ಕನ್ನಡ ಸುದ್ದಿ  /  ಮನರಂಜನೆ  /  ‘ನನ್ನ ಆ ದಿನಗಳು ಸಮೀಪಿಸುತ್ತಿವೆ!’ ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌

‘ನನ್ನ ಆ ದಿನಗಳು ಸಮೀಪಿಸುತ್ತಿವೆ!’ ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌

ಕಾಲಿವುಡ್‌ ನಿರ್ಮಾಪಕ, ಫ್ಯಾಟ್‌ಮ್ಯಾನ್‌ ರವೀಂದರ್‌ ಚಂದ್ರಶೇಖರನ್‌ ಸೋಷಿಯಲ್‌ ಮೀಡಿಯಾದಲ್ಲಿ ನನ್ನ ಆ ದಿನಗಳು ಸಮೀಪಿಸುತ್ತಿವೆ ಎಂದು ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ್ದಾರೆ.

‘ನನ್ನ ಆ ದಿನಗಳು ಸಮೀಪಿಸುತ್ತಿವೆ!’ ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌
‘ನನ್ನ ಆ ದಿನಗಳು ಸಮೀಪಿಸುತ್ತಿವೆ!’ ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌

Ravindar Chandrasekaran: ತಮಿಳು ಸಿನಿಮಾ ನಿರ್ಮಾಪಕ, ಫ್ಯಾಟ್‌ಮ್ಯಾನ್‌ ರವೀಂದರ್‌ ಚಂದ್ರಶೇಖರನ್‌  ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲ ತಿಂಗಳಿಂದ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ಅವರು, ಇದೀಗ ಏಕಾಏಕಿ ಆಗಮಿಸಿ ಇನ್‌ಸ್ಟಾಗ್ರಾಂನಲ್ಲಿ ಅಚ್ಚರಿಯ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ್ದಾರೆ. ನನ್ನ ಆ ದಿನಗಳು ಸಮೀಪಿಸುತ್ತಿವೆ ಎಂಬರ್ಥದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದೇ ತಡ, ನೆಟ್ಟಿಗೆರು ಆತಂಕದಲ್ಲಿಯೇ ಕಾಮೆಂಟ್‌ ಮಾಡುತ್ತಿದ್ದಾರೆ. ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮ ಜತೆ ನಾವಿದ್ದೇವೆ ಎಂದೂ ಮನವಿ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಕಳೆದ ಎರಡು ವರ್ಷದಲ್ಲಿ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಆ ಸುದ್ದಿಯ ಆರಂಭವಾಗಿದ್ದೇ ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್‌ ಅವರ ಜತೆಗಿನ ಎರಡನೇ ವಿವಾಹದ ಬಳಿಕ. ಮೆಚ್ಚುಗೆಗಿಂತ ಟೀಕೆಯ ಸುರಿಮಳೆಯನ್ನೇ ಈ ಜೋಡಿ ಪಡೆದುಕೊಂಡಿತ್ತು. ನೋಡುಗರು ದುಡ್ಡಿಗಾಗಿ ಈ ದಡೂತಿಯನ್ನು ಮದುವೆಯಾಗಿದ್ದಾಳೆ ಎಂದೇ ಮಹಾಲಕ್ಷ್ಮೀಯನ್ನು ನಿಂದಿಸಿದ್ದರು. ಹೀಗೆ ಸಾಗಿದ ಈ ಜೋಡಿಯ ದಾಂಪತ್ಯ ಸದ್ಯ ಸುಗಮವಾಗಿಯೇ ಸಾಗುತ್ತಿದೆ. ಆಗಾಗ ಕೆಲವು ವದಂತಿಗಳೂ ಕೇಳಿಬರುತ್ತಿರುತ್ತವೆ.

ಹರಿದಾಡಿದ್ದವು ಬಗೆಬಗೆ ವದಂತಿಗಳು

ಈ ನಡುವೆ ನಿರ್ಮಾಪಕ ರವೀಂದರ್‌ ಬಾಳಿನಲ್ಲೂ ಒಂದಷ್ಟು ಕಹಿಘಟನೆಗಳು ನಡೆದವು. ವಂಚನೆ ಪ್ರಕರಣದಲ್ಲಿ ಒಂದು ತಿಂಗಳ ಕಾಲ ಜೈಲು ವಾಸವನ್ನೂ ಅನುಭವಿಸಿ ಬಂದರು. ಜೈಲಿನಲ್ಲಿ ತಾವು ಅನುಭವಿಸಿದ ಯಾತನೆಯನ್ನೂ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಗಂಟೆಗಟ್ಟಲೇ ಕೂತು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಇದಷ್ಟಕ್ಕೆ ಮುಗಿಯಲಿಲ್ಲ. ಪತ್ನಿ ಮಹಾಲಕ್ಷ್ಮೀ ಮತ್ತು ರವೀಂದರ್‌ ಇಬ್ಬರ ನಡುವೆ ಯಾವುದೂ ಸರಿಯಿಲ್ಲ. ಡಿವೋರ್ಸ್‌ ಪಡೆಯಲಿದ್ದಾರೆ ಎಂಬ ಸುಳ್ಳು ಸುದ್ದಿಯೂ ವೇಗ ಪಡೆದುಕೊಂಡಿತ್ತು. ಇದಕ್ಕೂ ಈ ಜೋಡಿ ತಲೆಕೆಡಿಸಿಕೊಳ್ಳಲಿಲ್ಲ.

ಸೋಷಿಯಲ್‌ ಮೀಡಿಯಾದಿಂದ ಅಂತರ

ಯಾರು ಏನೇ ಹೇಳಿದರೂ, ಏನೇ ಟೀಕೆ ಮಾಡಿದರೂ ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಇತ್ತು ಈ ಜೋಡಿ. ಈ ನಡುವೆ ಸೋಷಿಯಲ್‌ ಮೀಡಿಯಾದಿಂದಲೂ ಅಂತರ ಕಾಯ್ದುಕೊಂಡು ಬಂದಿದ್ದ ರವೀಂದರ್‌ ಚಂದ್ರಶೇಖರನ್‌. ಸಾರ್ವಜನಿಕ ವಲಯದಿಂದಲೇ ದೂರ ಉಳಿದಿದ್ದರು. ಅನಾರೋಗ್ಯ ಬಾಧಿಸಿದ ಹಿನ್ನೆಲೆಯಲ್ಲಿ ಅದಕ್ಕಾಗಿಯೇ ಟ್ರೀಟ್‌ಮೆಂಟ್‌ ಸಹ ಪಡೆಯುತ್ತಿದ್ದರು. ಮುಖಕ್ಕೆ ಆಕ್ಸಿಜನ್‌ ಮಾಸ್ಕ್‌ ಧರಿಸಿದ ಪೋಸ್ಟ್‌ ವೈರಲ್‌ ಆಗಿತ್ತು. ನಿರ್ಮಾಪಕನ ಆರೋಗ್ಯದ ಬಗ್ಗೆಯೂ ಕೆಲವರು ಕಳವಳ ವ್ಯಕ್ತಪಡಿಸಿದ್ದರು.

ಹೀಗೆ ಎಲ್ಲದರಿಂದ ಸುಧಾರಿಸಿಕೊಂಡಿರುವ ರವೀಂದರ್‌, ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಪೋಸ್ಟ್‌ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ರವೀಂದರ್‌ ಹಂಚಿಕೊಂಡ ಪೋಸ್ಟ್‌ ನೆಟ್ಟಿಗ ವಲಯಕ್ಕೂ ಕೊಂಚ ಆತಂಕವನ್ನೇ ತರಿಸಿದೆ. ಜತೆಗೆ ಪತ್ನಿ ಮಹಾಲಕ್ಷ್ಮೀ ಶಂಕರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ, ರವೀಂದರ್‌ ಚಂದ್ರಶೇಖರನ್‌ ಶೇರ್‌ ಮಾಡಿದ ಪೋಸ್ಟ್‌ ಏನು? ಇಲ್ಲಿದೆ ನೋಡಿ.

ರವೀಂದರ್‌ ಚಂದ್ರಶೇಖರನ್‌ ಪೋಸ್ಟ್‌ ಹೀಗಿದೆ

"ಕೆಟ್ಟ ಭಾವನೆ ಎಂದರೆ ಪರಿಸ್ಥಿತಿ. ಕೆಟ್ಟ ಪರಿಸರವು ನಕಾರಾತ್ಮಕ ಶಕ್ತಿಯಾಗಿದೆ. ಹಾಗಂತ ಪ್ರತಿ ದಿನವೂ ಕೆಟ್ಟ ದಿನವಲ್ಲ.ಇದೀಗ ನನ್ನ ದಿನಗಳು ಸಮೀಪಿಸುತ್ತಿವೆ. ಆದರೆ ಒಳ್ಳೆಯ, ಕೆಟ್ಟ ಮತ್ತು ಕೊಳಕನ್ನು ನಾನು ಸಾಕಷ್ಟು ಸಲ ಪರೀಕ್ಷಿಸಿದ್ದೇನೆ" ಎಂದಿದ್ದಾರೆ. ಪತಿಯ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮಹಾಲಕ್ಷ್ಮೀ, ʼನೀವು ಹೇಳಿದ್ದು ಸರಿ, ಅಮ್ಮು. ಪ್ರತಿಯೊಂದು ಸನ್ನಿವೇಶವು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಆದರೆ ಒಟ್ಟಿಗೆ ನಾವು ಅವುಗಳ ಮೂಲಕ ನ್ಯಾವಿಗೇಟ್ ಮಾಡಬಹುದು ಮತ್ತು ನಮ್ಮನ್ನು ಸುತ್ತುವರೆದಿರುವ ಧನಾತ್ಮಕ ಶಕ್ತಿಯ ಮೇಲೆ ಕೇಂದ್ರೀಕರಿಸಬಹುದು. ನಮ್ಮದು ಏನೇ ಬಂದರೂ ಪ್ರತಿ ದಿನವನ್ನು ಸದುಪಯೋಗ ಪಡಿಸಿಕೊಳ್ಳೋಣ" ಎಂದಿದ್ದಾರೆ.

IPL_Entry_Point