Salaar day 7 Collection: ತುಂಬಿತುಳುಕಿದ ಸಲಾರ್‌ ಗಲ್ಲಾಪೆಟ್ಟಿಗೆ, 7 ದಿನ, 300 ಕೋಟಿ; ಇಲ್ಲಿದೆ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಕಾರ್ಡ್‌
ಕನ್ನಡ ಸುದ್ದಿ  /  ಮನರಂಜನೆ  /  Salaar Day 7 Collection: ತುಂಬಿತುಳುಕಿದ ಸಲಾರ್‌ ಗಲ್ಲಾಪೆಟ್ಟಿಗೆ, 7 ದಿನ, 300 ಕೋಟಿ; ಇಲ್ಲಿದೆ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಕಾರ್ಡ್‌

Salaar day 7 Collection: ತುಂಬಿತುಳುಕಿದ ಸಲಾರ್‌ ಗಲ್ಲಾಪೆಟ್ಟಿಗೆ, 7 ದಿನ, 300 ಕೋಟಿ; ಇಲ್ಲಿದೆ ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಕಾರ್ಡ್‌

Salaar box office day collection 7: ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾವು ಏಳನೇ ದಿನ ಅಂದರೆ ಗುರುವಾರ 5.32 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಳೆದ ಏಳು ದಿನಗಳಲ್ಲಿ ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ 300 ಕೋಟಿ ರೂಪಾಯಿ ದಾಟಿದೆ. ಜಾಗತಿಕವಾಗಿ 500 ಕೋಟಿ ಗಳಿಕೆ ಮಾಡಿದೆ.

ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ
ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

ಪ್ರಭಾಸ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಪಾರ್ಟ್‌ 1: ಸೀಸ್‌ಫೈರ್‌ ಸಿನಿಮಾವು ಕಳೆದ ಶುಕ್ರವಾರ ಭಾರತದಲ್ಲಿ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅಂದರೆ, ಇಂದಿಗೆ ಸಿನಿಮಾ ಬಿಡುಗಡೆಯಾಗಿ ಭರ್ತಿ ಏಳು ದಿನಗಳಾಗಿವೆ. ಪೃಥ್ವಿರಾಜ್‌ ಸುಕುಮಾರನ್‌ ಕೂಡ ಪ್ರಭಾಸ್‌ ಜತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಉತ್ತಮ ಆರಂಭ ಪಡೆದ ಸಲಾರ್‌ ಸಿನಿಮಾದ ಗಳಿಕೆ ಈ ವಾರದ ನಡುವಿನ ದಿನಗಳಲ್ಲಿ ತುಸು ಇಳಿಕೆ ಕಂಡಿದೆ. ನಿನ್ನೆ ಕೇವಲ 5.32 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಒಟ್ಟಾರೆ 300.72 ಕೋಟಿ ರೂಪಾಯಿ ಗಳಿಸಿದೆ ಎಂದು ಬಾಕ್ಸ್‌ ಆಫೀಸ್‌ ಅಂದಾಜು ವರದಿ ತಿಳಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ನಿನ್ನೆ ಎಷ್ಟು ಗಳಿಸಿದೆ?

ಸಲಾರ್‌ ಸಿನಿಮಾ ಬಿಡುಗಡೆಯಾದ ಏಳನೇ ದಿನ ಅಂದರೆ ಗುರುವಾರ ಸಲಾರ್‌ ಸಿನಿಮಾವು 5.32 ಕೋಟಿ ರೂಪಾಯಿ ಗಳಿಸಿದೆ ಎಂದು ಸಚ್‌ನಿಲ್ಕ್‌.ಕಾಂನ ಆರಂಭಿಕ ಅಂದಾಜು ವರದಿ ತಿಳಿಸಿದೆ. ಇದು ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆಧರಿತ ಲೆಕ್ಕಾಚಾರ. ಅಂತಿಮ ಲೆಕ್ಕ ಇನ್ನಷ್ಟೇ ಬರಬೇಕಿದೆ.

ಜಾಗತಿಕವಾಗಿ 500 ಕೋಟಿ ಗಳಿಕೆ

ಸಿನಿಮಾ ತಂಡದ ಪ್ರಕಾರ ಸಲಾರ್‌ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 500 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸಿನಿಮಾ ತಂಡ ತಿಳಿಸಿದೆ. "500 ಕೋಟಿ ರೂಪಾಯಿ ಜಿಬಿಒಸಿ ವರ್ಲ್‌ವೈಡ್‌" ಎಂದು ಸಿನಿಮಾ ತಂಡ ಟ್ವೀಟ್‌ ಮಾಡಿದೆ.

ಮೊದಲ ದಿನ ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಸಲಾರ್‌ ಸಿನಿಮಾವು 90.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತೆಲುಗು ಭಾಷೆಯಲ್ಲಿ 66.75 ಕೋಟಿ ರೂಪಾಯಿ, ಮಲಯಾಳಂನಲ್ಲಿ 3.55 ಕೋಟಿ ರೂಪಾಯಿ, ತಮಿಳಿನಲ್ಲಿ 3.75 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 90 ಲಕ್ಷ ಗಳಿಕೆ ಮಾಡಿತ್ತು. ಎರಡನೇ ದಿನ ಸಲಾರ್‌ ಸಿನಿಮಾವು 56.35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತೆಲುಗು ಭಾಷೆಯಲ್ಲಿ 34.25 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.75 ಕೋಟಿ ರೂಪಾಯಿ, ತಮಿಳಿನಲ್ಲಿ 3.05 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 95 ಲಕ್ಷ ಗಳಿಕೆ ಮಾಡಿತ್ತು.

ಮೂರನೇ ದಿನ ಸಲಾರ್‌ ಸಿನಿಮಾವು 62.89 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಲ್ಲಿ 35 ಕೋಟಿ , ಮಲಯಾಳಂನಲ್ಲಿ 1.55 ಕೋಟಿ , ತಮಿಳಿನಲ್ಲಿ3.2 ಕೋಟಿ , ಹಿಂದಿಯಲ್ಲಿ 21.1 ಕೋಟಿ ಮತ್ತು ಕನ್ನಡದಲ್ಲಿ 1.2 ಕೋಟಿ ಆದಾಯ ಗಳಿಸಿತ್ತು. ಸೋಮವಾರ ಭಾರತದ ಎಲ್ಲಾ ಭಾಷೆಗಳಲ್ಲಿ 46.3 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕ್ರಿಸ್‌ಮಸ್‌ ರಜೆ ಇದ್ದ ಕಾರಣ ಗಳಿಕೆ ಉತ್ತಮವಾಗಿತ್ತು. ಬಳಿಕದ ದಿನಗಳಲ್ಲಿ ಗಳಿಕೆ ಇಳಿಕೆ ಕಂಡಿತ್ತು. ಸಲಾರ್‌ ಸಿನಿಮಾವು ಮಂಗಳವಾರ ಭಾರತದಲ್ಲಿ 23.50 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಐದನೇ ದಿನದಂದು 23.50 ಕೋಟಿ ರೂಪಾಯಿ ಗಳಿಸಿದೆ.

Whats_app_banner