Karnataka by election results 2024: ಕರ್ನಾಟಕದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ದೊರೆತ ಆ ಬಲ ಯಾವುದು: 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  Karnataka By Election Results 2024: ಕರ್ನಾಟಕದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ದೊರೆತ ಆ ಬಲ ಯಾವುದು: 10 ಅಂಶಗಳು

Karnataka by election results 2024: ಕರ್ನಾಟಕದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ದೊರೆತ ಆ ಬಲ ಯಾವುದು: 10 ಅಂಶಗಳು

Karnataka by election results 2024: ಕರ್ನಾಟಕದ ವಿಧಾನಸಭೆಯ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ತನ್ನ ಬಲದ ಜತೆಗೆ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಗೆಲ್ಲಲು ಪ್ರಮುಖ ಕಾರಣಗಳ ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜೋಡಿ ಉಪಚುನಾವಣೆಯಲ್ಲಿ ಭಾರೀ ಕೆಲಸ ಮಾಡಿದೆ.
ಕರ್ನಾಟಕದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜೋಡಿ ಉಪಚುನಾವಣೆಯಲ್ಲಿ ಭಾರೀ ಕೆಲಸ ಮಾಡಿದೆ.

Karnataka by election results 2024: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಹಿಂದಿನ ಲೋಕಸಭೆ ಚುನಾವಣೆಯಲ್ಲೂ ಚೇತರಿಸಿಕೊಂಡಿದ್ದ ಕಾಂಗ್ರೆಸ್‌ ವಿಧಾನಸಭೆ ಉಪಚುನಾವಣೆಯಲ್ಲಿ ಭಾರೀ ಗೆಲುವನ್ನೇ ಪಡೆದಿದೆ. ಅದೂ ಮೂರಕ್ಕೆ ಮೂರೂ ವಿಧಾನಸಭೆ ಕ್ಷೇತ್ರವನ್ನು ಗೆದ್ದು ಉಮೇದಿನಲ್ಲಿ ಬೀಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು, ಆನಂತರ ಎದುರಾದ ಹಲವಾರು ಹಗರಣಗಳಿಗೆ ಉತ್ತರ ಎನ್ನುವಂತ್ತಿದ್ದ ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್‌ ಪರವಾಗಿ ಹೇಗೆ ಉತ್ತರ ನೀಡಿದರು. ಅದರಲ್ಲೂ ಬಿಜೆಪಿ ಹಾಗೂ ಜೆಡಿಎಸ್‌ ತೆಕ್ಕೆಯಲ್ಲಿದ್ದ ತಲಾ ಒಂದೊಂದು ಕ್ಷೇತ್ರವನ್ನು ಗೆದ್ದ ಕಾಂಗ್ರೆಸ್‌ ತನ್ನ ಬಲವನ್ನು140 ಕ್ಷೇತ್ರಗಳಿಗೆ ಏರಿಸಿಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಹೇಗಿದೆ ಎನ್ನುವ ಪ್ರಮುಖ ಅಂಶಗಳು ಇಲ್ಲಿವೆ.

  1. ಕರ್ನಾಟಕದಲ್ಲಿ ವಿಧಾನಸಭೆ ಉಪ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್‌ ಒಟ್ಟಾಗಿ ಕೆಲಸ ಮಾಡಿತು. ಅದರಲ್ಲೂ ಹಳೆ ಮೈಸೂರು ಭಾಗದ ಚನ್ನಪಟ್ಟಣ, ಹೈದ್ರಾಬಾದ್‌ ಕರ್ನಾಟಕದ ಸಂಡೂರು ಹಾಗೂ ಕಿತ್ತೂರು ಕರ್ನಾಟಕ ಭಾಗದ ಶಿಗ್ಗಾಂವಿ ಕ್ಷೇತ್ರದಲ್ಲಿ ಸಂಘಟಿತವಾಗಿ ಹೋರಾಟ ಮಾಡಿತು. ಇದರಿಂದ ಕಾಂಗ್ರೆಸ್‌ ಮೂರು ಕಡೆ ಗೆಲ್ಲಲು ಸಾಧ್ಯವಾಗಿದೆ.

    ಇದನ್ನೂ ಓದಿರಿ: Nikhil Kumarswamy: ನಿಖಿಲ್‌ ಕುಮಾರ್‌ ಸ್ವಾಮಿಗೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಸೋಲು; ನಟನೆಯ ನಂತರ ಅವರ ದಶಕದ ಸಾರ್ವಜನಿಕ ಹಾದಿ ಹೇಗಿದೆ
  2. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತೊಮ್ಮೆ ಸಾಬೀತಾಗಿದೆ. ಪಕ್ಷದ ಅಹಿಂದ ನಾಯಕರಾಗಿ, ಸರ್ಕಾರವನ್ನು ಒಂದೂವರೆ ವರ್ಷ ಕಾಲ ಮುನ್ನಡೆಸಿ ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಫಲ ಕೊಟ್ಟಂತೆ ಕಾಣುತ್ತಿದೆ.
  3. ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ, ಸಂಘಟನೆ, ಮೂರೂ ಕ್ಷೇತ್ರ, ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಕೈ ಹಿಡಿದಿವೆ. ಡಿ.ಕೆ.ಶಿವಕುಮಾರ್‌ಗೆ ಕೂಡ ಈ ಚುನಾವಣೆ ಬಲ ತುಂಬಿದೆ. ಅದರಲ್ಲೂ ಚನ್ನಪಟ್ಟಣದ ಚುನಾವಣೆ ಫಲಿಶಾಂತ ಶಕ್ತಿ ನೀಡಿದೆ.

    ಇದನ್ನೂ ಓದಿರಿ: Channapatna By Election: ಕಾಂಗ್ರೆಸ್‌ ಸೇರಿ ಚನ್ನಪಟ್ಟಣ ಗೆದ್ದ ಸಿಪಿ ಯೋಗೇಶ್ವರ್; ಹೇಗಿತ್ತು ಸೈನಿಕನ ರಾಜಕೀಯದ ಜರ್ನಿ?
  4. ಈ ಬಾರಿ ಮೂರು ಚುನಾವಣೆಯಲ್ಲಿ ಸಚಿವರು, ಶಾಸಕರು ಹಾಗೂ ಮುಖಂಡರಿಗೆ ಕಾಂಗ್ರೆಸ್‌ ನಾಯಕರು ಟಾಸ್ಕ್‌ ನೀಡಿದ್ದರು. ಶಿಗ್ಗಾಂವಿಯಲ್ಲಿ ಸತೀಶ್‌ ಜಾರಕಿಹೊಳಿ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್‌, ಸಂಡೂರಿನಲ್ಲಿ ಸಂತೋಷ್‌ ಲಾಡ್‌, ಶಿವರಾಜ ತಂಗಡಗಿ, ಚನ್ನಪಟ್ಟಣದಲ್ಲಿ ಡಿಕೆ ಸುರೇಶ್‌ ಸಹಿತ ಹಲವರು ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿದ್ದು ಫಲ ಕೊಟ್ಟಿದೆ.
  5. ಈ ಬಾರಿಯೂ ಕಾಂಗ್ರೆಸ್‌ ಮತಗಣಿತವನ್ನು ಮೂರೂ ಕ್ಷೇತ್ರದಲ್ಲೂ ಮಾಡಿತು. ಶಿಗ್ಗಾಂವಿಯಲ್ಲಿ ಮುಸ್ಲೀಂ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ, ಚನ್ನಪಟ್ಟಣದಲ್ಲಿ ಅನುಭವಿ ಹಾಗೂ ಒಕ್ಕಲಿಗ ನಾಯಕ ಸಿ.ಪಿ.ಯೋಗೇಶ್ವರ್‌ ಗೆ ಹಾಗೂ ಸಂಡೂರಿನಲ್ಲಿ ತಮ್ಮದೇ ಛಾಪು ಹೊಂದಿರುವ ಸರಳತೆಯ ತುಕಾರಾಂ ಕುಟುಂಬಕ್ಕೆ ಟಿಕೆಟ್‌ ನೀಡಿದ್ದು ಯಶಸ್ವಿಯಾಯಿತು. ಮುಸ್ಲೀಂ ಹಾಗೂ ಅಹಿಂದ ಮತಗಳು ಕಾಂಗ್ರೆಸ್‌ ಪರ ಬಂದವು.

    ಇದನ್ನೂ ಓದಿರಿ: Bharat Bommai: ಅಂದು ಹುಬ್ಬಳ್ಳಿಯಲ್ಲಿ ಶೆಟ್ಟರ್‌ ವಿರುದ್ದ ಬಸವರಾಜ್‌ಗೆ ಸೋಲು, ಈಗ ಮಗ ಭರತ್‌ಗೂ ಮೊದಲ ಚುನಾವಣೆಯಲ್ಲಿ ಸಿಗಲಿಲ್ಲ ಗೆಲುವು
  6. ಈ ಬಾರಿ ಚುನಾವಣೆ ಮುನ್ನ ಹಾಗೂ ಆನಂತರ ಹಗರಣಗಳ ಭಾರೀ ಚರ್ಚೆಯಾಯಿತು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ, ಮುಡಾದಲ್ಲಿನ ಸಿಎಂ ಸಿದ್ದರಾಮಯ್ಯ ಅವರ ಬದಲಿ ನಿವೇಶನವೂ ಭಾರೀ ಸದ್ದು ಮಾಡಿತು. ಸಚಿವ ನಾಗೇಂದ್ರ, ಮುಡಾ ಅಧ್ಯಕ್ಷ ಮರೀಗೌಡರ ರಾಜೀನಾಮೆ ಕೂಡ ಆಗಿತ್ತು. ವಕ್ಫ್‌ ವಿವಾದವೂ ಸದ್ದು ಮಾಡಿತು. ಆದರೆ ಜನ ಇಂತಹ ವಿಚಾರಕ್ಕೆ ಗಮನ ನೀಡಲಿಲ್ಲ.
  7. ಈ ಚುನಾವಣೆಯಲ್ಲಿ ಬಿಜೆಪಿನ ಒಗ್ಗಟ್ಟು ಕಾಣಲಿಲ್ಲ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ದ ಎರಡು ಬಣಗಳು ತಿರುಗಿಬಿದ್ದಿದ್ದು ಚುನಾವಣೆಯಲ್ಲಿ ಇದರ ಪರಿಣಾಮವೂ ಆಗಿದೆ. ನಿತ್ಯ ಹಲವು ನಾಯಕರು ಹೇಳಿಕೆ ಕೊಟ್ಟಿದ್ದು, ಇದಕ್ಕೆ ಬಿಜೆಪಿ ವರಿಷ್ಠರು ಬ್ರೇಕ್‌ ಹಾಕದೇ ಇದ್ದುದು ಕಾಂಗ್ರೆಸ್‌ಗೆ ಲಾಭವಂತೂ ಆಗಿದೆ.

    ಇದನ್ನೂ ಓದಿರಿ: Yasir Ahmed Khan Pathan: ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆಲುವು: ಶಿಗ್ಗಾಂವಿಯಲ್ಲಿ ಅಚ್ಚರಿ ಫಲಿತಾಂಶ
  8. ಕುಟುಂಬ ರಾಜಕಾರಣ ಈ ಚುನಾವಣೆಯಲ್ಲೂ ಪ್ರಬಲವಾಗಿಯೇ ಇತ್ತು. ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಪುತ್ರರಿಗೆ ಎನ್‌ಡಿಎ ಟಿಕೆಟ್‌ ನೀಡಿದರೂ ಕಾಂಗ್ರೆಸ್‌ ತನ್ನದೇ ಪಕ್ಷದಲ್ಲಿ ನಾಯಕರಾಗಿದ್ದ ಸಿ.ಪಿ.ಯೋಗೇಶ್ವರ್‌ಗೆ ಅವಕಾಶ ನೀಡಿತು. ಶಿಗ್ಗಾಂವಿಯಲ್ಲೂ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿತು. ಇದು ಕಾಂಗ್ರೆಸ್‌ ಗೆಲುವಿನ ಅಂಶ.
  9. ಚುನಾವಣೆ ವಿಚಾರ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್‌ ಸದಾ ಮುಂದೆ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ತಮ್ಮೆಲ್ಲಾ ಶಕ್ತಿಯನ್ನು ಸಂಘಟಿತವಾಗಿ ಬಳಕೆ ಮಾಡುವುದರಲ್ಲಿ ಕಾಂಗ್ರೆಸ್‌ಗೆ ಅಗಾಧ ಅನುಭವವಿದೆ. ಈ ಚುನಾವಣೆಯಲ್ಲೂ ಇದು ಕೊಂಚ ಹೆಚ್ಚೇ ಫಲಿತಾಂಶವನ್ನು ತಂದುಕೊಟ್ಟಿತು.
  10. ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು ಕಚ್ಚಾಡಿದರೂ ಪಕ್ಷದ ಬೇರುಗಳಿಗೆ ಗಟ್ಟಿಯಿದೆ. ಸೂಕ್ತ ಅಭ್ಯರ್ಥಿ ಇದ್ದರೆ ಗೆಲುವು ಸಾಧ್ಯ ಎನ್ನುವುದನ್ನಂತೂ ಎರಡು ಚುನಾವಣೆಗಳನ್ನು ಹೀನಾಯವಾಗಿ ಚನ್ನಪಟ್ಟಣದಲ್ಲಿ ಸೋತಿದ್ದ ಕಾಂಗ್ರೆಸ್‌ ಮಾಡಿತು. ಅದರಲ್ಲಿ ಸಿ.ಪಿ. ಯೋಗೇಶ್ವರ್‌ ಅಭ್ಯರ್ಥಿಯಾಗಿದ್ದು, ಡಿಕೆ ಸಹೋದರರ ತಂತ್ರಗಾರಿಕೆ ಇದಕ್ಕೆ ಕಾರಣ.

Whats_app_banner