Kannada Movie Quiz: ಮೊದಲ ಕನ್ನಡ ಸಿನಿಮಾ ಯಾವುದು? ರಾಜ್‌ಕುಮಾರ್‌ಗೆ ಡಾಕ್ಟರೇಟ್‌ ದೊರಕಿದ್ದು ಯಾವಾಗ? ಈ ಸಿನಿ ರಸಪ್ರಶ್ನೆಗಳಿಗೆ ಉತ್ತರಿಸಿ
ಕನ್ನಡ ಸುದ್ದಿ  /  ಮನರಂಜನೆ  /  Kannada Movie Quiz: ಮೊದಲ ಕನ್ನಡ ಸಿನಿಮಾ ಯಾವುದು? ರಾಜ್‌ಕುಮಾರ್‌ಗೆ ಡಾಕ್ಟರೇಟ್‌ ದೊರಕಿದ್ದು ಯಾವಾಗ? ಈ ಸಿನಿ ರಸಪ್ರಶ್ನೆಗಳಿಗೆ ಉತ್ತರಿಸಿ

Kannada Movie Quiz: ಮೊದಲ ಕನ್ನಡ ಸಿನಿಮಾ ಯಾವುದು? ರಾಜ್‌ಕುಮಾರ್‌ಗೆ ಡಾಕ್ಟರೇಟ್‌ ದೊರಕಿದ್ದು ಯಾವಾಗ? ಈ ಸಿನಿ ರಸಪ್ರಶ್ನೆಗಳಿಗೆ ಉತ್ತರಿಸಿ

Kannada Movie Quiz: ಕನ್ನಡ ಸಿನಿಮಾರಂಗ ಜಗತ್ತೇ ಅಚ್ಚರಿಪಡುವಂತೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದೆ. ಕನ್ನಡದ ಇತ್ತೀಚಿನ ಸಿನಿಮಾಗಳು ದೇಶ-ವಿದೇಶದ ಸಿನಿಮಾ ಆಸಕ್ತರನ್ನು ಗಮನಸೆಳೆದಿವೆ. ಸ್ಯಾಂಡಲ್‌ವುಡ್‌ಗೆ ಸಂಬಂಧಪಟ್ಟ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಇಲ್ಲಿವೆ.

ಕನ್ನಡ ಸಿನಿಮಾ ರಸಪ್ರಶ್ನೆ
ಕನ್ನಡ ಸಿನಿಮಾ ರಸಪ್ರಶ್ನೆ

Kannada Movie Quiz: ಕನ್ನಡ ಸಿನಿಮಾರಂಗ ಜಗತ್ತೇ ಅಚ್ಚರಿಪಡುವಂತೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದೆ. ಕನ್ನಡದ ಇತ್ತೀಚಿನ ಸಿನಿಮಾಗಳು ದೇಶ-ವಿದೇಶದ ಸಿನಿಮಾ ಆಸಕ್ತರನ್ನು ಗಮನಸೆಳೆದಿವೆ. ಕನ್ನಡದ ಮೂಕಿ ಮತ್ತು ಟಾಕಿ ಸಿನಿಮಾದ ಇತಿಹಾಸವನ್ನು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ತಿಳಿದುಕೊಳ್ಳಬೇಕಾದದ್ದು ಅಗತ್ಯವಾಗಿದೆ. ಸತಿ ಸಲೋಚನ ಸಿನಿಮಾದಲ್ಲಿ ಸುಬ್ಬಯ್ಯ ನಾಯ್ಡಯ ಮತ್ತು ತ್ರಿಪುರಾಂಭ ನಟಿಸಿದ್ದರು. ಬಿವಿ ಕಾರಂತರ ಚೋಮನ ದುಡಿ, ಗಿರೀಶ್‌ ಕಾರ್ನಾಡರ್‌ರವರ ಕಾಡು, ಪಟ್ಟಾಭಿರಾಮರೆಡ್ಡಿಯವರ ಸಂಸ್ಕಾರ, ಗಿರೀಶ್‌ ಕಾಸರವಳ್ಳಿಯವರ ಘಟಶ್ರಾದ್ಧ ಸೇರಿದಂತೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಸಿನಿಮಾಗಳು ಗಮನ ಸೆಳೆಯುತ್ತವೆ. ಪುಷ್ಪಕ ವಿಮಾನ, ಕಿಲ್ಲಿಂಗ್‌ ವೀರಪ್ಪನ್‌, ಕೆಜಿಎಫ್‌, ಕಾಂತಾರ ಮುಂತಾದ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕರೆದೊಯ್ದಿವೆ. ಡಾ ರಾಜ್‌ಕುಮಾರ್‌ ಅಭಿನಯದ ಬಹುತೇಕ ಸಿನಿಮಾಗಳು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಸದ್ಯ ಸಿನಿಮಾದ ಕುರಿತು ಸಾಮಾನ್ಯ ಜ್ಞಾನ ಪ್ರಶ್ನೆ ಬಯಸುವರಿಗೆ ಇಲ್ಲಿ ಐದು ಪ್ರಶ್ನೆಗಳನ್ನು ನೀಡಲಾಗಿದೆ. ಉತ್ತರವನ್ನು ಕೊನೆಯಲ್ಲಿ ನೀಡಲಾಗಿದೆ.

1. ಮಾಸ್ಕೋ ಇಂಟರ್‌ನ್ಯಾಷನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಕೆಳಗಿನ ಕನ್ನಡ ಚಿತ್ರಗಳಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಚಿತ್ರ ಯಾವುದು?

ಎ) ಕಿಲ್ಲಿಂಗ್‌ ವೀರಪ್ಪನ್‌ (2016)
ಬಿ) ಘಟಶ್ರಾದ್ಧ (1977)
ಸಿ) ಪುಷ್ಪಕ ವಿಮಾನ (1987)
ಡಿ) ಕೆಜಿಎಫ್‌

2) ಇವುಗಳಲ್ಲಿ ಮೊದಲ ಕನ್ನಡ ಸಿನಿಮಾ ಯಾವುದು?

ಎ) ಸತಿ ಸುಲೋಚನ
ಬಿ) ಮಹಾಕವಿ ಕಾಳಿದಾಸ
ಸಿ) ಭಕ್ತ ವಿಜಯ
ಡಿ) ಸ್ಕೂಲ್‌ ಮಾಸ್ಟರ್‌

3) ಕನ್ನಡದ ಖ್ಯಾತ ನಟ ಡಾ. ರಾಜ್‌ಕುಮಾರ್‌ಗೆ ಡಾಕ್ಟರೇಟ್‌ ಪದವಿ ದೊರಕಿದ್ದು ಯಾವಾಗ?

ಎ) 1995
ಬಿ) 1980
ಸಿ) 1976
ಡಿ) 1990

4) ರಿಷಬ್‌ ಶೆಟ್ಟಿಗೆ ಯಾವ ಸಿನಿಮಾದ ನಟನೆಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ದೊರಕಿತು?

ಎ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಬಿ) ಕಿರಿಕ್‌ ಪಾರ್ಟಿ
ಸಿ) ರಿಕ್ಕಿ
ಡಿ) ಕಾಂತಾರ

5) 2017ರಲ್ಲಿ ಬಿಡುಗಡೆಯಾದ ಈ ಸಿನಿಮಾವು ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಆ ಸಿನಿಮಾದ ಹೆಸರೇನು?

ಎ) ಸತ್ಯ ಹರಿಶ್ಚಂದ್ರ
ಬಿ) ಅಲ್ಲಮ
ಸಿ) ಚಿನ್ನಾರಿ ಮುತ್ತಾ
ಡಿ) ನಾಗರಹಾವು


ಸರಿ ಉತ್ತರಗಳು: 1-ಸಿ, 2-ಎ, 3- ಸಿ, 4-ಡಿ, 5-ಬಿ

ಪುಷ್ಪಕ ವಿಮಾನ: ಇದು ಕಪ್ಪು ಬಿಳುಪು ಬಣ್ಣದ ಹಾಸ್ಯ ಸಿನಿಮಾ. ಕಮಲ್‌ ಹಾಸನ್‌, ಸಮೀರ್‌ ಖಾಕರ್‌, ಟಿನು ಆಂದ್‌, ರಮೇಶ್‌ ಅರವಿಂದ್‌, ಅಮಲಾ, ಫರೀದಾ ಜಲಾಲ್‌ ಮುಂತಾದವರು ನಟಿಸಿದ್ದಾರೆ. ಇದಕ್ಕೆ ಮಾಸ್ಕೋ ಇಂಟರ್‌ನ್ಯಾಷನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ.

ಸತಿ ಸುಲೋಚನ: ಸತಿ ಸುಲೋಚನ ( ಕನ್ನಡ : ಸತಿ ಸುಲೋಚನ ) ವೈವಿ ರಾವ್ ನಿರ್ದೇಶಿಸಿದ 1934 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದೆ . ಈ ಚಿತ್ರವು 3 ಮಾರ್ಚ್ 1934 ರಂದು ಬಿಡುಗಡೆಯಾಯಿತು ಮತ್ತು ಇದು ಕನ್ನಡ ಭಾಷೆಯ ಮೊದಲ ಟಾಕಿ ಚಿತ್ರವಾಗಿದೆ. ಇದು ಹಿಂದಿನ ಮೈಸೂರು ಸಾಮ್ರಾಜ್ಯದಲ್ಲಿ ಪ್ರದರ್ಶನಗೊಂಡ ಮೊದಲ ಚಲನಚಿತ್ರವಾಗಿದೆ.

Whats_app_banner