Mann Ki Baat: ಮಹಿಳಾ ಸಬಲೀಕರಣ, ವಿವಿಧ ಕ್ಷೇತ್ರಗಳ ಪ್ರತಿಭಾವಂತರ ಕಥೆಗಳಿಗೆ ವೇದಿಕೆ; 100ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮನದ ಮಾತು
ಕನ್ನಡ ಸುದ್ದಿ  /  ಕರ್ನಾಟಕ  /  Mann Ki Baat: ಮಹಿಳಾ ಸಬಲೀಕರಣ, ವಿವಿಧ ಕ್ಷೇತ್ರಗಳ ಪ್ರತಿಭಾವಂತರ ಕಥೆಗಳಿಗೆ ವೇದಿಕೆ; 100ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮನದ ಮಾತು

Mann Ki Baat: ಮಹಿಳಾ ಸಬಲೀಕರಣ, ವಿವಿಧ ಕ್ಷೇತ್ರಗಳ ಪ್ರತಿಭಾವಂತರ ಕಥೆಗಳಿಗೆ ವೇದಿಕೆ; 100ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮನದ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನ 100ನೇ ಸಂಚಿಕೆಯಲ್ಲಿ ಬೇಟಿ ಬಚಾವೋ ಬೇಟೆ ಪಡಾವೋ, ಹರ್ ಘರ್ ತಿರಂಗಾ, ಮಹಿಳೆಯರ ಸಬಲೀಕರಣ ಸೇರಿದಂತೆ ಹಲವು ಯಶಸ್ವಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದಾರೆ.

ಮನ್ ಕೀ ಬಾತ್‌ನ 100ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮನ್ ಕೀ ಬಾತ್‌ನ 100ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಐತಿಹಾಸಿಕ ಹಾಗೂ ಬಹು ನಿರೀಕ್ಷಿತ 100ನೇ ಸಂಚಿಕೆಯ ಮನ್ ಕೀ ಬಾತ್‌ನಲ್ಲಿ (Mann Ki Baat) ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ರೇಡಿಯೋ ಕಾರ್ಯಮವನ್ನು ಆಲಿಸಿದ್ದಾರೆ.

ಇಂದು ಮನ್ ಕೀ ಬಾತ್ ನ ನೂರನೇ (Mann Ki Baat 100th Edition) ಸಂಚಿಕೆ. ನಿಮ್ಮೆಲ್ಲರಿಂದ ನನಗೆ ಸಾವಿರಾರು ಪತ್ರಗಳು, ಲಕ್ಷಗಟ್ಟಲೆ ಸಂದೇಶಗಳು ಬಂದಿವೆ. ನಾನು ಸಾಧ್ಯವಾದಷ್ಟು ಪತ್ರಗಳನ್ನು ಓದಲು, ಅವುಗಳನ್ನು ನೋಡಲು ಮತ್ತು ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

ಮಹಿಳಾ ಸಬಲೀಕರಣದ ವಿವಿಧ ಕಥೆಗಳಿಗೆ ಮನ್ ಕೀ ಬಾತ್ ವೇದಿಕೆಯಾಗಿದೆ. ಟೆರಾಕೋಟಾ ಕಪ್‌ಗಳನ್ನು ತಯಾರಿಸುವ ಛತ್ತೀಸ್‌ಗಢದ ದಿಯೋರಾ ಗ್ರಾಮದ ಮಹಿಳೆಯರು, ವೆಲ್ಲೂರು ಸರೋವರನ್ನು ನವೀಕರಣಕ್ಕೆ ಶ್ರಮಿಸಿದ ತಮಿಳುನಾಡಿನ ಮಹಿಳೆಯರು ಸಾಧನೆ ಮೆಚ್ಚುವಂತದ್ದು.

ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳ ಕಥೆಗಳನ್ನು ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದು, ಅದನ್ನು ನೀವು ಕೇಳಿದ್ದೀರಿ. ಆತ್ಮ ನಿರ್ಭರ್ ಭಾರತವನ್ನು ಉತ್ತೇಜಿಸುವುದರಿಂದ ಹಿಡಿದು ಮೇಕ್ ಇನ್ ಇಂಡಿಯಾ ಹಾಗೂ ಬಾಹ್ಯಕಾಶ ಸ್ಟಾರ್ಟ್‌ಅಪ್‌ಗಳವರೆಗೆ, ನಮ್ಮ ಆಟಿಕೆ ಉದ್ಯಮದ ಬಗ್ಗೆಯೂ ಪ್ರಸ್ತಾಪಿಸುವ ಈ ರೋಡಿಯೋ ಕಾರ್ಯಕ್ರಮ ಆರಂಭವಾಯಿತು ಎಂದು ನಮೋ ವಿವರಿಸಿದ್ದಾರೆ.

ಮನದ ಮಾತಿನ 100 ನೇ ಸಂಚಿಕೆಗಾಗಿ ನೀವು ನನ್ನನ್ನು ಅಭಿನಂದಿಸಿದ್ದೀರಿ, ಆದರೆ ನಾನು ಮನಃ ಪೂರ್ವಕವಾಗಿ ಹೇಳುತ್ತಿದ್ದೇನೆ, ವಾಸ್ತವವಾಗಿ, ನೀವೆಲ್ಲರೂ ಮನ್ ಕೀ ಬಾತ್ ಕೇಳುಗರು. ನೀವೆಲ್ಲರೂ ಅಭಿನಂದನೆಗೆ ಅರ್ಹರಾಗಿದ್ದೀರಿ. ಮನ್ ಕೀ ಬಾತ್ ಕೋಟ್ಯಂತರ ಭಾರತೀಯರ 'ಮನದ ಮಾತಾಗಿದೆ. ಅದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2014ರ ಅಕ್ಟೋಬರ್ 3 ರಂದು ವಿಜಯ ದಶಮಿಯ ದಿನದ ಶುಭ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಮನ್ ಕೀ ಬಾತ್ ಆರಂಭಿಸಿದ್ದೇವು. ಇಂದು 100ನೇ ಸಂಚಿಕೆ ಪೂರೈಸುತ್ತಿರುವ ಸಂತಸದ ವಿಷಯವಾಗಿದೆ ಎಂದರು.

ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಆಲಿಸಿದರೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ಅಲ್ಲಿನ ನಿಯೋಗದೊಂದಿಗೆ ಕುಳಿತು ಮನ್ ಕೀ ಬಾತ್ ನ100ನೇ ಆವೃತ್ತಿಯನ್ನು ಆಲಿಸಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಮುಖಂಡರು ಹಾಗೂ ನೂರಾರು ಮಂದಿ ಕಾರ್ಯಕರ್ತರೊಂದಿಗೆ ಕೇಳಿದ್ದಾರೆ. ಮುಂಬೈನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರೊಂದಿಗೆೆ ಸೇರಿ ಆಲಿಸಿದ್ದಾರೆ.

Whats_app_banner