Kantara: ಮಗನನ್ನು ಬೆಂಗಳೂರು ಶಾಲೆ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ ರಿಷಬ್‌ ಶೆಟ್ಟಿ; ಸುಲಭವಾಗಿ ಸಿಕ್ಕಿದ್ದು ಪ್ರಗತಿ ಮಾತ್ರ ಎಂದ ಶೆಟ್ರು
ಕನ್ನಡ ಸುದ್ದಿ  /  ಮನರಂಜನೆ  /  Kantara: ಮಗನನ್ನು ಬೆಂಗಳೂರು ಶಾಲೆ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ ರಿಷಬ್‌ ಶೆಟ್ಟಿ; ಸುಲಭವಾಗಿ ಸಿಕ್ಕಿದ್ದು ಪ್ರಗತಿ ಮಾತ್ರ ಎಂದ ಶೆಟ್ರು

Kantara: ಮಗನನ್ನು ಬೆಂಗಳೂರು ಶಾಲೆ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ ರಿಷಬ್‌ ಶೆಟ್ಟಿ; ಸುಲಭವಾಗಿ ಸಿಕ್ಕಿದ್ದು ಪ್ರಗತಿ ಮಾತ್ರ ಎಂದ ಶೆಟ್ರು

Kantara Chapter 1 Update: ರಿಷಬ್‌ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ಸಂಬಂಧಪಟ್ಟ ಪತ್ರಿಕಾಗೋಷ್ಠಿಯಲ್ಲಿ ರಿಷಬ್‌ ಶೆಟ್ಟಿ ಅವರು ಕಾಂತಾರ ಚಾಪ್ಟರ್‌ 1ರ ಕುರಿತು ಅಪ್‌ಡೇಟ್‌ ನೀಡಿದ್ದಾರೆ. ಇದೇ ಸಮಯದಲ್ಲಿ ಒಟಿಟಿ ಮತ್ತು ಇತರೆ ವಿಚಾರಗಳ ಕುರಿತೂ ಮಾತನಾಡಿದ್ದಾರೆ.

Kantara: ಮಗನನ್ನು ಬೆಂಗಳೂರು ಶಾಲೆ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ ರಿಷಬ್‌ ಶೆಟ್ಟಿ
Kantara: ಮಗನನ್ನು ಬೆಂಗಳೂರು ಶಾಲೆ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ ರಿಷಬ್‌ ಶೆಟ್ಟಿ

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾದ ಕುರಿತು ಎಲ್ಲರೂ ಬಹುನಿರೀಕ್ಷೆಯಿಂದ ಇದ್ದಾರೆ. ಈ ಸಿನಿಮಾದ ಶೂಟಿಂಗ್‌ನ ಒಂದು ಹಂತ ಮುಗಿದಿದೆ ಎಂದು ರಿಷಬ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲಿ ರಿಷಬ್‌ ಶೆಟ್ಟಿ ಕೆಲವೊಂದು ವಿಚಾರಗಳನ್ನು ತಿಳಿಸಿದ್ದಾರೆ. ಈಗ ಕುಂದಾಪುರದಲ್ಲಿ ಶೂಟಿಂಗ್‌ ನಡೆಯುತ್ತಿದೆ. ಈ ಕಾರಣಕ್ಕೆ ಬೆಂಗಳೂರಿನಿಂದ ಕುಟುಂಬ ಸಮೇತವಾಗಿ ಕುಂದಾಪುರಕ್ಕೆ ರಿಷಬ್‌ ಶೆಟ್ಟಿ ಶಿಫ್ಟ್‌ ಆಗಿದ್ದಾರೆ. ಮಗನನ್ನು ಬೆಂಗಳೂರು ಶಾಲೆಯಿಂದ ಬಿಡಿಸಿ ಕುಂದಾಪುರ ಶಾಲೆಗೆ ಸೇರಿಸಿದ್ದಾರೆ. ಕಾಂತಾರ ಶೂಟಿಂಗ್‌ ನಡುವೆ ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಕುಂದಾಪುರಕ್ಕೆ ಶಿಫ್ಟ್‌ ಆಗಿದ್ದಾರೆ. ಶಿವಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಂದರ್ಭದ ಪತ್ರಿಕಾಗೋಷ್ಠಿಯಲ್ಲಿ ರಿಷಬ್‌ ಶೆಟ್ಟಿ ಈ ಮಾಹಿತಿ ನೀಡಿದ್ದಾರೆ.

ಕಾಂತಾರ ಚಾಪ್ಟರ್‌ 1 ಮುಂದಿನ ವರ್ಷ ಬಿಡುಗಡೆ

ಕುಂದಾಪುರದಲ್ಲಿ ಕಾಂತಾರ ಶೂಟಿಂಗ್‌ಗಾಗಿ ಬೃಹತ್‌ ಸ್ಟುಡಿಯೋ ನಿರ್ಮಿಸಲಾಗಿದೆ. ಆ ಶೂಟಿಂಗ್‌ ಸೆಟ್‌ನಲ್ಲಿ ಪ್ರಮುಖ ಚಿತ್ರೀಕರಣ ನಡೆಯಲಿದೆ. ರಿಷಬ್‌ ಶೆಟ್ಟಿ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ ಕಾಂತಾರ ಸಿನಿಮಾದ ಒಂದು ಹಂತದ ಶೂಟಿಂಗ್‌ ಅಲ್ಲಿ ನಡೆದಿದೆ. "ನೂರು ದಿನಕ್ಕೂ ಹೆಚ್ಚು ಶೂಟಿಂಗ್‌ ನಡೆಯಲಿದೆ. ಈಗ ಒಂದು ಹಂತದ ಒಂದಿಷ್ಟು ಶೂಟಿಂಗ್‌ ಕೆಲಸಗಳು ಮುಗಿದಿವೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾದ ಕೆಲಸ ಈ ವರ್ಷ ಪೂರ್ಣಗೊಳ್ಳಲಿದೆ. ಇದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾ. ಶೂಟಿಂಗ್‌ ಮುಗಿದ ಬಳಿಕ ಡಬ್ಬಿಂಗ್‌ ಕೆಲಸಗಳು ನಡೆಯಬೇಕು. ರಿಲೀಸ್‌ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ತೀರ್ಮಾನ ಕೈಗೊಳ್ಳುತ್ತದೆ. ಕಾಂತಾರ ಮುಂದಿನ ವರ್ಷ ಬಿಡುಗಡೆಯಾಗಲಿದೆ" ಎಂದು ರಿಷಬ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪರಭಾಷೆಯ ಕಲಾವಿದರಿಲ್ಲ

ನಾನು ಕಾಂತಾರ ಸಿನಿಮಾಕ್ಕೆ ಪ್ಯಾನ್‌ ಇಂಡಿಯಾ ಕಲಾವಿದರನ್ನು ಸೇರಿಸಿಕೊಂಡಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ವಿವಿಧ ಭಾಷೆಯ ಕಲಾವಿದರನ್ನು ಸೇರಿಸಿಕೊಳ್ಳುತ್ತಾರೆ. ನನಗೆ ಇದರಲ್ಲಿ ನಂಬಿಕೆಯಲ್ಲ. ಕಾಂತಾರದಲ್ಲಿ ಇದ್ದದ್ದು ಸ್ಥಳೀಯ ಕಲಾವಿದರೇ. ಹೀಗಿದ್ದರೂ ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹಿಟ್‌ ಆಯಿತು. ಜನರಿಗೆ ಶಿವನ ಪಾತ್ರ ಮುಖ್ಯ. ಆ ಪಾತ್ರ ಜನರನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಥಿಯೇಟರ್‌ಗೆ ಅವಾರ್ಡ್‌ ಸಿನಿಮಾ

ರಿಷಬ್‌ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದ ಕಥೆ ಹೇಳುವಾಗಲೇ ಇದು ಚಿತ್ರೋತ್ಸವದ ಸಿನಿಮಾ ಎಂದು ನಿರ್ದೇಶಕರು ಹೇಳಿದ್ರು. ಇದನ್ನು ಚಿತ್ರಮಂದಿರಗಳ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಜನರ ಪ್ರತಿಕ್ರಿಯೆ ನೋಡಿಕೊಂಡು ಥಿಯೇಟರ್‌ ಹೆಚ್ಚಿಸಲಾಗುವುದು ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ. ಶಿವಮ್ಮ ಮತ್ತು ಪೆಡ್ರೋದಂತಹ ಚಿತ್ರಗಳು ಒಟಿಟಿಗೆ ಬೇಡ. ನಾನು ಒಟಿಟಿಗೆ ಸಾಕಷ್ಟು ಅಪ್ರೋಚ್‌ ಮಾಡಿದ್ದೇನೆ. ಪ್ರಯೋಜನವಾಗಿಲ್ಲ. ಕಾಂತಾರದಿಂದಾಗಿ ನನ್ನ ಸಿನಿಮಾ ಬರದೆ ಎರಡು ವರ್ಷ ಆಯ್ತು. ಕಾಂತಾರ ಕಥೆ ಬರೆಯಲು ಒಂದು ವರ್ಷ ಹಿಡಿದಿದೆ. ಈಗ ಕುಂದಾಪುರದಲ್ಲಿ 22 ಸಾವಿರ ಚದರಡಿಯ ಸೆಟ್‌ನಲ್ಲಿ ಕಾಂತಾರ ಶೂಟಿಂಗ್‌ ಮಾಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

ಭರ್ಜರಿ ಮೊತ್ತಕ್ಕೆ ಕಾಂತಾರದ ಡಿಜಿಟಲ್‌ ಹಕ್ಕು

ಕಾಂತಾರ ಸಿನಿಮಾದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ವಿಡಿಯೋ ಪಡೆದಿದೆ. ಈ ಸಿನಿಮಾಕ್ಕೆ ಪ್ರೈಮ್‌ 125 ಕೋಟಿ ನೀಡಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಷ್ಟಿಲ್ಲದೆ ಇದ್ದರೂ ಅದರ ಆಸುಪಾಸಿನಲ್ಲಿ ಸೇಲ್‌ ಆಗಿದೆ. ಅಷ್ಟು ದೊಡ್ಡ ಮೊತ್ತಕ್ಕೆ ಇದು ಸೇಲ್‌ ಆಗಬಹುದು ಎಂದು ನಾನು ಕನಸು ಮನಸ್ಸಿನಲ್ಲಿ ಯೋಚಿಸಿರಲಿಲ್ಲ. ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ ಹೊಂಬಾಳೆ ಫಿಲ್ಮ್ಸ್‌ಗೆ ಧನ್ಯವಾದ ಹೇಳುವೆ.

ಸುಲಭವಾಗಿ ಸಿಕ್ಕಿದ್ದು ಪ್ರಗತಿಯೊಬ್ಬಳೇ

"ನನಗೆ ಜೀವನದಲ್ಲಿ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ನನಗೆ ಪತ್ನಿ ಪ್ರಗತಿಯನ್ನು ಬಿಟ್ಟು ಬೇರೆ ಯಾವುದೂ ಈಸಿಯಾಗಿ ಸಿಕ್ಕಿಲ್ಲ. ಜೀವನದಲ್ಲಿ ಹೊಡೆದಾಟ, ಹೋರಾಟ ಎಂದಿನಂತೆ ಇರುತ್ತದೆ. ಅಲೆಗಳ ವಿರುದ್ಧ ಈಜಾಡುತ್ತ ಬಂದಿದ್ದೇನೆ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

Whats_app_banner