Dwarakish Death: ದ್ವಾರಕೀಶ್‌ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು?-sandalwood actress soundaryas death and dwarakishs funeral have a similar connection kannada celebrities death mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Dwarakish Death: ದ್ವಾರಕೀಶ್‌ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು?

Dwarakish Death: ದ್ವಾರಕೀಶ್‌ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು?

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ಭೌತಿಕವಾಗಿ ಅಗಲಿದ್ದಾರೆ. ಏ. 17ರಂದು ಅಂತ್ಯಕ್ರಿಯೆ ನೆರವೇರಿದೆ. ಆದರೆ, ನಿಮಗೆ ಗೊತ್ತಾ ಆಪ್ತಮಿತ್ರ ಸಿನಿಮಾ ನಟಿ ಸೌಂದರ್ಯ ಸಾವಿಗೂ, ದ್ವಾರಕೀಶ್‌ ಅಂತ್ಯಕ್ರಿಯೆಗೂ ಹೀಗೊಂದು ಸಾಮ್ಯತೆ ಇದೆ.

Dwarakish Death: ದ್ವಾರಕೀಶ್‌ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು?
Dwarakish Death: ದ್ವಾರಕೀಶ್‌ ನಿಧನಕ್ಕೂ, ‘ಆಪ್ತಮಿತ್ರ’ ನಟಿ ಸೌಂದರ್ಯ ಸಾವಿಗೂ ಇದೇ ಹೀಗೊಂದು ನಂಟು! ಏನದು?

Dwarakish Death: ಅದು 2004ರ ಸಮಯ. ಏಪ್ರಿಲ್‌ 17ರಂದು ಚಿತ್ರೋದ್ಯಮದಲ್ಲಿ ಕಂಡು ಕೇಳರಿಯದ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿತ್ತು. ಬಹುಭಾಷಾ ನಟಿ ಸೌಂದರ್ಯ ಭೀಕರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು ಸುರಸುಂದರಿಯ ಆ ಸಾವು. ಈಗ ಅಚ್ಚರಿಯೋ ಕಾಕತಾಳೀಯವೋ ಸೌಂದರ್ಯ ನಿಧನರಾದ ದಿನವೇ ಕರ್ನಾಟಕದ ಕುಳ್ಳ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ನೆರವೇರಿದೆ!

ಪ್ರಚಂಡ ಕುಳ್ಳ ದ್ವಾರಕೀಶ್‌ ಎಲೆಕ್ಟ್ರಾನಿಕ್‌ ಸಿಟಿಯ ಗುಳಿಮಂಗಳದಲ್ಲಿನ ಮನೆಯಲ್ಲಿ ಹೃದಯಾಘಾತದಿಂದ ಏ. 16ರಂದು ನಿಧನರಾಗಿದ್ದರು. ಆ ನಿಧನದ ಸುದ್ದಿ ಇಡೀ ಸ್ಯಾಂಡಲ್‌ವುಡ್‌ ಚಿತ್ರೋದ್ಯಮವನ್ನೇ ಶಾಕ್‌ಗೆ ದೂಡಿತ್ತು. ಹಿರಿ ಕಿರಿ ಕಲಾವಿದರು, ತಂತ್ರಜ್ಞರು, ಪರಭಾಷೆಯ ಕಲಾವಿದರೂ ದ್ವಾರಕೀಶ್‌ ನಿಧನಕ್ಕೆ ಕಂಬನಿ ಮಿಡಿದಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಸಂತಾಪ ಸೂಚಿಸಿದ್ದರು.

ಹಾಗೇ ನಿಧನರಾದ ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಬಳಿ ಸಾರ್ವಜನಿಕರ ಅಂತಿಮ ದರ್ಶನಕ್ಕೂ ಇರಿಸಲಾಗಿತ್ತು. ಸಾಕಷ್ಟು ಮಂದಿ ದ್ವಾರಕೀಶ್‌ ಅವರ ಅಂತಿಮ ದರ್ಶನವನ್ನೂ ಪಡೆದರು. ಅಲ್ಲಿಂದ ಮೆರವಣಿಗೆ ಮೂಲಕ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಏ. 17ರಂದು ಹಿರಿಮಗ ಯೋಗೀಶ್‌ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.

ಏ. 17ರಂದು ವಿಮಾನ ದುರಂತದಲ್ಲಿ ಸಾವು

ಇದೀಗ ಅಚ್ಚರಿಯ ವಿಚಾರ ಏನೆಂದರೆ, ಬಹುಭಾಷಾ ನಟಿ ಸೌಂದರ್ಯ ಸಾವಿಗೂ, ದ್ವಾರಕೀಶ್‌ ಅಂತ್ಯಕ್ರಿಯೇಗೂ ಸಾಮ್ಯತೆ ಇದೆ. 20 ವರ್ಷಗಳ ಹಿಂದೆ ಅಂದರೆ, 2004ರ ಏ. 17ರಂದು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಚುನಾವಣಾ ಪ್ರಚಾರದ ನಿಮಿತ್ತ ಬೆಂಗಳೂರಿನಿಂದ ಈಗಿನ ತೆಲಂಗಾಣದ ಕರೀಂನಗರಕ್ಕೆ ಹೋಗಬೇಕಿತ್ತು. ಆದರೆ ದುರದೃಷ್ಟವಶಾತ್‌ ಅವರಿದ್ದ ವಿಮಾನ ಜಕ್ಕೂರು ಏರ್‌ಫೀಲ್ಡ್‌ನಲ್ಲಿ ಕ್ರ್ಯಾಶ್‌ ಆಗಿ ನೆಲಕ್ಕುರುಳಿತು.

ಆಪ್ತಮಿತ್ರ ಚಿತ್ರೀಕರಣ ಮುಗಿಸಿದ್ದ ಸೌಂದರ್ಯ

ಹಾಗೇ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ದುರಂತ ಸಾವಿಗೀಡಾದರು. ಭಾರತೀಯ ಚಿತ್ರೋದ್ಯಮವೇ ಅವರ ಸಾವಿಗೆ ಕಂಬನಿ ಮಿಡಿಯಿತು. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಟಿಯ ಜೀವನ ಅಂತ್ಯವಾಗಿದ್ದು ಅವರ ಅಭಿಮಾನಿವಲಯದಲ್ಲೂ ಅರಗಿಸಿಕೊಳ್ಳಲಾಗಲಿಲ್ಲ. ಈ ನಡುವೆ ದ್ವಾರಕೀಶ್‌ ನಿರ್ಮಾಪಕರಾಗಿದ್ದ ಆಪ್ತಮಿತ್ರ ಚಿತ್ರದ ಶೂಟಿಂಗ್‌ ಕೆಲಸಗಳನ್ನೂ ಸೌಂದರ್ಯ ಮುಗಿಸಿಕೊಟ್ಟಿದ್ದರು. ಸೌಂದರ್ಯ ಅನುಪಸ್ಥಿತಿಯಲ್ಲಿಯೇ 2004ರ ಆಗಸ್ಟ್‌ 27ರಂದು ಆಪ್ತಮಿತ್ರ ಸಿನಿಮಾ ರಿಲೀಸ್‌ ಆಗಿ ಸೂಪರ್‌ ಹಿಟ್‌ ಪಟ್ಟವನ್ನೂ ಪಡೆಯಿತು.

ಆವತ್ತೂ ಹಬ್ಬಿತ್ತು ಹೀಗೊಂದು ಗುಸು ಗುಸು

ಸೋಲು ಮತ್ತು ಸಾಲದ ಸುಳಿಗೆ ಸಿಲುಕಿದ್ದ ದ್ವಾರಕೀಶ್‌ಗೆ ಆಪ್ತಮಿತ್ರ ಸಿನಿಮಾ ಪುನರ್ಜನ್ಮ ನೀಡಿತು. ಸಾಲಗಳು ಕ್ಲಿಯರ್‌ ಆದವು. ವಿಷ್ಣು ಜತೆಗಿನ ಹಳೇ ಸ್ನೇಹವೂ ಮುಂದುವರಿಯಿತು. ಆದರೆ, ಇದೀಗ ದ್ವಾರಕೀಶ್‌ ಸಾವಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ, 20 ವರ್ಷಗಳ ಹಿಂದೆ ಸೌಂದರ್ಯ ನಿಧನರಾದ ದಿನವೇ (ಏ. 17) ಕರ್ನಾಟಕ ಕುಳ್ಳನ ಅಂತ್ಯಕ್ರಿಯೆಯೂ ಘಟಿಸಿದೆ. ಸೌಂದರ್ಯ ಸಾವಿಗೆ ನಾಗವಲ್ಲಿಯೇ ಕಾರಣ ಎಂಬ ಮಾತುಗಳೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು.

mysore-dasara_Entry_Point