ಕನ್ನಡ ಸುದ್ದಿ / ಕರ್ನಾಟಕ /
Karnataka by election results 2024: ಉಮೇದಿನಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು ಎಲ್ಲಿ, ಕಮಲ ಬಣ ಬಡಿದಾಟ ಫಲವೇ: 10 ಅಂಶಗಳು
Karnataka by election results 2024: ಕರ್ನಾಟಕದಲ್ಲಿ ಬಿಜೆಪಿ ಭಾರೀ ಉಮೇದಿನೊಂದಿಗೆ ಚುನಾವಣೆ ಎದುರಿಸಿದರೂ ಕಾಂಗ್ರೆಸ್ ಹಿಮ್ಮೆಟ್ಟಿಸಲು ಆಗಲಿಲ್ಲ. ಇದ್ದ ಒಂದು ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಂಡಿತು. ಕಾರಣವಾದರೂ ಏನು. ಇಲ್ಲಿದೆ 10 ಅಂಶಗಳು.
ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪಕ್ಷ ಒಂದೂ ಸ್ಥಾನವನ್ನು ಚುನಾವಣೆಯಲ್ಲಿ ಗೆಲ್ಲಲು ಆಗಿಲ್ಲ.
Karnataka by election results 2024: ಕರ್ನಾಟಕದ ವಿಧಾನಸಭೆಯ ಈ ಉಪ ಚುನಾವಣೆ ಆಡಳಿತಾರೂಢ ಪಕ್ಷಕ್ಕಿಂತ ವಿರೋಧಪಕ್ಷಕ್ಕೆ ಹೆಚ್ಚಿನ ಸಂದೇಶ. ಅದರಲ್ಲೂ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಭಾರೀ ಹಿನ್ನಡೆಯನ್ನೇ ಅನುಭವಿದೆ. ಹೊಸ ಕ್ಷೇತ್ರ ಗೆಲ್ಲುವುದು ಇರಲಿ. ಆಡಳಿತದಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನೂ ಗೆಲ್ಲಲು ಆಗಲಿಲ್ಲ. ರಾಜಕೀಯ ಅನುಭವಿಗಳಾದ ಬಸವರಾಜ ಬೊಮ್ಮಾಯಿ ಅಂತವರೂ ಶಿಗ್ಗಾಂವಿಯಲ್ಲಿ ಸೋತರು. ಚನ್ನಪಟ್ಟಣದಲ್ಲಿ ಪ್ರಬಲ ನಾಯಕನನ್ನು ಪಕ್ಷ ಕಳೆದುಕೊಂಡಿತು. ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಹಿನ್ನಡೆ ಅನುಭವಿಸಿದೆ. ಬಿಜೆಪಿ ಹೀಗೆ ಹಿನ್ನಡೆ ಅನುಭವಿಸಲು ಕಾರಣವೇನು ಇಲ್ಲಿದೆ ಪ್ರಮುಖ ಅಂಶಗಳು.
- ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿದ್ದರೂ ಈ ಬಾರಿ ಚುನಾವಣೆಯಲ್ಲಿ ಒಂದು ಕ್ಷೇತ್ರವನ್ನು ಗೆಲ್ಲುವುದಿರಲಿ. ಇರುವ ಕ್ಷೇತ್ರವನ್ನು ಉಳ್ಸಿಕೊಳ್ಳಲು ಆಗಲಿಲ್ಲ. ಇದರ ಹಿಂದೆ ಕಮಲ ಪಡೆ ರಣತಂತ್ರ ರೂಪಿಸುವುದು ಇರಲಿ. ಒಗ್ಗಟ್ಟಿನ ನಾಯಕತ್ವವನ್ನು ಪ್ರದರ್ಶಿಸುವಲ್ಲಿ ವಿಫಲವಾಯಿತು.
- ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರವಿದ್ದರೂ ಆ ಪಕ್ಷದ ಕಾರ್ಯನೀತಿ ಹಾಗೂ ತಂತ್ರಕ್ಕೆ ಪೂರಕವಾಗಿ ಪ್ರತಿ ತಂತ್ರ ಹೆಣೆಯುವಲ್ಲಿ ಬಿಜೆಪಿ ವಿಫಲವಾಯಿತು. ಇದರಿಂದ ಮೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷ ಗೆಲ್ಲಲು ಆಗಲೇ ಇಲ್ಲ.
ಇದನ್ನೂ ಓದಿರಿ: Karnataka by election results 2024: ಕರ್ನಾಟಕದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ದೊರೆತ ಆ ಬಲ ಯಾವುದು: 10 ಅಂಶಗಳು - ಬಿಜೆಪಿಯಲ್ಲಿ ಒಂದು ವರ್ಷದ ಹಿಂದೆ ಅಧ್ಯಕ್ಷರಾಗಿ ನೇಮಕಗೊಂಡ ಬಿ.ವೈ.ವಿಜಯೇಂದ್ರ ಅವರ ನಾಯಕತ್ವಕ್ಕೆ ಇದು ಪ್ರಮುಖ ವೇದಿಕೆಯೇನೂ ಆಗಿತ್ತು. ಅದರೆ ಬಿಜೆಪಿಯಲ್ಲಿನ ಬಣ ಬಡಿದಾಟ ಜೋರಾಯಿತು. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳು, ಹೇಳಿಕೆಗಳು ಕೂಡ ಈ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ
- ಕುಟುಂಬ ರಾಜಕಾರಣದ ವಿರುದ್ದ ಪ್ರಧಾನಿ ಮೋದಿ ದೆಹಲಿಯಲ್ಲಿ ಹೇಳಿಕೆ ಕೊಟ್ಟರೂ ಕರ್ನಾಟಕದಲ್ಲಿ ಮಣೆ ಹಾಕಿದ್ದು ಕುಟುಂಬ ರಾಜಕಾರಣಕ್ಕೆ. ಅದೂ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿತು. ಕುಟುಂಬ ರಾಜಕಾರಣದ ಬಿಸಿಯೂ ಪಕ್ಷಕ್ಕೆ ತಟ್ಟಿರುವ ಚರ್ಚೆಗಳಿವೆ
- ಕಾಂಗ್ರೆಸ್ ಸರ್ಕಾರದ ವಿರುದ್ದ ಹಗರಣಗಳ ಆರೋಪವನ್ನ ಬಿಜೆಪಿ ಮಾಡಿತು. ಈ ಕುರಿತು ಜನಾಭಿಪ್ರಾಯವನೂ ಮೂಡಿಸಿತು. ಈ ಸಂಬಂಧ ಬೆಳವಣಿಗೆ ನಡೆದು ಸಚಿವರು, ಮೈಸೂರು ಮುಡಾ ಅಧ್ಯಕ್ಷರೂ ರಾಜೀನಾಮೆ ನೀಡಿದರು. ಇದರ ಫಲವನ್ನು ಪಡೆಯಲು ಬಿಜೆಪಿಗೆ ಆಗಲಿಲ್ಲ. ಇದು ಮತಗಳಾಗಿ ಅವರಿಗೆ ಪರಿವರ್ತನೆ ಆಗಲಿಲ್ಲ.
ಇದನ್ನೂ ಓದಿರಿ: Karnataka By Election: ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ - ಲಿಂಗಾಯಿತರ ಮತವನ್ನು ಒಟ್ಟಾಗಿಸಲು ಬಿಜೆಪಿ ವಿಫಲವಾಗಿದ್ದು ಸೋಲಿಗೆ ಕಾರಣವಿರಬಹುದು. ಶಿಗ್ಗಾಂವಿಯಲ್ಲಿ ಲಿಂಗಾಯಿತ ಮತಗಳು ಒಟ್ಟಾಗಿ ಬರಲಿಲ್ಲ. ಪಂಚಮಸಾಲಿ ಮತಗಳು ಕೈ ತಪ್ಪಿದ್ದರ ಜತೆಗೆ ಮುಸ್ಲೀಂ ಮತ ವಿಭಜನೆಯ ಹಿಂದಿನ ತಂತ್ರ ಕೆಲಸ ಮಾಡದೇ ಬಿಜೆಪಿ ಸೋತಿತು.
- ಸಂಡೂರಿನಲ್ಲಿ ಜನಾರ್ದನರೆಡ್ಡಿ ಅವರಿಗೆ ನಾಯಕತ್ವ ನೀಡಿದರೂ ಇತರೆ ನಾಯಕರನ್ನು ಒಗ್ಗೂಡಿಸಲು ಆಗದೇ ಇರುವುದು ಅಲ್ಲಿ ಪಕ್ಷ ಗೆಲುವಿನ ದಡ ಮುಟ್ಟಲು ಆಗಲಿಲ್ಲ. ಮಾಜಿ ಸಚಿವ ಆನಂದ್ ಸಿಂಗ್, ಮುಖಂಡ ಕಾರ್ತಿಕ್ ಘೋರ್ಪಡೆ ಮತ್ತಿತರರು ಪ್ರಚಾರದಿಂದ ದೂರ ಉಳಿದಿದ್ದು ಹೊಡೆತ ಕೊಟ್ಟಿದೆ.
- ಚನ್ನಪಟ್ಟಣದಲ್ಲೂ ಬಿಜೆಪಿ ಮುಖಂಡರಾಗಿದ್ದ ಸಿ.ಪಿ. ಯೋಗೇಶ್ವರ್ ಪಕ್ಷ ಬಿಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ಕರ್ನಾಟಕದ ಜತೆಗೆ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರು ಗಂಭೀರ ಪ್ರಯತ್ನ ಮಾಡಲೇ ಇಲ್ಲ. ಅವರು ಪಕ್ಷ ಬಿಟ್ಟು ಹೋಗಿದ್ದು ಕೂಡ ಹೊಡೆತ ಕೊಟ್ಟಿತು. ಏಕೆಂದರೆ ಎರಡು ಬಾರಿ ಬಿಜೆಪಿಯಿಂದ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆದ್ದು ಸಚಿವರೂ ಆಗಿದ್ದರು.
ಇದನ್ನೂ ಓದಿರಿ: Nikhil Kumarswamy: ನಿಖಿಲ್ ಕುಮಾರ್ ಸ್ವಾಮಿಗೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸೋಲು; ನಟನೆಯ ನಂತರ ಅವರ ದಶಕದ ಸಾರ್ವಜನಿಕ ಹಾದಿ ಹೇಗಿದೆ - ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕರು ಇದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಸಹಿತ ಹಲವರು ಪ್ರಚಾರದಲ್ಲಿ ಕೈಗೊಂಡರೂ ಅದು ಬಿಜೆಪಿಗೆ ಪೂರಕವಾದಂತೆ ಕಾಣುತ್ತಿಲ್ಲ.
- ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನಿಂದ ಹೋದರೆ ಮಾತ್ರ ಕಾಂಗ್ರೆಸ್ ಅನ್ನು ಎದುರಿಸಬಹುದು. ಈ ಚುನಾವಣೆಯಲ್ಲಿ ಇದು ಪೂರಕವಾಗಿ ಇರಲಿಲ್ಲ. ಈ ಅಂಶವೂ ಸೋಲಿಗೆ ಕಾರಣವಾಗಿದೆ.