ಕನ್ನಡ ಸುದ್ದಿ  /  ಮನರಂಜನೆ  /  Kaatera Day 3 Collection: ಮೂರನೇ ದಿನವೂ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ದರ್ಶನ್‌-ಆರಾಧನಾ ನಟನೆಯ ಕಾಟೇರ, ಇಲ್ಲಿದೆ ಬಾಕ್ಸ್‌ ಆಫೀಸ್ ವರದಿ

Kaatera Day 3 Collection: ಮೂರನೇ ದಿನವೂ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ದರ್ಶನ್‌-ಆರಾಧನಾ ನಟನೆಯ ಕಾಟೇರ, ಇಲ್ಲಿದೆ ಬಾಕ್ಸ್‌ ಆಫೀಸ್ ವರದಿ

Darshan Movie Kaatera Day̳ 3 Collection: 2023ರ ವರ್ಷದ ಕೊನೆಯ ದಿನ, ಡಿಸೆಂಬರ್‌ 31ರ ಭಾನುವಾರವೂ ದರ್ಶನ್‌-ಆರಾಧನಾ ರಾಮ್‌ ನಟನೆಯ ಕಾಟೇರ ಬಾಕ್ಸ್‌ ಆಫೀಸ್‌ ಹಮ್ಮೀರನಾಗಿ ಮುಂದುವರೆದಿದೆ. ಮೊದಲೆರಡು ದಿನ ಕ್ರಮವಾಗಿ 19.79 ಕೋಟಿ ರೂ. ಮತ್ತು 17.35 ಕೋಟಿ ರೂ. ಗಳಿಕೆ ಮಾಡಿದ್ದ ಕಾಟೇರ 3 ದಿನವೂ ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಾಂತರ ರೂಪಾಯಿ ಗಳಿಸಿದೆ.

ಕಾಟೇರ ಬಾಕ್ಸ್‌ ಆಫೀಸ್‌ ವರದಿ
ಕಾಟೇರ ಬಾಕ್ಸ್‌ ಆಫೀಸ್‌ ವರದಿ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಆರಾಧನಾ ರಾಮ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ತರುಣ್‌ ಸುಧೀರ್‌ ನಿರ್ದೇಶನದ ಸ್ಯಾಂಡಲ್‌ವುಡ್‌ ಸಿನಿಮಾ ಕಾಟೇರವು ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಕೋಟ್ಯಾಂತರ ರೂಪಾಯಿ ಗಳಿಕೆ ಮುಂದುವರೆಸಿದೆ. ಶುಕ್ರವಾರ ಮತ್ತು ಶನಿವಾರ 19.79 ಕೋಟಿ ರೂ. ಮತ್ತು 17.35 ಕೋಟಿ ರೂ. ಗಳಿಕೆ ಮಾಡಿದ್ದ ಕಾಟೇರ ಮೂರನೇ ದಿನ 20.94 ಕೋಟಿ ರೂಪಾಯಿ ಗಳಿಸಿದೆ. ಆದರೆ, ಆನ್‌ಲೈನ್‌ ಮುಂಗಡ ಬುಕ್ಕಿಂಗ್‌ ಆಧರಿಸಿದ ಸಚ್‌ನಿಲ್ಕ್‌.ಕಾಂ ಈಗಾಗಲೇ ಕಳೆದ ಮೂರು ದಿನಗಳ ಕಾಟೇರ ಬಾಕ್ಸ್‌ ಆಫೀಸ್‌ ವರದಿಯನ್ನು ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಕಾಟೇರ ಮೂರನೇ ದಿನದ ಗಳಿಕೆ

ಕಾಟೇರ ಸಿನಿಮಾ ತಂಡದ ಅಧಿಕೃತ ವರದಿ ಪ್ರಕಾರ ಕಾಟೇರ ಸಿನಿಮಾ ಮೂರನೇ ದಿನ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಾಟೇರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌- ಸಚ್‌ನಿಲ್ಕ್‌ ವರದಿ

ಸಚ್‌ನಿಲ್ಕ್‌.ಕಾಂ ಪ್ರಕಾರ ಭಾನುವಾರ ಕಾಟೇರ ಸಿನಿಮಾವು 8.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವೆಬ್‌ಸೈಟ್‌ ಪ್ರಕಾರ ಮೊದಲ ದಿನ 11 ಕೋಟಿ ರೂ. ಮತ್ತು ಎರಡನೇ ದಿನ 7.85 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕಳೆದ ಮೂರು ದಿನಗಳಲ್ಲಿ ಒಟ್ಟು 32 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಆದರೆ, ಸಚ್‌ನಿಲ್ಕ್.ಕಾಂ ವರದಿಗಿಂತ ಭಿನ್ನವಾಗಿ ಚಿತ್ರತಂಡ ಮಾಹಿತಿ ನೀಡಿರುವ ಪ್ರಕಾರ ಮೊದಲ ಎರಡು ದಿನಗಳಲ್ಲಿ ಕಾಟೇರ ಸಿನಿಮಾ 19.79 ಕೋಟಿ ರೂ. ಮತ್ತು 17.35 ಕೋಟಿ ರೂ. ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ. ಮೂರನೇ ದಿನ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಕಾಟೇರ ಚಿತ್ರತಂಡ ಮಾಹಿತಿ ನೀಡಿದೆ.

ಸಚ್‌ನಿಲ್ಕ್‌.ಕಾಂ ವರದಿಯು ಬುಕ್‌ಮೈಶೋ ಮತ್ತು ಇತರೆ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡುವ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳು ನೀಡುವ ಮಾಹಿತಿಯನ್ನು ಆಧರಿಸುತ್ತವೆ. ಕನ್ನಡ ನೆಲದ ಕಾಟೇರ ಸಿನಿಮಾವು ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದ ಸಾಕಷ್ಟು ಥಿಯೇಟರ್‌ಗಳಲ್ಲಿ ಬುಕ್ಕಿಂಗ್‌ ಆಗಿವೆ. ವಿಶೇಷವಾಗಿ ಬಿ ಮತ್ತು ಸಿ ಸೆಂಟರ್‌ಗಳ ಮಾಹಿತಿ ಸಚ್‌ನಿಲ್ಕ್‌.ಕಾಂಗೆ ಸಂಪೂರ್ಣವಾಗಿ ದೊರಕಿರುವುದಿಲ್ಲ. ಬುಕ್‌ ಮೈ ಶೋ ಬಳಕೆ ಮಾಡದೆ ಇರುವ ಎಷ್ಟೋ ಥಿಯೇಟರ್‌ಗಳು ಕರ್ನಾಟಕದ ವಿವಿಧ ಭಾಗಗಳಲ್ಲಿವೆ. ಹೀಗಾಗಿ, ಅಸಲಿ ಸಂಖ್ಯೆ ಬೇರೆಯೇ ಇರುತ್ತದೆ. ನಿನ್ನೆ ಭಾನುವಾರವಾಗಿರುವುದು, ವರ್ಷದ ಕೊನೆಯ ದಿನವಾಗಿರುವುದು ಹೆಚ್ಚಿನ ಆದಾಯ ಗಳಿಕೆಗೆ ನೆರವಾಗಲಿದೆ.

ಕಾಟೇರ ಸಿನಿಮಾದ 1ನೇ ಮತ್ತು 2ನೇ ದಿನದ ಗಳಿಕೆ

ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಕಾಟೇರ ಸಿನಿಮಾ ಎರಡನೇ ದಿನ 17.35 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ 19.79 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕಾಟೇರದ ಒಟ್ಟಾರೆ ಗಳಿಕೆ ಮೊದಲ ಎರಡು ದಿನಗಳಲ್ಲಿ 37.14 ಕೋಟಿ ರೂಪಾಯಿ ದಾಟಿತ್ತು. ಮೂರನೇ ದಿನದ ಗಳಿಕೆ ಸೇರಿ 55 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿರಲಿದೆ ಎಂದು ವಿವಿಧ ವರದಿಗಳು ತಿಳಿಸಿವೆ.

ಇಂದು ಕಾಟೇರ ಯಶಸ್ಸಿನ ಸಂಭ್ರಮ

ಹೊಸ ವರ್ಷದ ಮೊದಲ ದಿನವಾದ ಇಂದು ಕಾಟೇರ ಸಕ್ಸಸ್‌ ಪಾರ್ಟಿ ನಡೆಸಲು ಯೋಜಿಸಲಾಗಿದೆ. ಇಂದು ಬೆಂಗಳೂರಿನ ಓರಾಯನ್‌ ಮಾಲ್‌ನಲ್ಲಿ ಕಾಟೇರ ಸಕ್ಸಸ್‌ ಸಂಭ್ರಮ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. "ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಚಿತ್ರ ತಂಡದ ಜತೆ ದಿನಾಂಕ 1-1-2024ರಂದು (ಸೋಮವಾರ) ಸಂಜೆ 6.30 ಗಂಟೆಗೆ ಕಾಟೇರ ಸಕ್ಸ್‌ ಸೆಲೆಬ್ರೆಷನ್‌. ಎಲ್ಲಾ ಸೆಲೆಬ್ರಿಟಿಗಳಿಗೂ ಸ್ವಾಗತ. ಸ್ಥಳ"ಒರಾಯನ್‌ ಮಾಲ್‌, ರಾಜ್‌ಕುಮಾರ್‌ ರೋಡ್‌, ಬೆಂಗಳೂರು" ಎಂದು ಕಾಟೇರ ಚಿತ್ರತಂಡ ಮಾಹಿತಿ ನೀಡಿದೆ. ಆಸಕ್ತರು ದರ್ಶನ್‌ರನ್ನು ಇಲ್ಲಿ ಭೇಟಿಯಾಗಬಹುದು.

IPL_Entry_Point