ಕನ್ನಡ ರಾಜ್ಯೋತ್ಸವ 2024: ಬೆಂಗಳೂರು ನಗರದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯ, ಮೆಟ್ರೋದಿಂದ ಇಸ್ರೋ, ಮರ ಚಿಪ್‌ನಿಂದ ಸ್ಮಾರ್ಟ್ ವಾಚ್‌ವರೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಬೆಂಗಳೂರು ನಗರದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯ, ಮೆಟ್ರೋದಿಂದ ಇಸ್ರೋ, ಮರ ಚಿಪ್‌ನಿಂದ ಸ್ಮಾರ್ಟ್ ವಾಚ್‌ವರೆಗೆ

ಕನ್ನಡ ರಾಜ್ಯೋತ್ಸವ 2024: ಬೆಂಗಳೂರು ನಗರದ ಬಗ್ಗೆ ತಿಳಿಯಬೇಕಾದ 10 ವೈಶಿಷ್ಟ್ಯ, ಮೆಟ್ರೋದಿಂದ ಇಸ್ರೋ, ಮರ ಚಿಪ್‌ನಿಂದ ಸ್ಮಾರ್ಟ್ ವಾಚ್‌ವರೆಗೆ

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಬೆಂಗಳೂರು ನಗರದ ಇತ್ತೀಚಿನ ಹತ್ತು ಪ್ರಮುಖ ಬೆಳವಣಿಗೆ, ಪ್ರಗತಿಯ ಅಂಶಗಳು, ವಿಶೇಷಗಳನ್ನು ಇಲ್ಲಿ ನೀಡಿದೆ.

ಬೆಂಗಳೂರು ಎಂಬ ಮಹಾನಗರ ಉದ್ಯಾನ ನಗರ, ಐಟಿ ನಗರದ ನಂತರ ಹಲವಾರು ಕ್ಷೇತ್ರಗಳಲ್ಲಿ ಬೆಳೆದಿದೆ.
ಬೆಂಗಳೂರು ಎಂಬ ಮಹಾನಗರ ಉದ್ಯಾನ ನಗರ, ಐಟಿ ನಗರದ ನಂತರ ಹಲವಾರು ಕ್ಷೇತ್ರಗಳಲ್ಲಿ ಬೆಳೆದಿದೆ.

ಬೆಂಗಳೂರು ಎಂತ ತಕ್ಞಣ ನೆನಪಿಗೆ ಏನು ಬರುತ್ತದೆ. ಉದ್ಯಾನ, ಕೆರೆಗಳ ನಗರಿ. ಇಸ್ರೋದೀಂದ ವಂದೇ ಭಾರತ್‌ ಕೋಚ್‌ ತಯಾರಿಸುವ ಹೆಮ್ಮೆಯ ಊರು. ಕೆಂಪೇಗೌಡರು, ಮಹಾರಾಜರು ಕಟ್ಟಿ ಬೆಳೆಸಿದ ನಗರ ಈಗ ಹತ್ತು ಹಲವು ರೂಪದಲ್ಲಿ ಬೆಳೆದಿದೆ. ಅಂತಹ ಹತ್ತು ಬೆಳವಣಿಗೆಗಳ ಪಟ್ಟಿ ಇಲ್ಲಿದೆ.

1. ಐಟಿ ನಗರಿ

ಬೆಂಗಳೂರು ನಗರ ವಿಶ್ವದ ಪ್ರಮುಖ ಐಟಿ ನಗರಿ. ಜಗತ್ತಿನ ಟಾಪ್‌ 24 ಐಟಿ ಕಂಪೆನಿಗಳ ಕಚೇರಿ ಬೆಂಗಳೂರಿನಲ್ಲಿದೆ. ಗೂಗಲ್‌. ಸ್ಯಾಪ್‌ ಲ್ಯಾಬ್ಸ್‌, ಸಿಸ್ಕೋ, ಅಡೋಬ್‌ ಸಿಸ್ಟಮ್ಸ್‌, ಇನ್ಫೋಸಿಸ್‌, ವಿಪ್ರೋ, ಟಿಸಿಎಸ್‌, ಒರಾಕಲ್‌, ಅಸೆಂಚರ್‌ ಸಹಿತ ಪ್ರಮುಖ ಕಂಪೆನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಣ್ಣ, ಮಧ್ಯಮ ಐಟಿ ಕಂಪೆನಿಗಳ ಸಂಖ್ಯೆ ಎರಡು ಸಾವಿರಕ್ಕೂ ಅಧಿಕವಿದೆ. ಜೈವಿಕ ವಿಜ್ಞಾನ ಸಂಶೋಧನೆಯಲ್ಲೂ ಬೆಂಗಳೂರೇ ಮುಂಚೂಣಿಯಲ್ಲಿದೆ.

2.ಸ್ಮಾರ್ಟ್‌ ನಗರಿ

ತಂತ್ರಜ್ಞಾನಗಳ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಐಟಿ ನಗರಿ ಬೆಂಗಳೂರು ಬಳಕೆಯಲ್ಲೂ ಮುಂಚೂಣಿಯಲ್ಲಿಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಆಟೋ ಡ್ರೈವರ್‌ಗಳು, ಕ್ಯಾಬ್‌ ಚಾಲಕರು, ಸಣ್ಣ ವ್ಯಾಪಾರಸ್ಥರು ತಂತ್ರಜ್ಞಾನ ಸೇವಿಗಳಾಗಿ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಿರುವ ಹತ್ತಾರು ಪ್ರಸಂಗಗಳನ್ನು ನೋಡಿದ್ದೇವೆ. ತಂತ್ರಜ್ಞಾನದ ಫಲ ಬೆಂಗಳೂರು ರಸ್ತೆಯಲ್ಲಿಯೇ ಕಾಣುತ್ತಿದ್ದು ಸ್ಮಾರ್ಟ್‌ ನಗರಿಯಾಗಿಯೂ ಬದಲಾಗಿದೆ.

3. ಉದ್ಯಾನ ನಗರದ ಗರಿ

ಬೆಂಗಳೂರು ಉದ್ಯಾನಗಳ ನಗರಿ ಎಂದು ಕರೆಯಲಾಗುತ್ತದೆ. ಇಲ್ಲಿ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಸಹಿತ ಪ್ರಮುಖ ಉದ್ಯಾನಗಳಿವೆ. ಇದಲ್ಲದೇ ಪ್ರತಿ ಬಡಾವಣೆಯಲ್ಲೂ ಉದ್ಯಾನಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಇಷ್ಟೆಲ್ಲಾ ಇದ್ದರೂ ಲಾಲ್‌ ಬಾಗ್‌, ಕಬ್ಬನ್‌ ಪಾರ್ಕ್‌ನ ವಿಶೇಷತೆಯಿಂದಲೇ ಬೆಂಗಳೂರು ದಶಕಗಳಿಂದಲೂ ಉದ್ಯಾನ ನಗರಿಯಾಗಿ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದೆ.

4. ಕೆರೆಗಳ ಊರು

ಬೆಂಗಳೂರು ಉದ್ಯಾನಗಳ ಜತೆಗೆ ಕೆರೆಗಳ ನಗರವೂ ಹೌದು. ಶತಮಾನಗಳ ಹಿಂದೆ ಆಡಳಿತ ನಡೆಸಿದವರು ಬೆಂಗಳೂರಿನ ನೀರಿನ ಲಭ್ಯತೆ, ಪರಿಸರ ಸಮತೋಲನದ ಭಾಗವಾಗಿ ಕೆರೆಗಳನ್ನು ಕಟ್ಟಿಸಿದರು.ಬಹುತೇಕ ಕೆರೆಗಳು ಈಗಲೂ ನಿರ್ವಹಣೆ ಜತೆ ಬಳಕೆಯಲ್ಲೂ ಇವೆ. ಸ್ಯಾಂಕಿ ಕೆರೆ, ಬೆಳ್ಳಂದೂರು, ಹೆಬ್ಬಾಳ ಸಹಿತ ಹಲವು ಕೆರೆಗಳು ತನ್ನತನ ಉಳಿಸಿಕೊಂಡು ಬೆಂಗಳೂರಿನ ಗೌರವ ಹೆಚ್ಚಿಸಿವೆ.

5.ಮಾದರಿ ನಗರಿ

ನಾಡಪ್ರಭು ಕೆಂಪೇಗೌಡರ ಸಹಿತ ಹಲವು ನಾಯಕರು, ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್‌, ಜಯಚಾಮರಾಜ ಒಡೆಯರ್‌ ಅವರ ಪ್ರೋತ್ಸಾಹದಿಂದ ಬೆಂಗಳೂರು ಜಗತ್ತಿನ ಮಾದರಿ ನಗರಿಯಾಗಿ ಬೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಸಂಚಾರ ದಟ್ಟಣೆಯಿಂದ ಗಮನ ಸೆಳೆದಿದ್ದರೂ ಅಭಿವೃದ್ದಿಯಲ್ಲಿ ಹಿಂದೆ ಬೀಳದ ನಗರಿ. ವಾಸಯೋಗ್ಯ ನಗರಿಯೂ ಹೌದು/

6. ಮರ ತಂತ್ರಜ್ಞಾನ

ಬೆಂಗಳೂರು ಮರ ವಿಜ್ಞಾನ ಸಂಸ್ಥೆ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (IWST) ವಿಭಿನ್ನ ಸಂಶೋಧನೆಯಲ್ಲಿ ನಿರತವಾಗಿದೆ. ಶ್ರೀಗಂಧ ಸೇರಿದಂತೆ ಹತ್ತಾರು ಬಗೆಯ ಮರಗಳ ಕುರಿತಾಗಿ ಇಲ್ಲಿ ನಿರಂತರ ಸಂಶೋಧನೆ ನಡೆಯುತ್ತದೆ. ಮೈಸೂರಿನ ಮಹಾರಾಜ, ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ 1938 ರಲ್ಲಿ ಅರಣ್ಯ ಸಂಶೋಧನಾ ಪ್ರಯೋಗಾಲಯ (ಎಫ್‌ಆರ್‌ಎಲ್) ಹುಟ್ಟಿಗೆ ಕಾರಣವಾಯಿತು. ಆನಂತರ ಮರ ವಿಜ್ಞಾನ ಸಂಸ್ಥೆಯಾಗಿ ಬದಲಾಯಿಸಲಾಗಿದೆ. ಶ್ರೀಗಂಧ ಕಳ್ಳತನ ತಡೆಯಲು ಚಿಪ್‌ ತಯಾರಿಯಲ್ಲೂ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ.

7. ಇಸ್ರೋ ಮುಂಚೂಣಿ

ಜಗತ್ತಿನ ಉಪಗ್ರಹ ಉಡಾವಣೆ ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಇರುವುದು ಬೆಂಗಳೂರಿನಲ್ಲಿಯೇ. ಶ್ರೀಹರಿಕೋಟಾದಲ್ಲಿ ಉಡಾವಣೆ ಕೇಂದ್ರವಿದ್ದರೂ ತಂತ್ರಜ್ಞಾನ ಆಧರಿತ ಸಂಶೋಧನೆಗಳು, ಪ್ರಮುಖರು ಇರುವುದು ಬೆಂಗಳೂರಿನಲ್ಲಿಯೇ. ಚಂದ್ರಯಾನ ಸೇರಿದಂತೆ ಇಸ್ರೋ ಹಲವು ವಿಚಾರಗಳಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ.

8. ಬೆಮೆಲ್‌, ಬಿಎಎಲ್‌, ಎಚ್‌ಎಎಲ್‌

ಬೆಂಗಳೂರು ವಿಮಾನ, ಹೆಲಿಕಾಪ್ಟರ್‌, ರೈಲ್ವೆ ಕೋಚ್‌ಗಳು, ವಂದೇ ಭಾರತ್‌ನ ಸ್ಲೀಪರ್‌ ಕೋಚ್‌ಗಳ ಸಹಿತ ಹೊಸ ತಲೆಮಾರಿನ ಬೇಡಿಕೆಗೆ ಅನುಗುಣವಾಗಿ ವಿಭಿನ್ನ ಉತ್ಪಾದನೆಯಲ್ಲಿ ನಿರತ ಪ್ರತಿಷ್ಠಿತ ಸಂಸ್ಥೆಗಳ ಊರು ಹೌದು. ಮೇಕ್‌ ಇಂಡಿಯಾ ಎನ್ನುವ ಪರಿಕಲ್ಪನೆಯಡಿ ಇಲ್ಲಿನ ತಂತ್ರಜ್ಞರು, ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಉತ್ಪಾದನೆಯಲ್ಲೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಿರುವುದು ಬೆಂಗಳೂರಿನ ಬೆಮೆಲ್‌, ಬಿಎಎಲ್‌, ಎಚ್‌ಎಎಲ್‌, ಬಿಎಚ್‌ಇಎಲ್‌ ಸಂಸ್ಥೆಗಳ ವಿಶೇಷತೆ.

9. ಶತಮಾನದ ಐಐಎಸ್ಸಿ

ವಿಜ್ಞಾನ ಸಂಬಂಧಿತ ಸಂಶೋಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಶತಮಾನದ ಹಿಂದೆಯೇ ಆರಂಭಗೊಂಡು ಹತ್ತಾರು ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿರುವುದು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್ಸಿ. ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿರುವುದು ಹಿರಿಮೆ. ಜಮ್‌ಷೆಡ್‌ ಟಾಟಾ ಹಾಗೂ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಬೆಂಬಲ, ಸಹಕಾರದೊದಿಗೆ 1909ರಲ್ಲಿ ಸ್ಥಾಪಿಸಲಾಯಿತು.

10.ನಮ್ಮ ಮೆಟ್ರೋ ಹೆಮ್ಮೆ

ದೆಹಲಿ, ಮುಂಬೈ ನಂತಹ ಮಹಾನಗರಗಳಲ್ಲಿ ಮೆಟ್ರೋ ಸೇವೆ ಇದ್ದರೂ ದಕ್ಷಿಣ ಭಾರತದಲ್ಲಿ ಮೊದಲು ಮೆಟ್ರೋ ಕಂಡಿದ್ದು ಬೆಂಗಳೂರು. ಬೆಂಗಳೂರಿನ ನಮ್ಮ ಮೆಟ್ರೋ ವಿಭಿನ್ನ ಸೇವೆಗಳ ಮೂಲಕ ಗಮನ ಸೆಳೆದಿದೆ. 2011 ರಲ್ಲಿ ಆರಂಭಗೊಂಡ ಒಂದೂವರೆ ದಶಕದಿಂದ ಸೇವೆ ನೀಡುತ್ತಿರುವ ಮೆಟ್ರೋದಲ್ಲಿ ನಿತ್ಯ 10 ಲಕ್ಷದಷ್ಟು ಪ್ರಯಾಣಿಕರು ಮೆಟ್ರೋವನ್ನು ಬಳಸುತ್ತಾರೆ. ಮೆಟ್ರೋ ಬಗೆಬಗೆಯ ಬಣ್ಣದ ಹಾಗೂ ಮಾರ್ಗದ ಮೂಲಕವೂ ಗಮನ ಸೆಳೆದಿದ್ದು. ವಿಸ್ತರಣೆಯೂ ನಡೆದಿದೆ.

Whats_app_banner