Year in review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು

Year in review 2022: ಈ ವರ್ಷ ಕರುನಾಡು ಕಳೆದುಕೊಂಡ ಕನ್ನಡಿಗರಿವರು

  • ರಾಜಕೀಯ, ಸಿನಿಮಾ, ಕಿರುತೆರೆ ಹಾಗೂ ಸಾಹಿತ್ಯ ಸೇರಿದಂತೆ ಈ ವರ್ಷ ಭಾರತವು ಹಲವು ಗಣ್ಯರನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲೂ ಹಲವು ಗಣ್ಯ ನಾಯಕರು ಈ ವರ್ಷ ನಿಧನರಾಗಿದ್ದಾರೆ. ಉಮೇಶ್‌ ಕತ್ತಿ, ಆನಂದ್‌ ಮಾಮನಿಯವರಂತಹ ರಾಜಕೀಯ ಧುರೀಣರು ಸೇರಿದಂತೆ, ಕರ್ನಾಟಕವು 2022 ಕಳೆದುಕೊಂಡು ಪ್ರಮುಖ ವ್ಯಕ್ತಿಗಳ ಪಟ್ಟಿ ಇಲ್ಲಿದೆ.

ಕರ್ನಾಟಕದ ಪಾಲಿಗೆ ಈ ವರ್ಷ ಕಹಿ ಘಟನಾವಳಿಗಳೇ ಹೆಚ್ಚು. ಮೇಲಿಂದ ಮೇಲೆ ಹಲವರನ್ನು ನಾಡು ಕಳೆದುಕೊಂಡಿದೆ. ಈ ಬಗ್ಗೆ ಚಿತ್ರಸಹಿತ ವಿವರ ಇಲ್ಲಿದೆ.
icon

(1 / 20)

ಉಮೇಶ್‌ ಕತ್ತಿ: ಸಚಿವ ಉಮೇಶ್‌ ಕತ್ತಿ ಅವರು ಸೆಪ್ಟೆಂಬರ್‌ 06ರಂದು ಹೃದಯಾಘಾತದಿಂದ ಮೃತಪಟ್ಟರು. 1985ರಲ್ಲಿ ಮೊದಲ ಬಾರಿಗೆ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ ಹಿರಿಮೆ ಇವರದ್ದು. ಎರಡನೇ ಬಾರಿಗೆ 1989ರಲ್ಲೂ ಗೆಲುವು ಅವರದಾಯಿತು. 1994ರಲ್ಲೂ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ದಿಂದ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿದರು. ಆಪರೇಷನ್‌ ಕಮಲದ ಫಲವಾಗಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಒಟ್ಟು 8 ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ ಹೆಗ್ಗಳಿಕೆ ಕತ್ತಿ ಅವರದ್ದು.
icon

(2 / 20)

ಆನಂದ್‌ ಮಾಮನಿ: ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಆನಂದ್‌ ಮಾಮನಿ ಅಕ್ಟೋಬರ್‌ 23ರಂದು ನಿಧನರಾದರು. ಬಿಜೆಪಿಯಿಂದ 2008 ರಲ್ಲಿ ಮೊದಲ ಬಾರಿಗೆ ಸವದತ್ತಿ ಶಾಸಕರಾಗಿ ಆಯ್ಕೆಯಾದ ಮಾಮನಿ, 2013ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿಯೂ ಹ್ಯಾಟ್ರಿಕ್​ ವಿಜಯ ಸಾಧಿಸಿದರು. ನಿಧನರಾದ ಅವಧಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಮಾಮನಿ ಕಾರ್ಯನಿರ್ವಹಿಸುತ್ತಿದ್ದರು.
icon

(3 / 20)

ಎಂ ರಘುಪತಿ: ರಾಜ್ಯದ ಮಾಜಿ ಶಿಕ್ಷಣ ಸಚಿವ ಎಂ ರಘುಪತಿ ಅವರು ಜೂನ್‌ 18ರಂದು ಬೆಂಗಳೂರಿನಲ್ಲಿ ನಿಧನರಾದರು. 1976-1982ರಲ್ಲಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಇವರು, ಮಲ್ಲೇಶ್ವರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಶಾಸಕರಾಗಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
icon

(4 / 20)

ಕುಂಬಳೆ ಸುಂದರ ರಾವ್‌: ಯಕ್ಷಗಾನ ಕ್ಷೇತ್ರದ ಸಾಧಕ ಕುಂಬಳೆ ಸುಂದರ ರಾವ್‌ ನವೆಂಬರ್‌ 30ರಂದು ನಿಧನರಾದರು. ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
icon

(5 / 20)

ಶ್ರೀಶೈಲಪ್ಪ ಬಿದರೂರು: ರೋಣ ಮತ್ತು ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರು ನವರಂಬರ್‌ 25ರಂದು ಕಾಂಗ್ರೆಸ್‌ ಸಭೆಯಲ್ಲಿ ಹೃದಯಾಘಾತದಿಂದ ಕುಸಿದು ನಿಧನರಾದರು. 1998ರಲ್ಲಿ ರೋಣ ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಗೆಲುವು ಸಾಧಿಸಿದ್ದ ಬಿದರೂರು, 2008ರಲ್ಲಿ ಬಿಜೆಪಿಯಿಂದ ಗದಗ ಕ್ಷೇತ್ರದಿಂದ ಶಾಸಕರಾಗಿದ್ದರು. 2023ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರೋಣ ಅಥವಾ ಗದಗ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶ್ರೀಶೈಲಪ್ಪ ಬಿದರೂರು ಬಯಸಿದ್ದರು.
icon

(6 / 20)

ಕೆ ಆರ್ ಮುರಳಿ ಕೃಷ್ಣ: ಸ್ಯಾಂಡಲ್‌ವುಡ್‌ ನಿರ್ದೇಶಕ KR ಮುರಳಿ ಕೃಷ್ಣ ನವೆಂಬರ್‌ 14ರಂದು ಹೃದಯಾಘಾತದಿಂದ ನಿಧನರಾದರು. ಮುರಳಿ ಕೃಷ್ಣ, ನಿರ್ಮಾಣದ ಜತೆಗೆ ಕೆಲ ಸಿನಿಮಾಗಳನ್ನೂ ನಿರ್ದೇಶನ ಮಾಡಿದ್ದರು. ಸಣ್ಣ ಸತ್ಯ, ಗರ ಚಿತ್ರಗಳನ್ನು ನಿರ್ದೇಶಿಸಿದ್ದರು. ಗರ ಸಿನಿಮಾಗಾಗಿ ಬಾಲಿವುಡ್‌ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನೂ ಮುರಳಿ ಕೃಷ್ಣ ಕನ್ನಡಕ್ಕೆ ಕರೆತಂದಿದ್ದರು.
icon

(7 / 20)

ಲೋಹಿತಾಶ್ವ: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ನವೆಂಬರ್‌ 8ರಂದು ನಿಧನರಾದರು. ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಇದ್ದ ಲೋಹಿತಾಶ್ವ, ರಂಗಭೂಮಿಯಲ್ಲಿ ಕೂಡಾ ಗುರುತಿಸಿಕೊಂಡಿದ್ದರು. ಅಭಿಮನ್ಯು, ಆಪತ್ಭಾಂಧವ, ಎ.ಕೆ. 47, ಅವತಾರ ಪುರುಷ, ಮಿಡಿದ ಹೃದಯಗಳು, ಮೈಸೂರು ಜಾಣ, ಪೋಲೀಸ್‌ ಲಾಕ್‌ ಅಪ್‌ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ. 
icon

(8 / 20)

ಕಲ್ಮನೆ ಕಾಮೇಗೌಡ: ಪ್ರಧಾನಿ ಮೋದಿಯಿಂದ ಗುರುತಿಸಿಕೊಂಡು ದೇಶಕ್ಕೆ ಹೆಮ್ಮಯಾಗಿದ್ದ ಕೆರೆಗಳ ನಿರ್ಮಾತೃ ಅಕ್ಟೋಬರ್‌ 17ರಂದು ಇಹಲೋಕ ತ್ಯಜಿಸಿದರು. ಆಧುನಿಕ ಭಗೀರಥ ಎಂದೇ ಗುರುತಿಸಿಕೊಂಡಿದ್ದ ಕಾಮೇಗೌಡರು, ಬರೋಬ್ಬರಿ 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರನ್ನು, ಪ್ರಧಾನಿ ಮೋದಿ ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್​ ಕಿ ಬಾತ್‌ನಲ್ಲಿ ಪ್ರಶಂಸಿಸಿದ್ದರು.
icon

(9 / 20)

ಟಿ.ಮೋಹನ್​ ದಾಸ್ ಎಂ. ಪೈ: ಉಡುಪಿ ಜಿಲ್ಲೆಯ ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ ಟಿ.ಮೋಹನ್​ ದಾಸ್ ಎಂ. ಪೈ (89) ಅವರು ಜುಲೈ 31ರಂದು ನಿಧನರಾದರು. ಇವರು ಡಾ ಟಿ ಎಂ ಎ ಪೈ ಫೌಂಡೇಶನ್ ಹಾಗೂ ಎಂಜಿಎಂ ಕಾಲೇಜ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು.
icon

(10 / 20)

ರವಿ ಪ್ರಸಾದ್‌: ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ, ರವಿ ಪ್ರಸಾದ್‌ ಎಂ ಸೆಪ್ಟೆಂಬರ್‌ 14ರಂದು ಸಾವನ್ನಪ್ಪಿದರು. ಮೂಲತ: ಮಂಡ್ಯದವರಾದ ರವಿ ಪ್ರಸಾದ್‌, ಮಂಡ್ಯ ರವಿ ಎಂದೇ ಫೇಮಸ್. ಟಿ ಎನ್ ಸೀತಾರಾಮ್‌ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ರವಿ, ಚಂದು ಭಾರ್ಗಿ ಪಾತ್ರದಲ್ಲಿ ನಟಿಸಿದ್ದರು. ಇವರು ನೆಗೆಟಿವ್‌ ಪಾತ್ರಗಳಿಗೆ ಹೆಚ್ಚು ಫೇಮಸ್‌ ಆಗಿದ್ದರು. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್‌ ಸೇರಿ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು.‌
icon

(11 / 20)

ಪ್ರೊ ಬಿ ಗಂಗಾಧರಮೂರ್ತಿ: ಖ್ಯಾತ ಲೇಖಕ, ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಸೆಪ್ಟೆಂಬರ್‌ 10ರಂದು ಹೃದಯಾಘಾತದಿಂದ ನಿಧನರಾದರು. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಗಂಗಾಧರಮೂರ್ತಿಯವರು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಕಳೆದ ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿಯಂಥ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳ ಭಾಗವಾಗಿದ್ದರು.
icon

(12 / 20)

ತಮ್ಮಣ್ಣಪ್ಪ ಬುದ್ನಿ: ಸ್ವಾತಂತ್ರ್ಯೋತ್ಸವದ ದಿನವೇ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ ಕೊನೆಯುಸಿರೆಳೆದರು.ತಮ್ಮಣ್ಣಪ್ಪ ಬುದ್ನಿ ಅವರು ಗಾಂಧಿ ತತ್ವಗಳ ಅನುಯಾಯಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಿನೋಭಾ ಭಾವೆ ಅವರ ಕಟ್ಟಾ ಬೆಂಬಲಿಗರಾಗಿದ್ದರು. 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ ತಮ್ಮಣ್ಣಪ್ಪ ಬಡ್ನಿ ಅವರಿಗೆ 24 ವರ್ಷ.
icon

(13 / 20)

ಎಂ ಹೆಚ್ ಕೃಷ್ಣಯ್ಯ: ಕಲಾ ವಿಮರ್ಶಕ, ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ನಾಡೋಜ ಎಂ ಹೆಚ್​​​. ಕೃಷ್ಣಯ್ಯ ಆಗಸ್ಟ್‌ 12ರಂದು ನಿಧನರಾದರು. ಕನ್ನಡ ಸಾಹಿತ್ಯಕ್ಕಾಗಿ ಎಂ ಹೆಚ್​ ಕೃಷ್ಣಯ್ಯ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್​, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಅನೇಕ ವಿಭಾಗಗಳಲ್ಲಿ ಕೃಷ್ಣಯ್ಯ ಅವರು ಸೇವೆ ಸಲ್ಲಿಸಿದ್ದಾರೆ. ಸರಳ ವ್ಯಕ್ತಿತ್ವ, ಕಾರ್ಯದಕ್ಷತೆಗೆ ಹೆಸರುವಾಸಿಯಾಗಿದ್ದ ಅವರು ಕನ್ನಡ ಸಾಹಿತ್ಯ ಕ್ಷೇತ್ರ ಸೇರಿದಂತೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಉತ್ತಮ ಸೇವೆ ಸಲ್ಲಿಸಿದ್ಧಾರೆ.
icon

(14 / 20)

ಶಿವಮೊಗ್ಗ ಸುಬ್ಬಣ್ಣ: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಹೃದಯಾಘಾತದಿಂದ ಆಗಸ್ಟ್‌ 11ರಂದು ಬೆಂಗಳೂರಿನಲ್ಲಿ ನಿಧನರಾದರು. ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನ ನೀಡಿರುವುದಕ್ಕೆ ಇವರಿಗೆ ರಜತ ಕಮಲ ರಾಷ್ಟ್ರಪ್ರಶಸ್ತಿ ದೊರಕಿತ್ತು. ಕೋಡಗನ ಕೋಳಿ ನುಂಗಿತ್ತಾ, ಅಳಬೇಡ ತಂಗಿ, ಬಿದ್ದೀಯಬ್ಬೇ ಮುದುಕಿ ಮುಂತಾದ ಶಿಶುನಾಳ ಷರೀಪರ ಗೀತೆಗಳನ್ನು ಹಾಡಿದ ಇವರ ಗಾಯನಕ್ಕೆ ಕನ್ನಡಿಗರು, ಸಂಗೀತ ಪ್ರೇಮಿಗಳು ಮನಸೋತಿದ್ದಾರೆ.
icon

(15 / 20)

ಎ.ಜಿ. ಕೊಡ್ಗಿ : ಮಾಜಿ ಶಾಸಕ ಕೊಡ್ಗಿ ಜೂನ್‌ 13ರಂದು ನಿಧನರಾದರು. ಎ.ಜಿ.ಕೊಡ್ಗಿ ಅವರು 8 ವರ್ಷಗಳ ಕಾಲ ಬೈಂದೂರು ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಮಂಗಳೂರು ಜಿಲ್ಲಾ ಪರಿಷತ್ ಸದಸ್ಯರಾಗಿ ಕೂಡಾ ಕೆಲಸ ನಿರ್ವಹಿಸಿದ್ದಾರೆ. ಸ್ವಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
icon

(16 / 20)

ಮೋಹನ್​ ಜುನೇಜ: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್​ ಜುನೇಜ​ ಅವರು ಮೇ 7ರಂದು ನಿಧನರಾದರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್​ ಜುನೇಜ, ಹಾಸ್ಯಪಾತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಹಾಸ್ಯನಟರಾಗಿ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. ಯಶ್​ ಅಭಿನಯದ ಸೂಪರ್​ಹಿಟ್​ ಸಿನಿಮಾ ‘ಕೆಜಿಎಫ್​ -1’ ಹಾಗೂ ‘ಕೆಜಿಎಫ್​-2’ ರಲ್ಲೂ ನಟಿಸಿ ಜನಮನ ಗೆದ್ದಿದ್ದರು.
icon

(17 / 20)

ಗಂಡಸಿ ನಾಗರಾಜ್‌: ಚಂದನವನದಲ್ಲಿ ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡಿದ್ದ ಮತ್ತು ಹಾಸ್ಯನಟನಾಗಿಯೂ ಕೆಲಸ ಮಾಡಿದ್ದ ಗಂಡಸಿ ನಾಗರಾಜ್‌ ಈ ವರ್ಷ ನಿಧನರಾದರು.
icon

(18 / 20)

ಕೃಷ್ಣ ಜಿ ರಾವ್‌: ಅನಾರೋಗ್ಯದ ಬಳಲುತ್ತಿದ್ದ ಕೆಜಿಎಫ್‌ ಸಿನಿಮಾ ಖ್ಯಾತಿಯ ತಾತ ಕೃಷ್ಣ ಜಿ ರಾವ್‌ ಡಿಸೆಂಬರ್‌ 7ರಂದು ನಿಧನರಾದರು. ಕೃಷ್ಣ ಜಿ ರಾವ್ ಕೆಜಿಎಫ್‌ ಚಿತ್ರದಲ್ಲಿ ಅಂಧ ವೃದ್ಧನ ಪಾತ್ರದಲ್ಲಿ ನಟಿಸಿದ್ದರು. ಭಾಗ 2 ರಲ್ಲಿ ''ನಿಮಗೊಂದು ಸಲಹೆ ಕೊಡ್ತೀನಿ, ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸಾರ್‌'' ಎಂದು ಜೋಶ್‌ ಆಗಿ ಹೇಳುವ ಈ ತಾತನ ಡೈಲಾಗ್‌ ಬಹಳ ಫೇಮಸ್‌ ಆಗಿತ್ತು.
icon

(19 / 20)

ರಾಮಸ್ವಾಮಿ ಅಯ್ಯಂಗಾರ್​​​​​​​: ಮೇಲುಕೋಟೆ ಬಾಹುಬಲಿ ಎಂದೇ ಹೆಸರಾಗಿದ್ದ ರಾಮಸ್ವಾಮಿ ಅಯ್ಯಂಗಾರ್ ಜೂನ್‌ 14ರಂದು ನಿಧನರಾದರು. ಕಳೆದ 40 ವರ್ಷಗಳಿಂದಲೂ ರಾಮಸ್ವಾಮಿ ಅಯ್ಯಂಗಾರ್ ಅವರು ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು ಪ್ರತಿದಿನ ಕಲ್ಯಾಣಿಯಿಂದ ದೊಡ್ಡ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ಮೆಟ್ಟಿಲುಗಳ ಮೂಲಕ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವರ ಅಭಿಷೇಕ, ಪ್ರಸಾದ ತಯಾರಿಕೆಗೆ ಬೇಕಾಗಿದ್ದ ನೀರನ್ನು ಬೆಟ್ಟದ ಕೆಳಗಿನ ಕಲ್ಯಾಣಿಯಿಂದ ಹೊತ್ತೊಯ್ಯುತ್ತಿದ್ದರು. ದಿನಕ್ಕೆ 3-4 ಬಾರಿ ಹೀಗೆ ಹತ್ತಿ ಇಳಿಯುತ್ತಿದ್ದರೂ ಅವರು ಸ್ವಲ್ಪವೂ ದಣಿವಾಗುತ್ತಿರಲಿಲ್ಲವಂತೆ.
icon

(20 / 20)

ಇತರ ಗ್ಯಾಲರಿಗಳು