ಗೌತಮ್‌ ಬಳಗದ ಒಳ್ಳೆಯತನ, ಆಗಂತುಕನ ನಿಗೂಢ ನಿರ್ದೇಶನ; ಅಮ್ಮನ ಉಳಿಸಲು ಹೃದಯ ಕಲ್ಲು ಮಾಡಿಕೊಂಡ ಸುಧಾ- ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ಬಳಗದ ಒಳ್ಳೆಯತನ, ಆಗಂತುಕನ ನಿಗೂಢ ನಿರ್ದೇಶನ; ಅಮ್ಮನ ಉಳಿಸಲು ಹೃದಯ ಕಲ್ಲು ಮಾಡಿಕೊಂಡ ಸುಧಾ- ಅಮೃತಧಾರೆ ಧಾರಾವಾಹಿ

ಗೌತಮ್‌ ಬಳಗದ ಒಳ್ಳೆಯತನ, ಆಗಂತುಕನ ನಿಗೂಢ ನಿರ್ದೇಶನ; ಅಮ್ಮನ ಉಳಿಸಲು ಹೃದಯ ಕಲ್ಲು ಮಾಡಿಕೊಂಡ ಸುಧಾ- ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯ ಶುಕ್ರವಾರದ, ನವೆಂಬರ್‌ 22ರ ಸಂಚಿಕೆಯಲ್ಲಿ ಮಹತ್ವದ ಘಟನೆಗಳು ನಡೆದಿಲ್ಲ. ಆದರೆ, ಗೌತಮ್‌ ಮನೆಗೆ ಆಗುಂತಕನ ನಿರ್ದೇಶನದಂತೆ ಬಂದ ಸುಧಾಳಿಗೆ "ಒಳ್ಳೆಯದು" ಮತ್ತು "ಕೆಟ್ಟದರ" ನಡುವೆ ಯಾವುದು ಆಯ್ಕೆ ಮಾಡಿಕೊಳ್ಳಬೇಕೆಂಬ ಸವಾಲು ಎದುರಾಗಿದೆ. ಅಮ್ಮನ ಬದುಕಿಗಾಗಿ ಮನಸ್ಸು ಕಲ್ಲು ಮಾಡಿಕೊಂಡಿದ್ದಾಳೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ನವೆಂಬರ್‌ 22ರ ಸಂಚಿಕೆ: ಗೌತಮ್‌ ದಿವಾನ್‌ ಎಂಬ ಅಗರ್ಭ ಶ್ರೀಮಂತ, ಉದ್ಯಮಿ ಮತ್ತು ಒಳ್ಳೆಯ ಮನಸ್ಸಿನ ವ್ಯಕ್ತಿಯ ಕುಟುಂಬದ ಕಥೆಯೇ ಅಮೃತಧಾರೆ. ಜೀ ಕನ್ನಡ ವಾಹಿನಿಯ ಈ ಜನಪ್ರಿಯ ಧಾರಾವಾಹಿಯಲ್ಲಿ ಈತನ ಮಲತಾಯಿ, ಮಲತಾಯಿಯ ಮಕ್ಕಳ ಮೋಸ ಈತನಿಗೆ ಅರಿವಾಗುವುದಿಲ್ಲ. ಇದೇ ಸಮಯದಲ್ಲಿ ಗೌತಮ್‌ ಪತ್ನಿ ಭೂಮಿಕಾ ಈ ಮನೆಯಲ್ಲಿ ಕೆಟ್ಟದ್ದು ನಡೆಯದಂತೆ ನೋಡಿಕೊಳ್ಳುವ ಜಾಣೆ. ಈ ಸೀರಿಯಲ್‌ನ ಕಥೆ ಇಲ್ಲಿದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ನವೆಂಬರ್‌ 22, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಧಾರಾವಾಹಿ ನವೆಂಬರ್‌ 22ರ ಸಂಚಿಕೆ: ಅಪರ್ಣಾ ಕಾಫಿ ತಂದುಕೊಟ್ಟು "ಹೇಗಿದೆ ಕಾಫಿ" ಎಂದು ಕೇಳುತ್ತಾಳೆ. "ನೀನು ಮದುವೆಯಾಗಿ ಬಂದಾಗ ನೀಡಿದಂತೆ ಇತ್ತು" ಎಂದು ಆನಂದ್‌ ಹೇಳುತ್ತಾನೆ. ಇದಾದ ಬಳಿಕ ಸುಧಾಳ ವಿಚಾರ ಮಾತನಾಡುತ್ತಾರೆ. "ಇಲ್ಲಿಂದ ಹೋದ ಬಳಿಕ ಒಂದು ಫೋನ್‌ ಇಲ್ಲ" ಎಂದು ಅಪರ್ಣಾ ಹೇಳುತ್ತಾರೆ. ಆನಂದ್‌ ಸುಧಾಳಿಗೆ ಫೋನ್‌ ಮಾಡುತ್ತಾರೆ. ಆಕೆ ಖುಷಿಯಿಂದ ಮಾತನಾಡುತ್ತಾಳೆ. "ನಾನು ಇಲ್ಲಿ ಕೆಲಸದಲ್ಲಿ ಮುಳುಗಿಬಿಟ್ಟೆ, ಕ್ಷಮಿಸಿ ಅಕ್ಕಾ" ಎಂದು ಅಪರ್ಣಾಳ ಬಳಿ ಸುಧಾ ಹೇಳುತ್ತಾರೆ. ಫೋನ್‌ ಇಟ್ಟ ಬಳಿಕ "ಇವರು ಎಲ್ಲಾ ಎಷ್ಟು ಒಳ್ಳೆಯ ಜನ. ನಾನು ನೋಡಿದ್ರೆ ಇವರಿಗೆ ಮೋಸ ಮಾಡ್ತಿನಲ್ವ" ಎಂದು ಸುಧಾ ಯೋಚಿಸುತ್ತಾಳೆ.

ಭೂಮಿಕಾ ಸುಧಾಳನ್ನು ಗಮನಿಸುತ್ತಾ ಇದ್ದಾರೆ. ಹೋದಾದ ಚೆನ್ನಾಗಿಯೇ ಇದ್ರು. ಬರ್ತಾ ಮತ್ತೆ ಡಲ್‌ ಆದ್ರಲ್ಲ. ಏನಾಗಿರಬಹುದು ಎಂದು ಭೂಮಿಕಾ ಯೋಚಿಸುತ್ತಾರೆ. ಇನ್ನೊಂದೆಡೆ ಅಪೇಕ್ಷಾ ಉರಿದುಕೊಂಡಿದ್ದಾಳೆ. "ಮನೆಯಲ್ಲಿ ನನಗೆ ಮರ್ಯಾದೆ ಇಲ್ಲ. ಕಾಫಿ ಕೇಳಿದೆ. ಕೆಲಸದವಳು ನನ್ನ ಮಾತು ಕೇಳೋಲ್ಲ" ಎಂದು ಬುಸುಗುಟ್ಟುತ್ತಿರುವಾಗ ಪಾರ್ಥ ಬರುತ್ತಾನೆ. ಎಂದಿನಂತೆ ಪಿರಿಪಿರಿ ಮಾತು ಇರುತ್ತದೆ. "ನಿನ್ನೆಮೊನ್ನೆ ಬಂದ ಮನೆ ಕೆಲಸದವಳು ನನ್ನ ಮಾತು ಕೇಳುವುದಿಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ. ಪಾರ್ಥನಿಗೆ ಆ ಕಥೆ ಹೇಳುತ್ತಾಳೆ. "ಇರೋ ಬರೋದನ್ನೆಲ್ಲ ಯೋಚನೆ ಮಾಡಬೇಡಿ" ಎಂದು ಸಮಧಾನ ಮಾಡಲು ಯತ್ನಿಸುತ್ತಾನೆ. "ಅವತ್ತು ಅತ್ತಿಗೆನ ನೀವೇ ನೋಡಿಕೊಂಡಿದ್ರೆ, ಅತ್ತಿಗೆ ಮುಂದೆ ಡ್ಯಾಮೇಜ್‌ ಆಗಿರೋ ನಿಮ್ಮ ಇಮೇಜ್‌ ಕ್ಲಿಯರ್‌ ಆಗ್ತಾ ಇತ್ತು" ಎಂಬ ಮಾತೂ ಹೇಳುತ್ತಾನೆ. ಎಂದಿನಂತೆ ಅಪೇಕ್ಷಾ ಬುಸುಗುಟ್ಟುತ್ತಾಳೆ.

ಅತ್ತಿಗೆ ನಾನು ಮನೆಗೆ ಹೊರಡ್ತಿನಿ ಎಂದು ಹೇಳಿದಾಗ ಭೂಮಿಕಾ ಕರೆಯುತ್ತಾಳೆ. ಕುಳಿತುಕೊಳ್ಳಿ ಎನ್ನುತ್ತಾಳೆ. "ಬೆಳಗ್ಗೆಯಿಂದ ನೋಡ್ತಾ ಇದ್ದೇನೆ. ಏನು ಸಮಸ್ಯೆ. ಹೇಳಿ, ಬರೀ ಬಾಯಿಮಾತಿಗೆ ಹೇಳುತ್ತಿಲ್ಲ. ನಿಜವಾಗಿಯೂ ನಾನು ಅತ್ತಿಗೆ. ಸಂಕೋಚ ಇಲ್ಲದೆ ಹೇಳಿ" ಎಂದು ಭೂಮಿಕಾ ಹೇಳುತ್ತಾರೆ. ಒಂದಿಷ್ಟು ದುಡ್ಡು ನೀಡುತ್ತಾರೆ. ಆಕೆ ತೆಗೆದುಕೊಳ್ಳುವುದಿಲ್ಲ.

ಸುಧಾ ಮನೆಗೆ ಬಂದು ಯೋಚಿಸುತ್ತಾಳೆ. ಆಕೆಗೆ ಒಂದು ಕಡೆಯಲ್ಲಿ ಆಗುಂತಕನ ಆಜ್ಞೆ ಇರುತ್ತದೆ. ಇನ್ನೊಂದು ಕಡೆ ಇವರೆಲ್ಲರ ಪ್ರೀತಿ ನೆನಪಿಗೆ ಬರುತ್ತದೆ. ಮಾತನಾಡದ ತಾಯಿ ಮುಂದೆ ತನ್ನ ನೋವು ಹೇಳಿಕೊಳ್ಳುತ್ತಾಳೆ. "ನನಗೆ ಬೇರೆ ದಾರಿ ಇಲ್ಲ ಅಮ್ಮ. ನಾನು ಮನಸ್ಸನ್ನು ಕಲ್ಲು ಮಾಡಿಕೊಳ್ತಿನಿ ಅಮ್ಮ. ನನಗೆ ಬೇರೆ ದಾರಿ ಇಲ್ಲಮ್ಮ. ನನ್ನನ್ನು ಕ್ಷಮಿಸಿಬಿಡಮ್ಮ" ಎಂದು ಹೇಳುತ್ತಾಳೆ.

ಶಕುಂತಲಾದೇವಿ ಮುಂದೆ ಗೌತಮ್‌ ಮಾತನಾಡುತ್ತಾನೆ. "ಕೆಲಸದವನು ಸಿಕ್ಕಿದ್ದಾನೆ. ಆದರೆ, ಆತನಿಗೆ ಯಾರು ಮಾಡಿಸಿದ್ದಾರೆ ಎಂದು ಗೊತ್ತಿಲ್ಲ. ಆತನಿಗೆ ಬೆದರಿಕೆ ಹಾಕಿ ಈ ಕೆಲಸ ಮಾಡಿಸಿದ್ದಾನೆ" ಎಂದು ಗೌತಮ್‌ ಹೇಳುತ್ತಾರೆ. ಈ ವಿಚಾರದಲ್ಲಿ ಲೀಡ್‌ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಜೈದೇವ್‌ ಮತ್ತು ಮಲ್ಲಿ ಮಾತನಾಡುತ್ತಾರೆ. "ನಮ್ಮನ್ನು ಯಾರೋ ಬೇಕೆಂದೇ ಟಾರ್ಗೆಟ್‌ ಮಾಡ್ತಾ ಇದ್ದಾರೆ" ಎಂದು ಜೈದೇವ್‌ ಹೇಳುತ್ತಾನೆ. "ಅದು ಯಾರು ಎಂದು ನನಗೆ ಗೊತ್ತಾಗಲೇ ಬೇಕು. ಸಾವನ್ನು ನನ್ನ ಕಣ್ಣ ಮುಂದೆ ಕಾಣಿಸಿದ್ದಾರೆ. ಅದು ನನಗೆ ಗೊತ್ತಾಗಲೇಬೇಕು" ಎಂದು ಹೇಳುತ್ತಾನೆ.

ಗೌತಮ್‌ ಡಲ್‌ ಆಗಿದ್ದಾನೆ. ಏನಾಯ್ತು ಎಂದು ಭೂಮಿಕಾ ಹೇಳುತ್ತಾರೆ. "ಪೊಲೀಸರ ಕಡೆಯಿಂದ ಏನೂ ವಿಚಾರ ತಿಳಿದಿಲ್ಲ. ಅಮ್ಮನ ಹುಡುಕಲು ಪ್ರೈವೇಟ್‌ ಡಿಟೆಕ್ಟೀವ್‌ ಇಟ್ಟಿದ್ದೇವೆ. ಏನೂ ಲೀಡ್‌ ಸಿಕ್ಕಿಲ್ಲ. ಎಲ್ಲರ ಬಗ್ಗೆ ಅನುಮಾನ ಪಡುವಂತೆ ಇದೆ" ಎಂದು ಗೌತಮ್‌ ಹೇಳುತ್ತಾರೆ. ಭೂಮಿಕಾ ಒಂದಿಷ್ಟು ಸಮಾಧಾನ ಹೇಳುತ್ತಾರೆ. "ಟೈಮ್‌ಗೆ ಟೈಮ್‌ ಕೊಡಬೇಕು, ನಾವು ಈಗ ಮಾಡಬೇಕಿರುವುದು ಅಷ್ಟೇ" ಎಂದು ಭೂಮಿಕಾ ಹೇಳುತ್ತಾರೆ. ಹೀಗೆ, ಹೆಚ್ಚು ಪ್ರಮುಖ ಘಟನೆಗಳು ಇಲ್ಲದೆ ಶುಕ್ರವಾರದ ಎಪಿಸೋಡ್‌ ಮುಗಿದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner