SSLC Toppers: 625ಕ್ಕೆ 625 ಸಾಧಿಸಿದ ಎಸ್‌ಎಸ್‌ಎಲ್‌ಸಿ ಟಾಪರ್‌ಗಳು: ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಮುದ್ದೆಬಿಹಾಳಕ್ಕೆ ಹೆಮ್ಮೆ
ಕನ್ನಡ ಸುದ್ದಿ  /  ಕರ್ನಾಟಕ  /  Sslc Toppers: 625ಕ್ಕೆ 625 ಸಾಧಿಸಿದ ಎಸ್‌ಎಸ್‌ಎಲ್‌ಸಿ ಟಾಪರ್‌ಗಳು: ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಮುದ್ದೆಬಿಹಾಳಕ್ಕೆ ಹೆಮ್ಮೆ

SSLC Toppers: 625ಕ್ಕೆ 625 ಸಾಧಿಸಿದ ಎಸ್‌ಎಸ್‌ಎಲ್‌ಸಿ ಟಾಪರ್‌ಗಳು: ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಮುದ್ದೆಬಿಹಾಳಕ್ಕೆ ಹೆಮ್ಮೆ

SSLC Results 2023 Toppers: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023ರ ಫಲಿತಾಂಶ ಪ್ರಕಟವಾಗಿದೆ. ಈ ಸಲದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ 100 ಅಂಕ ಗಳಿಸಿದ ನಾಲ್ವರು ಟಾಪರ್‌ಗಳಿದ್ದಾರೆ. ಅವರ ವಿವರ ಹೀಗಿದೆ..

ರಾಜ್ಯದ ನಾಲ್ವರು ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಭೂಮಿಕಾ ಪೈ, ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ, ಯಶಸ್ ಗೌಡ ಮತ್ತು ಅನುಪಮಾ ಶ್ರೀಶೈಲ ಈ ಟಾಪರ್‌ಗಳು. (ಮೂವರ ಚಿತ್ರವಷ್ಟೇ ಲಭ್ಯವಾಗಿದೆ)
ರಾಜ್ಯದ ನಾಲ್ವರು ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಭೂಮಿಕಾ ಪೈ, ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ, ಯಶಸ್ ಗೌಡ ಮತ್ತು ಅನುಪಮಾ ಶ್ರೀಶೈಲ ಈ ಟಾಪರ್‌ಗಳು. (ಮೂವರ ಚಿತ್ರವಷ್ಟೇ ಲಭ್ಯವಾಗಿದೆ)

ಬೆಂಗಳೂರು: ಎಸ್‌ಎಸ್‌ಎಲ್‌ಸಿ 2023ರ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ನಾಲ್ವರು ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.

ಅವರ ವಿವರ ಹೀಗಿದೆ -

1) ಭೂಮಿಕಾ ಪೈ: ಬೆಂಗಳೂರಿನ ನ್ಯೂಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ

2) ಯಶಸ್ ಗೌಡ: ಬಾಲಗಂಗಾದರನಾಥ ಪ್ರೌಢಶಾಲೆ, ಚಿಕ್ಕಬಳ್ಳಾಪುರ

3) ಅನುಪಮಾ ಶ್ರೀಶೈಲ: ಕುಮಾರೇಶ್ವರ ಹೈಸ್ಕೂಲ್, ಸವದತ್ತಿ, ಬೆಳಗಾವಿ

4) ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ: ಆಕ್ಸ್‌ಫರ್ಡ್‌ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ನಾಗರಬೆಟ್ಟ, ಮುದ್ದೆಬಿಹಾಳ

ಜಿಲ್ಲಾವಾರು ಫಲಿತಾಂಶ ಗಮನಿಸಿದರೆ -

ಚಿತ್ರದುರ್ಗ ಜಿಲ್ಲೆ ಶೇಕಡಾ 96.08ರಷ್ಟು ಫಲಿತಾಂಶ ದಾಖಲಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆ ಮತ್ತು ಹಾಸನ ಜಿಲ್ಲೆ ಅನುಕ್ರಮವಾಗಿ ನಂತರದ ಎರಡು ಸ್ಥಾನಗಳಲ್ಲಿವೆ.

ಯಾದಗಿರಿ, ಬೀದರ್‌, ಬೆಂಗಳೂರು ದಕ್ಷಿಣ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದ ಮೂರು ಜಿಲ್ಲೆಗಳಾಗಿವೆ. ಈ ಮೂರು ಜಿಲ್ಲೆಗಳು ಕ್ರಮವಾಗಿ ಶೇ 75.49, ಶೇಕಡ 78.73 ಮತ್ತು ಶೇಕಡ 78.95 ಪಡೆದಿವೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಫಲಿತಾಂಶದಲ್ಲಿ ಮೇಲುಗೈ ಪಡೆದಿದ್ದಾರೆ.

ಎಸ್‌ಎಸ್‌ಎಲ್‌ಸಿ ಮುಖ್ಯಪರೀಕ್ಷೆಯು 2023ರ ಮಾರ್ಚ್‌ 31ರಿಂದ ಏಪ್ರಿಲ್‌ 15ರವರೆಗೆ ನಡೆದಿತ್ತು. 7,94,611 ಶಾಲಾ ವಿದ್ಯಾರ್ಥಿಗಳು, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ವಿದ್ಯಾರ್ಥಿಗಳು, 8,859 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ರಾಜ್ಯದ 15,498 ಪ್ರೌಢಶಾಲೆಗಳ ವಿದ್ಯಾರ್ಥಿಗಳು 3,305 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನ ಕಾರ್ಯದಲ್ಲಿ 63,000 ಶಿಕ್ಷಕರು ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಆರ್ ರಾಮಚಂದ್ರ, ಪರೀಕ್ಷಾಂಗ ನಿರ್ದೇಶಕ ಎಚ್ ಗೋಪಾಲಕೃಷ್ಣ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಅವರು ಬೆಂಗಳೂರಿನಲ್ಲಿಂದು ಫಲಿತಾಂಶ ಪ್ರಕಟಿಸಿದರು. ಸಾಮಾನ್ಯವಾಗಿ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸುತ್ತಾರೆ. ಈ ಸಲ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅದು ಸಾಧ್ಯವಾಗಿಲ್ಲ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 85.63 ರಷ್ಟು ಫಲಿತಾಂಶ ದಾಖಲಾಗಿತ್ತು. 145 ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶೇಕಡ 35 ಅಂಕ ಪಡೆಯಬೇಕು.

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್‌ 21ರಂದು ಪ್ರಕಟಿಸಿತ್ತು. ದ್ವಿತೀಯ ಪಿಯುಸಿಯಲ್ಲಿ ಒಟ್ಟಾರೆ ಶೇಕಡ 74.67 ಫಲಿತಾಂಶ ದಾಖಲಾಗಿದೆ. ಶೇಕಡ 80.72ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರು. ಶೇಕಡ 69.05 ಬಾಲಕರು ಉತ್ತೀರ್ಣರಾಗಿದ್ದರು.

ವಿದ್ಯಾರ್ಥಿಗಳ ಮೊಬೈಲ್‌ಗೆ ಫಲಿತಾಂಶ ನೇರ ರವಾನೆ

ವಿದ್ಯಾರ್ಥಿಗಳು ಶಾಲಾ ದಾಖಲಾತಿ ಸಮಯದಲ್ಲಿ ನೋಂದಾಯಿಸಿಕೊಂಡ ಫೋನ್‌ ನಂಬರ್‌ಗಳಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಎಸ್‌ಎಂಎಸ್‌ ಮೂಲಕ ಬರುತ್ತದೆ. ಹೀಗಾಗಿ, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಸಂಕ್ಷಿಪ್ತ ಸಂದೇಶವನ್ನು ಮೊಬೈಲ್‌ ಮೂಲಕವೇ ಪಡೆಯಬಹುದಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆಗೆ ವೆಬ್‌ಸೈಟ್‌ ವಿಳಾಸ

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಎರಡು (ಅಧಿಕೃತ ಲಿಂಕ್‌ ಒಂದು ಮತ್ತು ಅಧಿಕೃತ ಲಿಂಕ್‌ ಎರಡು) ಪ್ರಮುಖ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು. ಅತ್ಯಧಿಕ ಜನರು ಫಲಿತಾಂಶ ವೀಕ್ಷಣೆಗೆ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ ಆರಂಭದಲ್ಲಿ ಕೆಲವರಿಗೆ ಸರ್ವರ್‌ ಡೌನ್‌ ಅಥವಾ ಸರ್ವರ್‌ ಸ್ಲೋ ಇತ್ಯಾದಿ ಅನುಭವವಾಗಬಹುದು.  

Whats_app_banner