ಕನ್ನಡ ಸುದ್ದಿ  /  ಮನರಂಜನೆ  /  Suvarna Saavira Sambrama: ಸುವರ್ಣ ಸಾವಿರ ಸಂಭ್ರಮ; ಯುಗಾದಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ

Suvarna Saavira Sambrama: ಸುವರ್ಣ ಸಾವಿರ ಸಂಭ್ರಮ; ಯುಗಾದಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ ಮುನ್ನುಗ್ಗುತ್ತಿರುವ ತ್ರಿವಳಿ ಕಾರ್ಯಕ್ರಮಗಳಾದ 'ಸುವರ್ಣ ಸಂಕಲ್ಪ', 'ಬೊಂಬಾಟ್ ಭೋಜನ' ಹಾಗೂ 'ಸುವರ್ಣ ಸೂಪರ್ ಸ್ಟಾರ್' ಪ್ರೇಕ್ಷಕರ ಮನಗೆದ್ದಿವೆ. ಹೀಗಾಗಿ 'ಸುವರ್ಣ ಸಾವಿರ ಸಂಭ್ರಮ'ದ ಅದ್ದೂರಿ ವೇದಿಕೆಯಲ್ಲಿ ಸಾವಿರದ ಸಾಧಕರಿಗೆ ವಿಶೇಷ ಗೌರವ ಸಲ್ಲಿಸಲಾಯ್ತು

Suvarna Saavira Sambrama: ಸುವರ್ಣ ಸಾವಿರ ಸಂಭ್ರಮ; ಯುಗಾದಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ
Suvarna Saavira Sambrama: ಸುವರ್ಣ ಸಾವಿರ ಸಂಭ್ರಮ; ಯುಗಾದಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ವಿಶೇಷ ಕಾರ್ಯಕ್ರಮ

Suvarna Saavira Sambrama: ಸ್ಟಾರ್ ಸುವರ್ಣ ವಾಹಿನಿಯು ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದೆ. ಇದೀಗ ವರ್ಷದ ಮೊದಲ ಹಬ್ಬ, ಮನೆಮಂದಿಯೆಲ್ಲಾ ಒಂದಾಗಿ ಸೇರಿ ಆಚರಿಸುವ ಯುಗಾದಿ ಹಬ್ಬವನ್ನು ಇನ್ನಷ್ಟು ದುಪ್ಪಟ್ಟಾಗಿಸಲು ಸುವರ್ಣ ಸಾವಿರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ತ್ರಿವಳಿ ಕಾರ್ಯಕ್ರಮಗಳಾದ 'ಸುವರ್ಣ ಸಂಕಲ್ಪ', 'ಬೊಂಬಾಟ್ ಭೋಜನ' ಹಾಗು 'ಸುವರ್ಣ ಸೂಪರ್ ಸ್ಟಾರ್' ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿದೆ. ಹೀಗಾಗಿ 'ಸುವರ್ಣ ಸಾವಿರ ಸಂಭ್ರಮ'ದ ಅದ್ದೂರಿ ವೇದಿಕೆಯಲ್ಲಿ ಸಾವಿರದ ಸಾಧಕರಿಗೆ ವಿಶೇಷ ಗೌರವ ಸಲ್ಲಿಸಲಾಯ್ತು.

ಡಾ. ಶ್ರೀ ಗೋಪಾಲಕೃಷ್ಣ ಗುರೂಜಿ, ಸುಜಾತ ಅಕ್ಷಯ, ಸಿಹಿ ಕಹಿ ಚಂದ್ರು ಹಾಗೂ ಶಾಲಿನಿ ಅವರಿಗೆ ವಾಹಿನಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಈ ಸಾಧಕರು ತಮ್ಮ ಪಯಣವನ್ನು ಮೆಲುಕು ಹಾಕಿ, ಸಂತೋಷದಾಯಕ ಕ್ಷಣವನ್ನು ಖುಷಿಯಿಂದ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರೂ ಹಾಜರಾಗಿದ್ದು ವಿಶೇಷ.

ಕಿರುತೆರೆಗೆ ಬಂದ ಯುವ

ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಹೆಸರಾಂತ ಕಲಾವಿದರು 'ಸುವರ್ಣ ಸಾವಿರ ಸಂಭ್ರಮ' ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ವಿಶೇಷ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಕನ್ನಡ ಜನತೆಯ ಮನಗೆದ್ದ 'ಯುವ' ಸಿನಿಮಾದ ನಟ ಯುವರಾಜಕುಮಾರ್ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು.

ಹಲವು ಕಲಾವಿದರು ಭಾಗಿ

ಭರ್ಜರಿ ಡಾನ್ಸ್‌ನೊಂದಿಗೆ ಅನುಪಮಾ ಕೇಳಿದ ಪ್ರಶ್ನೆಗಳಿಗೆ ಬಿಂದಾಸ್ ಆಗಿ ಉತ್ತರಿಸಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದರು. ಜೊತೆಗೆ ನಟ ಶರಣ್, ಕಾಂತಾರದ ಬೆಡಗಿ ಸಪ್ತಮಿ ಗೌಡ, ನಟಿ ಅಮೃತ ಅಯ್ಯಂಗಾರ್, ಪೃಥ್ವಿ ಅಂಬಾರ್, ಪದ್ಮಶ್ರೀ ಜೋಗತಿ ಮಂಜಮ್ಮ ಸೇರಿ ಇನ್ನು ಅನೇಕ ಕಲಾವಿದರು ಭಾಗಿಯಾಗಿದ್ದರು. ಅದ್ದೂರಿ ಸಂಭ್ರಮದ ವೇದಿಕೆಯಲ್ಲಿ ಅತ್ಯದ್ಭುತವಾದ ಗಾಯನದಿಂದ ಆಲ್ ಓಕೆ ಅಬ್ಬರಿಸಿದರೆ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಪವರ್ ಪ್ಯಾಕ್ ನೃತ್ಯವನ್ನು ಡೆಡಿಕೇಟ್ ಮಾಡಲಿದ್ದಾರೆ ನಟ ಪೃಥ್ವಿ ಅಂಬರ್.

ವಾರಾಂತ್ಯಕ್ಕೆ ಸ್ಟಾರ್‌ ಸುವರ್ಣದಿಂದ ಮನರಂಜನೆ

ಇನ್ನು ಸುವರ್ಣ ಪರಿವಾರ ಮೋಸ್ಟ್ ಪಾಪ್ಯುಲರ್ ಜೋಡಿಯೆಂದೇ ಖ್ಯಾತಿಗಳಿಸಿರುವ ವಿಕ್ರಂ-ವೇದಾ ಹಾಗು ಸೂರ್ಯ- ಮೀನಾ ಮೈನವಿರೇಳಿಸುವಂತೆ ಹೆಜ್ಜೆ ಹಾಕಿದ್ದು ವೇದಿಕೆಯಲ್ಲಿ ಭರ್ಜರಿ ಮನರಂಜನೆ ನೀಡಲಿದ್ದಾರೆ. ನಟಿ ಅಮೃತ ಅಯ್ಯಂಗಾರ್ ಅವರ ಸ್ವಯಂವರ ವೀಕ್ಷಕರಿಗೆ ಇನ್ನಷ್ಟು ಮಜಾ ನೀಡಲಿದೆ. ಯುಗಾದಿ ಹಬ್ಬದ ಪ್ರಯುಕ್ತ ಮನರಂಜನೆಯ ಮಹಾಪೂರವನ್ನೇ ಹೊತ್ತು ತರ್ತಿದೆ 'ಸುವರ್ಣ ಸಾವಿರ ಸಂಭ್ರಮ'. ಈ ಕಾರ್ಯಕ್ರಮ ಭಾನುವಾರ (ಏ. 7) ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

IPL_Entry_Point