ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆಯ ಮಜಾ; ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್
ಕನ್ನಡ ಸುದ್ದಿ  /  ಕರ್ನಾಟಕ  /  ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆಯ ಮಜಾ; ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್

ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆಯ ಮಜಾ; ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್

ಇದು ವಿದ್ಯಾರ್ಥಿಗಳಿಗೆ ಖುಷಿ ಕೊಡುವ ಸುದ್ದಿ. ಡಿಸೆಂಬರ್‌ ತಿಂಗಳಲ್ಲಿ ಕರ್ನಾಟಕದ ಶಾಲೆಗಳಿಗೆ 8 ದಿನಗಳ ಕಾಲ ರಜೆ ಸಿಗಲಿದೆ. ಶಾಲೆಗಳು ಮಾತ್ರವಲ್ಲದೆ ಕಾಲೇಜುಗಳಿಗೆ ಸಹ 8 ದಿನಗಳ ರಜೆ ಇರಲಿದೆ. ರಜೆಯ ಸಂಪೂರ್ಣ ವಿವರ ಇಲ್ಲಿದೆ.

ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್
ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳು ಬಂದ್

ಶಾಲಾ ಮಕ್ಕಳು ಪ್ರತಿ ವಾರವೂ ಯಾವ ದಿನ ರಜೆ ಸಿಗುತ್ತದೆ ಎಂಬುದಕ್ಕೆ ಕಾಯುತ್ತಿರುತ್ತಾರೆ. ನವೆಂಬರ್‌ ತಿಂಗಳಲ್ಲಿ ಹಲವು ರಜೆಗಳಿವೆ. ಅದಾದ ಬಳಿಕ ಬರುವ ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿಯೂ ತಿಂಗಳ ಉದ್ದಕ್ಕೂ ಕರ್ನಾಟಕದಲ್ಲಿ ಬರೋಬ್ಬರಿ 8 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಇರಲಿವೆ. ಡಿಸೆಂಬರ್ ತಿಂಗಳಲ್ಲಿ ಒಟ್ಟು 31 ದಿನಗಳಿವೆ. ಇದರಲ್ಲಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಸಿಗಲಿದೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸರ್ಕಾರಿ ರಜೆ ಇದೆ. 25ರಂದು ಹಬ್ಬದ ಹಿನ್ನೆಲೆಯಲ್ಲಿ 24ರಂದು ಐಚ್ಛಿಕ ಅಥವಾ ಸ್ಥಳೀಯ ರಜೆ ನೀಡಬಹುದಾಗಿದೆ. ಕೆಲವು ಶಾಲೆಗಳಲ್ಲಿ 26ರಂದು ರಜೆ ಘೋಷಿಸಲಾಗುತ್ತದೆ.

ಡಿಸೆಂಬರ್ ತಿಂಗಳಲ್ಲಿ 5 ಭಾನುವಾರಗಳಿವೆ. ಡಿಸೆಂಬರ್‌ 1, 8, 15, 22 ಮತ್ತು 29ರಂದು ಭಾನುವಾರ ಆಗಿರುವುದರಿಂದ ಸಹಜವಾಗಿ ಶಾಲಾ ಕಾಲೇಜುಗಳಿಗೆ ರಜೆ ಇದೆ. ಉಳಿದಂತೆ ಡಿಸೆಂಬರ್ 14ರಂದು ಹುತ್ತರಿ ಹಬ್ಬ ಇರುವುದರಿಂದ ಸ್ಥಳೀಯ ರಜೆ ಘೋಷಿಸುವ ಅವಕಾಶವಿದೆ. ಕೊಡಗು ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂಭ್ರಮ ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಸ್ಥಳೀಯ ರಜೆಯಾಗಿ ಘೋಷಿಸಲಾಗುತ್ತದೆ. ಹೀಗಾಗಿ ಈ ದಿನವೂ ಶಾಲೆಗಳಿಗೆ ರಜೆ ಇರಲಿದೆ. ಹೀಗಾಗಿ ಇಡೀ ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನಗಳ ರಜೆ ಇದೆ.

ಡಿಸೆಂಬರ್‌ 1, 8, 14, 15, 22, 24, 25, ಮತ್ತು 29ರಂದು ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ.‌ ಅಂದರೆ ಒಂದೇ ತಿಂಗಳಲ್ಲಿ 8 ರಜೆ. ಈ ವರ್ಷ ಕರ್ನಾಕಟದ ಶಾಲಾ ಮಕ್ಕಳಿಗೆ ಸುದೀರ್ಘ ಅವಧಿಯ ರಜೆ ಸಿಕ್ಕಿವೆ. ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆ ರಜೆ ಬಳಿಕ, ನವರಾತ್ರಿ ಮತ್ತು ದೀಪಾವಳಿ ರಜೆಯನ್ನು ಮಕ್ಕಳು ಸವಿದಿದ್ದಾರೆ. ದೀಪಾವಳಿಗೆ ಮೂರು ದಿನಗಳ ರಜೆ ಇದ್ದವು.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮಳೆ ಸಂದರ್ಭದಲ್ಲಿ ಹಲವು ದಿನಗಳ ಕಾಲ ರಜೆ ಘೋಷಣೆಯಾಗಿದ್ದವು. ಹೀಗಾಗಿ ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ.

ರಜೆಯ ಸಮಯದಲ್ಲಿ ಮಕ್ಕಳು ಆಟೋಟ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರಕಲಿದೆ. ಪ್ರತಿಯೊಬ್ಬರೂ ತಮ್ಮ ಚಟುವಟಿಕೆಗಳನ್ನು ಯೋಜಿಸಿಕೊಂಡು, ಮುಂದಿನ ತರಗತಿಗಳಿಗೆ ಸಿದ್ಧತೆ ನಡೆಸಬಹುದು.

Whats_app_banner