Brundavana Serial: ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು

Brundavana Serial: ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು

Brindavana Kannada Serial Today Episode Mar 4: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಸುಧಾಮೂರ್ತಿ ಅಪಾಯದಿಂದ ಪಾರಾಗಿ ತಾನು ಬದುಕುಳಿಯಲು ಪುಷ್ಪಾ ಕಾರಣ ಎಂದು ಎಲ್ಲರೆದುರು ಹೇಳುತ್ತಾರೆ. ಇತ್ತ ಕಾಲೇಜಿನಲ್ಲಿ ಸಹನಾ ಆಕಾಶ್‌ ಬರುವಿಕೆಗಾಗಿ ಕಾಯುತ್ತಿರುತ್ತಾಳೆ.

ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು
ತಾನು ಬದುಕುಳಿಯಲು ಪುಷ್ಪಾಳೇ ಕಾರಣ ಎನ್ನುವ ಸುಧಾಮೂರ್ತಿ; ಇನ್ನಾದ್ರೂ ಬದಲಾಗುತ್ತಾ ಆಕಾಶ್‌ ನಿಲುವು

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.4) ಸಂಚಿಕೆಯಲ್ಲಿ ಅಪಾಯದಿಂದ ಪಾರಾಗುವ ಸುಧಾಮೂರ್ತಿ ಹಿಂದಿನ ದಿನ ತಮಗೆ ಎದೆನೋವು ಬಂದಿದ್ದು, ನೋವಿನಿಂದ ನರಳಾಡಿದ ಕ್ಷಣಗಳ ಬಗ್ಗೆ ಮನೆಯವರ ಬಳಿ ಹೇಳುತ್ತಿರುತ್ತಾಳೆ. ಅಲ್ಲದೇ ಪುಷ್ಪಾ ಆ ವೇಳೆಗೆ ತಮ್ಮ ಕೋಣೆಗೆ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆ ಹೊತ್ತಿಗೆ ಅವರ ಮಾತಿಗೆ ಅಡ್ಡಬಾಯಿ ಹಾಕುವ ಸುಧಾಮೂರ್ತಿ ಮುಂದೆ ಆಗಿದ್ದು ನಾನು ಹೇಳ್ತೀನಿ ಎಂದು ಅವರ ಮಾತನ್ನು ತಡೆಯುತ್ತಾರೆ. ಅಲ್ಲದೇ ʼಅಲ್ಲಿಗೆ ಬಂದ ಪುಷ್ಪಾ ನಿಮ್ಮ ಪ್ರಾಣ ತೆಗೆಯಲು ನೋಡಿದ್ದಾಳೆ. ನೀವು ಹಳ್ಳಿಯಿಂದ ಅವಳನ್ನು ಈ ಮನೆಗೆ ಸೊಸೆ ಮಾಡಿಕೊಂಡು ಮೆರೆಸಿದ್ರಿ. ಆದರೆ ಅವಳು ನಿಮ್ಮ ಜೀವ ತೆಗೆಯಲು ಹೊರಟಿದ್ದಳುʼ ಎಂದು ಕುಹುಕದಿಂದ ಮಾತನಾಡುತ್ತಾರೆ. ಇದನ್ನು ಕೇಳಿ ಕೋಪಗೊಳ್ಳುವ ಸುಧಾಮೂರ್ತಿ ಪುಷ್ಪಾ ನನ್ನ ಪ್ರಾಣ ತೆಗೆದಿಲ್ಲ ಅವಳು ನನ್ನನ್ನು ಉಳಿಸಿದ್ದಾಳೆ ಎಂದು ಮನೆಯವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಅಲ್ಲದೇ ಪುಷ್ಪಗಾಗಿ ಹುಡುಕಾಟ ನಡೆಸುತ್ತಾರೆ. 

ಆದರೆ ಮನೆಯಲ್ಲರೆಲ್ಲೂ ಅಲ್ಲೇ ಇದ್ದರೂ ಪುಷ್ಪಾ ಮಾತ್ರ ಕಾಣಿಸುವುದಿಲ್ಲ. ಪುಷ್ಪಾ ಎಲ್ಲಿ ಎಂದು ಅಜ್ಜಮ್ಮ (ಸುಧಾಮೂರ್ತಿ) ಕೇಳ್ತಿದ್ರೆ ಮತ್ತೆ ವ್ಯಂಗ್ಯವಾಡುವ ಸುಧಾಮೂರ್ತಿ ಪುಷ್ಪಾ ಬೆಳಿಗ್ಗೆ 5 ಗಂಟೆಗೆ ಎದ್ದು ಮನೆ ಬಿಟ್ಟು ಹೋಗಿದ್ದಾಳೆ. ನಾವೆಲ್ಲರೂ ನಿಮ್ಮ ಬಳಿಗೆ ಬರುವುದು 5 ನಿಮಿಷ ತಡವಾಗಿದ್ರೆ, ಆಕೆ ನಿಮ್ಮನ್ನು ಯಮಲೋಕಕ್ಕೆ ಕಳುಹಿಸುತ್ತಿದ್ದಳುʼ ಎಂದು ವ್ಯಂಗ್ಯ ಮಾಡುತ್ತಾರೆ. ಆಗ ಕೋಪಗೊಳ್ಳುವ ಸುಧಾಮೂರ್ತಿ ಅವರ ಹಿರಿಯ ಮಗ ಡಾ. ಕರುಣಾಕರ ಸತ್ಯಮೂರ್ತಿಯನ್ನು ಉದ್ದೇಶಿಸಿ ʼಭಾವ ಸುಮ್ಮ ಸುಮ್ಮನೆ ಏನೇನೋ ಮಾತನಾಡಬೇಡಿ, ನಾನು ಹೇಳಿದ್ದು ಪುಷ್ಪಾ ಅಮ್ಮನನ್ನು ನೋಡೋದು 5 ನಿಮಿಷ ತಡವಾಗಿದ್ರೆ, ಕೃತಕ ಉಸಿರಾಟಕ್ಕೆ ಸಹಾಯ ಮಾಡದೇ ಇದ್ರೆ ಅಮ್ಮನ ಪ್ರಾಣಕ್ಕೆ ಅಪಾಯ ಆಗ್ತಾ ಇತ್ತು ಅಂತ ಹೊರತು ನಾವು ನೋಡೋದು ಅಂತ ಹೇಳಿದ್ದಲ್ಲ, ನೀವು ಅದನ್ನು ಅಪಾರ್ಥ ಮಾಡಿಕೊಂಡ್ರೆ ನಾವೇನು ಮಾಡೋದುʼ ಎಂದು ಗದರುತ್ತಾಳೆ.

ದೇವಸ್ಥಾನದಲ್ಲಿ ಹೆಜ್ಜೆ ನಮಸ್ಕಾರ ಮಾಡುವ ಪುಷ್ಪಾ

ಇತ್ತ ಸುಧಾಮೂರ್ತಿ ಮನೆಯವರ ಬಳಿ ಪುಷ್ಪಾ ಎಲ್ಲಿ ಹುಡುಕಿ ಎಂದು ಹೇಳುತ್ತಿದ್ದರೆ, ಕೈಯಲ್ಲಿ ದೇವರ ಪ್ರಸಾದ ಹಿಡಿದು ಬರುವ ಪುಷ್ಪಾ ಅಜ್ಜಮ್ಮನ ಕೋಣೆ ಪ್ರವೇಶ ಮಾಡುತ್ತಾಳೆ. ಪುಷ್ಪಾಳನ್ನು ನೋಡಿದ ಅಜ್ಜಿಗೆ ಸಂತಸ ಹೆಚ್ಚುತ್ತದೆ. ಪುಷ್ಪಾಳನ್ನ ಕರೆದು ತನ್ನ ಪಕ್ಕ ಕೂರಿಸಿಕೊಳ್ಳುವ ಸುಧಾಮೂರ್ತಿ ಆಕೆಯನ್ನು ಮನಸಾರೆ ಹೊಗಳುತ್ತಾರೆ.

ಪುಷ್ಪಾ ತನ್ನ ಎರಡನೇ ತಾಯಿ ಎಂದ ಸುಧಾಮೂರ್ತಿ

ಪುಷ್ಪಾ ತನ್ನ ಜೀವ ಉಳಿಸಿದ ಬಗ್ಗೆ ಮನೆಯವರ ಮುಂದೆ ವಿವರವಾಗಿ ಹೇಳುವ ಸುಧಾಮೂರ್ತಿ ʼನನಗೆ ಜನ್ಮ ಕೊಟ್ಟಿದ್ದು ನನ್ನ ತಾಯಿಯಾದ್ರೆ, ಮರುಜನ್ಮ ಕೊಟ್ಟಿದ್ದು ಪುಷ್ಪಾ, ಆಕೆ ನನಗೆ ಎರಡನೇ ತಾಯಿʼ ಎಂದು ಕಣ್ಣೀರು ಸುರಿಸುತ್ತಾರೆ. ಅಲ್ಲದೇ ಪುಷ್ಪಾ ಇರುವವರೆಗೂ ತನಗೆ ಏನೂ ಆಗಲು ಸಾಧ್ಯವಿಲ್ಲ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ. ಇತ್ತ ಮನೆಯವರು ಪುಷ್ಪಾ ಮೇಲೆ ಸುಮ್ಮನೆ ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಾರೆ. ಅತ್ತ ಆಕಾಶ್‌ಗೆ ನಿಧಾನಕ್ಕೆ ಪುಷ್ಪಾ ಮೇಲಿನ ಅಭಿಪ್ರಾಯ ಬದಲಾಗುತ್ತದೆ. ತಾನು ಏನು ಎತ್ತ ತಿಳಿಯದೇ ಪುಷ್ಪಾ ಮೇಲೆ ರೇಗಿದೆ ಎನ್ನುವ ಭಾವ ಮೂಡುತ್ತದೆ.

ಆಕಾಶ್‌ಗಾಗಿ ಪರಿತಪಿಸುವ ಸಹನಾ

ಅತ್ತ ಆಕಾಶ್‌ಗೆ ನಿಧಾನಕ್ಕೆ ಹೆಂಡತಿ ಮೇಲಿನ ಅಭಿಪ್ರಾಯ ಬದಲಾಗುತ್ತಿದ್ದರೆ, ಇತ್ತ ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಹೆಚ್ಚುತ್ತಿದೆ. ಕಾಲೇಜಿಗೆ ಆಕಾಶ್‌ ಬಂದಿಲ್ಲ ಎಂದು ಅವನ ದಾರಿಯನ್ನೇ ಕಾಯುತ್ತಿದ್ದ ಸಹನಾಗೆ ಗೆಳತಿ ಮಿಂಚು ನೀನು ಆಕಾಶ್‌ ಪ್ರೀತಿ ಬಿದ್ದಿದ್ದೀಯಾ ಎಂದು ಒತ್ತಿ ಹೇಳುತ್ತಾಳೆ. ಆದರೆ ಮನಸ್ಸಿನಲ್ಲಿ ಪ್ರೀತಿ ಇದ್ರು ಬಾಯಲ್ಲಿ ಇಲ್ಲ ಎಂದು ಹೇಳುತ್ತಾಳೆ ಸಹನಾ.

ಅಜ್ಜಿಯ ಮಾತು ಕೇಳಿ ಪುಷ್ಪಾ ಮೇಲೆ ಆಕಾಶ್‌ಗಿದ್ದ ಅಭಿಪ್ರಾಯ ಬದಲಾಗುತ್ತಾ, ಮದುವೆ ಸಮಯದಲ್ಲಿ ಪುಷ್ಪಾ ಹಣ ಪಡೆದಿಲ್ಲ ಎಂಬ ಸತ್ಯ ಆಕಾಶ್‌ಗೆ ತಿಳಿಯೋದು ಯಾವಾಗ, ಸಹನಾ-ಆಕಾಶ್‌ ನಡುವೆ ಪ್ರೀತಿಯಾಗುತ್ತಾ, ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner