ಕನ್ನಡ ಸುದ್ದಿ  /  ಮನರಂಜನೆ  /  Chutney Sambar Ott: ಚಟ್ನಿ ಸಾಂಬಾರ್‌ ವೆಬ್‌ ಸರಣಿ ನೋಡಲು ರೆಡಿಯಾಗಿ; ಒಟಿಟಿಯತ್ತ ಹಾಸ್ಯ ನಟ ಭಯಂಕರ ಯೋಗಿ ಬಾಬು ಕಾಮಿಡಿ ಸೀರಿಸ್‌

Chutney Sambar OTT: ಚಟ್ನಿ ಸಾಂಬಾರ್‌ ವೆಬ್‌ ಸರಣಿ ನೋಡಲು ರೆಡಿಯಾಗಿ; ಒಟಿಟಿಯತ್ತ ಹಾಸ್ಯ ನಟ ಭಯಂಕರ ಯೋಗಿ ಬಾಬು ಕಾಮಿಡಿ ಸೀರಿಸ್‌

Chutney Sambhar OTT release date: ತಮಿಳಿನ ಹಾಸ್ಯ ನಟ ಯೋಗಿ ಬಾಬು ನಟನೆಯ ಚಟ್ನಿ ಸಾಂಬಾರ್‌ ಎಂಬ ವೆಬ್‌ ಸರಣಿ ಶೀಘ್ರದಲ್ಲಿ ಒಟಿಟಿಗೆ ಆಗಮಿಸಲಿದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗಲಿದೆ. ಯೋಗಿ ಬಾಬು ಜತೆಗೆ ವಾಣಿ ಭೋಜನ್‌, ಚಂದ್ರಮೌಳಿ, ಇಲಂಗೊ ಕುಮಾರವೇಲ್‌, ನಿತಿನ್‌ ಸತ್ಯ ಮುಂತಾದವರು ಈ ಸರಣಿಯಲ್ಲಿ ನಟಿಸಿದ್ದಾರೆ.

Chutney Sambar OTT: ಚಟ್ನಿ ಸಾಂಬಾರ್‌ ವೆಬ್‌ ಸರಣಿ ನೋಡಲು ರೆಡಿಯಾಗಿ
Chutney Sambar OTT: ಚಟ್ನಿ ಸಾಂಬಾರ್‌ ವೆಬ್‌ ಸರಣಿ ನೋಡಲು ರೆಡಿಯಾಗಿ

Chutney Sambar OTT release date: ನಟ-ಹಾಸ್ಯ ಕಲಾವಿದ ಯೋಗಿ ಬಾಬು ಅವರು ಚಟ್ನಿ ಸಾಂಬಾರ್‌ ಎಂಬ ವೆಬ್‌ ಸರಣಿಯನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗೆ ಮಾಡುತ್ತಿರುವ ಸಂಗತಿ ನಿಮಗೆ ಗೊತ್ತಿರಬಹುದು. ಈ ವೆಬ್‌ ಸರಣಿ ಈ ತಿಂಗಳು ರಿಲೀಸ್‌ ಆಗುವ ಸೂಚನೆಯಿದೆ. ಬಹುಶಃ ಈ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ. ಹೀಗಿದ್ದರೂ, ಈ ವೆಬ್‌ ಸರಣಿಯ ಬಿಡುಗಡೆಯ ದಿನಾಂಕದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಈ ವೆಬ್‌ ಸರಣಿಯಲ್ಲಿ ಯೋಗಿ ಬಾಬು ಜತೆಗೆ ವಾಣಿ ಭೋಜನ್‌, ಚಂದ್ರಮೌಳಿ, ಇಲಂಗೊ ಕುಮಾರವೇಲ್‌, ನಿತಿನ್‌ ಸತ್ಯ ಮುಂತಾದವರು ಈ ಸರಣಿಯಲ್ಲಿ ನಟಿಸಿದ್ದಾರೆ.

ಈಗಾಗಲೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಉಪ್ಪು ಪುಳಿ ಕಾರಂ ಎಂಬ ವೆಬ್‌ ಸರಣಿ ಪ್ರಸಾರವಾಗುತ್ತಿದೆ. ಕುಟುಂಬವೊಂದು ನಡೆಸುವ ಹೋಟೆಲ್‌ ಮೆಸ್‌ನ ಹಿನ್ನಲೆಯಲ್ಲಿ ನಡೆಯುವ ಕಥೆ ಇದರಲ್ಲಿದೆ. ಇದೀಗ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಯೋಗಿ ಬಾಬು ನಟನೆಯ ಚಟ್ನಿ ಸಾಂಬಾರ್‌ ಎಂಬ ಇನ್ನೊಂದು ಅಡುಗೆ-ಕಾಮಿಡಿ ಕಥೆ ಪ್ರಸಾರವಾಗಲು ಸಿದ್ಧವಾಗಿದೆ. ಚಟ್ನಿ ಸಾಂಬಾರ್‌ ಎಂಬ ವೆಬ್‌ ಸರಣಿಗೆ ಸಿನಿಮಾ ನಿರ್ದೇಶಕ ರಾಧಾ ಮೋಹನ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

ಚಟ್ನಿ ಸಾಂಬಾರ್‌ ಸಿನಿಮಾವು ಜುಲೈ ತಿಂಗಳಲ್ಲಿ ರಿಲೀಸ್‌ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಕುರಿತು ಶೀಘ್ರದಲ್ಲಿ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ. ಇತ್ತೀಚೆಗೆ ಚಟ್ನಿ ಸಾಂಬಾರ್‌ ವೆಬ್‌ ಸರಣಿಯ ಟೀಸರ್‌ ರಿಲೀಸ್‌ ಆಗಿತ್ತು.

ಟ್ರೆಂಡಿಂಗ್​ ಸುದ್ದಿ

ಚಟ್ನಿ ಸಾಂಬಾರ್‌ ಟೀಸರ್‌ನಲ್ಲೇನಿತ್ತು?

ಅಮುದಾ ಮೆಸ್‌ ಎಂಬ ಪುಟ್ಟ ಹೋಟೆಲ್‌ ಅನ್ನು ಪರಿಚಯಿಸಲಾಗಿತ್ತು. ಇದು ಚಟ್ನಿ ಮತ್ತು ಸಾಂಬಾರ್‌ಗೆ ಫೇಮಸ್‌ ಆಗಿರುವ ಹೋಟೆಲ್‌. ಈ ಹೋಟೆಲ್‌ ನಿರ್ವಹಿಸುತ್ತಿರುವುದು ಯೋಗಿ ಬಾಬು. ಚಟ್ನಿ ಮತ್ತು ಸಾಂಬಾರ್‌ ಅನ್ನು ರುಚಿಕರವಾಗಿ ಮಾಡುವ ಕೌಶಲ, ರಹಸ್ಯ ಈ ಯೋಗಿ ಬಾಬುಗೆ ಮಾತ್ರ ತಿಳಿದಿರುವುದು ಎಂಬ ವಿವರವನ್ನೂ ಈ ಟೀಸರ್‌ನಲ್ಲಿ ನೀಡಲಾಗಿದೆ. ಲಾಭಕ್ಕಾಗಿ ಈ ರೆಸಿಪಿಯನ್ನು ಕೇಳಲು ಇತರರು ಪ್ರಯತ್ನಿಸುವ ವಿವರವೂ ಈ ಟೀಸರ್‌ನಲ್ಲಿತ್ತು. ಅಂದರೆ, ನಮ್ಮ ಸಾಂಬಾರ್‌ ರೆಸಿಪಿ ಅವನಿಗೆ ಕೊಡೋಣ, ಅವನ ಚಟ್ನಿ ರೆಸಿಪಿ ನಾವು ಕೇಳೋಣ ಎಂಬ ಪ್ರಯತ್ನವೂ ಇದೆ. ಒಟ್ಟಾರೆ ಒಂದಿಷ್ಟು ಹಾಸ್ಯದ ಜತೆ ವೆಬ್‌ ಸರಣಿ ಪ್ರಿಯರಿಗೆ ಈ ಸರಣಿ ಮಜಾ ಕೊಡುವ ನಿರೀಕ್ಷೆಯಿದೆ.

ತಮಿಳಿನ ಈ ವೆಬ್‌ ಸರಣಿ ನೋಡೋಣ. ಕನ್ನಡದಲ್ಲಿ ಯಾವುದಾದರೂ ಹೊಸ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತ ಎಂಬ ಪ್ರಶ್ನೆಗೂ ಉತ್ತರ ಇಲ್ಲಿದೆ. ನಮ್ಮ ಫ್ಲಿಕ್ಸ್‌ನಲ್ಲಿ ನಾಳೆ ಅಂದರೆ ಜುಲೈ 5ರಂದು ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನಾ ಎಂಬ ಸಿನಿಮಾ ರಿಲೀಸ್‌ ಆಗುತ್ತಿದೆ. ಕಾಮಿಟಿ ಕಿಲಾಡಿಗಳ ಈ ಸಿನಿಮಾವನ್ನು ಮನೆಯಲ್ಲೇ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗಬಹುದು. ಇದರೊಂದಿಗೆ ಇದೇ ಒಟಿಟಿಯಲ್ಲಿ ಕ್ರಶ್‌ ಎಂಬ ಸಿನಿಮಾವೂ ರಿಲೀಸ್‌ ಆಗುತ್ತಿದೆ. ಅಗ್ನಿಸಾಕ್ಷಿ ಸೀರಿಯಲ್‌ನ ವಿಜಯ್‌ ಸೂರ್ಯ ನಟನೆಯ ಸ್ವಿಚ್‌ ಎಂಬ ಸಿನಿಮಾವೂ ನಮ್ಮ ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಲಿದೆ. ಕನ್ನಡದಲ್ಲಿ ನೋಡಬಹುದಾದ ಹೊಸ ಎಂಟು ಒಟಿಟಿ ಸಿನಿಮಾಗಳ ವಿವರ ಇಲ್ಲಿದೆ.