ಅಣ್ಣಯ್ಯ ಧಾರಾವಾಹಿ: ಅಣ್ಣ, ತಂಗಿಯರ ಹೊಂದಾಣಿಕೆ ಅರ್ಥ ಮಾಡಿಕೊಂಡ ಪಾರು; ತಾನೂ ಎಲ್ಲರಂತಾಗುವ ಪ್ರಯತ್ನ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಅಣ್ಣ, ತಂಗಿಯರ ಹೊಂದಾಣಿಕೆ ಅರ್ಥ ಮಾಡಿಕೊಂಡ ಪಾರು; ತಾನೂ ಎಲ್ಲರಂತಾಗುವ ಪ್ರಯತ್ನ

ಅಣ್ಣಯ್ಯ ಧಾರಾವಾಹಿ: ಅಣ್ಣ, ತಂಗಿಯರ ಹೊಂದಾಣಿಕೆ ಅರ್ಥ ಮಾಡಿಕೊಂಡ ಪಾರು; ತಾನೂ ಎಲ್ಲರಂತಾಗುವ ಪ್ರಯತ್ನ

ಅಣ್ಣಯ್ಯ ಧಾರಾವಾಹಿ: ಪಾರು ಎಲ್ಲ ತಂಗಿಯರನ್ನು ಕರೆದುಕೊಂಡು ಸೀರೆ ಕೊಡಿಸಲು ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿದ್ದಾಳೆ. ಆದ್ರೆ ಅಣ್ಣಯ್ಯನ ಹತ್ತಿರ ಅಷ್ಟೊಂದು ಹಣ ಇಲ್ಲ ಎಂದು ಅರಿತ ತಂಗಿಯರು ಏನು ಮಾಡಿದ್ದಾರೆ ನೋಡಿ.

ಅಣ್ಣ, ತಂಗಿಯರ ಹೊಂದಾಣಿಕೆ ಅರ್ಥ ಮಾಡಿಕೊಂಡ ಪಾರು
ಅಣ್ಣ, ತಂಗಿಯರ ಹೊಂದಾಣಿಕೆ ಅರ್ಥ ಮಾಡಿಕೊಂಡ ಪಾರು (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ತಂಗಿಯರು ತಮ್ಮ ಅತ್ತಿಗೆಗೆ ಮಮತೆ ತೋರಿಸುತ್ತಾ ಇದ್ದಾರೆ. ಅತ್ತಿಗೆ ಎಲ್ಲರನ್ನು ಕರೆದುಕೊಂಡು ಸೀರೆ ಕೊಡಿಸೋಕೆ ಹೋಗುತ್ತಾಳೆ. ಆಗ ಎಲ್ಲರೂ ತಮ್ಮ ತಮ್ಮ ಇಷ್ಟದ ಸೀರೆಯನ್ನು ಬಿಟ್ಟು ಕಡಿಮೆ ದರ ಇರುವ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆ ತಂಗಿಯರೆಲ್ಲ ಈ ರೀತಿ ಮಾಡ್ತ ಇದ್ದಾರೆ ಎಂದು ಅಂದುಕೊಳ್ಳುವ ಬದಲು ಪಾರು ಎಲ್ಲರನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲರೂ ಬಟ್ಟೆಯಂಗಡಿಯಲ್ಲಿ ಕುಳಿತು ತಮಗೆ ಇಷ್ಟವಾದ ಎಲ್ಲ ಬಟ್ಟೆಗಳನ್ನು ನೋಡುತ್ತಾರೆ. ಆದ್ರೆ ಯಾವುದಕ್ಕೆ ಕಡಿಮೆ ಹಣ ಇದೆಯೋ ಆ ಬಟ್ಟೆಯನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಇವರೆಲ್ಲ ಈ ರೀತಿ ಮಾಡುತ್ತಿರುವುದು ಪಾರುಗೆ ಅರ್ಥವಾಗುತ್ತದೆ.

ಇನ್ನು ಅಣ್ಣಯ್ಯನಂತು ಮಂಕಾಗಿ ನಿಂತಿರುತ್ತಾನೆ. ಇವರೆಲ್ಲ ಈ ರೀತಿ ಬಟ್ಟೆ ಆರಿಸುತ್ತಾ ಇರುವುದನ್ನು ನೋಡಿದರೆ ಮದುವೆ ಅಂತ ಕೂಡಿಟ್ಟ ಹಣವೆಲ್ಲ ಈಗಲೇ ಖಾಲಿಯಾಗೋ ರೀತಿ ಇದ್ಯಲ್ಲಪ್ಪ ದೇವರೆ ಎಂದು ಚಿಂತೆ ಮಾಡುತ್ತಾ ನಿಂತಿರುತ್ತಾನೆ. ಅವನು ಮಂಕಾಗಿ ನಿಂತಿರುವುದನ್ನೂ ಪಾರು ಗಮನಿಸಿರಿತ್ತಾಳೆ. ನಂತರ ಅವರೆಲ್ಲರನ್ನೂ ನೋಡಿ ಪಾರು ಖುಷಿಯಾಗ್ತಾಳೆ. ಆದ್ರೆ ಅದನ್ನು ವ್ಯಕ್ತಪಡಿಸುವುದಿಲ್ಲ.

ಅತ್ತಿಗೆಗೆ ಸೀರೆ ಕೊಡಿಸಿದ ತಂಗಿಯರು

ಇನ್ನು ರಾಣಿ, ರತ್ನ ಇಬ್ಬರೂ ಮೊದಲಿಗೆ ತಮಗೆ ಇಷ್ಟವಾದ ಬಟ್ಟೆಯನ್ನು ಕೈಯ್ಯಲ್ಲಿ ಹಿಡಿದುಕೊಳ್ಳುತ್ತಾರೆ. ಆ ನಂತರ ಅದರ ದರ ನೋಡುತ್ತಾರೆ. ಅದರ ಬೆಲೆ 800ರೂ ಎಂದು ತಿಳಿದ ತಕ್ಷಣ ಅದನ್ನು ಕೈ ಬಿಡುತ್ತಾರೆ. ಅದರ ಅರ್ಧದಷ್ಟು ಹಣಕ್ಕೆ ಸಿಗುವ ಬಟ್ಟೆಯನ್ನು ಕೈಗೆತ್ತಿಕೊಂಡು ನನಗೆ ಇದೇ ಓಕೆ ಎಂದು ಹೇಳುತ್ತಾರೆ. ಇನ್ನು ರಮ್ಯ, ರಶ್ಮಿ ಕೂಡ ಇದೇ ರೀತಿ ನಾಟಕ ಮಾಡುತ್ತಾರೆ. ರತ್ನ ಒಂದು ಉಪಾಯ ಮಾಡುತ್ತಾಳೆ. ನಾವು ಕೂಡಿಟ್ಟ ಹಣದಲ್ಲೇ ಅತ್ಗೆಗೆ ಒಂದು ಸೀರೆ ಕೊಡೋಣ ಎಂದು ಹೇಳುತ್ತಾಳೆ. ಅದಕ್ಕೆ ತಂಗಿಯರೆಲ್ಲ ಒಪ್ಪಿಗೆ ಸೂಚಿಸುತ್ತಾರೆ. ಆಗ ಪಾರು ತಾನೂ ಈ ಮನೆಗೆ ಇನ್ನಷ್ಟು ಹೊಂದಿಕೊಳ್ಳಬೇಕು ಎಂದುಕೊಳ್ಳುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner