Viral Optical Illusion: ನಿಮ್ಮ ಮುಂದಿದೆ ತಿರುವಿನಾಕೃತಿಯ 2 ವಸ್ತುಗಳು; ಇದರಲ್ಲಿ ನಿಜವಾಗಿಯೂ ಯಾವುದು ದೊಡ್ಡದು? ಉತ್ತರ ಹುಡುಕಿದವರೇ ಜಾಣರು
Optical Illusion: ನಿಮ್ಮ ಮುಂದೆ ತಿರುವಿನಾಕೃತಿಯ ಒಂದೇ ತರಹದ ಎರಡು ವಸ್ತುಗಳು ಇವೆ. ಇದರಲ್ಲಿ ನಿಜವಾಗಿಯೂ ಯಾವುದು ದೊಡ್ಡದು? ಯಾವುದು ಚಿಕ್ಕದು ಹೇಳುವಿರಾ. ಇಮೇಜ್ ಮಾತ್ರ ನೋಡಿದಾಗ ಮುಂದಿರುವ ವಸ್ತುವೇ ದೊಡ್ಡದು ಅನಿಸುತ್ತೆ ಅಲ್ಲವೇ? ಆದ್ರೆ ಇದು ತಪ್ಪು.
ಆಪ್ಟಿಕಲ್ ಇಲ್ಯೂಷನ್ ನಮ್ಮನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತವೆ. ವಾಸ್ತವಿಕತೆ ಮತ್ತು ಗ್ರಹಿಕೆ ಪರಸ್ಪರ ಹೆಣೆದುಕೊಂಡಂತೆ, ನಿಜವಾಗಿಯೂ ಅಲ್ಲಿ ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಇದ್ದಿದ್ದನ್ನ ಹೇಗೇಗೋ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗಲ್ಲ. ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಆದರೆ ಉತ್ತರವನ್ನ ಪತ್ತೆ ಹಚ್ಚುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ವಿಡಿಯೋ ನಿಮ್ಮ ಮುಂದಿದೆ.
ನಿಮ್ಮ ಮುಂದೆ ತಿರುವಿನಾಕೃತಿಯ ಒಂದೇ ತರಹದ ಎರಡು ವಸ್ತುಗಳು ಇವೆ. ಇದರಲ್ಲಿ ನಿಜವಾಗಿಯೂ ಯಾವುದು ದೊಡ್ಡದು? ಯಾವುದು ಚಿಕ್ಕದು ಹೇಳುವಿರಾ. ಇಮೇಜ್ ಮಾತ್ರ ನೋಡಿದಾಗ ಮುಂದಿರುವ ವಸ್ತುವೇ ದೊಡ್ಡದು ಅನಿಸುತ್ತೆ ಅಲ್ಲವೇ? ಆದ್ರೆ ಇದು ತಪ್ಪು. ಏನಪ್ಪಾ ಹೀಗೆ ಅಂತೀರಾ?
ರೆಡ್ಡಿಟ್ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್ ಎಂಬ ಗುಂಪಿನಲ್ಲಿ volossaveroniki ಎಂಬ ಬಳಕೆದಾರರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೋಸೆಫ್ ಜಾಸ್ಟ್ರೋ ಎಂಬವರು ಹೀಗೆ ಎರಡು ತಿರುವಿನಾಕೃತಿಯ ವಸ್ತುಗಳನ್ನು ಬಳಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಕಂಡ ನಟ್ಟಿಗರು ತಲೆಕೆರೆದುಕೊಳ್ಳುತ್ತಿದ್ದಾರೆ.
ಈ ಎರಡು ವಸ್ತುಗಳನ್ನು ಒಂದರ ಹಿಂದೆ ಒಂದು ಅಥವಾ ಒಂದರ ಮುಂದೆ ಒಂದು ಇಟ್ಟಾಗ ಮುಂದಿಟ್ಟ ವಸ್ತುವೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ ಎರಡನ್ನೂ ಒಂದರಮೇಲೊಂದು ಇಟ್ಟಾಗ ಒಂದೇ ಗಾತ್ರ ಎನಿಸುತ್ತದೆ. ಆದರೆ ಯಾವುದನ್ನು ಮುಂದೆ ಇಡುತ್ತೇವೆಯೋ ಆ ವಸ್ತು ದೊಡ್ಡದಾಗಿ ಕಾಣುತ್ತದೆ. ನಮ್ಮ ಕಣ್ಣುಗಳನ್ನು ಈ ರೀತಿ ಮೋಸಗೊಳಿಸುವುದು ಹೇಗೆ ಎಂಬುದು ನಮ್ಮನ್ನು ಕಾಡುತ್ತದೆ.
ರೆಡ್ಡಿಟ್ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಲು ಈ ಲಿಂಕ್ ಕಾಪಿ ಪೇಸ್ಟ್ ಮಾಡಿ. https://www.reddit.com/r/opticalillusions/comments/157p69n/illusion_by_joseph_jastrow/?utm_source=embedv2&utm_medium=post_embed&utm_content=whitespace&embed_host_url=https://www.hindustantimes.com/trending/this-curve-shaped-optical-illusion-will-make-you-question-reality-101690214263643.html