ಅನಾರೋಗ್ಯ ಹಿನ್ನೆಲೆ ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್ ನಿಧನ; ಜೆಪಿ ನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಕನ್ನಡ ಸುದ್ದಿ  /  ಮನರಂಜನೆ  /  ಅನಾರೋಗ್ಯ ಹಿನ್ನೆಲೆ ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್ ನಿಧನ; ಜೆಪಿ ನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಅನಾರೋಗ್ಯ ಹಿನ್ನೆಲೆ ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್ ನಿಧನ; ಜೆಪಿ ನಗರದ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು (ಅ. 20) ನಿಧನರಾಗಿದ್ದಾರೆ.

ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನ
ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನ

Kichcha Sudeep Mother Saroja Death: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌, ವಯಸ್ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಭಾನುವಾರ ಬೆಳಗ್ಗೆ 7.04 ಸುಮಾರಿಗೆ ಸರೋಜಾ ನಿಧನರಾಗಿದ್ದಾರೆ.

ಸರೋಜಾ ಅವರ ಪಾರ್ಥಿವ ಶರೀರವನ್ನು, ಕುಟುಂಬಸ್ಥರು ಮಧ್ಯಾಹ್ನ 12 ಗಂಟೆ ಸಮಯಕ್ಕೆ ಬೆಂಗಳೂರಿನ ಜೆಪಿ ನಗರದ ಮನೆಗೆ ತರಲಿದ್ದಾರೆ. ಅದಾದ ಬಳಿಕ ಸಂಜೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆಗೆ ಮಾಡಲಾಗಿದೆ. ಬಳಿಕ ಇಂದೇ ಅಂತ್ಯಕ್ರಿಯೆ ನೆರವೇರಲಿದೆ. ಕಳೆದ ಕೆಲ ದಿನಗಳಿಂದ ವಯಸ್ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಸರೋಜಾ ಅವರಿಗೆ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಕಿಚ್ಚ ಸುದೀಪ್‌ಗೆ ಅಮ್ಮ ಸರೋಜ ಅಂದರೆ ಪಂಚಪ್ರಾಣ. ಯಾವತ್ತೂ ಅಮ್ಮನ ಮಾತನ್ನು ಸುದೀಪ್‌ ಮೀರುತ್ತಿರಲಿಲ್ಲ. ಅದಕ್ಕೆ ಉದಾಹರಣೆ ಎಂದರೆ, ಬಿಗ್‌ ಬಾಸ್‌ ಶೋ ಮೊದಲದ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್‌ ಕಾರ್ಯಕ್ರಮಕ್ಕೆ ಶೇರ್ವಾನಿ ಧರಿಸಿ ಬಂದಿದ್ದರು ಸುದೀಪ್‌. ಬಳಿಕ ಹಬ್ಬಕ್ಕೆ ಬರಿಗಾಲಲ್ಲಿ ವೇದಿಕೆ ಹತ್ತಿದ್ದೇನೆ. ನೀವು ಹೇಳಿದಂತೆ ಹಬ್ಬದ ರೀತಿ ಡ್ರೆಸ್‌ ಹಾಕಿದೀನಿ ಎಂದು ವೇದಿಕೆ ಮೇಲಿಂದಲೇ ಅಮ್ಮನಿಗೆ ಹೇಳಿದ್ದರು.

ಸರೋಜಾ ಮತ್ತು ಸಂಜೀವ್‌ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು. ಕಿಚ್ಚ ಸುದೀಪ್‌ ಚಿಕ್ಕವರು. ಸೋಷಿಯಲ್‌ ಮೀಡಿಯಾದಲ್ಲಿ ಸುದೀಪ್‌ ಕುಟುಂಬಕ್ಕೆ ಅಭಿಮಾನಿಗಳು ಮತ್ತು ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ. ಅಭಿಮಾನಿ ಬಳಗವೂ ಜೆಪಿ ನಗರದ ಕಿಚ್ಚನ ಮನೆಗೆ ಆಗಮಿಸುತ್ತಿದ್ದಾರೆ.

Whats_app_banner