ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ

ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ

ಬಾಲಿವುಡ್‌ ನಟ ಮನೋಜ್‌ ಬಾಜಪೇಯಿ ಅವರು ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಂತಿಕೆ, ಮೂಲಕಥೆ, ಮನರಂಜನೆ ಅಂಶಗಳು ಸಿನಿಮಾಗಳ ಗೆಲುವಿಗೆ ಅತ್ಯಂತ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು?
ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು?

ಬೆಂಗಳೂರು: ಬಾಲಿವುಡ್‌ ನಟ ಮನೋಜ್ ಬಾಜಪೇಯಿ ಅವರು ಇತ್ತೀಚೆಗೆ ತಮ್ಮ ಮೇಲೆ ಪ್ರಭಾವ ಬೀರಿರುವ ಕೆಲವೊಂದು ಸಿನಿಮಾಗಳ ಕುರಿತು ಮಾಹಿತಿ ನೀಡಿದ್ದಾರೆ. ಪಿಂಕ್‌ವಿಲ್ಲಾ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ಮತ್ತು ಇತರೆ ಭಾಷೆಗಳಲ್ಲಿನ ಕೆಲವು ಜನಪ್ರಿಯ ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಕನ್ನಡದ ಕಾಂತಾರ ಸಿನಿಮಾದ ಕುರಿತೂ ಮನೋಜ್‌ ಬಾಜಪೇಯಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ, ರಣಬೀರ್‌ ಕಪೂರ್‌ ಅವರ ಅನಿಮಲ್‌, ಯಾಮಿ ಗೌತಮ್‌ ನಟನೆಯ ಆರ್ಟಿಕಲ್‌ 370, ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ನಟನೆಯ ಆರ್‌ಆರ್‌ಆರ್‌ ಸಿನಿಮಾಗಳನ್ನು ಮನೋಜ್‌ ಬಾಜಪೇಯಿ ಶ್ಲಾಘಿಸಿದ್ದಾರೆ.

ಪಿಂಕ್‌ವಿಲ್ಲಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮನೋಜ್‌ ಬಾಜಪೇಯಿ ಹೀಗಂದರು. "ಮುಜೆ ಕಾಂತರಾ ಬಹುತ್ ಅಚ್ಚಿ ಲಗಿ. ಕಾಂತಾರಾ ಮುಜೆ ಉಸ್ ಕರಣ್ ಸೆ ಭಿ ಅಚ್ಛಿ ಲಗಿ ಕಿ ವಹಾನ್ ಕೆ ಆಚರಣೆ, ವಹಾನ್ ಕಾ ಜೋ ನಂಬಿಕೆ, ಔರ್ ವಹಾ ಸೆ ಜೋ ಹೈ ಏಕ್ ಬಡಿಯಾ ಮುಖ್ಯವಾಹಿನಿಯ ಚಲನಚಿತ್ರ ಬನಾಯಿ. ಕಾಂತಾರಾ ಮೇರೆ ಲಿಯೆ ರೆಫರೆನ್ಸ್ ಪಾಯಿಂಟ್ ಹೈ." ಎಂದು ಹೇಳಿದರು. "ಕಾಂತಾರ ಸಿನಿಮಾ ನನಗೆ ತುಂಬಾ ಇಷ್ಟವಾಯಿತು. ಏಕೆಂದರೆ, ಈಗಲೂ ಆ ಸಿನಿಮಾದಲ್ಲಿ ತಿಳಿಸಿರುವ ಆಚರಣೆಗಳು, ನಂಬಿಕೆಗಳು ಚಾಲ್ತಿಯಲ್ಲಿವೆ" ಎಂದು ಅವರು ಹೇಳಿದ್ದಾರೆ.

ಇದೇ ರೀತಿಯ ಕಾರಣಗಳಿಂದ ಎಸ್‌ಸ್.ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌, ಆರ್ಟಿಕಲ್ 370 ಮತ್ತು ಅನಿಮಲ್ ಸಿನಿಮಾಗಳು ಇಷ್ಟವಾಯಿತು ಎಂದು ಹೇಳಿದ್ದಾರೆ. "ಆರ್ಟಿಕಲ್‌ 370, ಅನಿಮಲ್‌ ಸಿನಿಮಾಗಳಲ್ಲಿ ಮನರಂಜನೆ ಮತ್ತು ಕಥೆ ಉತ್ತಮವಾಗಿವೆ. ಒರಿಜಿನಲ್‌ ಕಂಟೆಂಟ್‌ಗೆ ಬೇಡಿಕೆ ಇದೆ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ" ಎಂದು ಅವರು ಹೇಳಿದ್ದಾರೆ.

ಮನೋಜ್‌ ಬಾಜಪೇಯಿ ಪ್ರಾಜೆಕ್ಟ್‌ಗಳು

ಮನೋಜ್ ಬಾಜಪೇಯಿ ಅವರು ಇತ್ತೀಚೆಗೆ ಝೀ 5 ನಲ್ಲಿ ಬಿಡುಗಡೆಯಾದ ಸೈಲೆನ್ಸ್ 2: ದಿ ನೈಟ್ ಗೂಬೆ ಬಾರ್ ಶೂಟೌಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಭೈಯಾ ಜಿ, ಡೆಸ್ಪಾಚ್ ಮತ್ತು ದಿ ಫೇಬಲ್ ಎಂಬ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೈಯಾ ಜಿ ಮೇ 24 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ರಾಜ್ ಮತ್ತು ಡಿಕೆ ಅವರ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ ನ ಮೂರನೇ ಸೀಸನ್ ನಲ್ಲಿಯೂ ಅವರು ನಟಿಸಲಿದ್ದಾರೆ.

ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಅಪ್‌ಡೇಟ್‌

ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್‌ 1ರ ಶೂಟಿಂಗ್‌ ಕುರಿತು ಇತ್ತೀಚೆಗೆ ಒಂದಿಷ್ಟು ಮಾಹಿತಿಗಳು ದೊರಕಿದ್ದವು. ಕುಂದಾಪುರದಲ್ಲಿ ಈ ಸಿನಿಮಾಕ್ಕಾಗಿ ಬೃಹತ್‌ ಸೆಟ್‌ ನಿರ್ಮಿಸಲಾಗುತ್ತಿದೆ. ಬೆಂಗಳೂರು, ಮುಂಬೈ, ಹೈದರಾಬಾದ್‌ನಿಂದ ಸುಮಾರು 600 ಕಾರ್ಪೆಂಟರ್‌ಗಳು ಈ ಸೆಟ್‌ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕಾಂತಾರ ಚಾಪ್ಟರ್‌ 1ರಲ್ಲಿ ನಟಿಸಲು ಆಯ್ಕೆಯಾದ ಕಲಾವಿದರಿಗೆ ತೀವ್ರವಾದ ತರಬೇತಿ ನೀಡಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಸಿನಿಮಾದ ಪ್ರೀ ಪೊಡಕ್ಷನ್‌ ಕೆಲಸಗಳು ಮುಗಿದಿವೆ. ಇದೀಗ 20 ದಿನದ ಶೂಟಿಂಗ್‌ ಶೆಡ್ಯೂಲ್‌ ಅನ್ನು ಚಿತ್ರತಂಡ ಆರಂಭಿಸುತ್ತಿದೆ ಎಂದು ವರದಿಯಾಗಿತ್ತು.

Whats_app_banner