SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ-3 ಫಲಿತಾಂಶ ಪ್ರಕಟ; ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯೋದು ಹೇಗೆ
ಕನ್ನಡ ಸುದ್ದಿ  /  ಕರ್ನಾಟಕ  /  Sslc 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ-3 ಫಲಿತಾಂಶ ಪ್ರಕಟ; ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯೋದು ಹೇಗೆ

SSLC 3 Results: ಕರ್ನಾಟಕ ಎಸ್‌ಎಸ್‌ಎಲ್‌ಸಿ-3 ಫಲಿತಾಂಶ ಪ್ರಕಟ; ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯೋದು ಹೇಗೆ

Exam Results ಕರ್ನಾಟಕದಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ 3 ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಅಂಕ ಪಟ್ಟಿ ಹಾಗೂ ಉತ್ತರ ಪತ್ರಿಕೆ ಪಡೆಯಲು ಅವಕಾಶವಿದೆ.

ಎಸ್‌ಎಸ್‌ಎಲ್‌ಸಿ 3 ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಆನ್‌ಲೈನ್‌ ಮೂಲಕವೂ ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯಬಹುದು,
ಎಸ್‌ಎಸ್‌ಎಲ್‌ಸಿ 3 ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಆನ್‌ಲೈನ್‌ ಮೂಲಕವೂ ಅಂಕಪಟ್ಟಿ, ಉತ್ತರ ಪತ್ರಿಕೆ ಪಡೆಯಬಹುದು,

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ರ ಆಗಸ್ಟ್‌ ತಿಂಗಳಿನಲ್ಲಿ ನಡೆಸಿದ್ದ ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಉತ್ತರ ಪತ್ರಿಕೆಗಳು ಹಾಗೂ ಅಂಕಪಟ್ಟಿಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಇಂದಿನಿಂದಲೇ ಉತ್ತರ ಪತ್ರಿಕೆಗಳ ಪ್ರತಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಅಲ್ಲದೇ ಅಂಕಪಟ್ಟಿಗಳನ್ನು ಕೂಡ ಮಂಡಳಿಯ ವೆಬ್‌ಸೈಟ್‌ ಮೂಲಕವೇ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಮಂಡಳಿಯ ವೆಬ್‌ಸೈಟ್‌ನಲ್ಲಿ ನಿಮ್ಮ ವಿವರಗಳನ್ನು ನೀಡಿದರೆ ಅಂಕಪಟ್ಟಿ ಪಡೆಯಬಹುದು. ಆನಂತರ ಆಯಾ ಶಾಲೆಗಳಲ್ಲೂ ಅಂಕಪಟ್ಟಿ ಪಡೆದುಕೊಳ್ಳಲು ಅವಕಾಶವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ 3 ಪರೀಕ್ಷೆ ಎದುರಿಸಿದವರು ಉತ್ತರ ಪತ್ರಿಕೆಗಳ ಸ್ಕ್ಯಾನ ಪ್ರತಿಯನ್ನು, ಮರು ಎಣಿಕೆ ಹಾಗು ಮರು ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉತ್ತರ ಪತ್ರಿಕೆ ಪಡೆಯಲು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿ ನಿಗದಿಪಡಿಸಿದ ದಿನಾಂಕ ಆಗಸ್ಟ್‌ 26 ರಿಂದ ಅರ್ಜಿ ಸಲ್ಲಿಸಬೇಕು. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಇಲ್ಲವೇ ಆನ್‌ ಲೈನ್‌ ಬ್ಯಾಂಕಿಂಗ್‌ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ ಮೂಲಕ ಚಲನ್‌ ಡೌನ್‌ ಮಾಡಿಕೊಂಡು ಶುಲ್ಕವನ್ನು ಬಿ1/ ಕೆ 1 ಬ್ಯಾಂಕಿಗೆ ಪಾವತಿಸಲು ಆಗಸ್ಟ್‌ 31 ರವರೆಗೆ ಅವಕಾಶವಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆಗೆ ಇಲ್ಲವೇ ಮರು ಮೌಲ್ಯ ಮಾಪನಕ್ಕೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟಂಬರ್‌4 ರವರೆಗೆ ಅವಕಾಶವಿದೆ. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಇಲ್ಲವೇ ಆನ್‌ ಲೈನ್‌ ಬ್ಯಾಂಕಿಂಗ್‌ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ್‌ ಮೂಲಕ ಚಲನ್‌ ಡೌನ್‌ ಮಾಡಿಕೊಂಡು ಶುಲ್ಕವನ್ನು ಬಿ1/ ಕೆ 1 ಬ್ಯಾಂಕಿಗೆ ಪಾವತಿಸಲು ಆಗಸ್ಟ್‌ 31ರಿಂದ ಸೆಪ್ಟೆಂಬರ್‌ ರವರೆಗೆ ಅವಕಾಶವಿದೆ.

ಹೆಚ್ಚಿನ ವಿವರಗಳಿಗೆ ಮಂಡಳಿಯ ಜಾಲತಾಣವಾದ kseab.karnataka.gov.in ನಲ್ಲಿ ವಿವರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದಲ್ಲದೇ ಶಾಲೆಗಳ ಕ್ರೋಢೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕ ಪಟ್ಟಿಗಳನ್ನು ಮಂಡಳಿಯ ಜಾಲ ತಾಣ kseab.karnataka.gov.in ಮೂಲಕ ಶಾಲಾ ಲಾಗಿನ್‌ನಲ್ಲಿ ನೀಡಲಾಗುವುದು. ಶಾಲಾ ಹಂತದಲ್ಲಿ ಮುದ್ರಿಸಿಕೊಳ್ಳಲು ಆವಕಾಶ ಮಾಡಿಕೊಡಲಾಗಿದೆ ಎಂದು ಮಂಡಲಿ ಅಧ್ಯಕ್ಷೆ ಕಾವೇರಿ ತಿಳಿಸಿದ್ದಾರೆ.

Whats_app_banner