ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡದಲ್ಲಿ ವೈರಲ್ ವಿಡಿಯೋ ಕಾರಣಕ್ಕೆ ಸಾರಿಗೆ ಸಂಸ್ಥೆ ಚಾಲಕ, ಕಂಡಕ್ಟರ್ ಅಮಾನತು; ಹೆಲ್ಮೆಟ್ ಧರಿಸದ್ದಕ್ಕೆ ಟಿಪ್ಪರ್ ಚಾಲಕನಿಂದ ದಂಡ ವಸೂಲಿ

ಧಾರವಾಡದಲ್ಲಿ ವೈರಲ್ ವಿಡಿಯೋ ಕಾರಣಕ್ಕೆ ಸಾರಿಗೆ ಸಂಸ್ಥೆ ಚಾಲಕ, ಕಂಡಕ್ಟರ್ ಅಮಾನತು; ಹೆಲ್ಮೆಟ್ ಧರಿಸದ್ದಕ್ಕೆ ಟಿಪ್ಪರ್ ಚಾಲಕನಿಂದ ದಂಡ ವಸೂಲಿ

ಧಾರವಾಡದಲ್ಲಿ ವೈರಲ್ ವಿಡಿಯೋ ಕಾರಣಕ್ಕೆ ಸಾರಿಗೆ ಸಂಸ್ಥೆ ಚಾಲಕ, ಕಂಡಕ್ಟರ್ ಅಮಾನತು ಮಾಡಲಾಗಿದೆ. ಮಳೆ ಬರುವಾಗ ಛತ್ರಿ ಹಿಡಿದು ಬಸ್ ಚಾಲನೆ ಮಾಡಿ ಅದರ ವಿಡಿಯೋ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದು ಕಾರಣ. ಇನ್ನೊಂದು ಪ್ರಕರಣದಲ್ಲಿ, ಹೊನ್ನಾವರದಲ್ಲಿ ಹೆಲ್ಮೆಟ್ ಧರಿಸದ್ದಕ್ಕೆ ಟಿಪ್ಪರ್ ಚಾಲಕನಿಂದ ದಂಡ ವಸೂಲಿ ಮಾಡಿದ ಪ್ರಕರಣ ಗಮನಸೆಳೆದಿದೆ.

ಧಾರವಾಡದಲ್ಲಿ ವೈರಲ್ ವಿಡಿಯೋ ಕಾರಣಕ್ಕೆ ಸಾರಿಗೆ ಸಂಸ್ಥೆ ಚಾಲಕ ಮತ್ತು ಕಂಡಕ್ಟರ್ ಅಮಾನತು ಆಗಿದ್ದಾರೆ.
ಧಾರವಾಡದಲ್ಲಿ ವೈರಲ್ ವಿಡಿಯೋ ಕಾರಣಕ್ಕೆ ಸಾರಿಗೆ ಸಂಸ್ಥೆ ಚಾಲಕ ಮತ್ತು ಕಂಡಕ್ಟರ್ ಅಮಾನತು ಆಗಿದ್ದಾರೆ.

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮಳೆಗೆ ಸೋರುತ್ತಿದೆ ಎಂಬಂತೆ ಚಾಲಕ ಛತ್ರಿ ಹಿಡಿದು ಬಸ್ ಚಲಾಯಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಈಗ ಈ ವಿಡಿಯೋ ವೈರಲ್ ಆದ ತಪ್ಪಿಗೆ ಚಾಲಕ ಮತ್ತು ನಿರ್ವಾಹಕಿಯನ್ನು ಸಾರಿಗೆ ಸಂಸ್ಥೆ ಅಮಾನತುಗೊಳಿಸಿದೆ. ಅಮಾನತುಗೊಂಡಿರುವ ಬಸ್‌ ಚಾಲಕ ಹನುಮಂತಪ್ಪ ಕಿಲ್ಲೇದಾರ ಮತ್ತು ನಿರ್ವಾಹಕಿ ಅನಿತಾ.

ಟ್ರೆಂಡಿಂಗ್​ ಸುದ್ದಿ

ಧಾರವಾಡದಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಉಪ್ಪಿನಬೆಟಗೇರಿಯಿಂದ ಧಾರವಾಡ ಕಡೆಗೆ ಬಸ್ ಹೋಗುತ್ತಿದ್ದಾಗ ಈ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರಿಗೆ ಸಂಸ್ಥೆಯ ಬಸ್‌ಗಳ ನಿರ್ವಹಣೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತಲ್ಲದೆ. ವ್ಯಾಪಕ ಟೀಕೆಗೂ ಒಳಗಾಗಿತ್ತು.

ವೈರಲ್‌ ವಿಡಿಯೋದಲ್ಲಿರುವುದೇನು?

ವೈರಲ್ ಆಗಿರುವ ವಿಡಿಯೋದಲ್ಲಿ, ಬಸ್ ಚಾಲಕ ಒಂದು ಕೈನಲ್ಲಿ ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ದೃಶ್ಯವಿದೆ. ಸೂಕ್ಷ್ಮವಾಗಿ ಗಮನಿಸಿದರೆ ಬಸ್‌ನ ವಿಂಡ್‌ ಸ್ಕ್ರೀನ್ ಭಾಗದಿಂದ ನೀರು ಒಳಬರುತ್ತಿರುವಂತೆ ಭಾಸವಾಗುತ್ತಿದ್ದು, ಚಾಲಕನ ಮುಂಭಾಗದಲ್ಲಿ ಎಡಬದಿಗೆ ಸಂಪೂರ್ಣ ಒದ್ದೆಯಾಗಿರುವುದು ಕಂಡುಬರುತ್ತದೆ.

ವಿಡಿಯೋದಲ್ಲಿ ನಡುವೆ, ಮಹಿಳೆಯೊಬ್ಬರ ಧ್ವನಿ (ನಿರ್ವಾಹಕಿ ಅನಿತಾ ಅವರದ್ದು ಇರಬಹುದು) ಕೇಳಿದ್ದು “ಛತ್ರಿ ಹಿಡಿದುಕೊಳ್ಳಬೇಕಾ. ಒಂದು ಕೈನಲ್ಲಿ ಛತ್ರಿ ಹಿಡಿದು ಬಸ್ ಚಾಲನೆ ಮಾಡುವುದು ಕಷ್ಟ ಅಲ್ವ” ಎಂದು ಹೇಳಿದ್ದಾರೆ. ಅದಕ್ಕೆ ಚಾಲಕ ಪ್ರತಿಕ್ರಿಯೆ ನೀಡಿದ್ದು, ಅದು ಅಸ್ಪಷ್ಟವಾಗಿದೆ.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಪಷ್ಟೀಕರಣವೇನು?

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದೇಶ ಪ್ರತಿ
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದೇಶ ಪ್ರತಿ

ಉಪ್ಪಿನಬೆಟಗೇರಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ (ಕೆಎ31ಎಫ್‌1336) ನ ರೂಫ್‌ ಸೋರಿಕೆ ಇಲ್ಲದೇ ಇದ್ದರೂ ಚಾಲಕ ಒಂದು ಕೈನಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಬಸ್ ಚಲಾಯಿಸಿದ್ದಾರೆ. ಈ ರೀತಿ ಚಾಲನೆ ಮಾಡಲು ಪ್ರೇರೇಪಿಸಿ ವಿಡಿಯೋ ಮಾಡಿ ಗ್ರೂಪ್‌ಗಳಲ್ಲಿ ವೈರಲ್ ಮಾಡೋಣ ಎಂದು ಹೇಳಿದ್ದು ದಾಖಲಾಗಿದೆ. ಈ ವಿಡಿಯೋ ಕುರಿತು ಸುದ್ದಿಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕೃತ್ಯವೆಸಗಿದ್ದಕ್ಕಾಗಿ ಚಾಲಕ ಮತ್ತು ನಿರ್ವಾಹಕಿಯನ್ನು ಅಮಾನತುಗೊಳಿಸಿರುವುದಾಗಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

ಟಿಪ್ಪರ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು 500 ರೂಪಾಯಿ ದಂಡ ವಿಧಿಸಿದ ಪೊಲೀಸರು

ಹೊನ್ನಾವರ ಪಟ್ಟಣದಲ್ಲಿ ಟಿಪ್ಪರ್ ಚಾಲಕರೊಬ್ಬರು ಹೆಲೈಟ್ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪೊಲೀಸರ ದಂಡದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊನ್ನಾವರದಲ್ಲಿ ಟಿಪ್ಪರ್‌ ಮಾಲೀಕ ತನ್ನ ವಾಹನವನ್ನು ಮರಳು ಸಾಗಾಟಕ್ಕೆ ಕಳುಹಿಸಿದ್ದ. ಇದನ್ನು ತಡೆದ ಹೊನ್ನಾವರ ಪೊಲೀಸರು ಚಾಲಕ ಚಂದ್ರಕಾಂತ ಎಂಬುವವರಿಂದ 2500 ರೂಪಾಯಿ ದಂಡ ವಸೂಲಿ ಮಾಡಿದ್ದು, ರಶೀದಿಯಲ್ಲಿ ಹೆಲ್ಮೆಟ್‌ ಧರಿಸಿಲ್ಲ ಎಂಬುದಕ್ಕೆ 500 ರೂಪಾಯಿ ದಂಡ ಎಂಬುದನ್ನು ನೋಡಿದ ಚಾಲಕನಿಗೆ ಆಘಾತ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಐ ಸಂತೋಷ್ ಕುಮಾರ್, ಟಿಪ್ಪರ್ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ 500 ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಕಣ್ಣಪ್ಪಿನಿಂದ ಹೆಲೈಟ್ ಧರಿಸದ್ದರಿಂದ ದಂಡ ಎಂದು ರಶೀದಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

~

ಟಿ20 ವರ್ಲ್ಡ್‌ಕಪ್ 2024