋಡಿರಬಹುದು. ಇದೀಗ ಆ ಪಾತ್ರವೇ ಪ್ರತ್ಯೇಕ ವೆಬ್‌ ಸರಣಿಯಾಗಿದೆ.

ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಅಗಾಥಾ ಆಲ್ ಅಲಾಂಗ್ ಸೆಪ್ಟೆಂಬರ್ 18 ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ. ಅದೂ ಎರಡು ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಅಂದರೆ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಒಟ್ಟು 9 ಸಂಚಿಕೆಗಳನ್ನು ಹೊಂದಿರುವ ಅಗಾಥಾ ಸರಣಿಯ ಎರಡು ಸಂಚಿಕೆಯನ್ನು ಒಟಿಟಿಯಲ್ಲಿ ರಿಲೀಸ್‌ ಮಾಡಲಾಗಿದೆ. ಕೊನೆಯ ಎರಡು ಸಂಚಿಕೆಗಳೊಂದಿಗೆ ಸಂಪೂರ್ಣ ವೆಬ್ ಸರಣಿಯು ಅಕ್ಟೋಬರ್ 30 ರಂದು ಬಿಡುಗಡೆಯಾಗಲಿದೆ. ಅಗಾಥಾ ಎಂಬ ಮಾಟಗಾತಿ ತನ್ನ ಕಳೆದುಹೋದ ಮಾಂತ್ರಿಕ ಶಕ್ತಿಯನ್ನು ಹಿಂಪಡೆಯಲು ವಿಚ್ ರಸ್ತೆಗೆ ಪ್ರಯಾಣಿಸುತ್ತಾಳೆ. ಈ ಪ್ರಯಾಣದಲ್ಲಿ ಟೀನ್ ಎಂಬ ಹುಡುಗ ಅವಳಿಗೆ ಸಹಾಯ ಮಾಡುತ್ತಾನೆ.

ಈ ವೆಬ್ ಸರಣಿಯಲ್ಲಿ ಅನೇಕ ಮಾಟಗಾತಿಯರಿದ್ದಾರೆ. ಅವರೆಲ್ಲರೂ ಒಟ್ಟಿಗೆ ಸೇರಿದಾಗ ಅವರು ಏನು ಮಾಡುತ್ತಾರೆ?, ಟೀನ್ ಎಂಬ ಹುಡುಗ ಯಾರು? ಹೀಗೆ ಈ ಭಯಾನಕ ವೆಬ್‌ ಸರಣಿಯಲ್ಲಿ ಅನೇಕ ಕುತೂಹಲಗಳು ಇವೆ.

mysore-dasara_Entry_Point