ಕನ್ನಡ ಸುದ್ದಿ  /  Entertainment  /  Tollywood News Nayanthara Congratulates Samantha Ruth Prabhu For Completing 14 Years In Film Industry Pcp

Samantha: ಸಿನಿರಂಗದಲ್ಲಿ 14 ವರ್ಷ ಪೂರ್ಣಗೊಳಿಸಿದ ಸಮಂತಾ ರುತ್‌ ಪ್ರಭು; ಖುಷಿ ನಟಿಗೆ ನಯನತಾರ ಹೀಗಂದ್ರು

Samantha Ruth Prabhu: ಸಮಂತಾ ರುತ್‌ ಪ್ರಭು ಸಿನಿಮಾ ಕ್ಷೇತ್ರಕ್ಕೆ ಆಗಮಿಸಿ ಭರ್ತಿ 14 ವರ್ಷಗಳಾಗಿವೆ. 2020ರಲ್ಲಿ ನಟಿಯು ಗೌತಮ್‌ ವಾಸುದೇವ್‌ ಮೆನನ್‌ ಅವರ ಹೇ ಮಾಯಾ ಚೇಸುವೆ ಚಿತ್ರದಲ್ಲಿ ಜೆಸ್ಸಿಯಾಗಿ ಕಾಣಿಸಿಕೊಂಡಿದ್ದರು.

Samantha: ಸಿನಿರಂಗದಲ್ಲಿ 14 ವರ್ಷ ಪೂರ್ಣಗೊಳಿಸಿದ ಸಮಂತಾ ರುತ್‌ ಪ್ರಭು
Samantha: ಸಿನಿರಂಗದಲ್ಲಿ 14 ವರ್ಷ ಪೂರ್ಣಗೊಳಿಸಿದ ಸಮಂತಾ ರುತ್‌ ಪ್ರಭು

ಬೆಂಗಳೂರು: ಸಮಂತಾ ರುತ್‌ ಪ್ರಭು ಸಿನಿಮಾ ಕ್ಷೇತ್ರಕ್ಕೆ ಆಗಮಿಸಿ ಭರ್ತಿ 14 ವರ್ಷಗಳಾಗಿವೆ. 2020ರಲ್ಲಿ ನಟಿಯು ಗೌತಮ್‌ ವಾಸುದೇವ್‌ ಮೆನನ್‌ ಅವರ ಹೇ ಮಾಯಾ ಚೇಸುವೆ ಚಿತ್ರದಲ್ಲಿ ಜೆಸ್ಸಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ತನ್ನ ಮಾಜಿ ಪತಿ ನಾಗ ಚೈತನ್ಯರನ್ನು ಭೇಟಿಯಾಗಿದ್ದರು. ಈ ಚಿತ್ರದಲ್ಲಿ ಇವರಿಬ್ಬರು ಜತೆಯಾಗಿ ನಟಿಸಿದ್ದರು.

ಸಮಂತಾಗೆ ಅಭಿನಂದನೆ ತಿಳಿಸಿದ ನಯನತಾರ

ಸಮಂತಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಸಿನಿಪ್ರಯಾಣದ ಕುರಿತು ಸ್ಟೋರಿ ಹಂಚಿಕೊಂಡಿದ್ದಾರೆ. ತನ್ನ ಬೆರಳಲ್ಲಿ ಲೆಕ್ಕ ಮಾಡುವಂತೆ ಚಿತ್ರ ಹಾಕಿ ಈಗಾಗಲೇ 14 ವರ್ಷ ಕಳೆದು ಹೋಯ್ತ ಎಂದು ಹೇಳಿದ್ದಾರೆ. "14 ವರ್ಷವಾಯ್ತೇ, ವಾಹ್‌!" ಎಂದು ಸಮಂತಾ ಪೋಸ್ಟ್‌ ಮಾಡಿದ್ದಾರೆ. 14YearsOfSamanthaLegacy ಎಂಬ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಮಾಡಿರುವುದಕ್ಕೆ ಅಭಿಮಾನಿಗಳಿಗೆ ಸಮಂತಾ ಧನ್ಯವಾದ ತಿಳಿಸಿದ್ದಾರೆ. "ನಿಮ್ಮೆಲ್ಲರನ್ನು ಇಷ್ಟಪಡುವೆ" ಎಂದು ಸಮಂತಾ ಬರೆದಿದ್ದಾರೆ.

ಸಮಂತಾ ಪ್ರಭುವಿಗೆ ಸಾಕಷ್ಟು ಜನರು ಅಭಿನಂದನೆ ತಿಳಿಸಿದ್ದಾರೆ. ನಯನತಾರ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೀಗೆ ಬರೆದಿದ್ದಾರೆ. "ಸ್ಯಾಮ್‌ 14 ವರ್ಷ ಪೂರೈಸಿರುವುದಕ್ಕೆ ಅಭಿನದಂನೆ. ನಿನಗೆ ಇನ್ನಷ್ಟು ಪವರ್‌ ಬರಲಿ" ಎಂದು ನಯನತಾರಾ ಬರೆದಿದ್ದಾರೆ. "ಧನ್ಯವಾದ ಸುಂದರಿ ನಯನತಾರ" ಎಂದು ಸಮಂತಾ ರುತ್‌ ಪ್ರಭು ಮಾರುತ್ತರ ನೀಡಿದ್ದಾರೆ. ಇವರಿಬ್ಬರು ಜತೆಯಾಗಿ ವಿಘ್ನೇಶ್‌ ಶಿವನ್‌ರ ತಮಿಳು ಸಿನಿಮಾ "ಕಾಥಯವಾಕುಆ ರೆಂಡು ಕಾದಲ್‌"ನಲ್ಲಿ 2022ರಲ್ಲಿ ಜತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಸಮಂತಾ ರುತ್‌ ಪ್ರಭು
ಸಮಂತಾ ರುತ್‌ ಪ್ರಭು

ಯೆ ಮಾಯಾ ಚೇಸುವೆ ಸಿನಿಮಾದ ಕುರಿತು

ಗೌತಮ್‌ ಅವರ ಜೇ ಮಾಯಾ ಚೇಸುವೆ ಸಿನಿಮಾದ ಜತೆಗೆ ತಮಿಳಿನ ಚಿನ್ನಥಾಂಡಿ ವಾರುವಾಯಾ ಸಿನಿಮಾವನ್ನು ಏಕಕಾಲದಲ್ಲಿ ಚಿತ್ರೀಕರಿಸಿದರು. ಆದರೆ, ತೆಲುಗು ವರ್ಷನ್‌ನಲ್ಲಿ ಕ್ಲೈಮ್ಯಾಕ್ಸ್‌ ಬೇರೆ ರೀತಿ ಇತ್ತು. ತಮಿಳಿನಲ್ಲಿ ಸಿಂಬು ಮತ್ತು ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತೆಲುಗು ಆವೃತ್ತಿಯಲ್ಲಿ ಸಮಂತಾ ಮತ್ತು ನಾಗ ಚೈತನ್ಯರ ಪಾತ್ರಗಳಿಗೆ ಸುಖಾಂತ್ಯ ನೀಡಲಾಗಿತ್ತು. ಯುವಕನೊಬ್ಬ ತನಗಿಂತ ಎರಡು ವರ್ಷ ಹೆಚ್ಚು ಪ್ರಾಯದ ಮಹಿಳೆಯನ್ನು ಪ್ರೀತಿಸುವ ಕಥೆ ಇದರಲ್ಲಿತ್ತು. ಹೇ ಮಾಯಾ ಚೇಸಾವೆ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಸಮಂತಾ ಅವರಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿತ್ತು. ನಾಗ ಚೈತನ್ಯರಿಗೂ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಏಳು ವರ್ಷದ ಬಳಿಕ ನಾಗ ಚೈತನ್ಯ ಮತ್ತು ಸಮಂತ ಗೋವಾದಲ್ಲಿ ವಿವಾಹವಾಗಿದ್ದರು. 2021ರಲ್ಲಿ ಇವರಿಬ್ಬರು ದೂರವಾಗಿದ್ದರು.

ಸಮಂತಾರ ಮುಂಬರುವ ಸಿನಿಮಾಗಳು

ಮೈಯೋಸಿಟಿಸ್ ಆರೋಗ್ಯ ತೊಂದರೆಯಿಂದ ಸದ್ಯ ಸಮಂತಾ ಸಿನಿಮಾದಿಂದ ತುಸು ಬ್ರೇಕ್‌ ಪಡೆದುಕೊಂಡಿದ್ದಾರೆ. ಶಕುಂತಲಂ ಮತ್ತು ಖುಷಿ ಇವರ ಇತ್ತೀಚಿನ ಸಿನಿಮಾಗಳು. ಹೇ ಮಾಯಾ ಚೇಸಾವೆ, ಬಾನಾ ಕಾಆಥಡಿ, ಮಾಸ್ಕೊವಿನ್‌ ಕಾವೇರಿ, ಬೃಂದಾವನಂ ಇವರ ಆರಂಭಿಕ ಸಿನಿಮಾಗಳು, ಬಳಿಕ ನಾಡುನಿಸಿ ನಾಯಾಗಲ್‌, ದೂಕುಡು, ಏಕ್‌ ದಿವಾನ ತಾ, ಈಗ ಸಿನಿಮಾದಲ್ಲಿ ಬಳಿಕ ನಟಿಸಿದರು. ಈಗ ಸಿನಿಮಾದಲ್ಲಿ ಸುದೀಪ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಹದಿನಾಲ್ಕು ವರ್ಷಗಳಲ್ಲಿ ಸಮಂತಾ ರುತ್‌ ಪ್ರಭು ಅವರು ಸುಮಾರು ಐವತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.

IPL_Entry_Point