ರಂಗೋ ಟೆಂಗೆ ಟೆಂಗೆ ಡ್ಯಾನ್ಸ್‌ ಮಾಡೋ ಜರ್ಮನಿಯ ರೀಲ್ಸ್‌ ರಾಜ ನೋಯೆಲ್ ರಾಬಿನ್ಸನ್ ಭಾರತಕ್ಕೆ ಬಂದ; ಇವನ ತಿಂಗಳ ಆದಾಯ 1 ಕೋಟಿ ರೂಗೂ ಅಧಿಕ
ಕನ್ನಡ ಸುದ್ದಿ  /  ಮನರಂಜನೆ  /  ರಂಗೋ ಟೆಂಗೆ ಟೆಂಗೆ ಡ್ಯಾನ್ಸ್‌ ಮಾಡೋ ಜರ್ಮನಿಯ ರೀಲ್ಸ್‌ ರಾಜ ನೋಯೆಲ್ ರಾಬಿನ್ಸನ್ ಭಾರತಕ್ಕೆ ಬಂದ; ಇವನ ತಿಂಗಳ ಆದಾಯ 1 ಕೋಟಿ ರೂಗೂ ಅಧಿಕ

ರಂಗೋ ಟೆಂಗೆ ಟೆಂಗೆ ಡ್ಯಾನ್ಸ್‌ ಮಾಡೋ ಜರ್ಮನಿಯ ರೀಲ್ಸ್‌ ರಾಜ ನೋಯೆಲ್ ರಾಬಿನ್ಸನ್ ಭಾರತಕ್ಕೆ ಬಂದ; ಇವನ ತಿಂಗಳ ಆದಾಯ 1 ಕೋಟಿ ರೂಗೂ ಅಧಿಕ

Germany influencer Noel Robinson in India: ತಲೆಯಲ್ಲಿ ಹೆವ್ವಿ ಕೂದಲು ಹೊಂದಿರುವ ರಂಗೋ ಟೆಂಗೆ ಟೆಂಗೆ ಹಾಡಿಗೆ ವೈರಲ್‌ ವಿಡಿಯೋಗಳನ್ನು ಹಂಚಿಕೊಂಡು ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಜರ್ಮನಿಯ ಇನ್‌ಫ್ಲೂಯೆನ್ಸರ್‌ ನೋಯೆಲ್ ರಾಬಿನ್ಸನ್ ಭಾರತಕ್ಕೆ ಬಂದಿದ್ದಾರೆ. ಇವರು ತಾಜ್‌ಮಹಲ್‌ ಮುಂದೆ ಭಾರತೀಯ ಉಡುಗೆ ತೊಟ್ಟು ಮಾಡಿರುವ ಡ್ಯಾನ್ಸ್‌ ವೈರಲ್‌ ಆಗಿದೆ.

ಜರ್ಮನಿಯ ಇನ್‌ಫ್ಲೂಯೆನ್ಸರ್‌ ನೋಯೆಲ್ ರಾಬಿನ್ಸನ್
ಜರ್ಮನಿಯ ಇನ್‌ಫ್ಲೂಯೆನ್ಸರ್‌ ನೋಯೆಲ್ ರಾಬಿನ್ಸನ್

ಬೆಂಗಳೂರು: ಜರ್ಮನಿ ಮೂಲದ ಪ್ರತಿಭಾನ್ವಿತ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ನೋಯೆಲ್ ರಾಬಿನ್ಸನ್ ಭಾರತಕ್ಕೆ ಆಗಮಿಸಿದ್ದಾರೆ. ಈ ಹೆಸರು ಕೇಳಿದ ತಕ್ಷಣ ನಿಮಗೆ ಈತ ಯಾರೆಂದು ತಿಳಿಯದೆ ಹೋಗಬಹುದು. ರೀಲ್ಸ್‌ ನೋಡುವಾಗ ರಂಗೋ ಟೆಂಗೆ ಟೆಂಗೆ ಎಂಬ ಸಾಂಗ್‌ ಕೇಳಿದರೆ ಖಂಡಿತಾ ಇವನ ಡ್ಯಾನ್ಸ್‌ ನೋಡಿ ನಗುಬರಬಹುದು. ದೇಶದ ಬೀದಿಬೀದಿಗಳಲ್ಲಿ ಜನಪ್ರಿಯ ಹಿಂದಿ ಟ್ಯೂನ್‌ಗಳಿಗೆ ಹೆಜ್ಜೆ ಹಾಕುತ್ತ ಆಕರ್ಷಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳೊಂದಿಗೆ ಡ್ಯಾನ್ಸ್‌ ಮಾಡುತ್ತ, ಸಿನಿಮಾ ದೃಶ್ಯಗಳಂತೆ ನಟಿಸುತ್ತ ಇರುವ ಇವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವು ದಶಲಕ್ಷ ಫಾಲೋವರ್ಸ್‌ ಇದ್ದಾರೆ. ಅಂದಹಾಗೆ, ಭಾರತಕ್ಕೆ ಬಂದಿರುವ ನೋಯೆಲ್ ರಾಬಿನ್ಸನ್ ತಾಜ್‌ಮಹಲ್‌ ಹೊರಗೆ ಸುತ್ತಾಡುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮರೂನ್ ಬಣ್ಣದ ಕುರ್ತಾ ಧರಿಸಿದ ರಾಬಿನ್ಸನ್ ಸ್ಥಳೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವ ಪ್ರಯತ್ನದಂತೆ ಈ ವಿಡಿಯೋ ಇದೆ. ತಾಜ್ ಮಹಲ್ ಹೊರಗೆ ಕುಲದೀಪ್ ಮನಾಕ್ ಅವರ ಜಿಂದ್ ಕಾಧ್ ಕೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. ಮೊದಲಿಗೆ ತಾಜ್‌ ಮಹಲ್‌ ಮುಂದೆ ಇವರು ಮಾಡಿರುವ ವಿಡಿಯೋ ನೋಡೋಣ.

ತಾಜ್‌ಮಹಲ್‌ ಮುಂದೆ ರಾಬಿನ್ಸನ್‌ ವೈರಲ್‌ ವಿಡಿಯೋ

ಇವರು ಈ ವಿಡಿಯೋ ಹಂಚಿಕೊಂಡದ್ದೇ ತಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಜನರು ತಮಗೆ ತೋಚಿದಂತೆ ಕಾಮೆಂಟ್‌ ಮಾಡಿದ್ದಾರೆ. ಕೆಲವೇ ಸಮಯದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಲಕ್ಷಾಂತರ ಲೈಕ್‌ಗಳ ಜತೆ ಸಾವಿರಾರು ಕಾಮೆಂಟ್‌ಗಳೂ ಈ ವಿಡಿಯೋಗೆ ಬಂದಿದೆ.

ನೋಯೆಲ್ ರಾಬಿನ್ಸನ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ

"ಆ ಭಾರತೀಯ ಉಡುಪಿನಲ್ಲಿ ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಬ್ರೋ, ದಯವಿಟ್ಟು ದಕ್ಷಿಣ ಭಾರತಕ್ಕೆ ಬನ್ನಿ, ನಾನು ನಿಮ್ಮನ್ನು ಭೇಟಿಯಾಗಲು ಮತ್ತು ನಿಮ್ಮೊಂದಿಗೆ ನೃತ್ಯ ಮಾಡಲು ಬಯಸುತ್ತೇನೆ" ಎಂದು ಇನ್ನೊಬ್ಬರು ಹೇಳಿದ್ದಾರೆ. "ನಾವು ಅವನಿಗೆ ಆಧಾರ್ ಕಾರ್ಡ್ ನೀಡಬೇಕಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ನನಗೆ ಇನ್‌ಸ್ಟಾಗ್ರಾಂನಲ್ಲಿ ತುಂಬಾ ಖುಷಿ ನೀಡುವ ವ್ಯಕ್ತಿ ಈತ" "ನಿಮ್ಮ ಡ್ಯಾನ್ಸ್‌ ಸೂಪರ್‌" "ನಿಮ್ಮ ಕೂದಲನ್ನು ಹೇಗೆ ಪೋಷಿಸುವಿರಿ" ಹೀಗೆ ನೆಟ್ಟಿಗರು ತೋಚಿದಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಭಾರತದ ಪೊಲೀಸ್‌ ಜತೆ ರೀಲ್ಸ್‌

ನೋಯೆಲ್ ರಾಬಿನ್ಸನ್ ಆದಾಯ

ಈ ಜನಪ್ರಿಯ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವು ದಶಲಕ್ಷ ಫಾಲೋವರ್ಸ್‌ ಇದ್ದಾರೆ. ತಿಂಗಳಿಗೆ 80 ಲಕ್ಷ ರೂಪಾಯಿಯಿಂದ 1 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ. ಉದಾಹರಣೆಗೆ ವರದಿಯೊಂದರ ಪ್ರಕಾರ ಕಳೆದ ತಿಂಗಳ ಈತನ ಆದಾಯ 111ಕೆ ಡಾಲರ್‌. ಅಂದರೆ, 1,11,000 ಡಾಲರ್‌. ಭಾರತದ ರೂಪಾಯಿ ಲೆಕ್ಕದಲ್ಲಿ ನೋಡಿದರೆ ಈ ಮೊತ್ತ 92,19,521.25 ರೂಪಾಯಿ ಆಗುತ್ತದೆ. ಯೂಟ್ಯೂಬರ್ಸ್‌.ಮಿ ಪ್ರಕಾರ ಈತನ ತಿಂಗಳ ಸರಾಸರಿ ಆದಾಯ 229k ಡಾಲರ್‌. ಅಂದರೆ, 229000 ಡಾಲರ್‌. ರೂಪಾಯಿ ಲೆಕ್ಕದಲ್ಲಿ ನೋಡಿದರೆ ಇವರ ತಿಂಗಳ ಸರಾಸರಿ ಆದಾಯ 1.90 ಕೋಟಿ ರೂಪಾಯಿಗಿಂತಲೂ ಹೆಚ್ಚು. ಹೀಗೆ ಜಗತ್ತಿನ ವಿವಿಧ ಮಾಧ್ಯಮಗಳು ಇವರ ಆದಾಯ ಹಲವು ಕೋಟಿ ಎಂದು ಬರೆದಿವೆ. ಇವರ ಆದಾಯದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸ್ವತಂತ್ರವಾಗಿ ದೃಢೀಕರಿಸಿಲ್ಲ. ಸೋಷಿಯಲ್‌ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೋಟಿಕೋಟಿ ಗಳಿಕೆ ಮಾಡಬಹುದು ಎನ್ನುವುದಕ್ಕೆ ನೋಯೆಲ್ ರಾಬಿನ್ಸನ್ ಉದಾಹರಣೆ.

Whats_app_banner