BBK 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋಣ್‌ ಪ್ರತಾಪ್‌! ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಬಿಗ್‌ಬಾಸ್‌
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋಣ್‌ ಪ್ರತಾಪ್‌! ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಬಿಗ್‌ಬಾಸ್‌

BBK 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋಣ್‌ ಪ್ರತಾಪ್‌! ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಬಿಗ್‌ಬಾಸ್‌

ಕಳೆದ ಕೆಲ ವರ್ಷಗಳಿಂದ ಕುಟುಂಬದಿಂದ ಮತ್ತು ಮನೆಯಿಂದ ದೂರವೇ ಉಳಿದಿದ್ದ ಡ್ರೋಣ್‌ ಪ್ರತಾಪ್‌, ಸದ್ಯ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿ. ಅಪ್ಪನ ಜತೆಗೂ ಕಳೆದ ಮೂರು ವರ್ಷಗಳಿಂದ ಪ್ರತಾಪ್‌ ಮಾತನಾಡಿರಲಿಲ್ಲ. ಇದೀಗ ಅಚ್ಚರಿಯ ರೀತಿಯಲ್ಲಿ ಅಪ್ಪನಿಂದ ಫೋನ್‌ ಕರೆ ಬಂದಿದೆ. ಪ್ರತಾಪ್‌ ಬಿಕ್ಕಳಿಸಿ ಕಣ್ಣೀರಾಗಿದ್ದಾರೆ.

BBK 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋಣ್‌ ಪ್ರತಾಪ್‌! ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಬಿಗ್‌ಬಾಸ್‌
BBK 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋಣ್‌ ಪ್ರತಾಪ್‌! ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಬಿಗ್‌ಬಾಸ್‌

Bigg boss Kannada Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ನೋಡುಗರ ಕುತೂಹಲ ಹೆಚ್ಚಿಸಿಕೊಳ್ಳುತ್ತ ಸಾಗುತ್ತಿದೆ. ಅದರ ಜತೆಗೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಸ್ವಭಾವ, ವರ್ತನೆಗಳೂ ಬದಲಾಗುತ್ತಲೇ ಇವೆ. ಅದರಲ್ಲಿಯೂ ಡ್ರೋಣ್ ಪ್ರತಾಪ್ ಮೊದಲ ವಾರದಲ್ಲಿದ್ದ ರೀತಿಗೂ ಇಂದಿನ ರೀತಿಗೂ ಅಜ-ಗಜ ಎನ್ನುವಷ್ಟು ವ್ಯತ್ಯಾಸ ಕಂಡಿದೆ. ಇದನ್ನು ಸ್ವತಃ ಬಿಗ್‌ ಬಾಸ್‌ನ ಸಹ ಸ್ಪರ್ಧಿಗಳೂ ಒಪ್ಪಿಕೊಂಡಿದ್ದಾರೆ!

ಶೋ ಆರಂಭದಲ್ಲಿ ಡ್ರೋಣ್‌ ಪ್ರತಾಪ್‌ ತಾವಾಯ್ತು ತಮ್ಮ ಕೆಲಸವಷ್ಟೇ ಆಯ್ತು ಎಂಬಂತಿರುತ್ತಿದ್ದರು. ಅವರ ಆ ವರ್ತನೇ ಬೇರೆಯರಿಗೂ ಹಿಡಿಸಿರಲಿಲ್ಲ. ಒಬ್ಬೊಬ್ಬರೇ ಇರುತ್ತಿದ್ದ, ಯಾರೊಂದಿಗೂ ಬೆರೆಯದ ಡ್ರೋಣ್‌, ನಂತರ ನಿಧಾನಕ್ಕೆ ಮನೆ ಮಂದಿ ಜತೆ ಬೆರೆಯತೊಡಗಿದ್ದರು. ಆಗ ಅವರು ಸಾಕಷ್ಟು ವಿರೋಧವನ್ನೂ ಎದುರಿಸಬೇಕಾಯ್ತು. ಅದನ್ನು ಎದುರಿಸಿ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ.

ಶೋನಲ್ಲಿ ಎಲ್ಲರೂ ಅವರವರ ಕುಟುಂಬ, ಏಳುಬೀಳಿನ ಬಗ್ಗೆ ಮಾತನಾಡಿಕೊಂಡು, ಆಪ್ತ ಎನಿಸುವವರ ಜತೆಗೆ ಹಂಚಿಕೊಳ್ಳುತ್ತಲೇ ಬರುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತಾಡಿದ್ದು ಕಡಿಮೆಯೇ. ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದೇನೆ, ಅಪ್ಪನ ಜತೆಗೆ ಮಾತನಾಡಿಯೇ ಎಷ್ಟೋ ವರ್ಷಗಳಾದವು ಎಂದು ಹೇಳಿದ್ದರು. ಅದನ್ನು ಬಿಟ್ಟರೆ ಬೇರೆ ವಿಚಾರ ಹೇಳಿರಲಿಲ್ಲ. ಈ ನಡುವೆ ತಂದೆ ತಾಯಿ ಜೊತೆಗೆ ತಂಗಿಯ ಜೊತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಮನದ ಆಸೆ ಹೊರಹಾಕಿದ್ದರು.

ಇನ್ನು ಕಳೆದ ವಾರವಷ್ಟೇ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿ ಡ್ರೋಣ್‌ ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಶೆಗೊಂಡಿದ್ದರು. ಈಗ ವೀಕೆಂಡ್‌ನ ‘ಕಿಚ್ಚನ ಪಂಚಾಯಿತಿ’ಯಲ್ಲಿ ಸುದೀಪ್, ಪ್ರತಾಪ್‌ಗೆ ಒಂದು ಸ್ವೀಟ್ ಸರ್ಪೈಸ್ ಕೊಟ್ಟಿದ್ದಾರೆ. ಈ ಸರ್ಪ್ರೈಸ್‌ ಅಷ್ಟೇ ಭಾವುಕವಾದದ್ದೂ ಆಗಿದೆ.

‘ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ?’ ಎಂದು ಪ್ರತಾಪ್ ಅವರನ್ನು ಕೇಳಿದ್ದಾರೆ. ಅದನ್ನು ಹೇಳುವ ಮೊದಲೇ ಮನೆಯೊಳಗೆ ಪ್ರತಾಪ್ ತಂದೆಯ ಧ್ವನಿ ಮೊಳಗಿದೆ. ಫೋನ್‌ನಲ್ಲಿ ತಂದೆಯ ಧ್ವನಿಯನ್ನು ಕೇಳಿದ ಪ್ರತಾಪ್, ‘ಅಪ್ಪಾ ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ. ಹಾಗಾದರೆ ಪ್ರತಾಪ್ ತಂದೆಯ ಜೊತೆಗೆ ಏನು ಮಾತಾಡಿದರು. ಮಗನ ಕ್ಷಮೆಯನ್ನು ತಂದೆ ಮನ್ನಿಸುತ್ತಾರಾ? ಇದನ್ನು ತಿಳಿದುಕೊಳ್ಳಲು ಇಂದಿನ ಬಿಗ್‌ಬಾಸ್ ವೀಕ್ಷಿಸಬೇಕು.

Whats_app_banner