ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ನನಗೆ ಈ ವರ್ಕೌಟ್‌ ಹೆಚ್ಚು ಖುಷಿ ನೀಡುತ್ತದೆ; ರಶ್ಮಿಕಾ ಮಂದಣ್ಣ ಹಂಚಿಕೊಂಡ್ರು ಸಖತ್‌ ಎಕ್ಸರ್‌ಸೈಸ್‌ ವಿಡಿಯೋ

Rashmika Mandanna: ನನಗೆ ಈ ವರ್ಕೌಟ್‌ ಹೆಚ್ಚು ಖುಷಿ ನೀಡುತ್ತದೆ; ರಶ್ಮಿಕಾ ಮಂದಣ್ಣ ಹಂಚಿಕೊಂಡ್ರು ಸಖತ್‌ ಎಕ್ಸರ್‌ಸೈಸ್‌ ವಿಡಿಯೋ

Rashmika Mandanna Workout: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ವರ್ಕೌಟ್‌ ಮಾಡುತ್ತಿರುವ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನನಗೆ ಕೋರ್‌ ಸದೃಢಗೊಳಿಸುವ ವರ್ಕೌಟ್‌ ಹೆಚ್ಚು ಖುಷಿ ನೀಡುತ್ತದೆ ಎಂದು ಅವರು ಕ್ಯಾಪ್ಷನ್‌ ನೀಡಿದ್ದಾರೆ.

Rashmika Mandanna: ನನಗೆ ಈ ವರ್ಕೌಟ್‌ ಹೆಚ್ಚು ಖುಷಿ ನೀಡುತ್ತದೆ ಎಂದ ರಶ್ಮಿಕಾ ಮಂದಣ್ಣ
Rashmika Mandanna: ನನಗೆ ಈ ವರ್ಕೌಟ್‌ ಹೆಚ್ಚು ಖುಷಿ ನೀಡುತ್ತದೆ ಎಂದ ರಶ್ಮಿಕಾ ಮಂದಣ್ಣ

ಬೆಂಗಳೂರು: ಕನ್ನಡದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ಟಾಲಿವುಡ್‌ಗೆ ನೆಗೆದು ಬಳಿಕ ಬಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದಿರುವ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಹಿಂದೆ ಹಾರ್ಡ್‌ ವರ್ಕ್‌ ಇರುವುದು ಸುಳ್ಳಲ್ಲ. ಇದೇ ಸಮಯದಲ್ಲಿ ತಮ್ಮ ಸೌಂದರ್ಯ, ಫಿಟ್ನೆಸ್‌ ಕುರಿತು ಅತೀವ ಕಾಳಜಿ ಹೊಂದಿದ್ದಾರೆ ಅನಿಮಲ್‌ ನಟಿ. ಆಗಾಗ ತನ್ನ ವರ್ಕೌಟ್‌ ವಿಡಿಯೋಗಳನ್ನು, ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ವರ್ಕೌಟ್‌ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಅನಿಮಲ್‌, ಪುಷ್ಪಾ: ದಿ ರೈಸ್‌, ವಾರಿಸು, ಗೀತಾ ಗೋವಿಂದಮ್‌, ಡಿಯರ್‌ ಕಾಮ್ರೆಡ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರು ವರ್ಕೌಟ್‌ ಮಾಡುತ್ತಿರುವ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ನನಗೆ ಕೋರ್‌ ಸದೃಢಗೊಳಿಸುವ ವರ್ಕೌಟ್‌ ಮಾಡುತ್ತಿರುವ ಸಂದರ್ಭವು ಅತೀವ ಸಂತೋಷ ನೀಡುತ್ತದೆ ಎಂದು ಆ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಪುಷ್ಪಾ ದಿ ರೂಲ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೋರ್‌ ಸದೃಢಗೊಳಿಸುವ ವ್ಯಾಯಾಮಗಳು ಯಾವುವು?

ಕೋರ್‌ ಸದೃಢಗೊಳಿಸಲು ಹಲವು ವ್ಯಾಯಾಮಗಳು ನೆರವಾಗುತ್ತವೆ. ಗ್ಲೂಟ್‌ ಬ್ರೀಡ್ಜ್‌, ಪ್ಲ್ಯಾಂಕ್‌, ಸೈಡ್‌ ಪ್ಲ್ಯಾಂಕ್‌, ಕ್ರಂಚಸ್‌, ಬರ್ಡ್‌ ಡಾಗ್‌ ಎಕ್ಸರ್‌ಸೈಸ್‌, ಲೆಗ್‌ ರೈಸ್‌, ಕೇಬಲ್‌ ಕ್ರೌಂಚ್‌, ರಷ್ಯಾನ್‌ ಟ್ವಿಸ್ಟ್‌ ,ಸಿಟ್‌ ಅಪ್ಸ್‌, ಡ್ರ್ಯಾಗನ್‌ ಫ್ಲಾಗ್‌, ಮೆಡಿಸಿನ್‌ ಬಾಲ್‌ ಸಾಮ್‌, ಪ್ಲಾಂಕ್‌ ಲೆಗ್‌ ಲಿಫ್ಟ್‌, ಸೂಪೈನ್‌ ಟಾಯ್‌ ಟಾಪ್‌, ಯೋಗಾ ಕೋರ್‌ನಂತಹ ವ್ಯಾಯಾಮಗಳು ಕೋರ್‌ ಸದೃಢಗೊಳಿಸುವ ವ್ಯಾಯಾಮಗಳಿಗೆ ಕೆಲವು ಉದಾಹರಣೆಗಳಾಗಿವೆ.

ರಶ್ಮಿಕಾ ಮಂದಣ್ಣ ಫಿಟ್ನೆಸ್‌ ಗುಟ್‌

ನಟಿ ರಶ್ಮಿಕಾ ಮಂದಣ್ಣ ಅವರು ನಿಯಮಿತವಾಗಿ ವರ್ಕೌಟ್‌ ಮಾಡುವ ಮೂಲಕ ಫಿಟ್ನೆಸ್‌ ಕಾಪಾಡಿಕೊಳ್ಳುತ್ತಾರೆ. ಇದು ಇವರ ಸೌಂದರ್ಯದ ಗುಟ್ಟು ಎಂದರೂ ತಪ್ಪಾಗದು. ಕಾರ್ಡಿಯೋ, ಸ್ಟ್ರೆಂಥ್‌ ಟ್ರೇನಿಂಗ್‌, ಯೋಗ ಮಾಡುವುದಾಗಿ ರಶ್ಮಿಕಾ ಮಂದಣ್ಣ ಈ ಹಿಂದೆಯೇ ತಿಳಿಸಿದ್ದರು. ಬೆಳಗ್ಗೆ ಅರ್ಧ ಗಂಟೆ ತಪ್ಪದೆ ಕಾರ್ಡಿಯೋ ಮಾಡುತ್ತಾರೆ. ರನ್ನಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌ ಮೂಲಕ ಕಾರ್ಡಿಯೊ ವರ್ಕೌಟ್‌ ಮಾಡುತ್ತಾರೆ. ಸ್ನಾಯುಬಲ ಹೆಚ್ಚಿಸಲು ಸ್ಟ್ರೆಂಥ್‌ ಟ್ರೇನಿಂಗ್‌ ವರ್ಕೌಟ್‌ ಮಾಡುತ್ತಾರೆ. ಸ್ಕಾಟ್ಸ್‌, ಲುಂಗ್ಸ್‌, ಪುಶ್‌ಅಪ್‌ ಮುಂತಾದ ವರ್ಕೌಟ್‌ ಮಾಡುತ್ತಾರೆ. ಮಾನಸಿಕ ನೆಮ್ಮದಿ, ಶಾಂತಿ, ನೆಮ್ಮದಿ ಮತ್ತು ಹ್ಯಾಪಿಯಾಗಿರಲು ಯೋಗದ ಮೊರೆ ಹೋಗುತ್ತಾರೆ.

ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳು

ಕಿರಿಕ್‌ ಪಾರ್ಟಿ, ಅಂಜನಿ ಪುತ್ರ, ಚಮಕ್‌ ಎಂಬ 3 ಕನ್ನಡ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ 2016-17ರಲ್ಲಿ ನಟಿಸಿದ್ದರು. ಇದಾದ ಬಳಿಕ ಟಾಲಿವುಡ್‌ನ ಛಲೋ, ಗೀತಾ ಗೋವಿದಂ, ದೇವದಾಸ್‌, ಯಜಮಾನ್‌, ಡಿಯರ್‌ ಕಾಮ್ರೆಡ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಯರ್‌ ಕಾಮ್ರೆಡ್‌ ಸಿನಿಮಾ ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ.

ಸರಿಲೇರು ನೀಕೆವರ್‌, ಭೀಷ್ಮ, ಪೊಗರು, ಸುಲ್ತಾನ್‌, ಪುಷ್ಪಾ ದಿ ರೈಸ್‌, ಆಡವಲ್ಲೂ ಮೀಕು ಜಹರ್ಲು, ಸೀತಾ ರಾಮನ್‌, ಗುಡ್‌ಬೈ, ವರಿಸು, ಮಿಷನ್‌ ಮಂಜ್ನು, ಅನಿಮಲ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುಷ್ಪಾ 2, ರೈಂಬೊ, ದಿ ಗರ್ಲ್‌ಫ್ರೆಂಡ್‌, ಛಾವಾ ಮುಂತಾದ ಪ್ರಾಜೆಕ್ಟ್‌ಗಳು ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿವೆ.