ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪ ರಾಮ್‌ಕುಮಾರ್‌ ಹೆಸರು ಬದಿಗಿಟ್ಟು, ತಾತನ ಹೆಸರಿನೊಂದಿಗೆ ಬರ್ತಿದ್ದಾರೆ ಧೀರೇನ್‌ ರಾಜ್‌ಕುಮಾರ್‌! ಕೈ ಹಿಡಿಯುತ್ತಾ ಅದೃಷ್ಟ?

ಅಪ್ಪ ರಾಮ್‌ಕುಮಾರ್‌ ಹೆಸರು ಬದಿಗಿಟ್ಟು, ತಾತನ ಹೆಸರಿನೊಂದಿಗೆ ಬರ್ತಿದ್ದಾರೆ ಧೀರೇನ್‌ ರಾಜ್‌ಕುಮಾರ್‌! ಕೈ ಹಿಡಿಯುತ್ತಾ ಅದೃಷ್ಟ?

ಈ ಹಿಂದೆ ಶಿವ 143 ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ಪೂರ್ಣಿಮಾ ಮತ್ತು ರಾಮ್‌ಕುಮಾರ್‌ ದಂಪತಿಯ ಮಗ ಧೀರೇನ್‌ ರಾಮ್‌ಕುಮಾರ್‌, ಈಗ ನಯಾ ಹೆಸರಿನೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲು ಹೊರಟಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ ಜತೆಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಧೀರೇನ್.‌

ಅಪ್ಪ ರಾಮ್‌ಕುಮಾರ್‌ ಹೆಸರು ಬದಿಗಿಟ್ಟು, ತಾತನ ಹೆಸರಿನೊಂದಿಗೆ ಬರ್ತಿದ್ದಾರೆ ಧೀರೇನ್‌ ರಾಜ್‌ಕುಮಾರ್‌! ಕೈ ಹಿಡಿಯುತ್ತಾ ಅದೃಷ್ಟ?
ಅಪ್ಪ ರಾಮ್‌ಕುಮಾರ್‌ ಹೆಸರು ಬದಿಗಿಟ್ಟು, ತಾತನ ಹೆಸರಿನೊಂದಿಗೆ ಬರ್ತಿದ್ದಾರೆ ಧೀರೇನ್‌ ರಾಜ್‌ಕುಮಾರ್‌! ಕೈ ಹಿಡಿಯುತ್ತಾ ಅದೃಷ್ಟ?

Dheeren Rajkumar: ಇತ್ತೀಚೆಗಷ್ಟೇ ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜ್‌ಕುಮಾರ್‌, ಯುವ ಸಿನಿಮಾ ಮೂಲಕ ಗೆದ್ದು ಬೀಗಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಮಾಸ್‌ ಪ್ರಿಯರಿಗೂ, ಕ್ಲಾಸ್‌ ಪ್ರಿಯರಿಗೂ ಇಷ್ಟವಾಗಿದ್ದಾರೆ ಯುವ. ಇದೀಗ ಧೀರೇನ್‌ ಸರದಿ. ಈ ಹಿಂದೆ ಶಿವ 143 ಸಿನಿಮಾ ಮೂಲಕ ಚಂದನವನದಲ್ಲಿ ಖಾತೆ ತೆರೆದಿದ್ದ ಧೀರೇನ್‌ಗೆ ಮೊದಲ ಸಿನಿಮಾ ಯಶ ತಂದುಕೊಡಲಿಲ್ಲ. ಹಾಗಂತ ಅವರೇನೂ ಸುಮ್ಮನೇ ಕುಳಿತಿಲ್ಲ. ತೆರೆಹಿಂದೆ ಕಸರತ್ತು ಮುಂದುವರಿಸಿದ್ದಾರೆ. ಜತೆಗೆ ಇದೀಗ ಹೆಸರನ್ನೂ ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗೂ ಇಳಿಯಲು ಹೊರಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶಿವ 143 ಸಿನಿಮಾ ಮೂಲಕ ಆಗಮನ

ರಾಜ್‌ಕುಮಾರ್‌ ಕಿರು ಮಗಳು ಪೂರ್ಣಿಮಾ ಮತ್ತು ರಾಮ್‌ಕುಮಾರ್‌ ದಂಪತಿಯ ಮಗ ಈ ಧೀರೇನ್.‌ ಈ ಮೊದಲು ಶಿವ 143 ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರವನ್ನು ಜಯಣ್ಣ ಫಿಲಂಸ್‌ ನಿರ್ಮಾಣ ಮಾಡಿದರೆ, ಅನಿಲ್‌ ಕುಮಾರ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಧೀರೇನ್‌ಗೆ ಜೋಡಿಯಾಗಿ ಮಾನ್ವಿತಾ ಕಾಮತ್‌ ನಟಿಸಿದ್ದರು. ತೆಲುಗಿನ RX 100 ಚಿತ್ರದ ರಿಮೇಕ್‌ ಆಗಿದ್ದ ಈ ಸಿನಿಮಾ 2022ರ ಆಗಸ್ಟ್‌ 26ರಂದು ತೆರೆಕಂಡಿತ್ತು. ಆದರೆ, ಸಿನಿಮಾ ಹೇಳಿಕೊಳ್ಳುವ ಹೆಸರು ಮಾಡಲಿಲ್ಲ. ಗಳಿಕೆಯಲ್ಲೂ ಸೋಲಾಯಿತು.

ರಾಮ್‌ಕುಮಾರ್‌ ಬದಲು ರಾಜ್‌ಕುಮಾರ್‌

ಇದೀಗ ಇದೇ ಧೀರೇನ್‌ ರಾಮ್‌ಕುಮಾರ್‌, ಅಪ್ಪನ ಹೆಸರನ್ನು ಬದಿಗಿರಿಸಿ ತಾತನ ಹೆಸರಿನ ಜತೆಗೆ ಮರುಹುಟ್ಟು ಪಡೆಯಲು ಮುಂದಾಗಿದ್ದಾರೆ. ಧೀರೇನ್ ರಾಮ್‌ಕುಮಾರ್ ಅವರನ್ನು ಧೀರೇನ್ ಆರ್ ರಾಜ್‌ಕುಮಾರ್ ಆಗಿ ಕೆಆರ್‌ಜಿ ಸ್ಟುಡಿಯೋಸ್ ಮರುಪರಿಚಯಿಸುತ್ತಿದೆ. ಧೀರೇನ್ ಬರ್ತ್‌ಡೇ ಹಿನ್ನೆಲೆಯಲ್ಲಿ ಹೊಸ ಚಿತ್ರವನ್ನೂ ಕೆಆರ್‌ಜಿ ಘೋಷಿಸಿದೆ. ಈ ಸಿನಿಮಾ ನಿರ್ದೇಶಕರು ಯಾರು? ಚಿತ್ರದ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಿದೆ ನಿರ್ಮಾಣ ಸಂಸ್ಥೆ.

ಕೆಆರ್‌ಜಿ ಸ್ಟುಡಿಯೋಸ್‌ ಹೊಸ ಸಿನಿಮಾ

ಇನ್ನು ಕೆಆರ್‌ಜಿ ಸ್ಟುಡಿಯೋಸ್‌ ಸಂಸ್ಥೆ ಚಂದನವನಕ್ಕೆ ತನ್ನದೇ ಆದ ವಿಶೇಷ ಸಿನಿಮಾ ಕೊಡುಗೆಗಳನ್ನು ನೀಡುತ್ತ ಬರುತ್ತಿದೆ. ರೋಹಿತ್ ಪದಕಿ ಜತೆ ರತ್ನನ್ ಪ್ರಪಂಚ ಈಗಾಗಲೇ ಹಿಟ್‌ ಪಟ್ಟಿ ಪಡೆದುಕೊಂಡಿದೆ. ಜನಾರ್ದನ್ ಚಿಕ್ಕಣ್ಣ ಜತೆಗೆ ಪೌಡರ್ ಸಿನಿಮಾ ನಿರ್ಮಾಣ ಮಾಡುತ್ತಿದೆ. ನಿರ್ದೇಶಕ ವಿಜಯ್ ನಾಗೇಂದ್ರ ಅವರ ಗುರುದೇವ್ ಹೊಯ್ಸಳ ಸಿನಿಮಾ ಸಹ ಗೆಲುವಿನ ನಗೆ ಬೀರಿದೆ. ಹೀಗೆ ಹಲವು ಚಿತ್ರಗಳನ್ನು ಕನ್ನಡಿಗರಿಗೆ ನೀಡುತ್ತ ಬಂದಿರುವ ಕೆಆರ್‌ಜಿ ಸ್ಟುಡಿಯೋಸ್‌ ಸದ್ಯ ಉತ್ತರಕಾಂಡ ಸಿನಿಮಾ ಮೂಲಕ ನಿರೀಕ್ಷೆಯನ್ನು ಡಬಲ್‌ ಮಾಡಿದೆ. ಇದೆಲ್ಲದರ ಜತೆಗೆ ಧೀರೇನ್‌ ರಾಜ್‌ಕುಮಾರ್‌ ಹೊಸ ಸಿನಿಮಾವನ್ನೂ ಘೋಷಣೆ ಮಾಡಿದೆ. ಶೀಘ್ರದಲ್ಲಿ ಶೀರ್ಷಿಕೆ ಜತೆಗೆ ಈ ತಂಡ ಆಗಮಿಸಲಿದೆ.

ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಧನ್ಯಾ ರಾಮ್‌ಕುಮಾರ್‌

ಇದೇ ಪೂರ್ಣಿಮಾ ಮತ್ತು ರಾಮ್‌ಕುಮಾರ್‌ ದಂಪತಿಯ ಕಿರಿ ಮಗಳು ಧನ್ಯಾ ರಾಮ್‌ಕುಮಾರ್‌ ಈಗಾಗಲೇ ಚಂದನವನ ಪ್ರವೇಶಿಸಿದ್ದಾರೆ. 2021ರಲ್ಲಿ ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಧನ್ಯಾ, ಅದಾದ ಬಳಿಕ ಹೈಡ್‌ ಅಂಡ್‌ ಸೀಕ್‌ ಸಿನಿಮಾದಲ್ಲೂ ನಟಿಸಿದ್ದರು. ಇತ್ತೀಚೆಗಷ್ಟೇ ಈ ಸಿನಿಮಾ ತೆರೆ ಕಂಡಿತ್ತು.

ಇದರ ಜತೆಗೆ ಗುರುರಾಜ್‌ ಕುಲಕರ್ಣಿ (ನಾಡಗೌಡ) ನಿರ್ದೇಶನದಲ್ಲಿ ಮೂಡಿಬಂದಿರುವ ದಿ ಜಡ್ಜ್‌ಮೆಂಟ್‌ ಸಿನಿಮಾದಲ್ಲೂ ಧನ್ಯಾ ನಟಿಸಿದ್ದಾರೆ. ರವಿಚಂದ್ರನ್‌, ದಿಗಂತ್‌, ಮೇಘನಾ ಗಾಂವ್ಕರ್‌ ಸಹ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಜಿ9 ಕಮ್ಯೂನಿಕೇಷನ್‌ ಮೀಡಿಯಾ ಮತ್ತು ಎಂಟರ್ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

IPL_Entry_Point