Amruthadhaare: ಅಪ್ಪನ ಕಾಲದ ಅಸಹಾಯಕ ಹೆಣ್ಣಿನ ಕಥೆ ಗೌತಮ್‌ ಹೇಳಿದಾಗ ಶಕುಂತಲಾದೇವಿ ಗಪ್‌ಚುಪ್‌ ಆಗಿದ್ಯಾಕೆ, ಹಾರ ಬದಲಾಯಿಸಿದ ಮಲ್ಲಿ ಜೈದೇವ್‌-televison news amruthadhaare serial episode 201 goutham stand for malli jaidev shakuntaladevi arguments in marriage pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಅಪ್ಪನ ಕಾಲದ ಅಸಹಾಯಕ ಹೆಣ್ಣಿನ ಕಥೆ ಗೌತಮ್‌ ಹೇಳಿದಾಗ ಶಕುಂತಲಾದೇವಿ ಗಪ್‌ಚುಪ್‌ ಆಗಿದ್ಯಾಕೆ, ಹಾರ ಬದಲಾಯಿಸಿದ ಮಲ್ಲಿ ಜೈದೇವ್‌

Amruthadhaare: ಅಪ್ಪನ ಕಾಲದ ಅಸಹಾಯಕ ಹೆಣ್ಣಿನ ಕಥೆ ಗೌತಮ್‌ ಹೇಳಿದಾಗ ಶಕುಂತಲಾದೇವಿ ಗಪ್‌ಚುಪ್‌ ಆಗಿದ್ಯಾಕೆ, ಹಾರ ಬದಲಾಯಿಸಿದ ಮಲ್ಲಿ ಜೈದೇವ್‌

Amruthadhaare Serial Episode: ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಕಾರಣವಲ್ಲ ಎಂದು ಶಕುಂತಲಾದೇವಿ ವಾದಿಸ್ತಾರೆ. ಭೂಮಿಕಾ ಮಾತು ಕೇಳಿ ಅಲ್ಲ ಸಿಸಿಟಿವಿ ನೋಡಿ ಈ ನಿರ್ಧಾರಕ್ಕೆ ಬಂದೆ ಎಂದು ಗೌತಮ್‌ ಹೇಳುತ್ತಾನೆ. ಮಲ್ಲಿ ಜತೆ ಮದುವೆ ಮಾಡಲು ಗೌತಮ್‌ ಮುಂದಾಗುತ್ತಾನೆ. ಜೈದೇವ್‌ ಮತ್ತು ಮಲ್ಲಿ ಹಾರ ಬದಲಾಯಿಸಿಕೊಳ್ಳುತ್ತಾರೆ.

Amruthadhaare: ಅಪ್ಪನ ಕಾಲದ ಅಸಹಾಯಕ ಹೆಣ್ಣಿನ ಕಥೆ ಗೌತಮ್‌ ಹೇಳಿದಾಗ ಶಕುಂತಲಾದೇವಿ ಗಪ್‌ಚುಪ್‌
Amruthadhaare: ಅಪ್ಪನ ಕಾಲದ ಅಸಹಾಯಕ ಹೆಣ್ಣಿನ ಕಥೆ ಗೌತಮ್‌ ಹೇಳಿದಾಗ ಶಕುಂತಲಾದೇವಿ ಗಪ್‌ಚುಪ್‌

Amruthadhaare Serial Yesterday Episode: "ನನಗೆ ಎಲ್ಲಾ ಗೊತ್ತಿತ್ತಮ್ಮ" ಎಂದು ಗೌತಮ್‌ ಹೇಳುತ್ತಾನೆ. "ತನ್ನ ಹೊಟ್ಟೆಯಲ್ಲಿರುವ ಮಗುವಿನ ಕುರಿತು ಯಾರೂ ಸುಳ್ಳು ಹೇಳಿರೋಲ್ಲ" ಎಂದು ಭೂಮಿಕಾ ಹೇಳಿರುವ ಸಂಗತಿಯನ್ನು ಗೌತಮ್‌ಗೆ ಭೂಮಿಕಾ ಹೇಳಿರುತ್ತಾಳೆ. "ಆ ಹುಡುಗಿ ಇಲ್ಲಿಗೆ ಬಂದರೆ ಪ್ರಾಬ್ಲಂ ಸಾಲ್ವ್‌ ಆಗುತ್ತ? ಎಂದು ಗೌತಮ್‌ ಕೇಳಿ ಆ ಹುಡುಗಿಯನ್ನು ಕರೆಸುವ ಪ್ರಯತ್ನ ಮಾಡುತ್ತಾನೆ. ಕಮಿಷನರ್‌ಗೆ ಹೇಳಿ ಮಲ್ಲಿಯನ್ನು ಕರೆಯಿಸಿಕೊಳ್ಳುತ್ತಾನೆ. ಈ ವಿಷಯವನ್ನು ಗೌತಮ್‌ ತನ್ನ ತಾಯಿಯ ಬಳಿ ಹೇಳುತ್ತಾನೆ. "ಇನ್ನೊಬ್ಬರಿಗೆ ಅನ್ಯಾಯ ಮಾಡಿ ನಾವು ಚೆನ್ನಾಗಿರ್ತಿವ ಅಮ್ಮ" ಎಂದು ಕೇಳುತ್ತಾನೆ.

ಎಲ್ಲರ ಮುಂದೆ ಸತ್ಯ ಹೇಳಿದ ಮಲ್ಲಿ

ಜೈದೇವ್‌ ನಿನ್ನ ತಮ್ಮ. ಅವನ ಮೇಲೆ ಡೌಟ್‌ ಪಡ್ತಾ ಇದ್ದೀಯಾ? ನೀನು ಭೂಮಿಕಾಳ ಮಾತನ್ನು ನಂಬ್ತಿಯಾ ಎಂದು ಕೇಳುತ್ತಾನೆ. "ಈ ಆರೋಪ ಬಂದಿದೆ ಎಂದಾದ ಮೇಲೆ ಎಲ್ಲರ ಮುಂದೆ ಸತ್ಯ ಗೊತ್ತಾಗಬೇಕು" ಎಂದು ಗೌತಮ್‌ ಹೇಳುತ್ತಾನೆ. ಈ ಸಂದರ್ಭದಲ್ಲಿ ಶಕುಂತಲಾದೇವಿ ಹಲವು ಮಾತುಗಳನ್ನು ಹೇಳುತ್ತಾಳೆ. ಇದನ್ನು ಗೌತಮ್‌ ಒಪ್ಪುವುದಿಲ್ಲ. ಬಳಿಕ ಮಲ್ಲಿ ಬಳಿ ಕೇಳುತ್ತಾನೆ. ಧೈರ್ಯವಾಗಿ ಹೇಳು ಎನ್ನುತ್ತಾನೆ. "ಏನಂಥ ಹೇಳಲಿ, ನಾನು ಈ ಭೂಮಿಯಲ್ಲಿ ತಾತನ ಬಳಿಕ ಅತಿಯಾಗಿ ಪ್ರೀತಿಸಿದ್ದೀನಿ ಎಂದಾದರೆ ಅದು ಜೈದೇವ್‌ನನ್ನು ಮಾತ್ರ" ಎನ್ನುತ್ತಾಳೆ. ತಾತಾನ ನೋಡಲು ಬಂದವಳು ಹೇಗೋ ಅವಳ ಕಣ್ಣಿಗೆ ಬಿದ್ದೆ. ಅವರೇ ನನ್ನ ಜತೆ ಹತ್ತಿರವಾದ್ರು. ಪ್ರೀತಿಸ್ತಿನಿ ಎಂದ್ರು. ಸಾಯೋ ತನಕ ಜತೆಗಿರ್ತಿನಿ ಅಂದ್ರು ಎಂದೆಲ್ಲ ಭೂಮಿಕಾ ತನ್ನ ಕಥೆಯನ್ನು ಹೇಳಲು ಆರಂಭಿಸುತ್ತಾಳೆ. " ಅವರೇ ಸರ್ವಸ್ವ ಅಂದುಕೊಂಡು ನಂದೆಲ್ಲ ಅವರಿಗೆ ಅರ್ಪಿಸಿಬಿಟ್ಟೆ" ಎಂದು ಹೇಳುತ್ತಾಳೆ. "ನನ್ನ ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಅವರೇ" ಎನ್ನುತ್ತಾಳೆ. ಈ ಮಾತು ಕೇಳಿ ಎಲ್ಲರೂ ಶಾಕ್‌ಗೆ ಒಳಗಾಗುತ್ತಾರೆ.

ಗೌತಮ್‌ ಇವಳ ಮಾತು ನಂಬಬೇಡಿ. ಇವಳು ಸುಳ್ಳು ಹೇಳಿ ನಮ್ಮನ್ನು ಬ್ಲಾಕ್‌ಮೇಲ್‌ ಮಾಡ್ತಾಳೆ ಎನ್ನುತ್ತಾರೆ ಶಕುಂತಲಾದೇವಿ. "ಹೌದು ಬಿಗ್‌ಬ್ರದರ್‌, ಇವಳು ಸುಳ್ಳು ಹೇಳುತ್ತಾಳೆ. ನಂದು ಇದರಲ್ಲಿ ಏನೂ ಸಂಬಂಧ ಇಲ್ಲ" ಎನ್ನುತ್ತಾನೆ ಜೈದೇವ್‌. ಈ ವಿಷಯ ಏಕೆ ಯಾರಲ್ಲೂ ಹೇಳಿಲ್ಲ ಎಂದು ಗೌತಮ್‌ ಕೇಳುತ್ತಾನೆ. "ನಾನು ಜೈದೇವ್‌ರನ್ನು ತುಂಬಾ ನಂಬಿದ್ದೆ. ಅವರು ಈ ರೀತಿ ಮೋಸ ಮಾಡ್ತಾರೆ ಎಂದುಕೊಂಡಿರಲಿಲ. ಸಾಯೋಕ್ಕೂ ಹೋಗಿದ್ದೆ. ಆಗ ಭೂಮಿಕಾ ಅಕ್ಕ ಬಂದು ನನ್ನ ಕಾಪಾಡಿದ್ರು. ಇಲ್ಲಿ ನಾನು ಜೀವಂತವಾಗಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಭೂಮಿಕಾ ಅಕ್ಕನೇ ಕಾರಣ. ಅವರು ನನ್ನ ಪಾಲಿನ ದೇವರು" ಎಂದು ಮಲ್ಲಿ ಹೇಳುತ್ತಾಳೆ. "ದೇವರ ಸತ್ಯ ಮಾಡಿ ಹೇಳ್ತಿನಿ. ನಮಗೆ ಯಾವುದೇ ಕೆಟ್ಟ ಉದ್ದೇಶ ಇಲ್ಲ. ಅಂತಹ ಉದ್ದೇಶ ಇದ್ರೆ ನಾನ್ಯಾಕೆ ಸಾಯೋಕ್ಕೆ ಹೋಗ್ತಾ ಇದ್ದೆ. ಅವರ ಮದುವೆ ನಿಲ್ಲಿಸುವ ಯೋಚನೆ ಇಲ್ಲ. ನನಗೆ ನನ್ನ ಹೊಟ್ಟೆಯಲ್ಲಿ ಹುಟ್ಟುವ ಮಗುವಿನ ಭವಿಷ್ಯದ ಯೋಚನೆ ಮಾತ್ರ ಇದೆ" ಎಂದು ಮಲ್ಲಿ ಹೇಳುತ್ತಾಳೆ.

ಜೈದೇವ್‌ಗೆ ಗೌತಮ್‌ ಕಪಾಳಮೋಕ್ಷ

ಗೌತಮ್‌ ಇವಳ ಕಣ್ಣೀರಿಗೆ ಕರಗಬೇಡ. ಸುಳ್ಳು ಹೇಳ್ತಾ ಇದ್ದಾಳೆ. ಇವಳ ಈ ಸ್ಥಿತಿಗೆ ಜೈದೇವ್‌ ಕಾರಣ ಅಲ್ಲ. ಮೊದಲು ಇವಳನ್ನು ಹೊರಕ್ಕೆ ಕಳುಹಿಸು. "ಒಂದು ಮಗುವಿಗೆ ತಾಯಿ ಯಾರು ಅಂತ ಗೊತ್ತಿರುತ್ತದೆ. ತಂದೆ ಯಾರೂ ಅಂತ ಒಂದು ಮಗುವಿಗೆ ತಾಯಿ ಮಾತ್ರ ತೋರಿಸಿಕೊಡುವುದು. ನಾನು ಸತ್ಯದ ಪರ ನಿಲ್ತಾ ಇದ್ದೇನೆ" ಎಂದು ಗೌತಮ್‌ ಹೇಳುತ್ತಾನೆ. "ಯಾವುದು ಸತ್ಯ ಬ್ರೋ, ಎಲ್ಲಾ ಸುಳ್ಳು" ಎನ್ನುತ್ತಾನೆ ಜೈದೇವ್‌. ಇವಳನ್ನು ಈಗಲೇ ನೋಡ್ತಾ ಇರೋದು. ತಾತಾ ಮಗಳು ಎಷ್ಟು ನೀಚರು ಇರಬೇಡ ಎಂದು ಜೈದೇವ್‌ ಹೇಳಿದಾಗ ಗೌತಮ್‌ ಜೈದೇವ್‌ನ ಕೆನ್ನೆಗೆ ಪಟಾರನೆ ಒಂದೇಟು ಕೊಡುತ್ತಾನೆ.

"ಈತ ತನ್ನ ತಪ್ಪು ಒಪ್ಪಿಕೊಳ್ಳುತ್ತಾನೆ ಎಂದುಕೊಂಡಿದ್ದೆ. ಇವಳನ್ನು ಇವತ್ತೇನ ನೋಡಿದ್ದ, ಇಷ್ಟಾದರೂ ಸತ್ಯ ಒಪ್ಪಿಕೊಂಡಿದೆಯಲ್ವ. ನಾನು ಸುಮ್ಮನೆ ಹೇಳ್ತಾ ಇಲ್ಲ. ಸಿಸಿಟಿವಿ ಡೇಟಾ ಎಲ್ಲಾ ತರಿಸಿ, ಎಲ್ಲಾ ಫೂಟೇಜ್‌ ರಿಟ್ರೈವ್‌ ಮಾಡಿಸಿಯೇ ನಾನು ಮಾತನಾಡುತ್ತ ಇರೋದು" ಎಂದು ಗೌತಮ್‌ ಹೇಳುತ್ತಾನೆ. "ನಾವು ಏನು ಮಾಡಬೇಕು" ಎಂದು ಅಪೇಕ್ಷಾಳ ತಂದೆ ಕೇಳುತ್ತಾರೆ. "ಅವಳ ಜೀವನ ಸೇವ್‌ ಆಗಿದೆ. ಅದೇ ರೀತಿ ಮಲ್ಲಿಗೆ ನ್ಯಾಯ ದೊರಕಿದೆ" ಎಂದು ಗೌತಮ್‌ ಹೇಳುತ್ತಾನೆ. "ಇದರಲ್ಲಿ ನಿಮ್ಮ ತಪ್ಪಾಗಲಿ, ಅಪೇಕ್ಷಾ ತಪ್ಪಾಗಲಿ ಇಲ್ಲ. ಈ ಮದುವೆ ಪ್ರಸ್ತಾಪ ತಂದದ್ದು ನಾವೇ. ನಮ್ಮಿಂದ ನೀವು ನೊಂದುಕೊಳ್ಳುವಂತೆ ಆಯ್ತು" ಎಂದು ಗೌತಮ್‌ ಹೇಳುತ್ತಾನೆ. ಈ ಸಂದರ್ಭದಲ್ಲಿ ಅಪೇಕ್ಷಾ ಪಾರ್ಥನ ನೋಡಿ ನಿಟ್ಟುಸಿರುಬಿಡುತ್ತಾಳೆ.

ಹಳೆ ಕಥೆ ಹೇಳಿದ ಗೌತಮ್‌

ಜೈದೇವ್‌ನ ಜತೆ ಮಲ್ಲಿಯನ್ನು ಮದುವೆ ಮಾಡಲು ಗೌತಮ್‌ ಮುಂದಾಗುತ್ತಾನೆ. ಕೆಲಸದವನ ಮಗಳನ್ನು ನನ್ನ ಮಗನ ಜತೆ ಮದುವೆಯಾಗಲು ಒಪ್ಪುವುದಿಲ್ಲ ಎಂದು ಶಕುಂತಲಾದೇವಿ ಅಬ್ಬರಿಸುತ್ತಾಳೆ. "ಅದಕ್ಕೆ ನಾನು ಅವಕಾಶ ಕೊಡೋದಿಲ್ಲ" ಎನ್ನುತ್ತಾಳೆ. "ಜೈದೇವ್‌ ಜತೆ ಈ ಹುಡುಗಿ ಮದುವೆ ಮಾಡಿಸಲು ಇನ್ನೊಂದು ಕಾರಣ ಇದೆ. ನನ್ನ ಅಪ್ಪ ಸಾಯೋ ಸ್ಥಿತಿಯಲ್ಲಿದ್ದಾಗ ನಾಲ್ಕು ಜನ ಹೆಣ್ಣು ಮಕ್ಕಳ ಜತೆ ಒಬ್ಬಳು ತಾಯಿ ಬಂದು ನಿಂತದ್ದು ನೆನಪಾಯ್ತು. ಆ ಸಂದರ್ಭ ನನಗೆ ಈಗ ನೆನಪಾಯ್ತು" ಎಂದು ಗೌತಮ್‌ ಹೇಳುತ್ತಾಳೆ. ಆ ಸಂದರ್ಭದಲ್ಲಿ ಶಕುಂತಲಾದೇವಿ ಕಣ್ಣಲ್ಲಿ ನೀರು ಜಿನುಗುತ್ತದೆ. ಆ ಹೆಣ್ಣು ಮಕ್ಕಳಿಗೂ ಶಕುಂತಲಾದೇವಿಗೂ ಏನು ನಂಟು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡುತ್ತದೆ. ಈ ರೀತಿ ಬಂದು ನಿಂತವಳು ಶಕುಂತಲಾದೇವಿಯೇ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. "ನನಗೆ ಆಗ ಆ ತಾಯಿ ಹೇಗೆ ಕಂಡ್ರೋ, ಈ ಹುಡುಗಿಯೂ ಹಾಗೆಯೇ ಕಾಣುತ್ತಾಳೆ. ಆ ಅಮ್ಮ ಕಂಡಂತೆ ಈ ಹುಡುಗಿಯೂ ಈ ರೀತಿಯೇ ಕಂಡಳು" ಎಂದು ಗೌತಮ್‌ ಹೇಳುತ್ತಾನೆ. ಈ ಮಾತು ಕೇಳಿ ಶಕುಂತಲಾದೇವಿ ಸೈಲೆಂಟ್‌ ಆದ್ರು. ಏನೋ ಯೋಚನೆಗೆ ಬಿದ್ದಳು.

ಹಸೆಮನೆ ಮೇಲೆ ಜೈದೇವ್‌ ಮತ್ತು ಮಲ್ಲಿ ಕುಳಿತುಕೊಳ್ಳುತ್ತಾರೆ. ಹಾರ ಬದಲಾಯಿಸಿಕೊಳ್ಳುತ್ತಾರೆ. ಹಿಮ್ಮೇಳ ಕೇಳಿಸುತ್ತದೆ. ಆದರೆ ಇವರಿಬ್ಬರು ತಾಳಿ ಕಟ್ತಾರೋ ಅಥವಾ ಇನ್ನೇನಾದರೂ ಆಗುತ್ತದೆಯೇ ಎಂದು ತಿಳಿಯಲು ಸೋಮವಾರದ ಸಂಚಿಕೆ ನೋಡಬೇಕಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

mysore-dasara_Entry_Point