ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chaitra J Achar: ನಾನು 2 ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌; ಮೈತುಂಬಾ ಆಭರಣ, ಕಲಾತ್ಮಕ ಉಡುಗೆ ಮೂಲಕ ಕಣ್ಮನ ಸೆಳೆದ ಬ್ಲಿಂಕ್‌ ಚೆಲುವೆ

Chaitra J Achar: ನಾನು 2 ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌; ಮೈತುಂಬಾ ಆಭರಣ, ಕಲಾತ್ಮಕ ಉಡುಗೆ ಮೂಲಕ ಕಣ್ಮನ ಸೆಳೆದ ಬ್ಲಿಂಕ್‌ ಚೆಲುವೆ

  • Chaitra J Achar: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಬ್ಲಿಂಕ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಕೆಯ ಈ ಫ್ಯಾಷನ್‌ ಲುಕ್‌ಗೆ ಅಭಿಮಾನಿಗಳು ಖುಷಿಗೊಂಡಿದ್ದಾರೆ.

Chaitra J Achar: ನಾನು ಎರಡು ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌
icon

(1 / 12)

Chaitra J Achar: ನಾನು ಎರಡು ಜಡೆಯ ಹುಡುಗಿ ಎಂದ ಚೈತ್ರಾ ಜೆ ಆಚಾರ್‌(Photos Credit: Instagram Chaitra J Achar (All Photos))

ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಅವರ ಈ ಉಡುಗೆ ಸಮ್ಯಕಾ ಕ್ಲೋಥಿಂಗ್ಸ್‌ ಕಪಾಟಿನಿಂದ ಬಂದಿದೆ. ವಿವಂತ್‌ ಗೋಲ್ಡ್‌ ಡೈಮಾಂಡ್ಸ್‌ನ ಆಭರಣಗಳನ್ನು ತೊಟ್ಟು ಸಖತ್‌ ಲುಕ್‌ ನೀಡಿದ್ದಾರೆ ಚೈತ್ರಾ ಜೆ ಆಚಾರ್‌.
icon

(2 / 12)

ಇವರಿಗೆ ಸ್ಟೈಲ್‌ ಬೈ ಐಶ್ವರ್ಯಾ ಸ್ಟೈಲಿಂಗ್‌ ಮಾಡಿದ್ದಾರೆ. ಪ್ರಶಾಂತ್‌ ಕುಮಾರ್‌ ಮೇಕೋವರ್‌ ಮೂಲಕ ತನ್ನ ಅಂದ ಹೆಚ್ಚಿಸಿಕೊಂಡಿದ್ದಾರೆ. ಸುಂರ ಉಡುಗೆ ಮತ್ತು ಆಭರಣಗಳ ಮೂಲಕ ಕಣ್ಣು ಮಿಟುಕಿಸದೆ ನೋಡುವಂತಹ ಫೋಟೋಗಳನ್ನು ಬ್ಲಿಂಕ್‌ ಚೆಲುವೆ ಹಂಚಿಕೊಂಡಿದ್ದಾರೆ.
icon

(3 / 12)

ಒಟ್ಟಾರೆ ಇವರ ಹೊಸ ಫೋಟೋಗಳು ಆಕರ್ಷಕವಾಗಿದ್ದು, ಅಭಿಮಾನಿಗಳನ್ನು ಸೆಳೆದಿವೆ. ಈ ಫೋಟೋಶೂಟ್‌ ಹಿಂದಿನ ಕಥೆಯನ್ನು ಇನ್ನೂ ಇವರು ಹಂಚಿಕೊಂಡಿಲ್ಲ. ಸದ್ಯದಲ್ಲಿಯೇ ಈ ಕುರಿತು ವಿವರ ದೊರಕುವ ನಿರೀಕ್ಷೆಯಿದೆ.
icon

(4 / 12)

ಚೈತ್ರಾ ಜೆ ಆಚಾರ್‌ ಅವರು ಕನ್ನಡ ನಟಿ ಮಾತ್ರವಲ್ಲದೆ ಹಾಡುಗಾರ್ತಿಯೂ ಹೌದು. ಬೆಂಗಳೂರು ಮೂಲದ ಇವರು 2019ರಲ್ಲಿ ಮಹಿರಾ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು.
icon

(5 / 12)

ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿ ಮೂಲಕ ತನ್ನ ನಟನೆ ಕರಿಯರ್‌ ಆರಂಭಿಸಿದರು. ಇದಾದ ಬಳಿಕ ಮಹಿರಾ ಸಿನಿಮಾದಲ್ಲಿ ನಟಿಸಿದ್ದರು. 
icon

(6 / 12)

ಗಿಲ್ಕಿ, ತಲೆಂದಂಡ, ಆ ದೃಶ್ಯ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಮತ್ತು ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರಗಳು.
icon

(7 / 12)

ಇತ್ತೀಚೆಗೆ ಚೈತ್ರಾ ಜೆ ಆಚಾರ್‌ ನಟಿಸಿದ್ದ ಬ್ಲಿಂಕ್‌ ಸಿನಿಮಾ ಬಿಡುಗಡೆಯಾಗಿತ್ತು. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾ ವೀಕ್ಷಕರ ಮೆಚ್ಚುಗೆ ಪಡೆದಿತ್ತು. ಬ್ಲಿಂಕ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.
icon

(8 / 12)

ಇವರು ರಕ್ಷಿತ್‌ ಶೆಟ್ಟಿ ಸ್ಟುಡಿಯೋದ ಸ್ಟ್ರಾಬೆರಿ, ರಾಕೇಶ್‌ ಕದ್ರಿಯವರ ಹ್ಯಾಪಿ ಬರ್ತ್‌ಡೇ ಟು ಮಿ, ಶಿವ ಗಣೇಶನ್‌ ಅವರ ಯಾರಿಗೂ ಹೇಳ್ಬೆಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದೆ. 
icon

(9 / 12)

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮತ್ತು ಧನಂಜನ್‌ ನಟನೆಯ ಉತ್ತರಕಾಂಡ ಸಿನಿಮಾದಲ್ಲೂ ಇವರು ನಟಿಸುತ್ತಿದ್ದಾರೆ. ಈ ಸಿನಿಮಾ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾವಾಗಿದೆ.
icon

(10 / 12)

ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾ ಇರುತ್ತಾರೆ. ಇವರು ಉತ್ತಮ ಗಾಯಕಿ ಕೂಡ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಇವರು ಹಾಡಿರುವ "ಸೋಜುಗದ ಸೂಜು ಮಲ್ಲಿಗೆ" ಸಖತ್‌ ಹಿಟ್‌ ಆಗಿತ್ತು.
icon

(11 / 12)

ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾ ಇರುತ್ತಾರೆ. ಇವರು ಉತ್ತಮ ಗಾಯಕಿ ಕೂಡ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಇವರು ಹಾಡಿರುವ "ಸೋಜುಗದ ಸೂಜು ಮಲ್ಲಿಗೆ" ಸಖತ್‌ ಹಿಟ್‌ ಆಗಿತ್ತು.(anjankumarm (all photos))

ಸಿನಿಮಾ, ಒಟಿಟಿ, ಸೀರಿಯಲ್‌ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಓದಿ
icon

(12 / 12)

ಸಿನಿಮಾ, ಒಟಿಟಿ, ಸೀರಿಯಲ್‌ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಓದಿ

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು