ಕನ್ನಡ ಸುದ್ದಿ  /  ಮನರಂಜನೆ  /  Ott Movies: ಈ ವಾರ ಒಟಿಟಿಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳು; ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ ಸೇರಿದಂತೆ 8 ಸಿನಿಮಾಗಳ ವಿವರ

OTT Movies: ಈ ವಾರ ಒಟಿಟಿಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳು; ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ ಸೇರಿದಂತೆ 8 ಸಿನಿಮಾಗಳ ವಿವರ

New Kannada movies on OTT: ಒಟಿಟಿಯಲ್ಲಿ ಕನ್ನಡ ಸಿನಿಮಾಗಳೇ ರಿಲೀಸ್‌ ಆಗ್ತಾ ಇಲ್ಲ ಎನ್ನುವವರಿಗೆ ಈ ವಾರ ಹಲವು ಕನ್ನಡ ಸಿನಿಮಾಗಳು ಕಾಯುತ್ತಿವೆ. ಈ ವಾರ ಬಿಡುಗಡೆಯಾಗಲಿರುವ ಕೆಲವು ಕನ್ನಡ ಸಿನಿಮಾಗಳ ವಿವರವನ್ನು ಇಲ್ಲಿ ನೀಡಲಾಗಿದೆ.

OTT Movies: ಈ ವಾರ ಒಟಿಟಿಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳು
OTT Movies: ಈ ವಾರ ಒಟಿಟಿಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳು

New Kannada movies on OTT: ಒಟಿಟಿಯಲ್ಲಿ ಹೊಸ ಕನ್ನಡ ಸಿನಿಮಾಗಳು ಮರೀಚಿಕೆಯಾಗುತ್ತಿರುವ ಸಂದರ್ಭದಲ್ಲಿ ಈ ವಾರ ಕನ್ನಡ ಸಿನಿಮಾ ಪ್ರಿಯರಿಗೆ ಗುಡ್‌ನ್ಯೂಸ್‌ ಇದೆ. ಈ ವಾರ ಹಲವು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ನಮ್ಮ ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಬಿಡುಗಡೆಯಾಗುವ ಕನ್ನಡ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ಬನ್ನಿ ಈ ವಾರ ಜುಲೈ 5ರಿಂದ ಯಾವೆಲ್ಲ ಹೊಸ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ ಎಂದು ನೋಡೋಣ.

ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ ಮತ್ತು ಸುಷ್ಮಿತಾ ಹಾಗೂ ಇತರೆ ಕಾಮಿಡಿ ಸ್ಪರ್ಧಿಗಳು ನಟಿಸಿರುವ ಆನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ ಸಿನಿಮಾವು ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಆನ್‌ಲೈನ್‌ ಮದುವೆಯ ಕಥೆಯನ್ನು ಹಾಸ್ಯ ರೂಪದಲ್ಲಿ ನೀಡಿರುವ ಈ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.

ಎಲ್ಲಿ ನೋಡಬಹುದು?: ನಮ್ಮ ಫ್ಲಿಕ್ಸ್‌ ಒಟಿಟಿ

ಟ್ರೆಂಡಿಂಗ್​ ಸುದ್ದಿ

ತಾರಾಗಣ: ಸುಷ್ಮಿತ, ಸೀರುಂಡೆ ರಘು ಮುಂತಾದವರು.

ಸ್ಟ್ರೀಮಿಂಗ್‌ ದಿನಾಂಕ: ಜುಲೈ 5, 2024

ಕ್ರಶ್‌

ಕಾಲೇಜು ಕ್ಯಾಂಪಸ್‌ನಲ್ಲಿ ಆಗುವ ಪ್ರೀತಿಯ ಕ್ರಶ್‌ "ಕ್ರಶ್"‌ ಎಂಬ ಸಿನಿಮಾವಾಗಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಕ್ರಶ್‌ ಮಾತ್ರವಲ್ಲದೆ ಯುವತಿಯ ತಾಯಿ ನಾಪತ್ತೆಯಾಗುವ ಕತೆಯೂ ಇದೆ.

ಎಲ್ಲಿ ನೋಡಬಹುದು?: ನಮ್ಮ ಫ್ಲಿಕ್ಸ್‌ ಒಟಿಟಿ

ಸ್ಟ್ರೀಮಿಂಗ್‌ ದಿನಾಂಕ: ಜುಲೈ 5, 2024

ತಾರಾಗಣ: ಆರ್ಯವರ್ಧನ್‌, ಪ್ರತಿಭಾ ಮುಂತಾದವರು.

ಒಂದು ಗಂಟೆಯ ಕಥೆ

ಇದು ಎ ರೇಟಿಂಗ್‌ನ ಸಿನಿಮಾ. ಗಂಟೆ ಎಂದರೆ ದೇಗುಲದ ಗಂಟೆಯಲ್ಲ. ಇದು ಡಬಲ್‌ ಮೀನಿಂಗ್‌ ಗಂಟೆ. ಅಜಯ್‌ ರಾಜ್‌ ಎಂಬ ಪ್ಲೇ ಬಾಯ್‌ನ ಕಥೆಯನ್ನು ಇದು ಹೊಂದಿದೆ.

ಎಲ್ಲಿ ನೋಡಬಹುದು?: ನಮ್ಮ ಫ್ಲಿಕ್ಸ್‌ ಒಟಿಟಿ

ಸ್ಟ್ರೀಮಿಂಗ್‌ ದಿನಾಂಕ: ಜುಲೈ 5, 2024

ಸ್ವಿಚ್‌ ಕೇಸ್‌ ಎನ್‌

ಅಗ್ನಿಸಾಕ್ಷಿ ಸೀರಿಯಲ್‌ನ ವಿಜಯ್‌ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ವಿಚ್‌ ಎಂಬ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಚೇತನ್‌ ಶೆಟ್ಟಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಕೆಲಸ ಮತ್ತು ಬದುಕಿನ ನಡುವಿನ ಸಮತೋಲನಕ್ಕೆ ಸಂಬಂಧಪಟ್ಟ ಜಂಜಾಟದ ಕಥೆ ಈ ಸಿನಿಮಾದಲ್ಲಿದೆ.

ಎಲ್ಲಿ ನೋಡಬಹುದು?: ಅಮೆಜಾನ್‌ ಪ್ರೈಮ್‌ ವಿಡಿಯೋ

ತಾರಾಗಣ: ವಿಜಯ್‌ ಸೂರ್ಯ, ಪೃಥ್ವಿ ರಾಜ್‌, ಸ್ವೇತ ವಿಜಯ ಕುಮಾರ್‌

ಸ್ಟ್ರೀಮಿಂಗ್‌ ದಿನಾಂಕ: ಜೂನ್‌ 28, 2024

ಕ್ರಿಟಿಕಲ್‌ ಕೀರ್ತನೆಗಳು

ಕೆಮಿಸ್ಟ್ರಿ ಆಫ್‌ ಕರಿಯಪ್ಪ ಮೂಲಕ ಜನಪ್ರಿಯತೆ ಪಡೆದ ನಿರ್ದೇಶಕ ಕುಮಾರ್‌ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಗ್ಯಾಂಬ್ಲಿಂಗ್‌ಗೆ ಸಂಬಂಧಪಟ್ಟ ಕಥೆಯನ್ನು ಇದು ಹೊಂದಿದೆ. ಐಪಿಎಲ್‌ ಸಮಯದಲ್ಲಿ ಜೂಜು ಎಂಬ ಚಟಕ್ಕೆ ಸಿಲುಕಿದವರ ಕಥೆಯನ್ನು ಇದು ಹೇಳುತ್ತದೆ.

ಎಲ್ಲಿ ನೋಡಬಹುದು?: ನಮ್ಮ ಫ್ಲಿಕ್ಸ್‌

ತಾರಾಗಣ: ರಾಜೇಶ್‌ ನಟರಂಗ, ತಬಲಾ ನಾಣಿ, ಅರುಣ ಬಾಲರಾಜ್‌

 

ಸ್ಟ್ರೀಮಿಂಗ್‌ ದಿನಾಂಕ: ಜೂನ್‌ 28, 2024

ಇವಲ್ಲದೆ ನಮ್ಮ ಫ್ಲಿಕ್ಸ್‌ನಲ್ಲಿ ಊರ್ವಿ ಎಂಬ ಕನ್ನಡ ಸಿನಿಮಾವು ಕಳೆದ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಿದೆ. ಟ್ರಿಪಲ್‌ ರೈಡಿಂಗ್‌ ಸಿನಿಮಾವೂ ಇದೆ. ಸನ್‌ ನೆಕ್ಸ್ಟ್‌ನಲ್ಲಿ ಕಳೆದ ತಿಂಗಳು ವಿನೋದ್‌ ಪ್ರಭಾಕರ್‌ ನಟನೆಯ ಫೈಟರ್‌ ಸಿನಿಮಾವೂ ಬಿಡುಗಡೆಯಾಗಿದೆ. ಸಿನಿಬಜಾರ್‌ ಒಟಿಟಿಯಲ್ಲಿ ಕಳೆದ ತಿಂಗಳು ಚಾಂದಿನಿ ಬಾರ್‌ ಎಂಬ ಸಿನಿಮಾವೂ ಬಿಡುಗಡೆಯಾಗಿದ್ದು, ಆಸಕ್ತರು ನೋಡಬಹುದು.