Kannada Serial TRP: ಹಿರಿದಾಗುತ್ತಿದೆ ಬಿಗ್‌ಬಾಸ್‌ ಕನ್ನಡ ವೀಕ್ಷಕ ಬಳಗ; ಟಿಆರ್‌ಪಿ ವಿಚಾರದಲ್ಲಿ ಆನೆ ನಡೆದಿದ್ದೇ ದಾರಿ
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಹಿರಿದಾಗುತ್ತಿದೆ ಬಿಗ್‌ಬಾಸ್‌ ಕನ್ನಡ ವೀಕ್ಷಕ ಬಳಗ; ಟಿಆರ್‌ಪಿ ವಿಚಾರದಲ್ಲಿ ಆನೆ ನಡೆದಿದ್ದೇ ದಾರಿ

Kannada Serial TRP: ಹಿರಿದಾಗುತ್ತಿದೆ ಬಿಗ್‌ಬಾಸ್‌ ಕನ್ನಡ ವೀಕ್ಷಕ ಬಳಗ; ಟಿಆರ್‌ಪಿ ವಿಚಾರದಲ್ಲಿ ಆನೆ ನಡೆದಿದ್ದೇ ದಾರಿ

ಬಿಗ್‌ಬಾಸ್‌ ಕನ್ನಡ ಸದ್ಯ ಕಿರುತೆರೆ ವೀಕ್ಷಕರ ಹಾಟ್‌ ಫೇವರಿಟ್‌ ಶೋ ಎನಿಸಿಕೊಳ್ಳುವತ್ತ ದಾಪುಗಾಲಿಡುತ್ತಿದೆ. ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ವೀಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ ಈ ಶೋ.

Kannada Serial TRP: ಹಿರಿದಾಗುತ್ತಿದೆ ಬಿಗ್‌ಬಾಸ್‌ ಕನ್ನಡ ವೀಕ್ಷಕ ಬಳಗ; ಟಿಆರ್‌ಪಿ ವಿಚಾರದಲ್ಲಿ ಆನೆ ನಡೆದಿದ್ದೇ ದಾರಿ
Kannada Serial TRP: ಹಿರಿದಾಗುತ್ತಿದೆ ಬಿಗ್‌ಬಾಸ್‌ ಕನ್ನಡ ವೀಕ್ಷಕ ಬಳಗ; ಟಿಆರ್‌ಪಿ ವಿಚಾರದಲ್ಲಿ ಆನೆ ನಡೆದಿದ್ದೇ ದಾರಿ

Bigg Boss Kannada TRP: ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್‌ ಸೀಸನ್‌ 10 ಹತ್ತು ಹಲವು ವಿಚಾರಕ್ಕೆ ಸದ್ದು ಮಾಡಿದೆ. ಕಾಂಟ್ರವರ್ಸಿಗಳ ಮೂಲಕ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಅದರಲ್ಲೂ ಬಿಗ್‌ ಬಾಸ್‌ ಮನೆಯಲ್ಲಿನ ಕಳ್ಳಾಟಗಳೂ ವೀಕ್ಷಕರ ಗಮನಕ್ಕೆ ಬಂದಿವೆ. ಸೋಷಿಯಲ್‌ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಹೀಗೆ ಸದಾ ಸುದ್ದಿಯಲ್ಲಿರುವ ಬಿಗ್‌ಬಾಸ್‌ ವಾರದ ಟಿಆರ್‌ಪಿ ವಿಚಾರದಲ್ಲೂ ಮುಂದಡಿ ಇರಿಸಿದೆ.

ಬಳೆ ವಿಚಾರದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವೀಕ್ಷಕರ ವರ್ಗದಿಂದಲೂ ಹೆಚ್ಚು ಟೀಕೆಗೆ ಗುರಿಯಾಗಿತ್ತು. ಅದಕ್ಕೆ ತಕ್ಕಂತೆ ಕಿಚ್ಚನ ವಾರದ ಪಂಚಾಯ್ತಿಯಲ್ಲಿ ವಿನಯ್‌ಗೆ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದರು ಸುದೀಪ್.‌ ಅದಾದ ಬಳಿಕ ಕಳೆದ ವಾರ ಡ್ರೋಣ್‌ ಪ್ರತಾಪ್‌ಗೆ ಕಿಚ್ಚನ ಕಡೆಯಿಂದ ಚಪ್ಪಾಳೆಯೂ ಸಿಕ್ಕಿತ್ತು. ಆ ಏಪಿಸೋಡ್‌ ಸಹ ಹೆಚ್ಚು ವೀಕ್ಷಣೆ ಕಂಡಿತ್ತು. ಇದೆಲ್ಲದರ ನಡುವೆ ಕಳೆದ ವಾರದ ಎಲಿಮಿನೇಷನ್‌ ವಿಚಾರಕ್ಕೆ ಸಂಬಂಧಿಸಿದಂತೆಯೂ ವರ್ತೂರು ಸಂತೋಷ್‌ ಅವರ ಹೈಡ್ರಾಮಾ ಕುತೂಹಲ ಮೂಡಿಸಿತ್ತು.

ಅದರಂತೆ ಇದೆಲ್ಲದರ ಏರಿಳಿತಗಳಿಂದ ಟಿಆರ್‌ಪಿ ವಿಚಾರದಲ್ಲೂ ಬಿಗ್‌ಬಾಸ್‌ ಪರಾಕ್ರಮ ಮುಂದುವರಿಸಿದೆ. ಆನೆ ನಡೆದಿದ್ದೇ ದಾರಿ ಎಂಬಂತೆ, ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ವೀಕ್ಷಕ ವರ್ಗವನ್ನು ಹಿರಿದಾಗಿಸಿಕೊಳ್ಳುತ್ತಿದೆ ಬಿಗ್‌ಬಾಸ್‌ 10ನೇ ಸೀಸನ್‌. ಈ ಹೈಪ್‌ಗೆ ತಕ್ಕಂತೆ, ವಾರದ ದಿನಗಳಲ್ಲಿ7.4 ಟಿಆರ್‌ಪಿ ಪ್ರಾಪ್ತವಾದರೆ, ವಾರಾಂತ್ಯದಲ್ಲಿಯೂ ಅದರಲ್ಲೂ ಭಾನುವಾರ 9.6 ಟಿಆರ್‌ಪಿ ಪಡೆದುಕೊಂಡಿದೆ.

ಇನ್ನು ಸೀರಿಯಲ್‌ ವಿಚಾರದಲ್ಲಿಯೂ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳಾಗಿವೆ. ಎಂದಿನಂತೆ ಕಳೆದ ಕೆಲವು ತಿಂಗಳಿಗಳಿಂದ ಮೊದಲ ಸ್ಥಾನದಲ್ಲಿಯೇ ಓಟಕ್ಕಿಳಿದಿರುವ ಪುಟ್ಟಕ್ಕನ ಮಕ್ಕಳು, ಆ ಸ್ಥಾನದಲ್ಲಿಯೇ ಭದ್ರವಾಗಿದೆ. ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಮುಂದುವರಿದಿದೆ. ಅಮೃತಧಾರೆ ಮೂರನೇ ಸ್ಥಾನದಲ್ಲಿದ್ದರೆ, ಶ್ರೀರಸ್ತು ಶುಭಮಸ್ತು ನಾಲ್ಕನೇ ಸ್ಥಾನದಲ್ಲಿದೆ. ಐದರಲ್ಲಿ ಸತ್ಯ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್‌ಗಳಿವೆ.

ಆರನೇ ಸ್ಥಾನದಲ್ಲಿವೆ ನಾಲ್ಕು ಸೀರಿಯಲ್ಸ್‌

ಇನ್ನು ಬಿಗ್‌ಬಾಸ್‌ ಶುರುವಾದಾಗಿನಿಂದ ಸೀತಾ ರಾಮ ಸೀರಿಯಲ್‌ ಕುಸಿತ ಕಂಡಿದೆ. ಸದ್ಯ ಈ ಸೀರಿಯಲ್‌ ಆರನೇ ಸ್ಥಾನದಲ್ಲಿದೆ. ಇದರ ಜತೆಗೆ ಹಿಟ್ಲರ್‌ ಕಲ್ಯಾಣ, ರಾಮಾಚಾರಿ ಮತ್ತು ಕೆಂಡ ಸಂಪಿಗೆ ಸಹ ಆರನೇ ಸ್ಥಾನದಲ್ಲಿವೆ.

Whats_app_banner