ಕೇಡಿ ಜೈದೇವ್‌ಗಾಗಿ ಮಲ್ಲಿಯನ್ನೇ ಮನೆಯಿಂದ ಓಡಿಸಿದ್ರ ಶಕುಂತಲಾದೇವಿ; ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಎದುರಾಗಿದೆ ಹೊಸ ಸವಾಲು
ಕನ್ನಡ ಸುದ್ದಿ  /  ಮನರಂಜನೆ  /  ಕೇಡಿ ಜೈದೇವ್‌ಗಾಗಿ ಮಲ್ಲಿಯನ್ನೇ ಮನೆಯಿಂದ ಓಡಿಸಿದ್ರ ಶಕುಂತಲಾದೇವಿ; ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಎದುರಾಗಿದೆ ಹೊಸ ಸವಾಲು

ಕೇಡಿ ಜೈದೇವ್‌ಗಾಗಿ ಮಲ್ಲಿಯನ್ನೇ ಮನೆಯಿಂದ ಓಡಿಸಿದ್ರ ಶಕುಂತಲಾದೇವಿ; ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಎದುರಾಗಿದೆ ಹೊಸ ಸವಾಲು

Amruthadhaare Kannada Serial: ಮಲ್ಲಿ ಗರ್ಭಿಣಿಯಾಗಲು ಕಾರಣ ಜೈದೇವ್‌ ಎಂಬ ವಿಷಯ ಶಕುಂತಲಾದೇವಿಗೆ ತಿಳಿಯುತ್ತದೆ. ಮಗನನ್ನು ಉಳಿಸಿಲು ಪ್ಲಾನ್‌ ಮಾಡುತ್ತಾರೆ. ಇನ್ನೊಂದೆಡೆ ಮಲ್ಲಿ ಮನೆ ಖಾಲಿ ಮಾಡಿಸಲಾಗಿರುತ್ತದೆ. ಆಕೆ ಅಲ್ಲಿದ್ದಳು ಎನ್ನುವುದಕ್ಕೆ ಸಾಕ್ಷಿಯೇ ಇರುವುದಿಲ್ಲ. ಭೂಮಿಕಾಳಿಗೆ ಹೊಸ ಸವಾಲು ಎದುರಾಗಿದೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ

Amruthadhaare Kannada Serial Story: ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಸಾಕಷ್ಟು ಅನಿರೀಕ್ಷಿತ ಬೆಳವಣಿಗೆಗೆ ಕಾಣಿಸಿದವು. ಮುಂಜಾನೆಯೇ ಭೂಮಿಕಾ ಎದ್ದು ಮಲ್ಲಿ ಮನೆಗೆ ಹೋಗಿ ಗರ್ಭಿಣಿಯಾಗಲು ಜೈದೇವ್‌ ಕಾರಣ ಎಂಬ ರಹಸ್ಯ ತಿಳಿದುಕೊಂಡಿರುತ್ತಾರೆ. ಮಲ್ಲಿ ಮನೆಯಿಂದ ವಾಪಸ್‌ ಬರುವಾಗ ಶಕುಂತಲಾದೇವಿ ಮಗಳು ಹೊರಗೆ ಇರುತ್ತಾಳೆ. ಎಲ್ಲಿಗೆ ಹೋಗಿದ್ರಿ ಅತ್ತಿಗೆ, ಇಷ್ಟೊತ್ತಲ್ಲಿ, ನಿದ್ದೆ ಬಂದಿಲ್ವ ಎಂದು ಕೇಳುತ್ತಾಳೆ. "ಇಲ್ಲ ಅದು ಮದುವೆ ಕೆಲಸ ಅಂತ" ಎಂದು ಭೂಮಿಕಾ ತಡಬಡಾಯಿಸುತ್ತಾರೆ. "ಜೈದೇವ್‌ ಎದ್ದಿದ್ದೀರಾ?" ಎಂದು ಭೂಮಿಕಾ ಕೇಳುತ್ತಾರೆ. "ಮದುಮಗ ಅಲ್ವಾ? ಬೇಗ ಎದ್ದೇಳ್ತಾರೆ ಅಂದ್ಕೊಂಡೆ" ಎಂದು ಭೂಮಿಕಾ ಹೇಳುತ್ತಾರೆ. "ಜೈದೇವ್‌ ಅಣ್ಣನ ಬಗ್ಗೆ ಕೇಳುತ್ತಿದ್ದಾರೆ. ಏನೋ ಆಗಿದೆ. ಇದನ್ನು ಮಾಮ್‌ಗೆ ಹೇಳಬೇಕು" ಎಂದುಕೊಂಡು ತನ್ನ ತಾಯಿಯ ಬಳಿಗೆ ಹೋಗುತ್ತಾಳೆ.

ಇನ್ನೊಂದೆಡೆ ಅಪೇಕ್ಷಾಳಿಗೆ ತಂದೆ ಸದಾಶಿವ ಸಮಧಾನ ಹೇಳುತ್ತಾ ಇರುತ್ತಾರೆ. ಯಾಕಮ್ಮ ಇನ್ನೂ ಚಿಂತೆ ಮಾಡುತ್ತ ಇದ್ದೀಯ? ಎಂದು ಪ್ರಶ್ನಿಸುತ್ತಾರೆ. ಮಾತಲ್ಲಿ ನೀನು ದೊಡ್ಡ ಮನೆಗೆ ಹೋಗುತ್ತಿದ್ದಿ, ಅಲ್ಲಿ ಭೂಮಿಕಾ ಇರುತ್ತಾಳೆ ಎಂದೆಲ್ಲ ಹೇಳುತ್ತಾಳೆ. ಅಪೇಕ್ಷಾಳಿಗೆ ಮನೆಯವರ ಖುಷಿಗೆ ಭಂಗ ತರಲು ಮನಸ್ಸು ಬರುವುದಿಲ್ಲ. ತನ್ನ ಪ್ರೀತಿಯ ಕಥೆಯನ್ನು ಹೇಳುವುದಿಲ್ಲ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ ಕುರಿತು ಅಪೇಕ್ಷಾ ಮಾತನಾಡುತ್ತಾಳೆ.

ಶಕುಂತಲಾದೇವಿಯನ್ನು ಮಗಳು ಎಬ್ಬಿಸುತ್ತಾಳೆ. ಜೈದೇವ್‌ ಏನೋ ಪ್ರಾಬ್ಲಂನಲ್ಲಿ ಸಿಲುಕಿದ ರೀತಿ ಇದೆ. ಭೂಮಿಕಾ ಅತ್ತಿಗೆ ಸರ್ವೆಂಟ್‌ ಕ್ವಾಟ್ರಾಸ್‌ ಕಡೆಯಿಂದ ಬರುತ್ತ ಇದ್ರು. ಭೂಮಿಕಾಳ ನಡವಳಿಕೆ ಎಂದಿನಂತೆ ಇರಲಿಲ್ಲ. ಜೈದೇವ್‌ ಬಗ್ಗೆಯೂ ಕೇಳಿದ್ರು ಎಂದೆಲ್ಲ ತಾಯಿಗೆ ಮಾಹಿತಿ ನೀಡುತ್ತಾಳೆ.

ಇನ್ನೊಂದೆಡೆ ಭೂಮಿಕಾ ತನ್ನ ಪತಿ ಗೌತಮ್‌ನನ್ನು ಎಬ್ಬಿಸಲು ಪ್ರಯತ್ನಿಸುತ್ತಾಳೆ. ಗೊರಕೆ ಹೊಡೆಯುತ್ತಾ ಇರುತ್ತಾರೆ. ನಿದ್ದೆಯಿಂದ ಎದ್ದೇಳುವುದಿಲ್ಲ.

ಅಳಿಮಯ್ಯನ ರೂಂಗೆ ಶಕುಂತಲಾ ದೇವಿ ಮತ್ತು ಆಕೆಯ ಮಗಳು ಹೋಗುವುದನ್ನು ಮಾವ ನೋಡುತ್ತಾರೆ. ಆತನೂ ಫಾಲೋ ಮಾಡುತ್ತಾನೆ. ನಿದ್ದೆಯಿಂದ ಎಚ್ಚೆತ್ತು ಬಾಗಿಲು ತೆರೆದ ಮಗನನ್ನು ಶಕುಂತಲಾ ದೇವಿ ವಿಚಾರಣೆ ಮಾಡುತ್ತಾರೆ. ನಿನ್ನಿಂದ ಏನೋ ತಪ್ಪು ನಡೆದಿದೆ. ಅದು ಏನಂತ ಹೇಳು ಎಂದು ವಿಚಾರಿಸುತ್ತಾರೆ. ಈ ಸಂದರ್ಭದಲ್ಲಿ ಮನೆಹಾಳ ಮಾವ ಎಲ್ಲಾ ವಿಚಾರ ತಿಳಿಸುತ್ತಾರೆ. ಸರ್ವೆಂಟ್‌ ಮನೆಯಲ್ಲಿ ಫ್ಯಾಮಿಲಿ ಇರಬಾರದು ಅಲ್ವ ಎಂದು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಜೈದೇವ್‌ಗೆ ಕೋಪದಿಂದ ಶಕುಂತಲಾ ದೇವಿ ಕೆನ್ನೆಗೆ ಹೊಡೆಯುತ್ತಾರೆ. "ಭೂಮಿಕಾಳಿಗೆ ಇದು ಗೊತ್ತಾಗಿದೆ. ನೀನು ಮಲ್ಲಿಯನ್ನೇ ಮದುವೆಯಾಗಬೇಕಾಗುತ್ತದೆ" ಎಂದೆಲ್ಲ ಹೇಳುತ್ತಾರೆ. ಈ ಇಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂದು ಆಮೇಲೆ ಪ್ಲಾನ್‌ ಮಾಡುತ್ತಾರೆ. "ನಿನ್ನ ಮದುವೆ ಅಪೇಕ್ಷಾಳ ಜತೆಯೇ ನಡೆಯಬೇಕು. ಆಗೋ ರೀತಿ ನಾನು ಮಾಡ್ತಿನಿ" ಎಂದು ಶಕುಂತಲಾದೇವಿ ಹೇಳುತ್ತಾರೆ. ಬಳಿಕ ತನ್ನ ಅಣ್ಣ (ಮನೆಹಾಳ ಮಾವ)ನಿಗೆ ಏನೋ ಖತರ್ನಾಕ್‌ ಐಡಿಯಾ ತಿಳಿಸುತ್ತಾಳೆ.

ಭೂಮಿಕಾ ಮತ್ತೆ ಕೊಠಡಿಗೆ ಬಂದಾಗ ಅಲ್ಲಿ ಗೌತಮ್‌ ಇರುವುದಿಲ್ಲ. ಗೌತಮ್‌ನನ್ನು ಹುಡುಕುತ್ತ ಬಂದಾಗ ಈಗಾಗಲೇ ವಿಷಯ ತಿಳಿದ ಶಕುಂತಲಾ ದೇವಿ ಏನೂ ತಿಳಿಯದವರಂತೆ ಭೂಮಿಕಾಳಿಗೆ ಎದುರಾಗುತ್ತಾರೆ. "ಏನೋ ಆತಂಕದಲ್ಲಿ ಇರುವ ರೀತಿ ಇದೆ. ಏನಾದ್ರು ಸಮಸ್ಯೆ ಇದ್ರೆ ತಿಳಿಸು. ಇಬ್ಬರು ಸಾಲ್ವ್‌ ಮಾಡೋಣ" ಎಂದೆಲ್ಲ ಹೇಳಿ ಭೂಮಿಕಾಳನ್ನು ಮೋಡಿ ಮಾಡುತ್ತಾರೆ. ಬಳಿಕ ಒಂದಿಷ್ಟು ಮಾತುಕತೆಯ ನಂತರ ಜೈದೇವ್‌ ವಿಷಯವನ್ನು ಭೂಮಿಕಾ ತಿಳಿಸುತ್ತಾಳೆ. ಆಘಾತಗೊಂಡವರಂತೆ ಶಕುಂತಲಾ ವರ್ತಿಸುತ್ತಾರೆ. "ನಮ್ಮ ಜೈದೇವ್‌ ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾನ?" ಎಂದೆಲ್ಲ ಹೇಳುತ್ತಾರೆ. ಹೀಗೆ ಒಂದಿಷ್ಟು ಹೊತ್ತು ನಾಟಕ ನಡೆಯುತ್ತದೆ. "ಈ ವಿಷಯವನ್ನು ಗೌತಮ್‌ಗೆ ಹೇಳಬೇಡ" ಎಂದು ಶಕುಂತಲಾ ಹೇಳುತ್ತಾರೆ. ಈ ಮನೆಯಲ್ಲಿ ಯಾವುದೇ ಕಾರಣಕ್ಕೂ ನಡೆಯಬಾರದು ನಡೆಯಲು ನಾನು ಬಿಡುವುದಿಲ್ಲ. ನನ್ನ ಮನೆತನಕ್ಕೆ ಕಳಂಕ ಬರಲು ಬಿಡುವುದಿಲ್ಲ ಎಂದೆಲ್ಲ ಶಕುಂತಲಾ ಹೇಳುತ್ತಾರೆ. ನೀನು ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಾನು ನೋಡಿಕೊಳ್ಳುವೆ ಎಂದು ಶಕುಂತಲಾ ಹೇಳುತ್ತಾರೆ.

ಭೂಮಿಕಾಳಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ವಿಷಯ ಗೌತಮ್‌ಗೆ ತಿಳಿಸಲು ಸಾಧ್ಯವಾಗುವುದಿಲ್ಲ. ತಂದೆಗೆ ಹೇಳೋಣ ಎಂದು ಫೋನ್‌ ಮಾಡಿದರೆ ಸದಾಶಿವನೂ ಮದುವೆಯ ಖುಷಿಯಲ್ಲೇ ಇರುತ್ತಾರೆ. ಆ ಗಡಿಬಿಡಿ, ಸಡಗರ ನೋಡಿದಾಗ ಭೂಮಿಕಾಳಿಗೆ ವಿಷಯ ಹೇಳಲು ಸಾಧ್ಯವೇ ಆಗುವುದಿಲ್ಲ.

ಶಕುಂತಲಾದೇವಿ ಭೂಮಿಕಾಳನ್ನು ಭೇಟಿಯಾಗುತ್ತಾರೆ. ಬಾ ಕೆಲಸದವಬ ಮಗಳನ್ನು ನೋಡಿಕೊಂಡು ಬರೋಣ. ಏನು ಸತ್ಯ ಎಂದು ಕೇಳೋಣ. ನನಗೆ ಮನೆ ತೋರಿಸು ಎಂದು ಭೂಮಿಕಾಳನ್ನು ಕರೆದುಕೊಂಡ ಹೋಗುತ್ತಾರೆ. ಮಲ್ಲಿ ಮನೆಗೆ ಹೋದಾಗ ಅಲ್ಲಿ ಬಾಗಿಲು ಲಾಕ್‌ ಆಗಿರುತ್ತದೆ. ಬಳಿಕ ಸೆಕ್ಯುರಿಟಿಯಿಂದ ಇನ್ನೊಂದು ಕೀ ಪಡೆದು ಬಾಗಿಲು ತೆಗೆಯಲಾಗುತ್ತದೆ. ಆ ಮನೆಯೊಳಗೆ ಯಾರೂ ಇರುವುದಿಲ್ಲ. ಮನೆ ಕ್ಲೀನ್‌ ಆಗಿರುತ್ತದೆ. ಯಾರು ಇದ್ದಿರುವುದಕ್ಕೆ ಸಾಕ್ಷಿ ಇರುವುದಿಲ್ಲ. ಆಕೆಯ ಬಟ್ಟೆಗಳು, ಪೂಜೆ ಮಾಡುವ ಫೋಟೋ, ಏನೂ ಇಲ್ಲ. ಆಕೆ ಇಲ್ಲಿರುವುದಕ್ಕೆ ಏನೂ ಸಾಕ್ಷಿ ಇರುವುದಿಲ್ಲ. ಈ ಮನೆಯಲ್ಲಿ ಯಾರಿದ್ರು ಎಂದು ಸೆಕ್ಯುರಿಟಿಯನ್ನು ಕೇಳಿದಾಗ ಆತನೂ ಗಂಗಣ್ಣ ಅಂತ ಇದ್ರು, ಅವರ ಜತೆ ಬೇರೆ ಯಾರೂ ಇರಲಿಲ್ಲ ಎಂದು ಹೇಳುತ್ತಾನೆ. ಈ ಮೂಲಕ ಮಲ್ಲಿ ಎಂಬ ಯುವತಿಯೇ ಇಲ್ಲಿ ಇರಲಿಲ್ಲ ಎಂದು ಸಾಧಿಸಲು ಶಕುಂತಲಾ ದೇವಿ ಪ್ಲಾನ್‌ ಮಾಡಿರುತ್ತಾರೆ. ಈ ಸಂದರ್ಭವನ್ನು ಭೂಮಿಕಾ ಹೇಗೆ ನಿಭಾಯಿಸ್ತಾರೆ ಎನ್ನುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner