ಕನ್ನಡ ಸುದ್ದಿ  /  ಮನರಂಜನೆ  /  ಜವಾನ್‌ ಸಕ್ಸಸ್‌ ನಂತರ ಟಾಲಿವುಡ್‌ನತ್ತ ಅಟ್ಲಿ; ಅಲ್ಲು ಅರ್ಜುನ್‌ ಚಿತ್ರಕ್ಕೆ ಆಕ್ಷನ್‌ ಕಟ್‌

ಜವಾನ್‌ ಸಕ್ಸಸ್‌ ನಂತರ ಟಾಲಿವುಡ್‌ನತ್ತ ಅಟ್ಲಿ; ಅಲ್ಲು ಅರ್ಜುನ್‌ ಚಿತ್ರಕ್ಕೆ ಆಕ್ಷನ್‌ ಕಟ್‌

ಮೊದಲ ಬಾಲಿವುಡ್‌ ನಿರ್ದೇಶನದಲ್ಲೇ ಶಾರುಖ್‌ ಖಾನ್‌ನಂತ ಸ್ಟಾರ್‌ ನಟನಿಗೆ ಆಕ್ಷನ್‌ ಕಟ್‌ ಹೇಳಿದ್ದ ಅಟ್ಲಿ ಈಗ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರಂತೆ.

ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡಲು ಹೊರಟ ಅಟ್ಲಿ
ಅಲ್ಲು ಅರ್ಜುನ್‌ ಜೊತೆ ಸಿನಿಮಾ ಮಾಡಲು ಹೊರಟ ಅಟ್ಲಿ

ಶಾರುಖ್‌ ಖಾನ್‌ ಅಭಿನಯದ 'ಜವಾನ್‌' ಸಿನಿಮಾ ಬಾಲಿವುಡ್‌ ಮಾತ್ರವಲ್ಲ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಪಠಾಣ್‌ ಸಿನಿಮಾ ನಂತರ ಬಾಲಿವುಡ್‌ ಬಾದ್‌ಶಾ ಮತ್ತೊಂದು ಹಿಟ್‌ ಖುಷಿಯಲ್ಲಿದ್ದಾರೆ. ಸಿನಿಮಾ ಯಶಸ್ಸು ಕಾಣುವುದರಲ್ಲಿ ನಿರ್ದೇಶಕ ಅಟ್ಲಿ ಕುಮಾರ್‌ ಪಾಲು ಹೆಚ್ಚಾಗೇ ಇದೆ. ಮೊದಲ ಹಿಂದಿ ಸಿನಿಮಾ ನಿರ್ದೇಶನದಲ್ಲೇ ಅಟ್ಲಿ ಸಕ್ಸಸ್‌ ಕಂಡಿದ್ದಾರೆ.

ಸೆಪ್ಟೆಂಬರ್‌ 7 ರಂದು ತೆರೆ ಕಂಡಿದ್ದ ಜವಾನ್

ಜವಾನ್‌ ಸಿನಿಮಾ 7 ಸೆಪ್ಟೆಂಬರ್‌ರಂದು ತೆರೆ ಕಂಡಿತ್ತು. 300 ಕೋಟಿ ರೂಪಾಯಿ ಖರ್ಚು ಮಾಡಿ ತೆಗೆಯಲಾದ ಸಿನಿಮಾ ಇದುವರೆಗೂ 750 ಕೋಟಿ ರೂಪಾಯಿಗೂ ಹೆಚ್ಚು ಲಾಭ ಮಾಡಿದೆ. ಜವಾನ್‌ ಚಿತ್ರವನ್ನು ರೆಡ್‌ ಚಿಲ್ಲಿ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ ಶಾರುಖ್ ಖಾನ್‌ ಪತ್ನಿ ಗೌರಿ ಖಾನ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಗೌರವ ವರ್ಮಾ ಸಹ ನಿರ್ದೇಶನವಿದ್ದು ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸಕ್ಸಸ್‌ ಮೀಟ್‌ ಏರ್ಪಡಿಸಿ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿತ್ತು.‌

ಟಾಲಿವುಡ್‌ನತ್ತ ಹೊರಟ ಅಟ್ಲಿ

ಬಾಲಿವುಡ್‌ನಲ್ಲಿ ಗೆಲುವು ಸಾಧಿಸಿದ ನಂತರ ಈಗ ಅಟ್ಲಿ ಟಾಲಿವುಡ್‌ಗೆ ಕೂಡಾ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೊದಲ ಬಾಲಿವುಡ್‌ ನಿರ್ದೇಶನದಲ್ಲೇ ಶಾರುಖ್‌ ಖಾನ್‌ನಂತ ಸ್ಟಾರ್‌ ನಟನಿಗೆ ಆಕ್ಷನ್‌ ಕಟ್‌ ಹೇಳಿದ್ದ ಅಟ್ಲಿ ಈಗ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರಂತೆ. ಅಟ್ಲಿ ಈಗಾಗಲೇ ಅಲ್ಲು ಅರ್ಜುನ್‌ ಜೊತೆ ಮಾತನಾಡಿದ್ದು ಚಿತ್ರದಲ್ಲಿ ಸಲ್ಮಾನ್ ಖಾನ್‌ ಕೂಡಾ ಇರಲಿದ್ದಾರೆ ಎನ್ನಲಾಗುತ್ತಿದೆ. ವಿಚಾರ ತಿಳಿದ ಸಿನಿಪ್ರಿಯರು ಅಟ್ಲಿ ಹೊಸ ಸಿನಿಮಾ ಅಪ್‌ಡೇಟ್‌ ತಿಳಿಯಲು ಕಾಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಜಾ ರಾಣಿ ಚಿತ್ರದ ಮೂಲಕ ನಿರ್ದೇಶನ ಆರಂಭ

ಅರುಣ್‌ ಕುಮಾರ್‌, ತಮಿಳು ಚಿತ್ರರಂಗದಲ್ಲಿ ಅಟ್ಲಿ ಆಗಿಯೇ ಫೇಮಸ್‌. ತಮಿಳುನಾಡಿನ ಮಧುರೈನವರಾದ ಅಟ್ಲಿ, 2013ರಲ್ಲಿ ರಾಜಾ ರಾಣಿ ಸಿನಿಮಾ ಮೂಲಕ ನಿರ್ದೇಶಕ್ಕೆ ಅಡಿಯಿಟ್ಟರು. ನಂತರ ವಿಜಯ್‌ ಅಭಿನಯದ ತೆರಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದರು. ಸಂಗ್ಲಿ ಬಂಗ್ಲಿ ಚಿತ್ರದ ಮೂಲಕ ನಿರ್ಮಾಣಕ್ಕೂ ಇಳಿದ ಅಟ್ಲಿ, ಅಂದಾಗಾರಂ ಎಂಬ ಸಿನಿಮಾಗೂ ನಿರ್ಮಾಣ ಮಾಡಿದ್ದಾರೆ. ಮಾರ್ಷಲ್‌, ಬಿಗಿ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡಿದ್ದ ಅಟ್ಲಿ, ಈಗ ಜವಾನ್‌ ಸಕ್ಸಸ್‌ ಸಂಭ್ರಮದಲ್ಲೇ ಟಾಲಿವುಡ್‌ಗೆ ಹೊರಟಿದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗಾಗಿ ಈ ಲಿಂಕ್‌ ಒತ್ತಿ