ಪುನೀತ್ ರಾಜ್ ಕುಮಾರ್ ಮಗಳು ಥೇಟ್ ಅಪ್ಪು ಥರನೇ; ಅದೇ ಮೂಗು, ಅದೇ ನಗು, ವಂದಿತಾ ವಿಡಿಯೋ ವೈರಲ್
ಕನ್ನಡದ ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಮಗಳು ವಂದಿತಾ ಮತ್ತು ಧೃತಿ ಮುಖದಲ್ಲಿ ಸಾಕಷ್ಟು ಅಭಿಮಾನಿಗಳು "ಅಪ್ಪು"ನ ನೋಡುತ್ತಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ವಂದನಾ, ಧೃತಿ ಮುಖಗಳಲ್ಲಿ ಅಪ್ಪು ಕಣ್ಣು, ಮೂಗು, ನಗುವಿನ ಪಡಿಯಚ್ಚು ಕಾಣುತ್ತಿದ್ದಾರೆ.
ದಿವಂಗತ ಪುನೀತ್ ರಾಜ್‌ಕುಮಾರ್ ಮಗಳು ವಂದಿತಾ ಮತ್ತು ಧೃತಿ ಮುಖದಲ್ಲಿ ಸಾಕಷ್ಟು ಅಭಿಮಾನಿಗಳು "ಅಪ್ಪು"ನ ನೋಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಪುನೀತ್ ರಾಜ್‌ಕುಮಾರ್‌ಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಈ ಹಿಂದೆ ಇವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ವಂದಿತಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಧೃತಿ ಕೂಡ ಕೆಲವೊಂದು ಕಾರ್ಯಕ್ರಮಗಳಲ್ಲಿ ಕಾಣಿಸಿದ್ದಾರೆ. ಅಪ್ಪುಗೆ ಹಾಡನ್ನು ವಂದಿತಾ ಬಿಡುಗಡೆ ಮಾಡಿದ್ದರು. ಯುವ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿಯೂ ವಂದಿತಾ ಕಾಣಿಸಿಕೊಂಡಿದ್ದರು. ಅಪ್ಪು ಹುಟ್ಟುಹಬ್ಬದ ಸ್ಮರಣೆ ಕಾರ್ಯಕ್ರಮದಲ್ಲೂ ವಂದಿತಾ ಭಾಗವಹಿಸಿದ್ದರು.
ಪುನೀತ್ ರಾಜ್‌ಕುಮಾರ್ ಮಗಳು ನೋಡಲು ಥೇಟ್ ಅಪ್ಪು ಬಾಸ್ ರೀತಿಯೇ ಕಾಣಿಸುತ್ತಾರೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕ ಮಗಳಿಗಿಂತ ದೊಡ್ಡ ಮಗಳ ಮುಖಲಕ್ಷಣ ಅಪ್ಪುವಿನ ಮುಖವನ್ನು ಹೋಲುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. "ಅಪ್ಪನ ತರಹನೇ ಇದ್ದಾರೆ" "ನಮ್ಮ ಬಾಸ್ ರೀತಿ ಇದ್ದಾಳೆ" "ನೀನ್ ಮುಖ ನೋಡಿದರೆ ಅಪ್ಪು ರಾಜ್ ನಾ ನೋಡಿದಂಗೆ ಆಗುತ್ತೆ ಪುಟ್ಟಿ" "ಅಪ್ಪು ಬಾಸ್ ತರನೇ ಮುದ್ದಾಗವ್ಳೆ" "ಅಪ್ಪು ದೇವರ ಮಗಳು ಮೈ ಸಿಸ್ಟರ್" "ಮಾನವನಲ್ಲಿ ದೈವ ಕಂಡ ಅಪ್ಪು ಸರ್ ಮಗಳು" "ಹೌದು ನಿಜ ಎಷ್ಟು ಸಾರಿ ನೋಡಿದರೂ ನೋಡ್ತಾ ಇರಬೇಕು ಅನ್ಸುತ್ತೆ ಇವಳನ್ನ. ನಮ್ ಬಾಸ್ ತರಾನೇ ಎಷ್ಟು ಸಿಂಪಲ್" ಹೀಗೆ ನೂರಾರು ಅಪ್ಪು ಅಭಿಮಾನಿಗಳು ಅಪ್ಪು ಮಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಮುಂದಿನ ವಿಡಿಯೋ ನೋಡಿದಾಗ ನಿಮಗೆ ಹೇಗೆನಿಸುತ್ತದೆ ನೋಡಿ.
ಪುನೀತ್ ರಾಜ್‌ಕುಮಾರ್ ಮೃತಪಟ್ಟ ಹನ್ನೊಂದನೇ ದಿನವೇ ವಂದಿತಾ ನೋವಿನಲ್ಲೂ ಬೆಂಗಳೂರಿನ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಳು. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸೋಫಿಯಾ ಶಾಳೆಯಲ್ಲಿ ಐಸಿಎಸ್‌ಸಿ ಹತ್ತನೇ ತರಗತಿಯ ಅಂತಿಮ ಸೆಮಿಸ್ಟಾರ್ ಪರೀಕ್ಷೆಗೆ ಬರೆದಿದ್ದಳು. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಲಾಂಛನದಡಿ ಲಾಂಚ್ ಆದ ಯುವ ಸಿನಿಮಾದ ಹಾಡನ್ನೂ ವಂದಿತಾ ರಿಲೀಸ್ ಮಾಡಿದ್ದಳು. ವಿಜಯ್ ಕಿರಗಂದೂರ್ ನಿರ್ಮಾಣದ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿದ್ದರು. ಯುವ ಚಿತ್ರದ "ಅಪ್ಪುಗೆ" ಹಾಡನ್ನು ವಂದಿತಾ ರಿಲೀಸ್ ಮಾಡಿದ್ದರು. ಈ ಹಾಡು ಅಪ್ಪನ ಪ್ರೀತಿಯ ಕುರಿತು ಹೇಳುವ ಕಾರಣ ಅಪ್ಪು ಸರ್ ಮಗಳ ಕೈಯಲ್ಲಿಯೇ ರಿಲೀಸ್ ಮಾಡಲು ಚಿತ್ರತಂಡ ಉದ್ದೇಶಿಸಿತ್ತು.
ಪುನೀತ್ ರಾಜ್‌ಕುಮಾರ್ 17 ಮಾರ್ಚ್ 1975ರಲ್ಲಿ ಜನಿಸಿದ್ದರು. ಪವರ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಇವರು ಹೃದಯಾಘಾತದಿಂದ 29 ಅಕ್ಟೋಬರ್ 2021ರಂದು ಮೃತಪಟ್ಟು ಅಭಿಮಾನಿಗಳಿಗೆ ಮರೆಯಲಾಗದ ನೋವುಂಟು ಮಾಡಿದರು. ಸಿನಿಮಾ ನಟ, ಕಿರುತೆರೆ ನಿರೂಪಕ, ನಿರ್ಮಾಪಕರಾಗಿ ಜನಪ್ರಿಯತೆ ಪಡೆದಿದರು. ವಸಂತ ಗೀತೆ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ (1983), ಯಾರಿವನು (1984) ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದ ಇವರು ಗಂಧದ ಗುಡಿ, ಜೇಮ್ಸ್, ಯುವ ರತ್ನ,ನಟ ಸಾರ್ವಭೌಮ, ಅಂನಿ ಪುತ್ರ, ರಾಜಕುಮಾರ, ರಣವಿಕ್ರಮ, ಪವರ್‌ನಂತಹ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.