ರಾಜ್‌ಕುಮಾರ್‌ ಗಂಧದ ಗುಡಿ ನೆನಪಿಸಿ ಪುಷ್ಪಾ ಸಿನಿಮಾ ಅಣಕಿಸಿದ ಪವನ್‌ ಕಲ್ಯಾಣ್‌, ರಕ್ಷಕ ಅಲ್ಲ ಭಕ್ಷಕನೇ ಈಗ ಹೀರೋ-sandalwood news telugu actor politician pawan kalyan gandhada gudi and puspa hero differnce talk in bengaluru ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾಜ್‌ಕುಮಾರ್‌ ಗಂಧದ ಗುಡಿ ನೆನಪಿಸಿ ಪುಷ್ಪಾ ಸಿನಿಮಾ ಅಣಕಿಸಿದ ಪವನ್‌ ಕಲ್ಯಾಣ್‌, ರಕ್ಷಕ ಅಲ್ಲ ಭಕ್ಷಕನೇ ಈಗ ಹೀರೋ

ರಾಜ್‌ಕುಮಾರ್‌ ಗಂಧದ ಗುಡಿ ನೆನಪಿಸಿ ಪುಷ್ಪಾ ಸಿನಿಮಾ ಅಣಕಿಸಿದ ಪವನ್‌ ಕಲ್ಯಾಣ್‌, ರಕ್ಷಕ ಅಲ್ಲ ಭಕ್ಷಕನೇ ಈಗ ಹೀರೋ

Pawan Kalyan News: ತೆಲುಗು ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಈಗ ಅರಣ್ಯ ಸಚಿವರಾಗಿದ್ದಾರೆ. ಬೆಂಗಳೂರಿಗೆ ಇಂದು ಆಗಮಿಸಿದ ಇವರು ರ್ನಾಟಕದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಜತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಪರೋಕ್ಷವಾಗಿ ಪುಷ್ಪಾ ಸಿನಿಮಾವನ್ನು ಚಾಟಿ ಬೀಸಿ "ಈಗ ಕಳ್ಳಸಾಗಾಣೆ ಮಾಡುವವರೇ ಹೀರೋ" ಎಂದಿದ್ದಾರೆ.

ರಾಜ್‌ಕುಮಾರ್‌ ಗಂಧದ ಗುಡಿ ನೆನಪಿಸಿ ಪುಷ್ಪಾ ಸಿನಿಮಾ ಅಣಕಿಸಿದ ಪವನ್‌ ಕಲ್ಯಾಣ್‌
ರಾಜ್‌ಕುಮಾರ್‌ ಗಂಧದ ಗುಡಿ ನೆನಪಿಸಿ ಪುಷ್ಪಾ ಸಿನಿಮಾ ಅಣಕಿಸಿದ ಪವನ್‌ ಕಲ್ಯಾಣ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಲ್ಟ್‌ ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್‌ ನಟನೆಯ ಗಂಧದ ಗುಡಿ ಸಿನಿಮಾವೂ ಒಂದಾಗಿದೆ. ಗಂಧದ ಗುಡಿ ಎಂದಾಕ್ಷಣ ಕನ್ನಡಿಗರ ಮನದಲ್ಲಿ "ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದ ಗುಡಿ" ಹಾಡು ನುಡಿಯುತ್ತದೆ. ಈ ಕನ್ನಡ ಸಿನಿಮಾಕ್ಕೆ ತೆಲುಗು ನಟ ಮತ್ತು ರಾಜಕಾರಣಿ ಪವನ್‌ ಕಲ್ಯಾಣ್‌ ಕೂಡ ಅಭಿಮಾನಿಯಂತೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿರುವ ಪವನ್‌ ಕಲ್ಯಾಣ್‌ ಈಗ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಇವರು ಕನ್ನಡಿಗರ ಹೃದಯ ತಟ್ಟುವಂತಹ ಮಾತುಗಳನ್ನು ಆಡಿದ್ದಾರೆ. ಇದೇ ಸಂದರ್ಭದಲ್ಲಿ ಪರೋಕ್ಷವಾಗಿ ಟಾಲಿವುಡ್‌ನ ಪುಷ್ಪಾ ಸಿನಿಮಾಕ್ಕೆ ಮಾತಿನ ಚಾಟಿ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಜತೆಗೆ ಪವನ್‌ ಕಲ್ಯಾಣ್‌ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪದ್ಯದ ಸಾಲುಗಳನ್ನೂ ಹೇಳಿದ್ದಾರೆ. ಜತೆಗೆ ಕನ್ನಡಿಗರ ಕಿವಿಗೆ ಇಂಪು ತರುವಂತಹ ಮಾತುಗಳನ್ನು ಆಡಿದ್ದಾರೆ.

"ನಾನು ಚುನಾವಣೆಯಲ್ಲಿ ಗೆಲುವು ಪಡೆದು ಇದೀಗ ಅರಣ್ಯ ಸಚಿವನಾಗಿದ್ದೇನೆ. ಫಾರೆಸ್ಟ್‌ ಬಗ್ಗೆ ಜಾಗೃತಿ, ಕಾಳಜಿ ಮೂಡಿಸುವ ಸಿನಿಮಾ ಎಂದಾಗ ನನಗೆ ನೆನಪಾಗುವುದು ಅಣ್ಣಾವ್ರು ನಟಿಸಿರುವ ಗಂಧದ ಗುಡಿ ಸಿನಿಮಾ. ಈ ಸಿನಿಮಾದಲ್ಲಿ ಡಾ ರಾಜ್‌ ಕುಮಾರ್‌ ಅವರು ಡಿಎಫ್‌ಒ ಪಾತ್ರದಲ್ಲಿ ನಟಿಸಿದ್ದಾರೆ. ಕಳ್ಳ ಸಾಗಾಣೆದಾರಿಂದ ಅರಣ್ಯವನ್ನು ರಕ್ಷಣೆ ಮಾಡುತ್ತಾರೆ. ಆದರೆ, ಈಗ ಪರಿಸ್ಥಿತಿ ಹೇಗೆ ಆಗಿದೆ ನೋಡಿ. ಅಂದು, ಅಂದ್ರೆ 40 ವರ್ಷಗಳ ಹಿಂದೆ ಫಾರೆಸ್ಟ್‌ ಸೇವ್‌ ಮಾಡುವ ವ್ಯಕ್ತಿ ನಾಯಕನಾಗಿದ್ದ. ಈಗ ಕಳ್ಳಸಾಗಣೆ ಮಾಡುವವನೇ ಹೀರೋ" ಎಂದು ಸಚಿವ ಪವನ್‌ ಕಲ್ಯಾಣ್‌ ಹೇಳಿದ್ದಾರೆ.

ಆದರೆ, ಈ ಸಂದರ್ಭದಲ್ಲಿ ಪವನ್‌ ಕಲ್ಯಾಣ್‌ ಅವರು ಪುಷ್ಪ ಸಿನಿಮಾದ ಹೆಸರನ್ನು ಹೇಳಿಲ್ಲ. ಪರೋಕ್ಷವಾಗಿ ಪುಷ್ಪಾ ಸಿನಿಮಾಕ್ಕೆ ಈ ಟೀಕೆ ಮಾಡಿದ್ದಾರೆ. ನಾನು ಕೂಡ ಚಿತ್ರರಂಗದ ಭಾಗವೇ ಆಗಿದ್ದೇನೆ. ಕೆಲವೊಮ್ಮೆ ನನಗೆ ಬೇರೆ ರೀತಿಯ ಸಿನಿಮಾ ಮಾಡಲು ಭಯವಾಗುತ್ತದೆ. ಜನರಿಗೆ ನನ್ನ ಸಿನಿಮಾದ ಮೂಲಕ ಸರಿಯಾದ ಸಂದೇಶ ನೀಡುತ್ತಾ ಇದ್ದೇನಾ? ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಸಾಂಸ್ಕೃತಿಕ, ಸಾಮಾಜಿಕ ಪಲ್ಲಟ ಅಧ್ಯಯನ ಯೋಗ್ಯ" ಎಂದು ಪವನ್‌ ಕಲ್ಯಾಣ್‌ ಹೇಳಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಪವನ್‌ ಕಲ್ಯಾಣ್‌ಗೆ ಪುಷ್ಪ ನಟ ಅಲ್ಲು ಅರ್ಜುನ್‌ ಸಪೋರ್ಟ್‌ ಮಾಡಿರಲಿಲ್ಲ. ಅಲ್ಲು ಅರ್ಜುನ್‌ ಅವರು ಎದುರಾಳಿ ಸ್ಪರ್ಧಿಗೆ ಬೆಂಬಲ ನೀಡಿದ್ದರು. ಹೀಗಿದ್ದರೂ ಪವನ್‌ ಕಲ್ಯಾಣ್‌ ಗೆಲುವು ಪಡೆದಿದ್ದರು.