Umesh Katti Insta Post: ಗಮನಸೆಳೆದಿದೆ ಉಮೇಶ್ ಕತ್ತಿ ಅವರ ಇನ್‌ಸ್ಟಾ ಪೋಸ್ಟ್..
ಉಮೇಶ್ ಕತ್ತಿ ಅವರ ಟ್ವಿಟರ್ ಖಾತೆ ಮತ್ತು ಇನ್‌ಸ್ಟಾಗ್ರಾಂನಲ್ಲಿ ಇಂದು ಅಪ್ಡೇಟ್ ಆಗಿರುವ ಪೋಸ್ಟ್ ಗಮನಸೆಳೆದಿದೆ.
ಬೆಂಗಳೂರು: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮಂಗಳವಾರ ರಾತ್ರಿ ಚಿರನಿದ್ರೆಗೆ ಜಾರಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ಈಗ ಬೆಲ್ಲದ ಬಾಗೇವಾಡಿಯಲ್ಲಿ ನಡೆಯುತ್ತಿದೆ.
ಉಮೇಶ್ ಕತ್ತಿ ಅವರಿಗೆ ಅಂತಿಮ ಗೌರವ ಸಲ್ಲಿಸುತ್ತಿದೆ ನಾಡು. ಬೆಳಗಾವಿಯಲ್ಲಿ ಇಂದು ಸರ್ಕಾರಿ ರಜೆ ಘೋಷಣೆ ಆಗಿತ್ತು. ಸರ್ಕಾರಿ ಮರ್ಯಾದೆಯೊಂದಿಗೆ ಅವರ ಅಂತಿಮ ಸಂಸ್ಕಾರ ನೆರವೇರುತ್ತಿದೆ.
ಈ ನಡುವೆ, ಅವರ ಟ್ವಿಟರ್ ಖಾತೆ ಮತ್ತು ಇನ್‌ಸ್ಟಾಗ್ರಾಂನ ಪೋಸ್ಟ್ ಗಮನಸೆಳೆಯುತ್ತಿದೆ. ಉಮೇಶ್ ಕತ್ತಿ ಅವರ ರಾಜಕೀಯ ಬದುಕಿನ ಕಿರು ನೋಟ ಎಂಬ ಶೀರ್ಷಿಕೆಯ ಪೋಸ್ಟ್ ಗಮನಸೆಳೆಯುತ್ತಿದೆ.
ಅಂಥದ್ದೇನಿದೆ ಅದರಲ್ಲಿ ಎಂದರೆ,
ಉಮೇಶ್ ಕತ್ತಿ ರಾಜಕೀಯ ಬದುಕಿನ ಕಿರು ನೋಟ ಎಂಬ ಶೀರ್ಷಿಕೆಯಲ್ಲಿ ಇನ್‌ಸ್ಟಾ ಗ್ರಾಂ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾಲ್ಯದ ಗೆಳೆಯರ ನೆನಪಿನಲ್ಲಿ ಉಮೇಶ್ ಕತ್ತಿ ಅವರನ್ನು ಪ್ರಸ್ತುತಿ ಮಾಡಲಾಗಿದೆ.
ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಇಂದು ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಸಂಸ್ಕಾರ ನೆರವೇರುತ್ತಿದೆ. ಅಗಲಿದ ನಾಯಕನಿಗೆ ಅಂತಿಮ ನಮನದ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿರುವುದು ಹೀಗೆ.. Umesh Katti: ಅಗಲಿದ ನಾಯಕನಿಗೆ ಅಂತಿಮ ನಮನದ ಕ್ಷಣಗಳು; ಕೆಲವು ಫೋಟೋಸ್ ಇಲ್ಲಿವೆ..
ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಹೃದಯಾಘಾತಕ್ಕೆ ಒಳಗಾಗಿದ್ದ ಉಮೇಶ್ ಕತ್ತಿ ಅವರ ಬದುಕಿನ ಕೊನೆಯ ಕ್ಷಣದ ವಿಡಿಯೋ ಈಗ ವೈರಲ್ ಆಗಿದೆ. Last minutes of Umesh Katti: ಉಮೇಶ್ ಕತ್ತಿ ಅವರ ಬದುಕಿನ ಕೊನೆಯ ಕ್ಷಣ; ವಿಡಿಯೋ ಇಲ್ಲಿದೆ.
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರತಿಪಾದಕ ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರ ಕಿರು ಪರಿಚಯ ಇಲ್ಲಿದೆ. Who is Umesh Katti: ಉಮೇಶ್ ಕತ್ತಿ ಯಾರು? ಅವರ ಕಿರು ಪರಿಚಯ ಇಲ್ಲಿದೆ..
ವಿಶ್ವನಾಥ ಕತ್ತಿ ಅವರಿಗೂ ಹೃದಯಾಘಾತವಾಗಿತ್ತು…!
ಉಮೇಶ್ ಕತ್ತಿ ಅವರ ತಂದೆ, ವಿಶ್ವನಾಥ ಕತ್ತಿ ಅವರು ಕೂಡ ವಿಧಾನಸಭಾ ಕಲಾಪ ನಡೆಯುತ್ತಿದ್ದಾಗಲೇ ಹೃದಯಾಘಾತವಾಗಿ ವಿಶ್ವನಾಥ ಕತ್ತಿಯವರೂ ಮೃತಪಟ್ಟಿದ್ದರು. ಅವರಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದವರು ಉಮೇಶ್ ಕತ್ತಿ. ಒಂದು ಸಲ ಮಾತ್ರ ಹುಕ್ಕೇರಿಯಲ್ಲಿ ಸೋಲನುಭವಿಸಿದ್ದರು. ಎಂಟು ಸಲ ಶಾಸಕರಾಗಿದ್ದ ಉಮೇಶ್ ಕತ್ತಿ ಅವರು, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲೂ ಸಚಿವರಾಗಿದ್ದರು. - Umesh Katti dies of heart attack : ಸಚಿವ ಉಮೇಶ್ ಕತ್ತಿ ವಿಧಿವಶ; ತೀವ್ರ ಹೃದಯಾಘಾತ ಕಾರಣ
Causes of sudden heart attack: ಹೃದಯಾಘಾತದ ಸಮಸ್ಯೆ 30 ರಿಂದ 50 ವರ್ಷ ವಯಸ್ಸಿನವರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಅನೇಕ ಬಾರಿ ಒಂಟಿತನ, ಒತ್ತಡ, ಭಾವನಾತ್ಮಕ ಯಾತನೆ, ಮದ್ಯಪಾನ, ಧೂಮಪಾನ, ಸರಿಯಾದ ವ್ಯಾಯಾಮದ ಕೊರತೆ, ಸರಿಯಾದ ಆಹಾರದ ಕೊರತೆ ಹೃದಯಾಘಾತಕ್ಕೆ ಕಾರಣ ಎನ್ನುತ್ತಾರೆ ವೈದ್ಯಕೀಯ ಪರಿಣತರು. - What is Sudden Heart Attack: ಹಠಾತ್ ಹೃದಯಾಘಾತಕ್ಕೇನು ಕಾರಣ? ಡಾಕ್ಟರ್ಸ್ ಹೇಳೋದೇನು?
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.