Bengaluru: ಉಚಿತ ಆರೋಗ್ಯ ಮೇಳದ ಉಪಯೋಗ ಪಡೆಯಿರಿ -ಸಚಿವ ಕೆ ಗೋಪಾಲಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru: ಉಚಿತ ಆರೋಗ್ಯ ಮೇಳದ ಉಪಯೋಗ ಪಡೆಯಿರಿ -ಸಚಿವ ಕೆ ಗೋಪಾಲಯ್ಯ

Bengaluru: ಉಚಿತ ಆರೋಗ್ಯ ಮೇಳದ ಉಪಯೋಗ ಪಡೆಯಿರಿ -ಸಚಿವ ಕೆ ಗೋಪಾಲಯ್ಯ

ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದ್ದಾರೆ.

<p>ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಗೋಪಾಲಯ್ಯ</p>
ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಗೋಪಾಲಯ್ಯ

ಬೆಂಗಳೂರು : ಕ್ಷೇತ್ರದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಯೋಜನೆ ಮಾಡುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ‌‌ ಪ್ರಯೋಜನವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಕರೆ ನೀಡಿದ್ದ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾ ನಗರದ ಮಟ್ಕಳಮ್ಮ ದೇವಿ ದೇವಸ್ಥಾನದ ಅಂಬೇಡ್ಕರ್ ಭವನದಲ್ಲಿ ಮಹಾಲಕ್ಷ್ಮಿ ಎಜುಕೇಷನ್‌ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳಕ್ಕೆ ಸಚಿವ ಕೆ ಗೋಪಾಲಯ್ಯ ಚಾಲನೆ ನೀಡಿದರು.‌ ಬಳಿಕ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ನೀವಷ್ಟೇ ಅಲ್ಲದೆ ದೂರದ ಊರಿನಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರು, ಹಿತೈಷಿಗಳಿಗೂ ಇಂಥಹ ಶಿಬಿರಗಳ ಬಗ್ಗೆ ತಿಳಿಸಿ. ಅವರು ಕೂಡ ಇದರ ಉಪಯೋಗ ಪಡೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಕಣ್ಣು, ಹೃದಯ, ಶ್ವಾಸಕೋಶ, ಗರ್ಭಕೋಶ, ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಕಣ್ಣಿನ ತೊಂದರೆ ಇರುವವರಿಗೂ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕಗಳನ್ನೂ ಕೂಡ ವಿತರಿಸಲಾಗುವುದು ಎಂದರು.

ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ ಗೋಪಾಲಯ್ಯ, ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ಬಿಬಿಎಂಪಿ ಮಾಜಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ಬಿ ಟಿ ಶ್ರೀನಿವಾಸ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿ ‌ಪಾಲಕರ ಪಾತ್ರ ಮುಖ್ಯ

ಪುಟ್ಟ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಗುರುಗಳ ಪಾತ್ರ ಬಹಳ ಮುಖ್ಯವಾದುದು. ಆದರೆ ಅದಕ್ಕೂ ಮೀರಿ ಪಾಲಕರ ಪಾತ್ರ ಪ್ರಾಮು‍ಖ್ಯತೆ ಪಡೆಯುತ್ತದೆ. ಅಕ್ಷರ ಕಲಿಸಿದ ಗುರುವಿಗೆ ಗೌರವ ಕೊಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಜೀವನದಲ್ಲಿ ಆದರ್ಶ ಗುಣಗಳನ್ನು ಆಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ. ನೀತಿ ಪಾಠಗಳು ಅಲ್ಲಿಂದಲೇ ಶುರುವಾಗಬೇಕು ಎಂದು ಸಚಿವ ಗೋಪಾಲಯ್ಯ ಕರೆ ನೀಡಿದ್ದಾರೆ

ಶನಿವಾರ ಬೆಂಗಳೂರಿನ ಕಮಲಾ ನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರ ಸಭೆ ಮತ್ತು ಕಲಿಕಾ‌ ಚೇತರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾ‌ಲಾ ಶುಲ್ಕ ಕಟ್ಟಿ, ಬಟ್ಟೆ ತಂದುಕೊಟ್ಟ ಕೂಡಲೇ ಪಾಲಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಮುಗಿಯುವುದಿಲ್ಲ. ನಿತ್ಯ ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ? ಅವರಿಗೆ ಏನು ಅರ್ಥ ಆಗಿದೆ ಎಂಬುದರ ಬಗ್ಗೆಯೂ ಪಾಲಕರು ತಿಳಿದುಕೊ‍ಳ್ಳಬೇಕು ಎಂದರು.

ಶಾಲೆಗಳಲ್ಲಿ ನಡೆದ ಪಾಠ, ಪ್ರವಚನಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಳ್ಳಬೇಕು. ನೋಟ್ ಪುಸ್ತಕಗಳನ್ನು ಪರಿಶೀಲನೆ ನಡೆಸಬೇಕು. ಆಗ ಮಕ್ಕಳಿಗೂ ಪೋಷಕರ ಕಾಳಜಿ ಅರ್ಥ ವಾಗುತ್ತದೆ. ಹೋಮ್‌ ವರ್ಕ್‌ಗಳನ್ನೂ ಅವರು ಸಮರ್ಪಕವಾಗಿ ಮಾಡುತ್ತಾರೆ. ಕಲಿಕೆಯಲ್ಲೂ ಒಂದು ನಿರಂರತೆ ಉಳಿಯುತ್ತದೆ. ಕಲಿಕೆಯ ಮೇಲಿನ ಆಸಕ್ತಿಯೂ ಉಂಟಾಗುತ್ತದೆ ಎಂದರು.

ಪಾಲಕರು ಮಕ್ಕಳ ಶಾಲೆಯಲ್ಲಿ ಅವರಿಗೆ ಪಾಠ ಮಾಡುವ ಶಿಕ್ಷಕರ ಜತೆಗೆ ನಿಯತವಾದ ಸಂಪರ್ಕವನ್ನು ಇಟ್ಟುಕೊಂಡಿರಬೇಕು. ಇದರಿಂದ ಶಿಕ್ಷಕರು ಮತ್ತು ಪಾಲಕರ ನಡುವೆ ಒಂದು ಸಮನ್ವಯ ಸಾಧನೆಯಾಗುತ್ತದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಹೇಳಿದರು.

Whats_app_banner