Kaatera Public Review: ಕಾಟೇರ ಸಿನಿಮಾ ಬೆಂಕಿ ಗುರು, ಒಳ್ಳೆ ಕಂಟೆಂಟ್, ಅದ್ಭುತ ಬಿಜಿಎಂ, ಆದರೆ..., ಓದಿ ದರ್ಶನ್ ಸಿನಿಮಾದ ವಿಮರ್ಶೆ
Darshan Kaatera Movie Public Review: ದರ್ಶನ್ ನಟನೆಯ ಕಾಟೇರ ಸಿನಿಮಾ ನಿನ್ನೆ ಮಧ್ಯೆ ರಾತ್ರಿ ಬಿಡುಗಡೆಯಾಗಿದ್ದು, ಈಗಾಗಲೇ ಪಬ್ಲಿಕ್ ರಿವ್ಯೂ ಹೊರಬಿದ್ದಿದೆ. ಡಿಬಾಸ್ ಅಭಿಮಾನಿಗಳು ಕಾಟೇರ ಸಿನಿಮಾವನ್ನು ಅದ್ಭುತ, ಬೆಂಕಿ ಎಂದೆಲ್ಲ ಹೊಗಳಿದ್ದಾರೆ. ಅವರೇಜ್ ಮೂವಿ ಎಂಬ ಅಭಿಪ್ರಾಯವೂ ಕೆಲವರಿಂದ ಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬಿಡುಗಡೆಯಾಗಿದೆ. ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಥಿಯೇಟರ್‌ಗಳಲ್ಲಿ ಡಿಬಾಸ್ ಸಿನಿಮಾ ರಿಲೀಸ್ ಆಗಿದೆ. ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾದ ವಿಮರ್ಶೆಯನ್ನು ಜನರು ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರಿ ಪುತ್ರಿ ಆರಾಧನಾ ರಾಮ್ ನಟನೆ, ಸುಧೀರ್ ನಿರ್ದೇಶನ, ಮಾಸ್ತಿ ಡೈಲಾಗ್, ಸಿನಿಮಾಟೊಗ್ರಫಿ ಕುರಿತು ಪಬ್ಲಿಕ್ ಅಭಿಪ್ರಾಯ ಹೇಗಿದೆ ನೋಡೋಣ.
ಕಾಟೇರ ಸಿನಿಮಾ ವಿಮರ್ಶೆ ಮತ್ತು ರೇಟಿಂಗ್
70ರ ದಶಕದ ಗ್ರಾಮದ ಕಥೆಯನ್ನಿಟ್ಟುಕೊಂಡು ಕನ್ನಡ ಸಿನಿಮಾ ವೀಕ್ಷಕರ ನಾಡಿಮಿಡಿತ ಅರಿತು ತರುಣ್ ಸುಧೀರ್ ಅವರು ಅತ್ಯುತ್ತಮವಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮೊದಲಾರ್ಧ ಅತ್ಯುತ್ತಮವಾಗಿದೆ. ದ್ವಿತೀಯಾರ್ಧ ಸ್ವಲ್ಪ ಎಳೆದಂತೆ ಇದೆ. ಕೆಲವೊಂದು ಕಡೆ ಮುಂದೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್ ಅದ್ಭುತವಾಗಿದ್ದು, ಒಳ್ಳೆಯ ಸಂದೇಶ ನೀಡುತ್ತದೆ.
ಯಾವುದೇ ಅನಗತ್ಯ ಬಿಲ್ಡಪ್ ಇಲ್ಲದೆ ಡೈಲಾಗ್‌ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಾಹಸ ದೃಶ್ಯಗಳು ನೀಟಾಗಿವೆ. ಮ್ಯೂಸಿಕ್ ಇನ್ನಷ್ಟು ಉತ್ತಮವಾಗಬೇಕಿತ್ತು. ಆದರೆ, ಬಿಜಿಎಂ ಮಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾಟೊಗ್ರಫಿ, ಎಡಿಟಿಂಗ್, ಕಲೆ, ವಿಎಫ್‌ಎಕ್ಸ್ ಅಂತೂ ಸೂಪರ್.
1970ರಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿತ ಈ ಸಿನಿಮಾವು ರೈತರ ಹೋರಾಟ, ಕಷ್ಟಗಳಿಗೆ ಕನ್ನಡಿ ಹಿಡಿದಿದೆ. ದರ್ಶನ್ ಅವರು ಎಂದಿನ ಕಮರ್ಷಿಯಲ್ ಅಂಶಗಳನ್ನು ಬದಿಗಿಟ್ಟು ಅತ್ಯುತ್ತಮವಾದ ಕಥೆಯನ್ನು ಆಯ್ಕೆ ಮಾಡಿದ್ದಾರೆ.
ಜಾತಿಯತೆ ಇತ್ಯಾದಿಗಳನ್ನು ಮೀರಿ ರೈತರ ಪ್ರಾಮುಖ್ಯತೆಯ ಕುರಿತು ಸಿನಿಮಾ ಮಾತನಾಡುತ್ತದೆ. ಒಳ್ಳೆಯ ಕಂಟೆಂಟ್ ಮತ್ತು ಪರ್ಫಾಮೆನ್ಸ್ ಹೊಂದಿರುವಂತ ಸಿನಿಮಾವು ದರ್ಶನ್ ಕಡೆಯಿಂದ ಬಹು ಅಂತರದ ಬಳಿಕ ಬಂದಿದೆ ಎಂದು ಜೈಸ್ ಸಿನಿಮಾ ವರ್ಲ್ಡ್ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಮರ್ಶೆ ಮಾಡಲಾಗಿದೆ. ಇವರು ಈ ಸಿನಿಮಾಕ್ಕೆ ನೀಡಿರುವ ರೇಟಿಂಗ್: ****
ಕಾಟೇರ ಸಿನಿಮಾ ವಿಮರ್ಶೆ
ಖಂಡಿತಾ ಅವರೇಜ್ ಸಿನಿಮಾ. ಮೊದಲಾರ್ಧ ತಾಜಾವಾಗಿದೆ. ಬಳಿಕ ಇದು ತೆಲುಗಿನ ರಂಗಸ್ಥಳಂ ರೀತಿ ಕಾಣಿಸುತ್ತದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಾಟೇರ ಚಲನಚಿತ್ರ- ಪಬ್ಲಿಕ್ ರಿವ್ಯೂ
ಕೊಟ್ಟಿರೋ ದುಡ್ಡಿಗೆ ಡಬಲ್ ಎಂಟರ್‌ಟೇನ್‌ಮೆಂಟ್ ಪಕ್ಕ ಎಂದು ಯಶ್ ಬಾಸ್ ಎಂಬ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಮರ್ಶೆ ಮಾಡಲಾಗಿದೆ. ಮಾಸ್ತಿ... ಏನು ಬರ್ದಿದ್ದೀರಿ ಗುರು ಡೈಲಾಗ್‌ನ, ಸೂಪರ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. "ಈ ಸಿನಿಮಾದಲ್ಲಿ ಸಾಕಷ್ಟು ರೋಮಾಂಚನ, ಗೋಸ್‌ಬಂಬ್ಸ್‌ಗಳಿವೆ. ಬಾಸ್ ನಟನೆಯಂತೂ ಅದ್ಭುತ, ಸ್ಕ್ರೀನ್ ಪ್ಲೇ ಮತ್ತು ಡೈರೆಕ್ಷನ್‌ಗೆ ಚಪ್ಪಾಳೆ, ಈ ರೀತಿಯ ಕಂಟೆಂಟ್ ಸಿನಿಮಾಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಲಿ" ಎಂದು ಆಪದ್ಬಾಂದವ ಎಂಬ ಟ್ವಿಟ್ಟರ್ ಖಾತೆಯಲ್ಲಿ ರಿವ್ಯೂ ಮಾಡಲಾಗಿದೆ.
ಕಾಟೇರ ಸಿನಿಮಾದ ಒಂದು ಪದದ ವಿಮರ್ಶೆ - ಸೇವಿಯರ್ (ಸಂರಕ್ಷಕ). ಮೊದಲಾರ್ಧ ಅತ್ಯುತ್ತಮವಾಗಿದೆ. ಸೆಕೆಂಡ್ ಆಫ್ ಕೂಡ ಉತ್ತಮವಾಗಿದೆ. ಒಳ್ಳೆಯ ಅನುಭವ ನೀಡುವ ಸಿನಿಮಾ. ಕಮರ್ಷಿಯಲ್ ಅಂಶಗಳೊಂದಿಗೆ ಮಣ್ಣಿನ ಸೊಗಡು ಇರುವ ಸಿನಿಮಾ ತರುವಲ್ಲಿ ಈ ಬಾರಿ ತರುಣ್ ಸುಧೀರ್ ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ಕಮರ್ಷಿಯಲ್ ಅಂಶಗಳೂ ಇವೆ. 1974ರ ಭೂಮಿ ಕಾಯಿದೆ ಕುರಿತು ಅತ್ಯುತ್ತಮವಾಗಿ ತಿಳಿಸಲಾಗಿದೆ. ದರ್ಶನ್ ಅವರ ಅನನ್ಯ ಸ್ಕ್ರೀನ್ ಪ್ರಸೆನ್ಸ್ ಮತ್ತು ಹರಿಕೃಷ್ಣ ಬಿಜಿಎಂ ಅದ್ಭುತ. ವರ್ಷದ ಕೊನೆಗೆ ನೋಡಲು ಒಳ್ಳೆಯ ಸಿನಿಮಾ ಸಿಕ್ಕಿದೆ ಎಂದು ಅಭಿ ಫಿಲ್ಮೊಲಜಿ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ.
ಕನ್ನಡ ಸಿನಿಮಾ ಕಾಟೇರ ರಿವ್ಯೂ
ಕಾಟೇರ ನಮ್ಮ ನೆಲದ ಕಥೆ
ಕಥೆಯ ಗೇಜ್ ಅರಿತು, ತಮ್ಮ ಇಮೇಜ್ ಅನ್ನು ಪಕ್ಕಕ್ಕಿಟ್ಟು ಕಾಟೇರನ ಪಾತ್ರ ಮಾಡಿದ್ದಾರೆ ನಟ ದರ್ಶನ್. ಅರ್ಥಪೂರ್ಣ ಕಥೆಗೆ ತೂಕಬದ್ಧ ಮಾತುಗಳನ್ನು ಪೋಣಿಸಿದ್ದಾರೆ ಮಾಸ್ತಿ. ನಮ್ಮ ಸೊಗಡಿನ ಕಥೆ, ನಮ್ಮ ನೆಲದ ಕಥೆಗಳು ತೆರೆಮೇಲೆ ಬರುತ್ತಿಲ್ಲ ಎಂಬ ಕೊರಗಿಗೆ ತರುಣ್ ಸುಧೀರ್ ಉತ್ತರ ಕೊಟ್ಟಿದ್ದಾರೆ! ಎಂದು ಅವಿನಾಶ್ ರಾಗಿ ಟ್ವೀಟ್ ಮಾಡಿದ್ದಾರೆ.
ಎಕ್ಸ್‌ನಲ್ಲಿ (ಹಳೆಯ ಹೆಸರು ಟ್ವಿಟರ್) ದರ್ಶನ್ ಸಿನಿಮಾ ಕಾಟೇರದ ಕುರಿತು ಜನರ ಇನ್ನಷ್ಟು ಅಭಿಪ್ರಾಯಗಳನ್ನು ಮುಂದೆ ನೀಡಲಾಗಿದೆ. ಜತೆಗೆ ನಿನ್ನೆ ರಾತ್ರಿ ಥಿಯೇಟರ್ ಮುಂದೆ ಡಿಬಾಸ್‌ಗಳ ಖುಷಿ ಹೇಗಿತ್ತು ಎಂಬ ವಿಡಿಯೋಗಳೂ ಇವೆ.
ಕಾಟೇರ ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ಕನ್ನಡದ ಸೂಪರ್‌ಸ್ಟಾರ್ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಾಯಕಿ ನಟಿಸಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಕಾಟೇರ ಸಿನಿಮಾ ನಿರ್ಮಾಣವಾಗಿದೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ.