Bengaluru: ಫ್ರೀ ಐಸ್ ಕ್ರೀಂಗಾಗಿ ಡ್ಯಾನ್ಸ್ ಮಾಡುತ್ತಾ ಅಂಗಡಿಗೆ ಹೋದ ಬೆಂಗಳೂರಿನ ಜನರು; ಮಸ್ತ್ ಮಜಾ ಕೊಡುತ್ತೆ ಈ ವಿಡಿಯೋ
Viral Video: ಫ್ರೀ ಐಸ್ ಕ್ರೀಂ ಪಡೆಯಲು ಡ್ಯಾನ್ಸ್ ಮಾಡುತ್ತಾ ಬನ್ನಿ ಎಂದು ಕಾರ್ನರ್ ಹೌಸ್ ಐಸ್‌ಕ್ರೀಂ ಶಾಪ್ ಬಾಗಿಲಲ್ಲಿ ಬೋರ್ಡ್ ಹಾಕಲಾಗಿದೆ. ಇದರಂತೆ ಗ್ರಾಹಕರು ಉಚಿತ ಐಸ್ ಕ್ರೀಂ ಪಡೆಯಲು ಕುಣಿಯುತ್ತಾ ಒಳಗಡೆ ಬರಬೇಕಿತ್ತು.
ಬೆಂಗಳೂರಿನ ಹೆಸರಾಂತ ಐಸ್‌ಕ್ರೀಂ ಬ್ರಾಂಡ್ ಕಾರ್ನರ್ ಹೌಸ್ (Corner House) ರಾಷ್ಟ್ರೀಯ ಐಸ್ ಕ್ರೀಂ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಪ್ರತಿ ವರ್ಷ ಜುಲೈ ತಿಂಗಳ ಮೂರನೇ ಭಾನುವಾರದಂದು ರಾಷ್ಟ್ರೀಯ ಐಸ್ ಕ್ರೀಂ ದಿನ (National Ice Cream Day)ವನ್ನು ಆಚರಿಸಲಾಗುತ್ತದೆ.
ಈ ವರ್ಷ ಜುಲೈ 16 ರಂದು ರಾಷ್ಟ್ರೀಯ ಐಸ್ ಕ್ರೀಂ ದಿನ ಬಂದಿದ್ದು, ಅಂದು ಬೆಂಗಳೂರಿನ ಇಂದಿರಾ ನಗರದಲ್ಲಿನ ಕಾರ್ನರ್ ಹೌಸ್ ಗ್ರಾಹಕರಿಗೆ ಉಚಿತ ಐಸ್ ಕ್ರೀಂ ವಿತರಿಸಿದೆ. ಫ್ರೀ ಏನೋ ಹೌದು ಆದರೆ ಈ ಆಫರ್ ಪಡೆಯೋಕೆ ಒಂದು ಕಂಡಿಷನ್ ಇತ್ತು. ಹಾಗಂತ ತಲೆ ಕೆಡಿಸಿಕೊಳ್ಳುವ ಷರತ್ತು ಅಲ್ಲ ಅದು, ಮಸ್ತ್ ಮಜಾ ನೀಡುವ ಕಂಡಿಷನ್.
ಫ್ರೀ ಐಸ್ ಕ್ರೀಂ ಪಡೆಯಲು ಡ್ಯಾನ್ಸ್ ಮಾಡುತ್ತಾ ಬನ್ನಿ ಎಂದು ಕಾರ್ನರ್ ಹೌಸ್ ಐಸ್‌ಕ್ರೀಂ ಶಾಪ್ ಬಾಗಿಲಲ್ಲಿ ಬೋರ್ಡ್ ಹಾಕಲಾಗಿದೆ. ಇದರಂತೆ ಗ್ರಾಹಕರು ಉಚಿತ ಐಸ್ ಕ್ರೀಂ ಪಡೆಯಲು ಕುಣಿಯುತ್ತಾ ಒಳಗಡೆ ಬರಬೇಕಿತ್ತು. ಅಪಾರ ಮೊತ್ತದ ಹಣ ನೀಡಿ ದುಬಾರಿ ಐಸ್ ಕ್ರೀಂ ಕೊಳ್ಳುವವರು ಇರುವಾಗ ಫ್ರೀ ಸಿಗುತ್ತೆ ಅಂದ್ರೆ ಯಾರು ತಾನೆ ಬಿಡ್ತಾರೆ ಹೇಳಿ.
ಮಕ್ಕಳು, ಯುವಕ-ಯುವತಿಯರು, ಆಂಟಿ-ಅಂಕಲ್ಗಳು ಅಷ್ಟೇ ಯಾಕೆ ವೃದ್ಧರೂ ಸಹ ಡ್ಯಾನ್ಸ್ ಮಾಡುತ್ತಾ ಬಂದು ಐಸ್ ಕ್ರೀಂ ಪಡೆದು ಆ ಸಂದರ್ಭವನ್ನು ಸಖತ್ ಎಂಜಾಯ್ ಮಾಡಿದರು. ಜನರ ಉತ್ಸಾಹಭರಿತ ನೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಯೋವನ್ನ ಕಾರ್ನರ್ ಹೌಸ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆದ ಬಳಿಕ ಕಾರ್ನರ್ ಹೌಸ್ ಮತ್ತಷ್ಟು ಫೇಮಸ್ ಆಗಿದೆ.
ಜನರನ್ನು ಸಂತೋಷಪಡಿಸಲು ಮತ್ತು ನಗಿಸಲು ಇದೊಂದು ಅದ್ಭುತವಾದ ಮಾರ್ಗ ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದರೆ, ಪ್ರತಿದಿನ ಫ್ರೀ ಕೊಟ್ಟರೆ ದಿನಾ ಡ್ಯಾನ್ಸ್ ಮಾಡ್ತೀನಿ ಅಂತ ಮತ್ತೊಬ್ಬರು ಹೇಳಿದ್ದಾರೆ.
ವಿಭಾಗ