BBK 10: ಐ ಲವ್‌ ಯೂ, ನೀವೇ ನನ್ನ ಫ್ಯೂಚರ್‌ ಗಂಡ! ಸಂಗೀತಾಳ ಪ್ರೇಮನಿವೇದನೆ ತಿರಸ್ಕರಿಸಿದ ಡ್ರೋಣ್‌ ಪ್ರತಾಪ್‌
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಐ ಲವ್‌ ಯೂ, ನೀವೇ ನನ್ನ ಫ್ಯೂಚರ್‌ ಗಂಡ! ಸಂಗೀತಾಳ ಪ್ರೇಮನಿವೇದನೆ ತಿರಸ್ಕರಿಸಿದ ಡ್ರೋಣ್‌ ಪ್ರತಾಪ್‌

BBK 10: ಐ ಲವ್‌ ಯೂ, ನೀವೇ ನನ್ನ ಫ್ಯೂಚರ್‌ ಗಂಡ! ಸಂಗೀತಾಳ ಪ್ರೇಮನಿವೇದನೆ ತಿರಸ್ಕರಿಸಿದ ಡ್ರೋಣ್‌ ಪ್ರತಾಪ್‌

BBK 10: ಬಿಗ್‌ ಬಾಸ್‌ ಮನೆಯಲ್ಲಿ ಡ್ರೋಣ್‌ ಪ್ರತಾಪ್‌ಗೆ ಸಂಗೀತಾ ಶೃಂಗೇರಿ ಪ್ರೇಮ ನಿವೇದನೆ ಮಾಡಿದ್ದಾರೆ. ಐಲವ್‌ಯೂ ಎಂದು ಹಲವು ಬಾರಿ ಪ್ರತಾಪ್‌ಗೆ ಹೇಳಿದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಪ್ರತಾಪ್‌, ನನ್ನನ್ನು ಬಿಟ್‌ಬಿಡಮ್ಮ ಎಂದು ಬೇಡಿಕೊಂಡಿದ್ದಾರೆ.

BBK 10: ಐ ಲವ್‌ ಯೂ, ನೀವೇ ನನ್ನ ಫ್ಯೂಚರ್‌ ಗಂಡ! ಸಂಗೀತಾಳ ಪ್ರೇಮನಿವೇದನೆ ತಿರಸ್ಕರಿಸಿದ ಡ್ರೋಣ್‌ ಪ್ರತಾಪ್‌
BBK 10: ಐ ಲವ್‌ ಯೂ, ನೀವೇ ನನ್ನ ಫ್ಯೂಚರ್‌ ಗಂಡ! ಸಂಗೀತಾಳ ಪ್ರೇಮನಿವೇದನೆ ತಿರಸ್ಕರಿಸಿದ ಡ್ರೋಣ್‌ ಪ್ರತಾಪ್‌

Bigg boss Kannada Season 10: ಬಿಗ್‌ಬಾಸ್‌ ಸೀಸನ್‌ 10 ಹಲವು ವಿಶೇಷತೆಗಳಿಗೆ ಕಾರಣವಾಗುತ್ತಿದೆ. ಜಗಳ ಕಿತ್ತಾಟಗಳ ನಡುವೆಯೂ ಒಂದಷ್ಟು ಗಮನ ಸೆಳೆಯುವ ಅಂಶಗಳೂ ಆಗಾಗ ಕಣ್ಣಿಗೆ ಕಾಣಿಸುತ್ತಿರುತ್ತವೆ. ಇದೀಗ ಇದೇ ಬಿಗ್‌ಬಾಸ್‌ ಮನೆಯಲ್ಲಿ ಪ್ರೇಮ ನಿವೇದನೆಯೂ ಘಟಿಸಿದೆ. ಕಾರ್ತಿಕ್‌ ಮಹೇಶ್‌ ಜತೆಗೆ ಸಲುಗೆಯಿಂದ ಇರುತ್ತಿದ್ದ ಸಂಗೀತಾ ಶೃಂಗೇರಿ, ನೇರವಾಗಿ ಡ್ರೋಣ್‌ ಪ್ರತಾಪ್‌ ಬಳಿ ಪ್ರೇಮ ನಿವೇದನೆ ಮಾಡಿದ್ದಾರೆ. I Love You ಎಂದು ಪ್ರಪೋಸ್‌ ಸಹ ಮಾಡಿದ್ದಾರೆ. ಅಂದಹಾಗೆ, ಇದು ಸೀರಿಯಸ್‌ ಆಗಿ ಅಲ್ಲ, ಬದಲಿಗೆ ತಮಾಷೆಗೆ.

ಬಿಗ್‌ಬಾಸ್‌ನ ಇತರೆ ಸ್ಪರ್ಧಿಗಳಾದ ನೀತು, ನಮ್ರತಾ ಮತ್ತು ಸಂಗೀತಾ ಒಟ್ಟಿಗೆ ಸೇರಿ ಡ್ರೋಣ್‌ ಪ್ರತಾಪ್‌ ಬಳಿ ಕುಳಿತು, ಅವರ ಜತೆಗೆ ತಮಾಷೆಯ ಮಾತು ಆರಂಭಿಸಿದ್ದಾರೆ. ಮಾತನಾಡುತ್ತಲೇ ಡ್ರೋಣ್‌ ಪ್ರತಾಪ್‌ ಬಳಿ ಪ್ರೀತಿಸುವ ಹುಡುಗಿ ಬಗ್ಗೆ ಬಾಯಿ ಬಿಡಿಸಲು ಟ್ರೈ ಮಾಡಿದ್ದಾರೆ ಸಂಗೀತಾ. ಇದರಿಂದ ಕೊಂಚ ನಾಚಿಕೊಂಡ ಡ್ರೋಣ್‌, ಬಿಟ್ಟುಬಿಡಮ್ಮ, ನನಗೆ ನನ್ನದೇ ಆದ ಒಂದಷ್ಟು ಗುರಿಗಳಿದ್ದಾವೆ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನೆ ಬಿಡದ ಸಂಗೀತಾ, ನಿಮ್ಮ ಮನೆಯಲ್ಲಿ ನಾನೇ ಅಪ್ಪನನ್ನ ಒಪ್ಪಿಸ್ತಿನಿ ಅಂತಲೂ ಹೇಳಿದ್ದಾರೆ.‌

ನಮ್ಮ ಮನೆಯಲ್ಲಿ ಒಪ್ಪಲ್ಲ. ನನಗೆ ಮುಂದೆ ಕೆರಿಯರ್‌ ಇದೆ. ನಮ್ಮಪ್ಪ ನೋಡಿದ ಹುಡುಗಿಯನ್ನೇ ನಾನು ಮದುವೆ ಆಗಬೇಕು. ನನ್ನನ್ನು ಬಿಟ್‌ಬಿಡಮ್ಮ ಎಂದಿದ್ದಾರೆ ಡ್ರೋಣ್.‌ ಈಗ ಆ ಹುಡುಗಿ ನಾನೇ. ನಾನೇ ನಿಮ್ಮ ತಂದೆಯನ್ನು ಒಪ್ಪಿಸ್ತೀನಿ ಎಂದಿದ್ದಾರೆ ಸಂಗೀತಾ. ಸಂಗೀತಾರ ಮಾತಿಗೆ ಪ್ರತಾಪ್‌ ಬಿದ್ದು ನಗಾಡಿದ್ದಾರೆ. ಯಾಕೆ ನಗ್ತಿದ್ದೀಯಾ, ಐ ಲವ್ ಯೂ ಅಲ್ವಾ.. ಐ ಲವ್ ಯೂ ಎಂದು ಪ್ರೇಮ ನಿವೇದನೆ ಮಾಡಿದ್ದಾರೆ.

ಸಂಗೀತಾ ಐ ಲವ್‌ ಯೂ ಎನ್ನುತ್ತಿದ್ದಂತೆ, ನನಗೆ ಇಷ್ಟ ಇಲ್ಲ ಎಂದಿದ್ದಾರೆ ಪ್ರತಾಪ್.‌ ಮತ್ತೆ ಮಾತು ಮುಂದುವರಿಸಿದ ಸಂಗೀತಾ ನಾನು ಇಷ್ಟ ಇಲ್ವಾ ಅಥವಾ ನಿಮಗೆ ನಾನು ಇಷ್ಟ ಇಲ್ವಾ? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಯಾಕೆ ನಗ್ತಿದ್ಧೀರಾ.. ನಾನು ನಿಮಗೆ ಫನ್ನಿ ಆಗಿ ಕಾಣ್ತಿದ್ಧೀನಾ? ನಾನು ನಿಮ್ಮ ಕಣ್ಣಿಗೆ ಚೆನ್ನಾಗಿ ಕಾಣಿಸ್ತಿಲ್ವಾ? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹೌದು ಚೆನ್ನಾಗಿ ಕಾಣಿಸ್ತಿದ್ದೀರಾ. ಅಕ್ಕನ ತರಹ ಕಾಣ್ತಿದ್ದೀರಾ ಎಂದಿದ್ದಾರೆ. ಅದಕ್ಕೆ ಉತ್ತರವಾಗಿ ನೀವು ನನಗೆ ಲವರ್ ತರಹ ಕಾಣ್ತಿದ್ಧೀರಾ. ನನ್ನ ಫ್ಯೂಚರ್‌ ಹಸ್ಬೆಂಡ್‌ ನಿಮ್ಮಲ್ಲಿ ಕಾಣ್ತಿದೆ ಎಂದಿದ್ದಾರೆ ಸಂಗೀತಾ.

ಇಲ್ಲಿಗೂ ಇನ್ನೂ ಮಾತು ಮುಗಿದಿಲ್ಲ. ನನಗೆ ನೀವು ಅಕ್ಕನ ತರಹ ಕಾಣ್ತಿದ್ದೀರಾ ಎಂದು ಡ್ರೋಣ್‌ ಹೇಳುತ್ತಿದ್ದಂತೆ, ಹಾಗೆಲ್ಲಾ ಹೇಳಬೇಡಿ. ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ. ನಿಮ್ಮನ್ನ ನೋಡಿದಾಗಿನಿಂದ ನನಗೆ ಕ್ರಷ್ ಆಗಿಬಿಟ್ಟಿದೆ ಎಂದಿದ್ದಾರೆ. ಆದರೆ, ನನ್ನ ಬಳಿ ದುಡ್ಡಿಲ್ಲ ಎಂಬ ಪ್ರತಾಪ್‌ ಮಾತಿಗೆ, ದುಡ್ಡಿಗಾಗಿ ಯಾರಾದರೂ ಪ್ರೀತಿ ಮಾಡ್ತಾರಾ? ಮದುವೆ ಆಗ್ತಾರಾ? ನಿಮ್ಮ ಸ್ಮೈಲ್, ಹೃದಯ, ಉಸ್ತುವಾರಿ ನೋಡಿ ನಾನು ಫ್ಲಾಟ್‌ ಆಗ್ಬಿಟ್ಟೆ ಎಂದು ಮಾತು ಮುಂದುವರಿಸಿದ್ದಾರೆ. ಹೋಗಲಿ ಬಾಯ್‌ಫ್ರೆಂಡ್‌ ಗರ್ಲ್‌ ಫ್ರೆಂಡ್‌ ಆಗಿಯಾದ್ರೂ ಇರೋಣ ಎಂದಿದ್ದಾರೆ ಸಂಗೀತಾ.

Whats_app_banner