ಕನ್ನಡ ಸುದ್ದಿ  /  ಮನರಂಜನೆ  /  ಇದು ಮಿಡಲ್‌ ಕ್ಲಾಸ್ ಮಂದಿಯ ಮರ್ಯಾದೆ ಪ್ರಶ್ನೆ; ಆರ್‌ಜೆ ಪ್ರದೀಪ್‌ ಚಿತ್ರಕ್ಕೆ All Ok ಅಲೋಕ್‌ ಕಡೆಯಿಂದ ರ್ಯಾಪ್‌ ಟಚ್‌

ಇದು ಮಿಡಲ್‌ ಕ್ಲಾಸ್ ಮಂದಿಯ ಮರ್ಯಾದೆ ಪ್ರಶ್ನೆ; ಆರ್‌ಜೆ ಪ್ರದೀಪ್‌ ಚಿತ್ರಕ್ಕೆ ALL OK ಅಲೋಕ್‌ ಕಡೆಯಿಂದ ರ್ಯಾಪ್‌ ಟಚ್‌

ಆಲ್‌ ಓಕೆ ಕಂಠದಲ್ಲಿ ಮರ್ಯಾದೆ ಪ್ರಶ್ನೆ ಸಿನಿಮಾಕ್ಕೆ ರ್ಯಾಪ್‌ ಟಚ್‌ ಸಿಕ್ಕಿದೆ. ಆರ್‌ಜೆ ಪ್ರದೀಪ್‌ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಈ ಚಿತ್ರದ ಪ್ರಮೋಷನಲ್‌ ಹಾಡೊಂದು ಸದ್ದು ಮಾಡುತ್ತಿದೆ.

ಇದು ಮಿಡಲ್‌ ಕ್ಲಾಸ್ ಮಂದಿಯ ಮರ್ಯಾದೆ ಪ್ರಶ್ನೆ; ಆರ್‌ಜೆ ಪ್ರದೀಪ್‌ ಚಿತ್ರಕ್ಕೆ ALL OK ಅಲೋಕ್‌ ಕಡೆಯಿಂದ ರ್ಯಾಪ್‌ ಟಚ್‌
ಇದು ಮಿಡಲ್‌ ಕ್ಲಾಸ್ ಮಂದಿಯ ಮರ್ಯಾದೆ ಪ್ರಶ್ನೆ; ಆರ್‌ಜೆ ಪ್ರದೀಪ್‌ ಚಿತ್ರಕ್ಕೆ ALL OK ಅಲೋಕ್‌ ಕಡೆಯಿಂದ ರ್ಯಾಪ್‌ ಟಚ್‌

Maryade Prashne: ‘ಮರ್ಯಾದೆ ಪ್ರಶ್ನೆ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಈ ಸಿನಿಮಾ ತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಅಂದಹಾಗೆ, ಈ ಮರ್ಯಾದೆ ಪ್ರಶ್ನೆ ಚಿತ್ರವನ್ನು ಸಕ್ಕತ್ ಸ್ಟುಡಿಯೋ ಮೂಲಕ ಆರ್ ಜೆ ಪ್ರದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ಗಮನಸೆಳೆಯುತ್ತಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್‌ ಮೂಲಕ ಗಮನ ಸೆಳೆದಿತ್ತು.

ಮಿಡಲ್‌ ಕ್ಲಾಸ್‌ ಮಂದಿಯ ಸಡಗರ

ಆರ್ ಜೆ ಪ್ರದೀಪ್ ಪ್ರದೀಪ್ ಒಡೆತನದ ಸಕ್ಕತ್ ಸ್ಟುಡಿಯೋ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. RCB ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ, ಈಗ ರ್ಯಾಪರ್‌ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿದೆ. ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ ಮಿಡಲ್‌ ಕ್ಲಾಸ್ ಮಂದಿಯ ಸಡಗರಗಳ ಬಗ್ಗೆ ಅರ್ಥಪೂರ್ಣವಾದ ಗೀತೆಯೊಂದನ್ನು ತಯಾರಿಸಿದ್ದು ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಾಣ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ಲರಿಗೂ ಒಗ್ಗಟ್ಟಾಗಿ ದುಡಿಯುವ ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ ಮರ್ಯಾದೆ ಪ್ರಶ್ನೆ ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ" ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ ಆಲ್‌ ಓಕೆ.

ನಿರ್ಮಾಣದ ಜತೆಗೆ ಕಥೆ ಬರೆದ ಪ್ರದೀಪ್‌

ಮರ್ಯಾದೆ ಪ್ರಶ್ನೆ ಸಿನಿಮಾ ನಿರ್ಮಾಣದ ಜೊತೆಗೆ ಪ್ರದೀಪ್ ಅವರೇ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ‌ಕನ್ನಡದ ಅದ್ಭುತ ಕಲಾವಿದರ ದಂಡೇ ಇದರಲ್ಲಿದೆ ಎಂಬ ಮಾಹಿತಿಯಿದೆ.

ಇಲ್ಲಿದೆ ರಿಲೀಸ್‌ ಆದ ಹೊಸ ಹಾಡು