Bigg Boss Kannada: ಕಿಚ್ಚ ಸುದೀಪ್‌ ಮಾತೃವಿಯೋಗದ ಸುದ್ದಿ ಕೇಳಿ ದೊಡ್ಮನೆ ಸ್ಪರ್ಧಿಗಳು ಭಾವುಕ; ಬಿಗ್‌ ಬಾಸ್‌ ಮನೆಯಲ್ಲಿ ಮೌನಾಚರಣೆ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಕಿಚ್ಚ ಸುದೀಪ್‌ ಮಾತೃವಿಯೋಗದ ಸುದ್ದಿ ಕೇಳಿ ದೊಡ್ಮನೆ ಸ್ಪರ್ಧಿಗಳು ಭಾವುಕ; ಬಿಗ್‌ ಬಾಸ್‌ ಮನೆಯಲ್ಲಿ ಮೌನಾಚರಣೆ

Bigg Boss Kannada: ಕಿಚ್ಚ ಸುದೀಪ್‌ ಮಾತೃವಿಯೋಗದ ಸುದ್ದಿ ಕೇಳಿ ದೊಡ್ಮನೆ ಸ್ಪರ್ಧಿಗಳು ಭಾವುಕ; ಬಿಗ್‌ ಬಾಸ್‌ ಮನೆಯಲ್ಲಿ ಮೌನಾಚರಣೆ

Bigg Boss Kannada 11: ಬಿಗ್‌ ಬಾಸ್‌ ಮನೆಯ ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ಯೋಗರಾಜ್‌ ಭಟ್‌ ಉತ್ತರ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿಯ ವಿಷಯ ಕೇಳಿ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ಕಿಚ್ಚ ಸುದೀಪ್‌ ತಾಯಿಗೆ ಬಿಗ್‌ ಬಾಸ್‌ ಸ್ಪರ್ಧಿಗಳ ಶ್ರದ್ಧಾಂಜಲಿ
ಕಿಚ್ಚ ಸುದೀಪ್‌ ತಾಯಿಗೆ ಬಿಗ್‌ ಬಾಸ್‌ ಸ್ಪರ್ಧಿಗಳ ಶ್ರದ್ಧಾಂಜಲಿ

ಬಿಗ್‌ ಬಾಸ್‌ ಮನೆಯಲ್ಲಿ ವಾರದ ಪಂಚಾಯ್ತಿಗೂ ಯಾಕೆ ಕಿಚ್ಚ ಸುದೀಪ್‌ ಬರಲಿಲ್ಲ ಎಂದು ಎಲ್ಲ ಸ್ಪರ್ಧಿಗಳ ಮನಸಿನಲ್ಲಿ ಪ್ರಶ್ನೆ ಇತ್ತು. ಆದರೆ ಅದಕ್ಕೆ ಉತ್ತರವನ್ನು ಯೋಗರಾಜ್‌ ಭಟ್‌ರು ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ್ ಅವರು ಹೇಳಿದ ಒಂದು ಮಾತು ವೈರಲ್ ಆಗಿತ್ತು. ಸುದೀಪ್‌ ಸರ್‌ ಜಗದೀಶ್‌ ಅವರಿಗೆ ಕ್ಲೀನ್‌ ಚಿಟ್ ಕೊಡುವ ಸಲುವಾಗಿ ನಮನ್ನೆಲ್ಲ ಕೆಟ್ಟವರನ್ನಾಗಿ ಮಾಡಿದ್ರು ಎಂಬ ಮಾತು ವೈರಲ್ ಆಗಿತ್ತು. ಅದೇ ಪ್ರಶ್ನೆಗೆ ಉತ್ತರ ನೀಡುವ ರೀತಿಯಲ್ಲಿ ಮತ್ತು ಸ್ಪಷ್ಟನೆ ಕೊಡಲು ಯೋಗರಾಜ್‌ ಭಟ್‌ ಅವರು ಮುಂದಾಗುತ್ತಾರೆ. ನಿಮ್ಮ ಇಷ್ಟೆಲ್ಲ ಸಮಸ್ಯೆಗಳನ್ನು ಬಗೆಹರಿಸಿ ಹೋಗುವಷ್ಟರಲ್ಲಿ ಏನಾಗಿದೆ ಗೊತ್ತಾ? ಎಂದು ಕೇಳುತ್ತಾರೆ. ಆಗ ಸ್ಪರ್ಧಿಗಳೆಲ್ಲ ಸೈಲೆಂಟ್ ಆಗಿ ಉತ್ತರಕ್ಕಾಗಿ ಕಾಯುತ್ತಾರೆ.

ಬಿಗ್‌ ಬಾಸ್‌ ಕಾರ್ಯಕ್ರಮ ನಡೆಸುತ್ತಿರುವ ಸಂದರ್ಭದಲ್ಲೇ ಅವರಿಗೊಂದು ಕಾಲ್ ಬರುತ್ತದೆ. ಆಗ ಅವರಿಗೆ ಆ ಕಡೆಯಿಂದ ಕೇಳಿದ ಮಾತೆಂದರೆ ನಿಮ್ಮ ತಾಯಿ ಸೀರಿಯಸ್‌ ಆಗಿ ಐಸಿಯುದಲ್ಲಿದ್ದಾರೆ ಎಂದು ಹೇಳುತ್ತಾರೆ. ಆದರೂ ಆ ಮಾತನ್ನು ಕೇಳಿಯೂ ಅವರು ಮತ್ತೆ ವೇದಿಕೆಗೆ ಬರುತ್ತಾರೆ. ಬಂದು ಮಾತಾಡುತ್ತಾರೆ. ನಿಮ್ಮ ಎಲ್ಲ ಸಮಸ್ಯೆಗಳನ್ನು ಕೇಳುತ್ತಾರೆ. ಈ ಸಮಸ್ಯೆಗಳನ್ನೆಲ್ಲ ನಾನೇ ಸರಿ ಮಾಡಬೇಕು ಇದು ನನ್ನ ಕೆಲಸ ಎಂದು ಹೇಳುತ್ತಾ ಶೂಟಿಂಗ್‌ ಮುಂದುವರೆಸುತ್ತಾರೆ ಎನ್ನುತ್ತಾರೆ.

ಆಗ ಸ್ಪರ್ಧಿಗಳೆಲ್ಲ ಎದ್ದು ನಿಲ್ಲುತ್ತಾರೆ. ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ನೀವು ನಿಲ್ಲಬೇಡಿ ಎಲ್ಲರೂ ಕೂಳಿತುಕೊಳ್ಳಿ. ಯಾವಾಗ ನಿಲ್ಲಬೇಕು ಎಂದು ನಾನು ಹೇಳುತ್ತೇನೆ ಎಂದು ಹೇಳುತ್ತಾರೆ. ಆಗ ಎಲ್ಲರಿಗೂ ಇನ್ನಷ್ಟು ಆತಂಕ ಆಗುತ್ತದೆ.

ನಿಮ್ಮ ಹಾರಾಟ ಕೂಗಾಟವನ್ನೆಲ್ಲ ಕೇಳಿ. ಕಾರ್ಯಕ್ರಮಕ್ಕೆ ಅಟೆಂಡ್‌ ಆಗಿ ರವಿವಾರ ರಾತ್ರಿ ಅವರು ಮನೆ ಹೋಗಿ ಬಿಗ್‌ ಬಾಸ್‌ ತಂಡಕ್ಕೆ ತಿಳಿಸಿದ್ದೇನೆಂದರೆ “ಐ ಲಾಸ್ಟ್‌ ಮೈ ಮದರ್” ಅಂತ ಎನ್ನುತ್ತಾರೆ. ನಂತರ ಮಾತೇ ನಿಂತು ಹೋಗುತ್ತದೆ. ಎಲ್ಲರಿಗೂ ಬೇಸರವಾಗುತ್ತದೆ.

ಆನಂತರದಲ್ಲಿ ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುತ್ತಾರೆ. ನೀವು ಮನೆಗೆ ಹೋಗಿ ಎಂದು ಹೇಳಿದರೂ ಅವರು ಹೋಗೋದಿಲ್ಲ. ಒಳಗಿನವರಿಗೆ ಇಲ್ಲೇನಾಗುತ್ತಿದೆ ಎಂದು ಗೊತ್ತಿಲ್ಲ. ಅವರು ಅವರ ಬದುಕನ್ನು ಬದುಕುತ್ತಿದ್ದಾರೆ ಎನ್ನುತ್ತಾರೆ ಎಂದು ಯೋಗರಾಜ್‌ ಭಟ್‌ ಅವರು ತಿಳಿಸಿದಾಗ ಎಲ್ಲರೂ ಭಾವುಕರಾಗಿದ್ದಾರೆ.

 

 

Whats_app_banner