ಒಂದೇ ರೂಮಲ್ಲಿ ಸಪ್ತಮಿ ಗೌಡ- ಯುವ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರು ಎಂದಿದ್ದ ಶ್ರೀದೇವಿ ಭೈರಪ್ಪ ವಿರುದ್ಧ ಕಾಂತಾರ ಲೀಲೆಯ ಕಾನೂನು ಸಮರ
ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಕಾನೂನು ಸಮರಕ್ಕೆ ಇಳಿದಿದ್ದಾರೆ. ಶ್ರೀದೇವಿ ನನ್ನ ಹೆಸರನ್ನು ಹಾಳು ಮಾಡುತ್ತಿದ್ದಾರೆ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಟಿ ಸಿವಿಲ್ ಕೋರ್ಟ್‌ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Yuva Rajkumar wife Sridevi Divorce Case: ದೊಡ್ಮನೆಯಲ್ಲೂ ಡಿವೋರ್ಸ್ ಬಿರುಗಾಳಿ ಬೀಸಿದೆ. ಯುವ ರಾಜ್‌ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಈಗಾಗಲೇ ಯುವ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಅದರ ಲೀಗಲ್ ನೋಟಿಸ್ ಕೈಗೆ ತಲುಪುತ್ತಿದ್ದಂತೆ, ಸದ್ಯ ಅಮೆರಿಕಾದಲ್ಲಿರುವ ಶ್ರೀದೇವಿ ಅದಕ್ಕೆ ಪ್ರತಿಯಾಗಿ ತಮ್ಮ ವಕೀಲರ ಮೂಲಕ ಕೋರ್ಟ್‌ಗೆ ಉತ್ತರ ನೀಡಿದ್ದಾರೆ. ಈ ನಡುವೆಯೇ ಯುವ ರಾಜ್‌ಕುಮಾರ್ ಮತ್ತು ನಟಿ ಸಪ್ತಮಿ ಗೌಡ ನಡುವೆ ಬೇರೆಯದೇ ಸಂಬಂಧವಿದೆ ಎಂದು ನೋಟಿಸ್‌ಗೆ ಪ್ರತಿಯಾಗಿ ಉತ್ತರ ನೀಡಿದ್ದರು ಶ್ರೀದೇವಿ ಭೈರಪ್ಪ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ ಸಪ್ತಮಿ.
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ವಿಚ್ಛೇದನಕ್ಕೆ ತಮ್ಮ ಹೆಸರನ್ನು ಎಳೆದು ತಂದ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ಕೋರ್ಟ್ ಮೊರೆ ಹೋಗಿದ್ದಾರೆ. ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನು ಪರಿಶೀಲಿಸಿದ ಕೋರ್ಟ್ ಮಾನಹಾನಿ ಹೇಳಿಕೆಯನ್ನು ನೀಡದಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಸದ್ಯ ಶ್ರೀದೇವಿ ಅಮೆರಿಕಾದಲ್ಲಿದ್ದು, ಇನ್ನೇನು ಇದೇ ಪ್ರಕರಣದ ವಿಚಾರಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಸಪ್ತಮಿ ಬಗ್ಗೆ ಶ್ರೀದೇವಿ ಆರೋಪ ಏನು?
ಇತ್ತೀಚೆಗಷ್ಟೇ ಯುವ ತಮಗೆ ವಿಚ್ಛೇದನ ಬೇಕು ಎಂದು ಪ್ರೀತಿಸಿ ವಿವಾಹವಾಗಿದ್ದ ಶ್ರೀದೇವಿ ಭೈರಪ್ಪ ಅವರಿಗೆ ಕೋರ್ಟ್ ಮೂಲಕ ಲೀಗಲ್ ನೋಟಿಸ್ ರವಾನಿಸಿದ್ದರು. ಅದಕ್ಕೆ ಪ್ರತಿಯಾಗಿ ಸುದೀರ್ಘ ಬರಹದ ಮೂಲಕ ಉತ್ತರಿಸಿದ್ದ ಶ್ರೀದೇವಿ. "ಸಪ್ತಮಿ ಗೌಡ ಅವರೊಂದಿಗೆ ಯುವ ಕಳೆದ ಒಂದು ವರ್ಷದಿಂದ ಅಫೇರ್ ಹೊಂದಿದ್ದಾರೆ. ಇವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಅಮೆರಿಕಾದಿಂದ ಭಾರತಕ್ಕೆ ಮರಳಿದಾಗ ಇವರಿಬ್ಬರೂ ಖಾಸಗಿ ಹೊಟೇಲ್ ರೂಮ್‌ನಲ್ಲಿ ಇದ್ದರು. ಯುವ ಮತ್ತು ಸಪ್ತಮಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧವನ್ನು ಮುಂದುವರಿಸುವ ಸಲುವಾಗಿ ನನ್ನನ್ನು ಒತ್ತಾಯವಾಗಿ ಮತ್ತೆ ಅಮೆರಿಕಾಗೆ ಕಳುಹಿಸಿದ್ದರು" ಎಂದು ನೋಟಿಸ್‌ನಲ್ಲಿ ಶ್ರೀದೇವಿ ಆರೋಪ ಮಾಡಿದ್ದರು.
ಮಾನನಷ್ಟ ಮೊಕದ್ದಮೆ ಹೂಡಿದ ಸಪ್ತಮಿ
ಶ್ರೀದೇವಿಯ ಹೀಗೆ ನೋಟಿಸ್‌ಗೆ ಉತ್ತರಿಸುತ್ತಿದ್ದಂತೆ, ಮಾಧ್ಯಮಗಳಲ್ಲಿಯೂ ಈ ವಿಚಾರ ಕಾಳ್ಗಿಚ್ಚಿನಂತೆ ಪ್ರಸಾರವಾಯ್ತು. ಸಪ್ತಮಿ ಗೌಡ ಮತ್ತು ಯುವ ನಡುವಿನ ಸಂಬಂಧದ ಬಗ್ಗೆಯೂ ಚರ್ಚೆಯಾಯ್ತು. ದೊಡ್ಮನೆಯಲ್ಲಿಯೂ ಇಂಥ ಪ್ರಕರಣಗಳಿವೆಯೇ ಎಂದೂ ಮಾತನಾಡಿಕೊಂಡರು. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ, ಯುವ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ಕೋರ್ಟ್ ಮೊರೆ ಹೋಗಿದ್ದಾರೆ. ಅವರ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದಾರೆ.
ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ಜಾರಿ
ಶ್ರೀದೇವಿ ಭೈರಪ್ಪ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ಈಗ ತಾನೇ ಚಿತ್ರರಂಗದಲ್ಲಿ ಹೆಸರು ಮಾಡಿರುವ ನನಗೆ, ಈ ವಿಚಾರ ನನ್ನ ವೃತ್ತಿ ಜೀವನ ಸೇರಿ ವೈಯಕ್ತಿಕ ಬದುಕಿಗೂ ಡ್ಯಾಮೇಜ್ ಮಾಡಿದೆ ಎಂದು ಮಾನನಷ್ಟ ಮೊಕದ್ದಮೆಯಲ್ಲಿ ನಮೂದಿಸಿ ಕೋರ್ಟ್‌ಗೆ ಸಲ್ಲಿಸಿದ್ದರು. ಅರ್ಜಿ ಮೇರೆಗೆ ಸಿಟಿ ಸಿವಿಲ್ ಕೋರ್ಟ್, ಸಪ್ತಮಿ ಗೌಡ ಪರ ನಿರ್ಬಂಧಕಾಜ್ಞೆಯನ್ನು ಹೊರಡಿಸಿದೆ.
ವಿಭಾಗ