Karnataka Result Live 2024: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು
Karnataka Assembly By-Election 2024 Result Live Updates: ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಇತ್ತೀಚೆಗೆ ಉಪ ಚುನಾವಣೆ ನಡೆದಿತ್ತು. ಇದೇ ರೀತಿ ಕೇರಳದ ವಯನಾಡಿನಲ್ಲೂ ಉಪ ಚುನಾವಣೆ ನಡೆದಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಲ್ಲಿದೆ.
Sat, 23 Nov 202407:37 AM IST
Wayanad by election result 2024: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭರ್ಜರಿ ಗೆಲುವು
ಮೊದಲ ಚುನಾವಣೆಯಲ್ಲೇ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲುವಿನ ನಗೆ ಬೀರಿದ್ದಾರೆ. ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಮೂರೂವರೆ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಪ್ರತಿಸ್ಪರ್ಧಿಗಳನ್ನು ಮಣಿಸಿದ್ದಾರೆ. ಸಿಪಿಐನ ಸತ್ಯನ್ ಮೊಕೇರಿ, ಎನ್‌ಡಿಯ ನವ್ಯ ಹರಿದಾಸ್ ಹಾಗೂ ಇತರ 13 ಮಂದಿಯನ್ನು ಪ್ರಿಯಾಂಕಾ ಸೋಲಿಸಿದ್ದಾರೆ.
Sat, 23 Nov 202407:26 AM IST
Karnataka by poll results 2024: ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದವರು ಒಮ್ಮೆ ಕನ್ನಡಿ ನೋಡಿಕೊಳ್ಳಿ: ಡಿಕೆ ಶಿವಕುಮಾರ್
ರಾಜ್ಯದ ಜನರು ಒಳ್ಳೆ ಫಲಿತಾಂಶ ನೀಡಿದ್ದಾರೆ, ಜನರು ಪ್ರಜ್ಞಾವಂತರು, ವಿದ್ಯಾವಂತರಾಗಿದ್ದಾರೆ. ಪ್ರತಿಪಕ್ಷಿಗಳು ಜನರ ಅಭಿವೃದ್ಧಿಯತ್ತ ಗಮನ ಹರಿಸದೆ, ಸುಳ್ಳು ಹೇಳಿಕೊಂಡೇ ಸಮಯ ದೂಡುತ್ತಿದ್ದಾರೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎನ್ನುವುದು ಸಾಬೀತಾಗಿದೆ. ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದವರು ಒಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
Sat, 23 Nov 202407:11 AM IST
Karnataka by poll results 2024: ಸೋಲಿಗೆ ಕಾರಣ ಚರ್ಚಿಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ; ವಿಜಯೇಂದ್ರ
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರೂ ಕಡೆ ನಮಗೆ ನಿರಾಸೆ ಆಗಿದೆ, ಅದರಲ್ಲಿ ಎರಡೂ ಮಾತಿಲ್ಲ. ಆದರೆ ಶಿಗ್ಗಾಂವಿ ಫಲಿತಾಂಶ ನಮಗೆ ಬಹಳ ಆಘಾತ ನೀಡಿದೆ. ಹಿನ್ನಡೆಗೆ ಕಾರಣ ಏನು ಎಂಬುದನ್ನು ಚರ್ಚಿಸುತ್ತೇವೆ, ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಆದ್ರೆ ಮಹಾರಾಷ್ಟ್ರದಲ್ಲಿ ಜನರು ಎನ್‌ಡಿಎ ಪರ ಒಲವು ತೋರಿದ್ದಾರೆ. ಇದರ ಬಗ್ಗೆ ನನಗೆ ಖುಷಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
Sat, 23 Nov 202406:59 AM IST
Karnataka by poll results 2024: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು
ಚನ್ನಪಟ್ಟಣ ಎಕ್ಸಿಟ್ ಪೋಲ್ ಸುಳ್ಳಾಗಿದೆ. ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದು, ಮೈತ್ರಿ ಪಕ್ಷದ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಮುಖಭಂಗವಾಗಿದೆ.
Sat, 23 Nov 202406:52 AM IST
Channapatna by poll results 2024: ದೇವೇಗೌಡರ ಹೋರಾಟದಲ್ಲಿ ಸಾಮಾಜಿಕ ಕಳಕಳಿ ಬದಲು ಸ್ವಾರ್ಥವಿತ್ತು: ಸಿಪಿ ಯೋಗೇಶ್ವರ್
ಚುನಾವಣೆಯಲ್ಲಿ ಗೆಲುವಿನ ಭರವಸೆ ಇತ್ತು. ಜೆಡಿಎಸ್ ಅಸ್ತಿತ್ವಕ್ಕಾಗಿ ದೇವೇಗೌಡ್ರು ಮೊಮ್ಮಗನನ್ನು, ಕುಮಾರಸ್ವಾಮಿ ಮಗನನ್ನು ಪಣವಾಗಿಟ್ಟರು, ಆದರೆ ಈ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವ ಮೂಲಕ ಆ ಪಕ್ಷ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಧೈರ್ಯವಾಗಿ ಹೇಳುತ್ತೇನೆ. ದೇವೇಗೌಡರ ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ, ಬದಲಿಗೆ ಸ್ವಾರ್ಥ ಇತ್ತು. ಜನರು ಅದನ್ನು ಅರ್ಥ ಮಾಡಿಕೊಂಡು ತಿರಸ್ಕರಿಸುವ ಮೂಲಕ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ, ಜೆಡಿಎಸ್-ಬಿಜೆಪಿ ಮೈತ್ರಿ ವರ್ಕೌಟ್ ಆಗಲಿಲ್ಲ.
Sat, 23 Nov 202406:33 AM IST
Karnataka by poll results 2024: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಹಣ ಕೊಟ್ಟು ಮತ ಪಡೆದಿದೆ: ಆರ್. ಅಶೋಕ್
ಕರ್ನಾಟಕ ಉಪ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಸಂಡೂರು, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಚನ್ನಪಟ್ಟಣದಲ್ಲೂ ಸಿಪಿ ಯೋಗೇಶ್ವರ್ ಗೆಲುವಿನ ಸನಿಹದಲ್ಲಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈಗಷ್ಟೇ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್, ಹಣದ ಹೊಳೆಯನ್ನೇ ಹರಿಸಿದೆ, ಹಣ ಕೊಟ್ಟು ತಮ್ಮ ಪರ ಮತಗಳನ್ನು ಪಡೆದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
Sat, 23 Nov 202406:29 AM IST
Sandur Bypoll Results Live: ಸೋತರೂ ತೊಡೆ ತಟ್ಟಿದ ಬಿಜೆಪಿಯ ಬಂಗಾರು ಹನುಮಂತು
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. ಸೋಲುಂಡ ಬಂಗಾರು ಹನುಮಂತು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಅನ್ನಪೂರ್ಣ ಪರ ಜೈಕಾರ ಕೂಗಿದ್ದಕ್ಕೆ ಪ್ರತಿಕ್ರಿಯಿಸಿದ ಹನುಮಂತು, ಎಲ್ಲರೆದುರು ತೊಡೆ ತಟ್ಟಿ ಅಲ್ಲಿಂದ ತೆರಳಿದ್ದಾರೆ. ಅಣ್ಣ ಸೋಲು ಅನುಭವಿಸಿದ್ದಕ್ಕೆ ಹನುಮಂತು ಸಹೋದರ ಕಣ್ಣೀರಿಟ್ಟಿದ್ದಾರೆ.
Sat, 23 Nov 202406:25 AM IST
Karnataka by poll results 2024: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣಗೆ ಗೆಲುವು
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಭರತ್ ಬೊಮ್ಮಾಯಿ ನಿರಾಸೆ ಅನುಭವಿಸಿದ್ದು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರ ಬೀಳಲಿದೆ.
Sat, 23 Nov 202406:17 AM IST
Karnataka by poll results 2024: ಇನ್ನಾದರೂ ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ: ಡಿಕೆ ಸುರೇಶ್
ರಾಜ್ಯದ ಜನರು ಕಾಂಗ್ರೆಸ್‌ಗೆ ಗೆಲುವು ನೀಡುವುದರ ಮುಖಾಂತರ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಅಭಿವೃದ್ಧಿಗೆ ತಡೆ ಒಡ್ಡುತ್ತಿರುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಾಜಿ ಸಿಎಂಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇನ್ನಾದರೂ ನಮ್ಮ ಸಿಎಂ, ನಾಯಕರ ಬಗ್ಗೆ ಆರೋಪಗಳನ್ನು ಮಾಡುವ ಬದಲಿಗೆ ಪ್ರತಿಪಕ್ಷಗಳು ಕರ್ನಾಟಕದ ಅಭಿವೃದ್ಧಿಗೆ ಸಹಕಾರ ಕೊಡುತ್ತೀರೆಂದು ನಂಬಿರುವುದಾಗಿ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
Sat, 23 Nov 202406:07 AM IST
Karnataka by poll results 2024: ಶಿಗ್ಗಾಂವಿಯಲ್ಲಿ ಬೈ ಬೈ ಬೊಮ್ಮಾಯಿ ಪೋಸ್ಟರ್ ಹಿಡಿದ ಕಾಂಗ್ರೆಸ್ ಕಾರ್ಯಕರ್ತರು
ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಿಂದುಳಿದಿದ್ದು ಕಾಂಗ್ರೆಸ್‌ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಭಾರೀ ಮತಗಳ ಅಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ಫಲಿತಾಂಶ ಹೊರ ಬರುವ ಮುನ್ನವೇ ಬೈ ಬೈ ಬೊಮ್ಮಾಯಿ ಪೋಸ್ಟರ್ ಹಿಡಿದು ಸಂಭ್ರಮಾಚರಣ ಮಾಡುತ್ತಿದ್ದಾರೆ.
Sat, 23 Nov 202406:06 AM IST
Karnataka by poll results 2024: ಆರೋಪ ಮಾಡಿದವರಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ: ಪ್ರದೀಪ್ ಈಶ್ವರ್
ಎಕ್ಸಿಟ್ ಪೋಲ್ ಬೇರೆಯದ್ದೇ ಹೇಳಿತ್ತು, ಅದರೆ ನಮಗೆ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ನಂಬಿಕೆ ಇತ್ತು. ಸಿದ್ದರಾಮಯ್ಯ , ಡಿಕೆಶಿ ಅವರ ವಿರುದ್ಧ ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡಿದ್ದವು, ಆದರೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಈ ಚುನಾವಣೆಯಿಂದ ಜನರು ಒಂದು ಸಂದೇಶ ಕೊಟ್ಟಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ.
Sat, 23 Nov 202405:53 AM IST
Sandur Bypoll Results Live: ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಗೆಲುವು
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಅನ್ನಪೂರ್ಣ ಅವರು ಸುಮಾರು 9 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಎಣಿಕೆಗೆ ಬಾಕಿ ಇರುವ ಮತಗಳಿಗಿಂತಲೂ ಮುನ್ನಡೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನ್ನಪೂರ್ಣ ಅವರ ಗೆಲುವು ನಿಚ್ಚಳವಾಗಿದೆ.
Sat, 23 Nov 202404:43 AM IST
Karnataka by poll results 2024: ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ಗೆ ಮುನ್ನಡೆ
ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್, 11,178 ಮತಗಳಿಂದ ಮುನ್ನಡೆ ಸಾಧಿಸಿದ್ದು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿದ್ದಾರೆ.
Sat, 23 Nov 202404:28 AM IST
Karnataka by poll results 2024: ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ
Karnataka by poll results 2024: ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಬಳ್ಳಾರಿ ದುರ್ಗಮ್ಮ ದೇಗುಲಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಭೇಟಿ ನೀಡಿದ್ದಾರೆ. ಕೈ ಅಭ್ಯರ್ಥಿ ಅನ್ನಪೂರ್ಣ ದೇವರ ಮೊರೆ ಹೋಗಿದ್ದಾರೆ.
Sat, 23 Nov 202404:14 AM IST
Wayanad by election result 2024: ಪ್ರಿಯಾಂಕಾ ಗಾಂಧಿಗೆ 1, 02, 588 ಮತ
ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 1,02,588 ಮತಗಳು ದೊರೆತಿದ್ದು ಸಿಪಿಐನ ಸತ್ಯನ್ ಮೊಕೇರಿ ಮತ್ತು ಎನ್‌ಡಿಯ ನವ್ಯ ಹರಿದಾಸ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202404:01 AM IST
Karnataka by poll results 2024: ಚನ್ನಪಟ್ಟಣದಲ್ಲಿ ಕ್ಷಣ ಕ್ಷಣಕ್ಕೂ ರೋಚಕ ತಿರುವು
ಚನ್ನಪಟ್ಟಣದಲ್ಲಿ ನಿಖಿಲ್- ಯೋಗೇಶ್ವರ್ ನಡುವೆ ಫೈಟ್. 4ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದರೆ, ಯೋಗೇಶ್ವರ್ ಹಿಂದಿದ್ದಾರೆ. 4ನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಗೆ 1,151 ಮತಗಳು ದೊರೆತಿವೆ.
Sat, 23 Nov 202403:54 AM IST
Karnataka by poll results 2024: ಶಿಗ್ಗಾಂವಿಯಲ್ಲಿ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಶಿಗ್ಗಾಂವಿಯಲ್ಲಿ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿಯ ಭರತ್ ಬೊಮ್ಮಾಯಿ 440 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಿಂದಿದ್ದಾರೆ.
Sat, 23 Nov 202403:49 AM IST
Karnataka by poll results 2024: ಚನ್ನಪಟ್ಟಣದಲ್ಲಿ 4ನೇ ಸುತ್ತಿನ ಮತ ಎಣಿಕೆ ಆರಂಭ
ಚನ್ನಪಟ್ಟಣದಲ್ಲಿ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ನಾಲ್ಕನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202403:36 AM IST
Karnataka by poll results 2024: ಚನ್ನಪಟ್ಟಣದಲ್ಲಿ ಯೋಗೇಶ್ವರ್‌ಗೆ ಮುನ್ನಡೆ
ಚನ್ನಪಟ್ಟಣದಲ್ಲಿ ಮೂರನೇ ಹಂತದ ಮತ ಎಣಿಕೆ ಮುಕ್ತಾಯವಾಗಿದೆ. ಮೊದಲ ಸುತ್ತಿನಲ್ಲಿ ನಿಖಿಲ್ ಮುಂದಿದ್ದರೆ, 2 ಹಾಗೂ 3ನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202403:25 AM IST
Karnataka by poll results 2024: ಶಿಗ್ಗಾಂವಿಯಲ್ಲಿ ಮೊದಲ ಸುತ್ತಿನ ಎಣಿಕೆ ಮುಕ್ತಾಯ-ಭರತ್ ಬೊಮ್ಮಾಯಿ ಮುನ್ನಡೆ
ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ 224 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಯಾಸಿರ್ ಪಠಾಣ್‌ಗೆ 4964 ಹಾಗೂ ಬಿಜೆಪಿಯ ಭರತ್ ಬೊಮ್ಮಾಯಿಗೆ 5,188 ಮತಗಳು ದೊರೆತಿವೆ.
Sat, 23 Nov 202403:21 AM IST
Karnataka by poll results 2024: ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್
ಚನ್ನಪಟ್ಟಣ ಉಪ ಚುನಾವಣೆ ಮೊದಲ ಸುತ್ತಿನ ಮತ ಎಣಿಕೆ ಮುಗಿದಿದ್ದು ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್ ಅವರನ್ನು ಹಿಂದಿಕ್ಕಿದ್ದಾರೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಜೆಪಿ ನಗರದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Sat, 23 Nov 202403:17 AM IST
Karnataka by poll results 2024: ಚನ್ನಪಟ್ಟಣದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
ಚನ್ನಪಟ್ಟಣದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದ್ದಾರೆ.
Sat, 23 Nov 202403:15 AM IST
Wayanad by election result 2024: ಪ್ರಿಯಾಂಕಾ ಗಾಂಧಿ 26,540 ಮತಗಳ ಮುನ್ನಡೆ
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ 26,540 ಮತಗಳ ಅಂತರಗಳಿಂದ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202403:11 AM IST
Karnataka by poll results 2024: ಗೆಲ್ಲುವ ವಿಶ್ವಾಸವಿದೆ ಎಂದ ಹೆಚ್‌ಡಿಕೆ, ನಿಖಿಲ್ ಕುಮಾರಸ್ವಾಮಿ
ಸ್ವಲ್ಪ ಹೊತ್ತಿನಲ್ಲೇ ಫಲಿತಾಂಶ ಹೊರ ಬೀಳಲಿದೆ. ಇಂದು ಎಲ್ಲದಕ್ಕೂ ತೆರೆ ಬೀಳಲಿದೆ. ಜನತೆ ಈ ಬಾರಿ ನನಗೆ ಅವಕಾಶ ನೀಡುತ್ತಾರೆಂಬ ನಂಬಿಕೆ, ಆತ್ಮವಿಶ್ವಾಸ ಇದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕೂಡಾ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಚುನಾವಣೆ ಪ್ರಚಾರದಿಂದಲೂ ನಂಬಿಕೆ ಇತ್ತು. ಚನ್ನಪಟ್ಟಣ ಜನತೆ ನಿಖಿಲ್‌ಗೆ ಆಶೀರ್ವದಿಸುತ್ತಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
Sat, 23 Nov 202402:57 AM IST
Karnataka by poll results 2024: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
ಚನ್ನಪಟ್ಟಣದಲ್ಲಿ ಅಂಚೆ ಮತ ಎಣಿಕೆ ಮುಗಿದಿದ್ದು ಇವಿಎಂ ಮತ ಎಣಿಕೆ ಆರಂಭವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202402:55 AM IST
Karnataka by poll results 2024: ಸಂಡೂರಿನಲ್ಲಿ ಇವಿಎಂ ಮತ ಎಣಿಕೆ ಆರಂಭ
ಸಂಡೂರಿಲ್ಲಿ ಅಂಚೆ ಮತ ಎಣಿಕೆ ಕಾರ್ಯ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈಗ ಇವಿಎಂ ಮತ ಎಣಿಕೆ ಆರಂಭವಾಗಿದೆ.
Sat, 23 Nov 202402:41 AM IST
Wayanad by election result 2024: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಮುನ್ನಡೆ
ಕೇರಳದ ವಯನಾಡಿನಲ್ಲಿ ಅಂಚೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
Sat, 23 Nov 202402:32 AM IST
Karnataka by poll results 2024: ಅಂಚೆ ಮತ ಎಣಿಕೆ ಆರಂಭ
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ. ಸ್ಟ್ರಾಂಗ್ ರೂಮ್ ಬಾಗಿಲು ತೆಗೆದಿರುವ ಚುನಾವಣಾ ಸಿಬ್ಬಂದಿ ಮೊದಲು ಅಂಚೆ ಮತ ಎಣಿಕೆ ಆರಂಭಿಸಿದ್ದಾರೆ. ಕೇರಳ ವಯನಾಡಿನಲ್ಲಿ ಕೂಡಾ ಮತ ಎಣಿಕೆ ಶುರುವಾಗಿದೆ.
Sat, 23 Nov 202402:09 AM IST
Karnataka by poll results 2024: ಮತ ಎಣಿಕೆಗೆ ಕ್ಷಣಗಣನೆ
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತದಾನ ಎಣಿಕೆ ಮಾಡಲಾಗುವುದು. ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಶಿಗ್ಗಾಂವಿಯ ದೇವಗಿರಿ ಇಂಜಿನಿಯರಿಂಗ್ ಕಾಲೇಜು ಹಾಗೂ ರಾಮನಗರದ ಹೊರ ವಲಯದಲ್ಲಿರುವ ಅರ್ಚಕರಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ತಯಾರಿ ನಡೆದಿದೆ.
Sat, 23 Nov 202401:12 AM IST
Wayanad by election result 2024: ಇಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಭವಿಷ್ಯ ನಿರ್ಧಾರ
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವದ್ರಾ ಮೊಟ್ಟಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಇಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ವಿರುದ್ಧ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಎನ್‌ಡಿಎಯ ನವ್ಯ ಹರಿದಾಸ್ ಹಾಗೂ ಇತರ 13 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಪ್ರಿಯಾಂಕಾಗೆ ಯಾರೂ ಪ್ರಬಲ ಸ್ಪರ್ಧಿಗಳು ಇಲ್ಲದೆ ಇರುವುದು ವಿಶೇಷ. ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದಲೂ ಆಯ್ಕೆಯಾದ ಹಿನ್ನೆಲೆ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿರುವ ಕಾರಣ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
Sat, 23 Nov 202402:09 AM IST
Karnataka bypoll results 2024: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮತ ಎಣಿಕೆ
ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ನವೆಂಬರ್ 13 ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮೊದಲು ಅಂಚೆ ಮತ ಎಣಿಕೆ ನಡೆಯಲಿದೆ. ಸಂಪೂರ್ಣ ಫಲಿತಾಂಶ ಮಧ್ಯಾಹ್ನದ ವೇಳೆಗೆ ಹೊರ ಬೀಳಲಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಮತ ಎಣಿಕೆಗೆ ಸ್ಥಳ ನಿಗದಿಪಡಿಸಲಾಗಿದ್ದು, ಅಲ್ಲಿ ಮೇಲ್ವಿಚಾರಕರು, ಸಹಾಯಕರು, ಸೂಕ್ಷ್ಮ ವೀಕ್ಷಕರು, ರಾಜಕೀಯ ಪಕ್ಷಗಳ ಏಜೆಂಟರು ಉಪಸ್ಥಿತರಿದ್ದಾರೆ.