ಕಾಲೇಜಲ್ಲೇ ರಾಗಿಣಿ ಮೇಲೆ ಕ್ರಷ್ ಆಗಿತ್ತು, ಈಗ ಅವರ ಜತೆ ಡಾನ್ಸ್‌ ಮಾಡೋ ಚಾನ್ಸ್‌; ಗಜರಾಮನ ಬಗ್ಗೆ ರಾಜವರ್ಧನ್‌ ಮಾತು-sandalwood news gajarama movie shoot completes actor rajavardhan talks about ragini dwivedi s item song mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಲೇಜಲ್ಲೇ ರಾಗಿಣಿ ಮೇಲೆ ಕ್ರಷ್ ಆಗಿತ್ತು, ಈಗ ಅವರ ಜತೆ ಡಾನ್ಸ್‌ ಮಾಡೋ ಚಾನ್ಸ್‌; ಗಜರಾಮನ ಬಗ್ಗೆ ರಾಜವರ್ಧನ್‌ ಮಾತು

ಕಾಲೇಜಲ್ಲೇ ರಾಗಿಣಿ ಮೇಲೆ ಕ್ರಷ್ ಆಗಿತ್ತು, ಈಗ ಅವರ ಜತೆ ಡಾನ್ಸ್‌ ಮಾಡೋ ಚಾನ್ಸ್‌; ಗಜರಾಮನ ಬಗ್ಗೆ ರಾಜವರ್ಧನ್‌ ಮಾತು

ರಾಜವರ್ಧನ್‌ ನಾಯಕನಾಗಿ ನಟಿಸಿರುವ ಗಜರಾಮ ಸಿನಿಮಾ ಕೊನೇ ಹಂತಕ್ಕೆ ಬಂದು ನಿಂತಿದೆ. ಇತ್ತೀಚೆಗಷ್ಟೇ ಅದ್ದೂರಿ ಸೆಟ್‌ನಲ್ಲಿ ಈ ಚಿತ್ರದ ಐಟಂ ಹಾಡಿನ ಚಿತ್ರೀಕರಣ ನಡೆಯಿತು. ರಾಗಿಣಿ ದ್ವಿವೇದಿ ಹಾಡಿಗೆ ಹೆಜ್ಜೆ ಹಾಕಿದರು.

ಕಾಲೇಜಲ್ಲೇ ರಾಗಿಣಿ ಮೇಲೆ ಕ್ರಷ್ ಆಗಿತ್ತು, ಈಗ ಅವರ ಜತೆ ಡಾನ್ಸ್‌ ಮಾಡೋ ಚಾನ್ಸ್‌; ಗಜರಾಮನ ಬಗ್ಗೆ ರಾಜವರ್ಧನ್‌ ಮಾತು
ಕಾಲೇಜಲ್ಲೇ ರಾಗಿಣಿ ಮೇಲೆ ಕ್ರಷ್ ಆಗಿತ್ತು, ಈಗ ಅವರ ಜತೆ ಡಾನ್ಸ್‌ ಮಾಡೋ ಚಾನ್ಸ್‌; ಗಜರಾಮನ ಬಗ್ಗೆ ರಾಜವರ್ಧನ್‌ ಮಾತು

Gajarama: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜ್‌ವರ್ಧನ್‌ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆನಿಲ್ಲುವ ತವಕದಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಕಥೆಗಳ ಆಯ್ಕೆ ಮಾಡಿಕೊಂಡು, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಮೆಚ್ಚುಗೆ ಪಡೆದಿದ್ದ ರಾಜವರ್ಧನ್‌, ಇದೀಗ ಗಜರಾಮ ಸಿನಿಮಾ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಇದೇ ಚಿತ್ರದ ಹಾಡಿನ ಚಿತ್ರೀಕರಣ ನಡೆಯಿತು. ತುಪ್ಪದ ಹುಡುಗಿ ರಾಗಿಣಿ ರಾಜವರ್ಧನ್‌ ಜತೆಗೆ ಸೊಂಟ ಬಳುಕಿಸಿದ್ದಾರೆ. ಸಿನಿಮಾ ಸೇರಿ ಹಲವು ವಿಚಾರಗಳನ್ನೂ ಚಿತ್ರತಂಡ ಹೇಳಿಕೊಂಡಿದೆ.

ಮೊದಲಿಗೆ ಮಾತು ಶುರು ಮಾಡಿದ ರಾಗಿಣಿ, ಹೊಸ ಹೊಸ ಪ್ರಯತ್ನಗಳು ನಮ್ಮ ಇಂಡಸ್ಟ್ರಿಯಲ್ಲಿ ಆಗಬೇಕು. ಕನ್ನಡ ಸಿನಿಮಾಗಳು ಒಳ್ಳೆ ರೀತಿಯಲ್ಲಿ ಬೆಳೆಯುತ್ತಿವೆ. ಅದನ್ನು ನೋಡಿ ಹೆಮ್ಮೆ ಅನಿಸುತ್ತದೆ. ನಾನು ಎಲ್ಲಿ ಹೋದರು ಕರ್ನಾಟಕ ನನ್ನ ಮನೆ ತರ. ಗಜರಾಮ ಸಿನಿಮಾದಲ್ಲಿ ನನಗಾಗಿ ಮಾಡಿರುವ ಸ್ಪೆಷಲ್ ಸಾಂಗ್ ಇದೆ. ರಾಜ್ ಅದ್ಭುತ ನಟ. ಮನೋಮೂರ್ತಿ ಸರ್ ಮ್ಯೂಸಿಕ್, ಧನು ಕೊರಿಯೋಗ್ರಫಿ ಎಲ್ಲವೂ ಸೇರಿ ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದಾಗಲಿದೆ. ಇಡೀ ತಂಡಕ್ಕೆ ನಿಮ್ಮ‌‌ ಬೆಂಬಲ ಇರಲಿ" ಎಂದರು.

ಇತ್ತ ಚಿತ್ರದ ನಾಯಕ ರಾಜವರ್ಧನ್ ಸಿನಿಮಾ ಮೂಡಿ ಬಂದ ರೀತಿಯ ಬಗ್ಗೆ ವಿವರಿಸಿದರು. "ಈ ಸಿನಿಮಾ ಒಂದು ವರ್ಷದ ಜರ್ನಿ. ಲೈಫ್ ಲೈನ್ ಪಿಕ್ಚರ್ಸ್ ಜೊತೆ ಮಾಡುತ್ತಿರುವ ಮೊದಲ ಚಿತ್ರವಿದು. ಅದ್ಭುತವಾಗಿ ಸಿನಿಮಾ ಬಂದಿದೆ. ಸುನಿಲ್ ಮುಂದಿನ ದಿನಗಳಲ್ಲಿ ಮಾಸ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಬರ್ತಾರೆ. ರಾಗಿಣಿ ಮೇಡಂ ಕಾಲೇಜ್ ಟೈಮ್ ನಿಂದ ಕ್ರಶ್. ಈಗ ವರ್ಕ್ ಮಾಡುವ ಅವಕಾಶ ಸಿಕ್ಕಿದೆ. ಡ್ರೀಮ್ ಕಂಪ್ಲೀಟ್ ಆಗಿದೆ. ಮನೋ ಸರ್ ಮೆಲೋಡಿ ಕಿಂಗ್.. ಈಗ ಮಾಸ್ ಕಿಂಗ್ ಆಗಿದ್ದಾರೆ. ನಮ್ಮ ಕಥೆಗೆ ಹೇಗೆ ಬೇಕೋ ಆಗಿದ್ದಾರೆ ನಮ್ಮ ಹೀರೋಯಿನ್. ರಾಮ್ ನನ್ನ ಪಾತ್ರ. ರಾಮ ರಾವಣ ಎರಡು ನಾನೇ ಎಂದರು.

ಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇವತ್ತು ಕೊನೆಯ ದಿನ. ರಾಜವರ್ಧನ್ ತುಂಬಾ ಡೆಡಿಕೇಷನ್ ಆಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಬಜೆಟ್ ಕೇಳದೆ ಸಿನಿಮಾ ಮಾಡಿದ್ದಾರೆ. ಮನೋಮೂರ್ತಿ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಸಾಂಗ್ ಕೇಳಿದ ತಕ್ಷಣ ರಾಗಿಣಿ ಮೇಡಂ ಒಪ್ಪಿಕೊಂಡರು ಎಂದರು ನಿರ್ದೇಶಕ ಸುನಿಲ್ ಕುಮಾರ್.

ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಈ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಈ ತರ ಹಾಡು ಮಾಡದೆ ಬಹಳ ವರ್ಷಗಳೇ ಆಗಿದೆ ಎಂದರು ಸಂಗೀತ ನಿರ್ದೇಶಕ ಮನೋಮೂರ್ತಿ. ಶಿಷ್ಯ ದೀಪಕ್ ಪೊಲೀಸ್ ಪಾತ್ರದಲ್ಲಿ, ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ಖಳನಾಯಕನಾಗಿ, ತಪಸ್ವಿನಿ ರಾಜವರ್ಧನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಕಾಮಿಡಿ ‌ಕಿಲಾಡಿ ಖ್ಯಾತಿಯ ಸಂತು ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಪ್ರಮೋದ್ ಮರವಂತೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

mysore-dasara_Entry_Point