ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mann Ki Baath: ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ 100ನೇ ರೇಡಿಯೋ ಕಾರ್ಯಕ್ರಮ; ಮನದ ಮಾತಿನ ವೈಶಿಷ್ಟ್ಯ

Mann ki Baath: ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ 100ನೇ ರೇಡಿಯೋ ಕಾರ್ಯಕ್ರಮ; ಮನದ ಮಾತಿನ ವೈಶಿಷ್ಟ್ಯ

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದ 100ನೇ ಆವೃತ್ತಿಯಾಗಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ರೇಡಿಯೋ ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲಾಗಿದೆ.

ಮನ್ ಕೀ ಬಾತ್ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು.
ಮನ್ ಕೀ ಬಾತ್ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು.

ಬೆಂಗಳೂರು: ದೇಶದಲ್ಲಿನ ಅಭಿವೃದ್ಧಿ ಕಾರ್ಯಗಳು, ನಿರ್ಧಾರಗಳು, ಜನರ ಭಾಗವಹಿಸುವಿಕೆ, ಕ್ರೀಡೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮನದ ಮಾತನ್ನು ಹಂಚಿಕೊಳ್ಳುವ ಮನ್ ಕೀ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮಕ್ಕೆ (Radio Program) 100ರ ಸಂಭ್ರಮ.

ಟ್ರೆಂಡಿಂಗ್​ ಸುದ್ದಿ

ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರ ಆಗುವ ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿ ಮುದ್ರಿತ (Audio Record) ಮನ್ ಕೀ ಬಾತ್‌ನ 100ನೇ ಆವೃತ್ತಿ (100th Mann Ki Baat) ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.

ಆಲ್ ಇಂಡಿಯಾ ರೇಡಿಯೋ(All India Radio), ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ದೂರದರ್ಶನದ (Doordarshan) ಎಲ್ಲಾ ಜಾಲತಾಣಗಳು, ಎಐಆರ್ ನ್ಯೂಸ್ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಈ ಬಾನುಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಈ ಐತಿಹಾಸಿಕ ಹಾಗೂ ಅಭೂತಪೂರ್ವವಾಗಿರುವ 100ನೇ ಸಂಚಿಕೆ ಪ್ರಸಾರಕ್ಕೆ ಭಾರತೀಯ ಜನತಾ ಪಾರ್ಟಿ ಭಾರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದೇಶದ ಪ್ರತಿ ವಿಧಾನಸಭಾ ಕ್ಷೇತ್ರದ 100 ಕಡೆಗಳಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಕೇಳಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಒಟ್ಟಾರೆಯಾಗಿ ನಮೋ ಅವರ ಇಂದಿನ ಭಾಷಣ ಕೇಳಲು 4 ಲಕ್ಷ ಸ್ಥಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗೊಳಿಸಲು ಕೇಸರಿ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದಾರೆ. ಎಲ್ಲಾ ರಾಜ್ಯಗಳ ರಾಜಭವನಗಳು, ರಾಜ್ಯಪಾಲರ ಅಧಿಕೃತ ನಿವಾಸಗಳು, ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳ ಮುಖ್ಯಮಂತ್ರಿಗಳ ನಿವಾಸ ಹಾಗೂ ಗಣ್ಯರ ಮನೆಗಳಲ್ಲಿ ರೇಡಿಯೋ ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷವಾಗಿ ಪ್ರಧಾನಿ ಮೋದಿ ಅವರ ಇಂದಿನ 100ನೇ ಆವೃತ್ತಿಯ ಐತಿಹಾಸಿಕ ಮನ್ ಕಿ ಬಾತ್ ಆಲಿಸಲು ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಧಾನ ಕಚೇರಿಯ ಟ್ರಸ್ಟಿಶಿಪ್‌ ಕೌನ್ಸಿಲ್ ಚೇಂಬರ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್ ಟ್ವೀಟ್ ಮಾಡಿದೆ.

ಭಾರತೀಯ ಸಮೂಹ ಸಂವಹನ ಸಂಸ್ಥೆ(ಐಐಎಂಸಿ) ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ದೇಶದ ಜನರಿಗೆ ನಿಜವಾದ ಭಾರತವನ್ನು ಪರಿಚಿಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸುಮಾರು 76 ರಷ್ಟು ದೇಶದ ಮಾಧ್ಯಮದವರು ನಂಬಿರವುದಾಗಿ ಹೇಳಿದೆ.

ಮನ್ ಕೀ ಬಾತ್ ನಲ್ಲಿ ಚರ್ಚಿಸಿದ ಯಾವ ವಿಷಯವು ನಿಮಗೆ ಹೆಚ್ಚು ಪ್ರಭಾವ ಬೀಾರಿದೆ ಎಂಬ ಪ್ರಶ್ನೆಗೆ 40 ರಷ್ಟು ಜನರು ಶಿಕ್ಷಣ ಎಂಬುದಾಗಿ ಹೇಳಿರುವುದಾಗಿ ಐಐಎಂಸಿ ಮಹಾ ನಿರ್ದೇಶಕರಾದ ಪ್ರೊ.ಸಂಜಯ್ ದ್ವಿವೇದಿ ಮಾಹಿತಿ ನೀಡಿದ್ದಾರೆ.

2014ರ ಅಕ್ಟೋಬರ್ 3 ರಂದು ಮೊದಲ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಸ್ವಚ್ಛತಾ ಅಂದೋಲನ, ಶೌಚಾಲಯಗಳ ನಿರ್ಮಾಣ, ಕೆರೆಗಳ ನಿರ್ಮಾಣ, ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಮನರಂಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆ ಹಾಗೂ ಸಾಧಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ಮೂಲಕ ಹೆಚ್ಚುಗೆ ವ್ಯಕ್ತಪಡಿಸಿ ಜನರೆೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ.

IPL_Entry_Point

ವಿಭಾಗ